ರೆಸಾರ್ಟ್ ರಾಜಕೀಯಕ್ಕೆ ಬಿತ್ತು ಕಡಿವಾಣ ಸುಪ್ರೀಂ ಕೋರ್ಟ್ ಕಡೆಯಿಂದ ಮಹತ್ವವಾದ ನಿರ್ಧಾರ

0
749

ರಾಜಕೀಯದಲ್ಲಿ ಹೈ ಡ್ರಾಮ ನಡೆಯುತ್ತಿರುವ ವಿಷಯ ನಿಮಗೆಲ್ಲ ಗೊತ್ತೆ ಇದೆ. ಮೈತ್ರಿ ಸರ್ಕಾರದ ಶಾಸಕರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದು , ಅತೃಪ್ತ ಶಾಸಕರನ್ನು ಮನವೊಲಿಸಲು ಮೈತ್ರಿ ಸರ್ಕಾರದ ನಾಯಕರು ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ. ರೆಸಾರ್ಟ್ ರಾಜಕಾರಣ ಮಾಡುವ ಮೂಲಕ ಶಾಸಕರನ್ನು ರಾಜೀನಾಮೆ ವಾಪಾಸ್ ತೆಗೆದುಕೊಳ್ಳಬೇಕೆನ್ನುವ ಹೊಂಚನ್ನು ಹಾಕುತ್ತಿದ್ದಾರೆ. ಈ ತೀರ್ಪಿನಿಂದ ಮೈತ್ರಿ ಸರ್ಕಾರ ಉರಳುವ ಸಂಭವಗಳು ಇದೆಯಾ, ಅಥವಾ ಪಕ್ಷದ ನಾಯಕರು ಯಾವ ಒಂದು ಪ್ಲಾನ್ ಮಾಡಿ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇಂತಹ ಹತ್ತು ಹಲವಾರು ವಿಷಯಗಳು ಬಹಳ ಕುತೂಹಲಕಾರಿಯಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ನಿಲ್ಲುತ್ತದಾ. ಸುಪ್ರೀಂ ಕೋರ್ಟ್ ನೀಡಿರುವ ಆ ನಿರ್ಧಾರವಾದರು ಯಾವುದು? ಮುಂದೆ ಓದಿ.

ಸುಪ್ರೀಂ ಕೋರ್ಟ್ ನೀಡಿರುವ ನಿರ್ಧಾರದಿಂದ ಶಾಸಕರು ಖುಷ್

ರಾಜೀನಾಮೆ ಪತ್ರವನ್ನು ಶಾಸಕರು ಸ್ಪೀಕರ್ ಗೆ ನೀಡಬೇಕಾಗಿದೆ. ಇದೆ ವಿಷಯಕ್ಕಾಗಿ ಸ್ಪೀಕರ್ ಅಸಭ್ಯವಾಗಿ ಶಾಸಕರ ಜೊತೆ ವರ್ತಿಸಿದ್ದು, ಅತೃಪ ಶಾಸಕರು ತಮ್ಮ ನೋವನ್ನು ಹೇಳಿಕೊಳ್ಳಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ನೀಡಿರುವ ನಿರ್ಧಾರದಿಂದ ಶಾಸಕರು ಒಂದು ದೊಡ್ಡ ಆಪತ್ತಿನಿಂದ ಪಾರಾಗಿದ್ದಾರೆ. ಪಕ್ಷದ ಯಾವ ನಾಯಕರು ಸಹ ಶಾಸಕರಿಗೆ ತೊಂದರೆ ನೀಡುವಂತಿಲ್ಲ. ಇಲ್ಲಿ ಬಾ, ಅಲ್ಲಿ ಬಾ, ರೆಸಾರ್ಟ್ ಗೆ ಬನ್ನಿ ಮೀಟಿಂಗ್ ಮಾಡೋಣ ಎಂದು ಕರೆಯುವಂತಿಲ್ಲ. ಯಾವುದೆ ಒತ್ತಡ ಅವರ ಮೇಲೆ ಹೇರುವಂತಿಲ್ಲ. ಸ್ಪೀಕರ್ ಸಹ ಆದಷ್ಟು ಬೇಗ ಒಂದು ತೀರ್ಮಾನವನ್ನು ತೆಗೆದುಕೊಳ್ಳಬೇಕು. ಸ್ಪೀಕರ್ ಅವರು ತಮ್ಮ ನಿಯಮಿತ ಕಾಲಾವಧಿಯೊಳಗೆ ಶಾಸಕರ ರಾಜೀನಾಮೆಯ ಪತ್ರವನ್ನು ಪರಿಗಣಿಸಬೇಕೆಂದು ಎರಡು ವಾಕ್ಯಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸ್ಪೀಕರ್ ರಮೇಶ್ ಕುಮಾರ್ ಅವರ ಅಭಿಪ್ರಾಯ

ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದ ನಂತರ ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನಾನು ಪಾಲಿಸುತ್ತೇನೆ. ನಾಳೆ ನಾನು ವಿಧಾನಸೌಧದಲ್ಲಿ ವಿಶ್ವಾಸ ಮತಯಾಚನೆಯ ಕಡೆಗೆ ನಿಗಾ ಇಡುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ನಿರ್ಣಯದಿಂದ ಮನನೊಂದ ಶಾಸಕರಿಗೆ ಬಹಳ ಖುಷಿಯಾಗಿದೆ. ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ, ಶಾಸಕರು ಪಾಲ್ಗೊಳ್ಳುವುದೆ ಅನುಮಾನಸ್ಪದವಾದ ಸಂಗತಿಯಾಗಿದೆ. ಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ನಾನು ನಾಳೆ ವಿಶ್ವಾಸಮತ ಯಾಚನೆ ನಡೆಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಶಾಸಕರು ಕಲಾಪಕ್ಕೆ ಹೋಗಬಹುದು ಅಥವಾ ಬಿಡಬಹುದು

ಡಿ ಕೆ ಶಿವ ಕುಮಾರ್ ಅವರು ಸಹ ಇದರ ಬಗ್ಗೆ ಮಾತನಾಡಿದ್ದಾರೆ. ಕೋರ್ಟ್ ನೀಡಿದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ, ಗೌರವಿಸುತ್ತೇನೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಇಂದು ಸುಪ್ರೀಂ ಕೋರ್ಟ್ ಸ್ಪೀಕರ್ ಅಧಿಕಾರ ಏನು ಎನ್ನುವುದನ್ನು ಎತ್ತಿ ಹಿಡಿದಿದ್ದಾರೆ. ಭಾರತ ಸಂವಿಧಾನದ ವ್ಯವಸ್ಥೆ ಉತ್ತಮವಾಗಿದ್ದು, ಹಿರಿಯರು ಇದನ್ನು ನಮಗೆ ನೀಡಿ ಹೋಗಿದ್ದಾರೆ. ಶಾಸಕರು ಕಲಾಪಕ್ಕೆ ಹೋಗಬಹುದು ಅಥವಾ ಬಿಡಬಹುದು, ಅದು ಅವರ ವೈಯುಕ್ತಿವಾದ ನಿರ್ಧಾರ. ಶಾಸಕರನ್ನು ನಾನು ರೆಬೆಲ್ ಎಂದು ಕರೆಯಲು ಇಷ್ಟ ಪಡುವುದಿಲ್ಲ. ನಾನು ನನ್ನ ಸ್ನೇಹಿತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಬೇರೆಯವರನ್ನು ನಂಬಿದರೆ ಕೊನೆಗೆ ಅವರು ನಮಗೆ ಮಂಗನ ಟೋಪಿ ಹಾಕಿ ಹೋಗುತ್ತಾರೆ.

ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬರಬೇಕಾಗುತ್ತದೆ

ರಾಜೀನಾಮೆ ನೀಡುವ ಶಾಸಕರು ಮತ್ತೆ ಆ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಅನ್ಹರ್ಹರಾದರೆ ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬರಬೇಕಾಗುತ್ತದೆ. ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಯಾವುದೆ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೆ ಮೊದಲು ನಿಮ್ಮನ್ನು ಗೆಲ್ಲಿಸಿರುವ ಜನರ ಮುಖ ನೋಡಿ, ಕುಟುಂಬದವರ ಮುಖ ನೋಡಿ. ಇನ್ನು ನಾಳೆ ನಡೆಯಲಿರುವ ವಿಶ್ವಾಸ ಮತ ಯಾಚನೆಯ ಕುರಿತು ನಾಳೆ ಮಾತಾಡೋಣ ಈಗ ಬೇಡ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here