ನೆರೆ ಸಂತ್ರಸ್ತರ ವಿಚಾರ ಬಿಟ್ಟು, ವೈಯಕ್ತಿಕ ವಿಚಾರಕ್ಕೆ ಕಚ್ಚಾಡುತ್ತಿರುವ ಡಿವಿಎಸ್ ಹಾಗು ಸೂಲಿಬೆಲೆ

0
728
dvs

ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಪ್ರವಾಹದಿಂದ ಅಲ್ಲಿನ ಜನರು ಈಗಲೂ ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಹೌದು. ನೆರೆ ಸಂತ್ರಸ್ತರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಾಗಾಗಿ ಅಲ್ಲಿನ ಜನರು ಸರ್ಕಾರದ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. ಇತ್ತ ಸರ್ಕಾರದವರು ನಮ್ಮಿಂದ ಆದಂತಹ ಸಹಾಯವನ್ನು ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈಗ ಇದರ ಮಧ್ಯೆ ರಾಜ್ಯ ರಾಜಕಾರಣದ ವಾಗ್ವಾದ ನಡೆಯುತ್ತಿದೆ. ಹೌದು. ಸರ್ಕಾರ ನೆರೆ ಸಂತ್ರಸ್ತರ ಕಡೆ ಗಮನ ನೀಡುತ್ತಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಟ್ವೀಟ್ ಮಾಡಿದ್ದರು. ಯಾಕಂದ್ರೆ ಇಷ್ಟುದಿನವಾದರೂ ಪ್ರಧಾನಿ ಅವರು ರಾಜ್ಯಕ್ಕೆ ಬಂದು ಜನರ ಕಷ್ಟ ಏನು ಎಂದು ಕೇಳಿಲ್ಲ, ಜೊತೆಗೆ ರಾಜ್ಯದ ಸಂಸದರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ ಅವರ ಟ್ವೀಟ್ ನೋಡಿದ ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ ಅವರು ಕಿಡಿಕಾರುತ್ತಿದ್ದಾರೆ.

ಸಂಸದರ ಕಾರ್ಯದ ಬಗ್ಗೆ ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ

ಉತ್ತರ ಕರ್ನಾಟಕದಲ್ಲಿ ಆಗಿರುವ ಅನಾಹುತದ ಬಗ್ಗೆ ರಾಜ್ಯದ ಸಂಸದರು ಯಾವುದೇ ರೀತಿಯ ಕಾರ್ಯ ನಡೆಸಿಲ್ಲ, ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿ, ಜನರ ಕಷ್ಟವನ್ನು ಆಲಿಸಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಟ್ವೀಟ್ ಮಾಡಿದ್ದರು. ಹೌದು. ಪ್ರಧಾನಿ ಮೋದಿಯವರನ್ನು ಇಲ್ಲಿನ ಜನರು ಬಹಳಷ್ಟು ನಂಬಿದ್ದಾರೆ. ಆದರೆ ಅವರು ಇಲ್ಲಿಗೆ ಬಂದಿಲ್ಲ. ಅಲ್ಲದೆ ಇಲ್ಲಿನ ಜನರು ಸಹ ಮೋದಿಯವರು ಗೆಲ್ಲುವುದಕ್ಕೆ ಕಾರಣರಾಗಿದ್ದಾರೆ. ಆದರೆ ಅವರು ಬಂದಿಲ್ಲ. ಬದಲಿಗೆ ಅವರ ಸಂಸದರಾದರೂ ಏನಾದ್ರು ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಆದ್ರೆ ಅವರು ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ಆದ್ರೆ ಈಗ ಅವರ ಟ್ವೀಟ್ ಅನ್ನು ಸದಾನಂದಗೌಡ ಅವರು ನೋಡಿ ಕಿಡಿಕಾರುತ್ತಿದ್ದಾರೆ. ಜೊತೆಗೆ ಚಕ್ರವರ್ತಿ ಸೂಲಿಬೆಲೆ ಅವರನ್ನು ತಮ್ಮ ಖಾತೆಯಲ್ಲಿ ಬ್ಲಾಕ್ ಮಾಡಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಿಡಿಕಾರುತ್ತಿರುವ ಡಿ ವಿ ಎಸ್

ಇನ್ನು ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ ನೋಡಿದ ಕೂಡಲೇ ಡಿ ವಿ ಎಸ್ ಕೆಂಡಕಾರುತ್ತಿದ್ದಾರೆ. ಟೀಕೆ-ಟಿಪ್ಪಣಿ, ವಿಮರ್ಶೆ, ಭಿನ್ನ ಅಭಿಪ್ರಾಯಗಳು ಪ್ರಜಾ ಪ್ರಭುತ್ವದಲ್ಲಿ ಸಹಜ. ಆದರೆ ಅದು ಯಾವ ಮಟ್ಟದಲ್ಲಿರಬೇಕು ಅನ್ನೋದು ಗೊತ್ತಿರಬೇಕು. ಅದನ್ನು ಬಿಟ್ಟು ವೈಯುಕ್ತಿಕ ನಿಂದನೆಗೆ ಇಳಿಯುವವರ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ಸಂತ್ರಸ್ತರ ಕಣ್ಣೀರು ಒರೆಸಿದ್ದೇವೆ ಎಂದು ಸದಾನಂದಗೌಡ ಅವರು ಮರು ಟ್ವೀಟ್ ಮಾಡಿದ್ದಾರೆ. ಇನ್ನು ಅವರ ಟ್ವೀಟ್ ಅನ್ನು ನೋಡಿದ ಚಕ್ರವರ್ತಿ ಸೂಲಿಬೆಲೆ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. “Lol! ಈ ಮನುಷ್ಯ ಈಗ ಬಂದ. ಡಿ.ವಿ.ಸದಾನಂದಗೌಡರೇ, ನೊಂದಿರುವ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾರ್ಷ್ಟ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೆ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ. ಆಗ ಅದನ್ನು ನೋಡಿದ ಕೂಡಲೇ ಸದಾನಂದಗೌಡರು, ಅವರನ್ನು ಬ್ಲಾಕ್ ಮಾಡಿದ್ದಾರೆ.

ಸೂಲಿಬೆಲೆ ಅವರನ್ನು ದೇಶದ್ರೋಹಿ ಎಂದ ಡಿ ವಿ ಎಸ್

ಡಿ ವಿ ಎಸ್,  ಸೂಲಿಬೆಲೆ ಅವರನ್ನು ಬ್ಲಾಕ್ ಮಾಡಿದ ಕೂಡಲೇ, ಅದನ್ನು ಸ್ಕ್ರೀನ್ ಶಾಟ್ ತೆಗೆದು, ಥ್ಯಾಂಕ್ಯು ಎಂದು ಸೂಲಿಬೆಲೆ ಅವರು ಪೋಸ್ಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಎಲ್ಲರು ಇವರ ಟ್ವೀಟ್ ವಾರ್ ಮುಗಿಯಿತು ಎಂದು ತಿಳಿದಿದ್ದರು. ಈ ಬಗ್ಗೆ ಡಿ ವಿ ಎಸ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಪ್ರವಾಹ ಪರಿಹಾರದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಗಮನಕ್ಕೆ ತರುತ್ತೇವೆ. ಹಿಂದೆಲ್ಲ ಪರಿಹಾರ ಹಣ ಯಾವ ರೀತಿ ದುರ್ಬಳಕೆ ಆಗುತ್ತಿತ್ತು ಎಂಬುದು ಗೊತ್ತಿದೆ. ಈಗ ಆ ರೀತಿ ಆಗಲು ಬಿಡುವುದಿಲ್ಲ ಎಂದರು. ಯಾರೋ ಕೂತ್ಕೊಂಡು ಟ್ವೀಟ್‌ ಮಾಡುತ್ತಾರೆ… ಮಂತ್ರಿಗಿರಿ ಭಿಕ್ಷೆ… 25 ಸಂಸದರು ಏನೂ ಮಾಡುತ್ತಿಲ್ಲ.. ಎಂದು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವವರು, ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳೆಂದು ಗಾಂಧೀಜಿಯವರು ಹೇಳಿದ್ದಾರೆ. ಇವರೆಲ್ಲ ಅದೇ ಬ್ರ್ಯಾಂಡಿಗೆ ಬರುತ್ತಾರೆ. ಸುಮ್ಮನೆ ಭಾಷಣದಿಂದ, ಟ್ವೀಟ್‌ನಿಂದ ದೇಶ ಕಟ್ಟಲು ಆಗೊಲ್ಲ ಎಂದು ಪರೋಕ್ಷವಾಗಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಿನಲ್ಲಿ ನೆರೆ ಸಂತ್ರಸ್ತರ ಪರಿಹಾರದ ವಿಚಾರವಾಗಿದ್ದ ವಿಷಯ, ಈಗ ಎಲ್ಲೆಲ್ಲಿಗೋ ಹೋಗಿ ಮುಟ್ಟಿದೆ. ಮೊದಲು ಟ್ವೀಟ್ ವಾರ್ ನಲ್ಲಿ ಇತ್ತು. ಈಗ ಸಭೆಯಲ್ಲಿ ಜನರ ಮುಂದೆ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರ ವಾರ್ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here