ಪ್ರವಾಹದ ನಡುವೆಯಲ್ಲು ಎದೆಗುಂದದೆ ಸಾಧನೆ ಮಾಡಿದ ಬೆಳಗಾವಿಯ ಯುವಕ

0
868

ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಜನರ ಪರಿಸ್ಥಿತಿ ಊಹಿಸಲಕ್ಕು ಆಗಲಾರದ ಮಟ್ಟಿಗೆ ತಲುಪಿದೆ. ವರುಣನ ಆರ್ಭಟ ಮುಂದುವರೆಯುತ್ತಲೆ ಇದೆ. ಉತ್ತರ ಕರ್ನಾಟಕ ಪ್ರದೇಶಗಳಾದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಕಡಿಮೆಯಾಗುವ ಯಾವುದೆ ಲಕ್ಷಣ ಕಂಡು ಬರುತ್ತಿಲ್ಲ. ಮಲೆನಾಡಿನಲ್ಲು ಸಹ ನದಿಗಳು ತುಂಬಿ ಹರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಸೇರ್ಪಡೆಯಾಗುವ ಶಿವಮೊಗ್ಗ, ಚಿಕ್ಕಮಂಗಳೂರು, ಹಾಸನ, ಕರಾವಳಿ ಪ್ರದೇಶಗಳಲ್ಲಿ ಮಳೆಯ ಆತಂಕ ಅಧಿಕವಾಗಿದೆ. ಪ್ರವಾಹದ ಬಳಿಗೆ ಕೊಡಗು ಜಿಲ್ಲೆ ಸಿಲುಕಿಕೊಂಡಿದೆ. ಸೇನಾಪಡೆ, ವಾಯುಪಡೆ ಮತ್ತು ನೌಕಾ ಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಸಾಗಿದೆ. ರಾಜ್ಯದಲ್ಲಿ ಸುಮಾರು 80 ತಾಲೂಕುಗಳನ್ನು ಪ್ರವಾಹ ಪೀಡಿತ ರಾಜ್ಯಗಳೆಂದು ಘೋಷಿಸಿದ್ದಾರೆ.

ಪ್ರವಾಹ ಉಂಟಾದರು ಈಜಿ ದಡ ಸೇರಿದ ಬಾಕ್ಸರ್

ಒಂದು ಕಡೆ ಪ್ರವಾಹದಿಂದ ಜನರನ್ನು ತತ್ತರಸಿ ಹೋಗುತ್ತಿದ್ದರೆ, ಇನ್ನೊಂದು ಕಡೆ ಒಬ್ಬ ಯುವಕನಿಗೆ ಬಾಕ್ಸಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಒದಗಿ ಬಂದಿತ್ತು. ಇಷ್ಟು ವರ್ಷ ಪಟ್ಟ ಪರಿಶ್ರಮ ಹಾಳಾಗಬಾರದೆಂದು ಮತ್ತು ಸಿಕ್ಕ ಅವಕಾಶವ ಕೈ ಜಾರಿ ಹೋಗಬಾರದೆಂದು ಯುವ ಬಾಕ್ಸರ್ ಪ್ರವಾಹದ ನೀರಲ್ಲೆ ಈಜಿ ದಡ ಸೇರಿ, ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕವನ್ನು ಗೆದ್ದು ಅನೇಕರಿಗೆ ಪ್ರೇರಿತರಾಗಿದ್ದಾರೆ. ಬೆಂಗಳೂರು ಯುವ ಜನತೆಗೆ ಈ ಮೂಲಕ ಮಾದರಿಯಾಗಿದ್ದಾರೆ. ನಿಜಕ್ಕು ಈ ಹುಡುಗನ ಸಾಹಸ ಮೆಚ್ಚಿಕೊಳ್ಳಬೇಕಾಗಿದೆ.

ಬೆಂಗಳೂರಿಗೆ ತಲುಪಿ ಚಿನ್ನದ ಪದಕವನ್ನು ಗೆದ್ದಿದ್ದಾನೆ

ಯುವ ಬಾಕ್ಸರ್ ನಾ ಹೆಸರು ನಿಶಾನ್ ಮನೋಹರ್ ಕದಂ, ಮೂಲತಃ ಬೆಳಗಾವಿ ಊರಿನವನು. ಇಂತಹ ಪರಿಸ್ಥಿತಿಯಲ್ಲು ತನ್ನ ಗುರಿಯನ್ನು ಸಾಧಿಸುವ ಮೂಲಕ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾನೆ. ಬೆಳಗಾವಿ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾವೇರಿ, ಕೊಡಗು, ಬಾಗಲಕೋಟೆ, ಹಾಸನ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದೆ. ಶಾಲಾ ಕಾಲೆಜಿಗಳಿಗೂ ಎರಡು ದಿನಗಳ ಕಾಲ ರಜೆ ಘೋಷಿಸಿದ್ದಾರೆ. ಜನರು ಇದರಿಂದ ಹೊರ ಬರಲು ಸಾಕಷ್ಟು ಒದ್ದಾಡುತ್ತಿದ್ದಾರೆ. ಇಂತಹ ಕಠಿಣವಾದ ಪರಿಸ್ಥಿತಿಯಲ್ಲು  2.5 ಕೀಮಿಯ ವರೆಗು ಈಜಿ ನಂತರ ಬೆಂಗಳೂರು ನಗರಕ್ಕೆ ಬಂದು ಬಾಕ್ಸಿಂಗ್ ನಲ್ಲಿ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಈಜುವುದು ಬಿಟ್ಟು ಬೇರೆ ದಾರಿ ನನಗೆ ಇರಲಿಲ್ಲ

ನದಿಗಳಿಂದ ನೀರು ಹರಿದು ಬಂದು ರಸ್ತೆಯನ್ನು ಆವರಿಸಿಕೊಂಡಿತ್ತು, ಇದರ ಮದ್ಯದಲ್ಲು ನಿಶಾನ್ ಈಜಿ ದಡಕ್ಕೆ ಸೇರಿದ್ದಾನೆ. ನೀರಿನಲ್ಲಿ ಈಜಿರುವುದರಿಂದ ಹೆಚ್ಚು ಧಣಿದಿರುತ್ತಾನೆ ಆದರೂ ಸಹ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಜೇತನಾಗಿದ್ದಾನೆ.

ಇಂತಹ ಸಂದರ್ಭದಲ್ಲಿ ಈಜುವುದು ಬಿಟ್ಟು ಬೇರೆ ದಾರಿ ನನಗೆ ಇರಲಿಲ್ಲ, ಈ ವರ್ಷದ ಪ್ರದರ್ಶನ ನನಗೆ ತೃಪ್ತಿ ತಂದು ಕೊಟ್ಟಿದೆ ಎಂದು ನಿಶಾನ್ ಹೇಳಿದ್ದಾನೆ. ಮುಂದೆ ಬರುವ ಸ್ಪರ್ಧೆಗಳಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಆತ್ಮ ವಿಶ್ವಾಸದಲ್ಲಿದ್ದಾನೆ.

LEAVE A REPLY

Please enter your comment!
Please enter your name here