ತನ್ನ ಪ್ರಾಣವನ್ನು ಲೆಕ್ಕಿಸದೆ ಜನರನ್ನು ರಕ್ಷಿಸಿದ ಶ್ವಾನ ಏನಿದು ಸ್ಟೋರಿ?

0
1078

ಪ್ರಾಣಿಗಳೆಂದರೆ ಮನುಷ್ಯನಿಗೆ ಒಂಥರಾ ಪ್ರೀತಿ ಅನುಕಂಪಾ ಇದ್ದೇ ಇರುತ್ತದೆ, ಮನುಷ್ಯ ಮನುಷ್ಯನನ್ನು ಮೋಸ ಮಾಡಬಹುದು ಆದರೆ ಪ್ರಾಣಿಗಳಿಗೆ ಇಂತಹ ಒಂದು ಆಲೋಚನೆ ಯಾವುದೇ ಕಾರಣಕ್ಕು ಬರುವುದಿಲ್ಲ. ಮನುಷ್ಯನಲ್ಲಿ ಸ್ವಾರ್ಥ ಮನೋಭಾವನೆ ಇರುತ್ತದೆ, ಪ್ರಾಣಿಗಳಿಗೆ ಮಾತ್ರ ಇಂತಹ ಒಂದು ಸ್ವಾರ್ಥಮನೋಭಾವನೆ ಇರುವುದಿಲ್ಲ. ಒಂದು ಸಾರಿ ನೀವು ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಂಡರೆ ಆ ಪ್ರಾಣಿ ಸಾಯೋತನಕ ನಿಮ್ಮ ಜೊತೆ ಆತ್ಮೀಯವಾಗಿರುತ್ತದೆ. ನಿಮ್ಮ ಎಲ್ಲಾ ಚಟುವಟಿಕೆಗಳನ್ನು ಗಮನಿಸಿ ನಿಮ್ಮ ಸಹಾಯಕ್ಕೆ ಕೂಡ ಬರುತ್ತವೆ. ಪ್ರಾಣಿಗಳಲ್ಲಿ ನಾಯಿ ನಿಯತ್ತಿಗೆ ಹೆಸರುವಾಸಿ, ಬೀದಿ ನಾಯಿಗಳೆ ಆಗಲಿ ಅಥವಾ ಯಾವುದೇ ನಾಯಿ ಆಗಲಿ ಒಂದು ತುತ್ತು ಅನ್ನ ಹಾಕಿದರೆ ಸಾಕು ನಿಮ್ಮ ಹಿಂದೆಯೇ ಬಾಲ ಅಲ್ಲಾಡಿಸಿಕೊಂಡು ಬರುತ್ತದೆ.

ಒಂದು ನಾಯಿ 30 ಜನರ ಪ್ರಾಣವನ್ನು ಉಳಿಸಿ ತನ್ನ ಪ್ರಾಣ ಕೂಡ ಬಲಿದಾನ ಮಾಡಿದೆ

ಒಂದು ನಾಯಿ 30 ಜನರ ಪ್ರಾಣವನ್ನು ಉಳಿಸಿ ತನ್ನ ಪ್ರಾಣ ಕೂಡ ಬಲಿದಾನ ಮಾಡಿದೆ. ಇಂತಹ ಒಂದು ರೋಮಾಂಚಕವಾದ ಹಾಗೂ ದುಖ ಪಡುವಂತಹ ಘಟನೆ ಉತ್ತರ ಪ್ರದೇಶದಲ್ಲಿ ಕಂಡು ಬಂದಿದೆ. ಶುಕ್ರವಾರದ ದಿನದಂದು ಬಂದಾನಗರದಲ್ಲಿರುವ ಬಿಲ್ಡಿಂಗ್ ಅಲ್ಲಿ ಅಚಾನಕ್ಕಾಗಿ ಬೆಂಕಿ ಹತ್ತಿಕೊಂಡಿತ್ತು, ಇಂತಹ ಒಂದು ಸಂದರ್ಭದಲ್ಲಿ ನಾಯಿ ಕಟ್ಟದಲ್ಲಿದ್ದ ಜನರನ್ನು ಜಾಗೃತರನ್ನಾಗಿ ಮಾಡಿ ಅವರ ಪ್ರಾಣವನ್ನು ರಕ್ಷಿಸಿದೆ. ಮಧ್ಯ ರಾತ್ರಿಯ ವೇಳೆಯಲ್ಲಿ 4ನೇ ಅಂತಸ್ತಿನ ಈ ಕಟ್ಟಡದ ಭೂನಾದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಇದೇ ಕಟ್ಟಡದಲ್ಲಿ 3ನೇ ಹಾಗೂ 4ನೇ ಫ್ಲೋರ್ ಗಳಲ್ಲಿ ಜನರು ವಾಸಿಸುತ್ತಿದ್ದರು.

dog saves life of 30 people

ಜೋರಾಗಿ  ಉಚ್ಚ ಧ್ವನಿಯಲ್ಲಿ ಕೂಗಿ ಜನರನ್ನು ನಿದ್ದೆ ಇಂದ ಎಬ್ಬಿಸಿದೆ

ಕಟ್ಟಡಕ್ಕೆ ಬೆಂಕಿ ಹತ್ತಿರುವುದು ನಾಯಿ ಗಮನಿಸಿದೆ, ಆದ್ದರಿಂದ ಜೋರಾಗಿ ಉಚ್ಚ ಧ್ವನಿಯಲ್ಲಿ ಕೂಗಿ ಜನರನ್ನು ನಿದ್ದೆ ಇಂದ ಎಬಿಸಿದೆ. ಇದನ್ನು ಆಲಿಸಿದ ಜನರು ಹುಷಾರಾಗಿದ್ದಾರೆ, ಮನೆ ಇಂದ ಬೇಗನೆ ಹೊರಗೆ ಬಂದು ನೋಡಿದರೆ ಕಟ್ಟಡಕ್ಕೆ ಬೆಂಕಿ ಬಿದ್ದಿರುವುದು ತಿಳಿದು ಬಂದಿದೆ, ಕಟ್ಟಡದ ಇನ್ನೂ ಅನೇಕ ನಿವಾಸಿಯರು ಕಟ್ಟಡದಿಂದ ಹೊರಾಂಗಣಕ್ಕೆ ಬಂದು ತಮ್ಮ ಜೀವವನ್ನು ಕಾಪಾಡಿಕೊಂಡಿದ್ದಾರೆ. ಆದರೆ ಕಟ್ಟಡಲಿದ್ದ ಸಿಲೆಂಡರ್ ಕೊನೆಗೆ ಸ್ಫೋಟಗೊಂಡಿರುವ ಸಮಯದಲ್ಲಿ ಶ್ವಾನ ತನ್ನ ಪ್ರಾಣ ಬಿಟ್ಟಿದೆ ಅಂತಾ ಪ್ರತ್ಯಕ್ಷವಾಗಿ ದೃಶ್ಯವನ್ನು ನೋಡಿದ ಜನರು ವರದಿ ನೀಡಿದ್ದಾರೆ. ಇದರಿಂದಾಗಿ ಸುತ್ತಲೂ ನೆಲೆಗೊಂಡಿರುವ ಕಟ್ಟಡಗಳಿಗೂ ಸ್ವಲ್ಪ ಪ್ರಮಾಣದಲ್ಲಿ ಅಪಾಯ ಉಂಟಾಗಿದೆ. ಆದರೆ ಏನೇ ಆಗಲಿ ತನ್ನ ಪ್ರಾವನ್ನು ಬಳಿ ಕೊಟ್ಟು ಜನರ ಪ್ರಾಣವನ್ನು ಉಳಿಸಿದ ನಾಯಿಗೆ ನಾವು ತಲೆ ಬಾಗಲೇಬೇಕು.

dog saved people

ಶ್ವಾನ ತನ್ನ ಪ್ರಾಣವನ್ನು ತ್ಯಜಿಸಿರುವುದು ಬಹಳ ದುಖ ತರುವ ಸಂಗತಿ ಆಗಿದೆ

ಒಬ್ಬ ಮನುಷ್ಯ ಕಷ್ಟದ ಪರಿಸ್ಥಿತಿ ಅಲ್ಲಿದ್ದರೆ ಇನ್ನೊಬ್ಬ ಮನುಷ್ಯ ಸಹಾಯಕ್ಕೆ ಬರುವುದಿಲ್ಲ, ಆದರೆ ಪ್ರಾಣಿಗಳ ವಿಷಯದಲ್ಲಿ ಹಾಗಲ್ಲ ಅಂತಾ ಈ ಘಟನೆಯ ಮುಖಾಂತರ ನಮ್ಮಗೆ ಗೊತ್ತಾಗುತ್ತದೆ. ನಾಯಿಯ ಈ ಒಂದು ಕಾರ್ಯವನ್ನು ನಾವು ಮೆಚ್ಚಿಕೊಳ್ಳಲೇಬೇಕು, ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಅಂತಾ ಒಂದು ಮಾತಿದೆ ಆ ಮಾತು ಸುಳ್ಳಾಗಳು ಸಾಧ್ಯವೇ ಇಲ್ಲ. ತನ್ನ ಪ್ರಾಣವನ್ನು ತ್ಯಜಿಸಿರುವುದು ಬಹಳ ದುಖ ತರುವ ಸಂಗತಿ ಆಗಿದೆ. ಜನರ ಮನಸ್ಸಲ್ಲಿ ಈ ಘಟನೆ ಶಾಶ್ವತವಾಗಿರುತ್ತದೆ.

 

brave dog saved 30 peoples life

LEAVE A REPLY

Please enter your comment!
Please enter your name here