ಏಸು ಕ್ರಿಸ್ತನ ಪ್ರತಿಮೆಗೆ ಅಡಿಗಲ್ಲು ಹಾಕಿದ ಡಿಕೆಶಿ ವಿರುದ್ಧ ಗುಡುಗುತ್ತಿರುವ ಜನರು

0
868
dkshi and esu

ನಮ್ಮ ರಾಜ್ಯದ ರಾಜಕಾರಣಿಗಳು ರಾಜ್ಯದ ಬೆಳವಣಿಗೆಗೆ ಹೆಚ್ಚು ಒತ್ತು ಕೊಡುವ ಬದಲು, ಇತರ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹೌದು. ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ಇಲ್ಲ ಸಲ್ಲದ ಹೇಳಿಕೆ ನೀಡುವುದು, ನಮ್ಮದಲ್ಲದ ಕೆಲಸದ ಬಗ್ಗೆ ಹೆಚ್ಚು ಚಿಂತಿಸುವುದು, ಹಣ ಮಾಡುವುದು ಇತ್ಯಾದಿ ಕೆಲಸಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಆದ್ರೆ ಇಲ್ಲಿ ರಾಜ್ಯದ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ. ಇನ್ನು ಈ ಮಾತುಗಳ ಸಾಮಾನ್ಯ ಜನರದ್ದಾಗಿದೆ. ಯಾಕಂದ್ರೆ ಇಂದು ಈ ಮಾತನ್ನು ಜನರು ಹೇಳಲು ಕಾರಣ, ಡಿ.ಕೆ ಶಿವಕುಮಾರ್ ಆಗಿದ್ದಾರೆ. ಹೌದು. ವಿಶ್ವದಲ್ಲೇ ಅತಿ ಎತ್ತರವಾದ ಏಸು ಕ್ರಿಸ್ತನ ಪ್ರತಿಮೆಗೆ ಡಿಕೆಶಿ ಅಡಿಗಲ್ಲು ಹಾಕಿದ್ದಾರೆ. ಹಾಗಾಗಿ ಆ ವಿಚಾರ ಈಗ ದೊಡ್ಡ ಸುದ್ದಿಯಾಗುವುದರ ಜೊತೆಗೆ ಭಾರಿ ಚರ್ಚೆಗೆ ಕಾರಣವಾಗಿದೆ.

ಏಸು ಕ್ರಿಸ್ತನ ಪ್ರತಿಮೆಗೆ ಅಡಿಗಲ್ಲು ಹಾಕಿದ ಡಿಕೆಶಿ

ಬುಧವಾರವಷ್ಟೇ ಎಲ್ಲೆಡೆ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗಿದೆ. ಇನ್ನು ಕ್ರೈಸ್ತರಿಗೆ ಈ ಹಬ್ಬ ಬಹಳ ಪ್ರಮುಖವಾಗಿದ್ದು, ಈ ಹಬ್ಬಕ್ಕಾಗಿ ವರ್ಷವಿಡೀ ಕಾಯುತ್ತಾರೆ. ಹಾಗಾಗಿ ಅವರು ಈ ಹಬ್ಬದ ದಿನ ಏಸುವಿಗೆ ಪ್ರಾರ್ಥನೆ ಮಾಡಿ, ಆತನಿಗೆ ನಮಿಸುತ್ತಾರೆ. ಆದ್ರೆ ಇದರ ವಿಚಾರವಾಗಿ ಯಾವ ಸುದ್ದಿಯು ಹೆಚ್ಚು ಪ್ರಾಧ್ಯಾನತೆ ಪಡೆದುಕೊಂಡಿರಲಿಲ್ಲ. ಆದ್ರೆ ಈಗ ಡಿಕೆಶಿ ಅವರ ಈ ಕಾರ್ಯ ಬಹಳಷ್ಟು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೌದು. ವಿಶ್ವದಲ್ಲೇ ಅತಿ ಎತ್ತರವಾದ ಏಸು ಕ್ರಿಸ್ತನ ಪ್ರತಿಮೆಗೆ ರಾಮನಗರದಲ್ಲಿ ಅಡಿಗಲ್ಲು ಹಾಕಲಾಗಿದೆ. ಹೌದು. ಕನಕಪುರದ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ಅಡಿಗಲ್ಲನ್ನು ಹಾಕಿದ್ದು, ಸುಮಾರು 10 ಎಕರೆ ಪ್ರದೇಶದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ. ಇನ್ನು ಈ ಪ್ರತಿಮೆ 114 ಅಡಿ ಎತ್ತರವಿದ್ದು, 13 ಮೆಟ್ಟಿಲುಗಳನ್ನು ಒಳಗೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಉಂಟಾದ ಚರ್ಚೆ

ಇನ್ನು ಡಿಕೆಶಿಯ ಕಾರ್ಯಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಇನ್ನು ಕೆಲವರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಹೌದು. ಪ್ರತಿಮೆಯ ಅನಾವರಣಕ್ಕೂ ಮೊದಲು ಡಿಕೆಶಿ ಒಕ್ಕಲಿಗರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಲ್ಲಿ ಒಕ್ಕಲಿಗರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಒಕ್ಕಲಿಗನಾಗಿ ಹುಟ್ಟುವುದು ಭಾಗ್ಯ. ಅದೃಷ್ಟ ಮಾಡಿರಬೇಕು ಎಂದೆಲ್ಲ ಮಾತುಗಳನ್ನಾಡಿ, ನಂತರ ಕ್ರಿಸ್ತನ ಪ್ರತಿಮೆಗೆ ಅಡಿಗಲ್ಲು ಹಾಕಿದ್ದಾರೆ. ಅಲ್ಲದೆ ಇದುವರೆಗೂ ಸಹ ನಗರದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಬಳಿ ಹೋಗಿದ್ದರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದ್ರೆ ಕ್ರಿಸ್ತನ ಪ್ರತಿಮೆಗೆ ಅಡಿಗಲ್ಲು ಹಾಕಿದ್ದಾರೆ. ಅಲ್ಲದೆ ಇದರಿಂದ ಅವರೇ ಕ್ರೈಸ್ತ ಮತಕ್ಕೆ ಮತಾಂತರ ಆಗುವುದಕ್ಕೆ ದಾರಿ ಮಾಡಿಕೊಡುತ್ತಿದ್ದಾರಾ? ಎನ್ನುವ ಪ್ರಶ್ನೆಗಳನ್ನು ಕನಕಪುರದ ಬಂಡೆಗೆ ಜನರು ಕೇಳುತ್ತಿದ್ದಾರೆ. ಆದರೆ ಡಿಕೆಶಿ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ.

ಒಟ್ಟಿನಲ್ಲಿ ಕನಕಪುರದ ಬಂಡೆಯಾದ ಡಿಕೆಶಿ ಇಂದು ಜನರ ವಿರೋಧಕ್ಕೆ ಗುರಿಯಾಗಿದ್ದು, ಜನರು ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದ್ರೆ ಡಿಕೆಶಿ ಮಾತ್ರ ಜನರ ಯಾವ ಪ್ರಶ್ನೆಗೂ ಪ್ರತಿಕ್ರಿಯೆ ನೀಡಿದ್ದು, ತಮ್ಮ ಪಾಡಿಗೆ ತಾವಿದ್ದಾರೆ.

LEAVE A REPLY

Please enter your comment!
Please enter your name here