‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟ ಗೆದ್ದ ಕುಲವಧು ಖ್ಯಾತಿಯ ಧನ್ಯಾ @ ದೀಪಿಕಾ

0
3290

ಇತ್ತೀಚಿಗೆ ನಮ್ಮ ಸಿನಿಮಾ ತಾರೆಯರು ಮಾತ್ರವಲ್ಲ ಕಿರುತೆರೆ ನಟಿಯರು ಸಹ ಸಾಕಷ್ಟು ಮಿಂಚುತ್ತಿದ್ದಾರೆ. ಹೌದು. ನಮ್ಮ ಕನ್ನಡ ಭಾಷೆಯಲ್ಲಿ ಸಾಕಷ್ಟು ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಅದರಲ್ಲಿರುವ ನಾಯಕಿಯರು ಬಹಳಷ್ಟು ಸೊಗಸಾಗಿ ನಟಿಸುತ್ತಾರೆ. ಅಲ್ಲದೆ ಅವರು ಧಾರಾವಾಹಿಗಳಲ್ಲಿ ನಟಿಸುವುದಲ್ಲದೆ, ಅನೇಕ ಇನ್ನಿತರ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಅದರ ಸಾಲಿಗೆ ಸಾಕಷ್ಟು ಮಂದಿ ಸೇರಿದ್ದಾರೆ. ಈಗ ಸಾಲಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಹೌದು. ಕನ್ನಡ ಕಿರುತೆರೆ ನಟಿ, ಈಗ ದಕ್ಷಿಣ ಭಾರತದಲ್ಲೇ ಫೇಮಸ್ ಆಗಿದ್ದಾರೆ.

ಮಿಸ್ ಸೌತ್ ಇಂಡಿಯಾ ಗ್ಲಾಮರ್ ನಲ್ಲಿ ಗೆದ್ದ ದೀಪಿಕಾ

ಕನ್ನಡದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕುಲವಧು ಎಂಬ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದ ಧನ್ಯಾ ಈಗ ದಕ್ಷಿಣ ಭಾರತದಲ್ಲೇ ತುಂಬಾ ಫೇಮಸ್ ಆಗಿದ್ದಾರೆ. ಯಾಕಂದ್ರೆ ಅಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಿಸ್ ಸೌತ್ ಇಂಡಿಯಾ ಗ್ಲಾಮರ್ ನ್ನ ಏರ್ಪಡಿಸಲಾಗಿತ್ತು. ಆದ್ರೆ ಈ ಬಾರಿ ಈ ಕಾರ್ಯಕ್ರಮದಲ್ಲಿ ಧನ್ಯಾ @ ದೀಪಿಕಾ ಗೆದ್ದಿದ್ದಾರೆ. ಹೌದು. ಈ ಬಾರಿಯ ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019 ರ ಕಿರೀಟವನ್ನ ದೀಪಿಕಾ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇನ್ನೂ ಇದರ ಬಗ್ಗೆ ತಮ್ಮ ಕೆಲವು ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಕಿರೀಟ ಪಡೆದ ದೀಪಿಕಾ

ದಕ್ಷಿಣ ಭಾರತದಲ್ಲಿ ಪ್ರತಿ ವರ್ಷದಂತೆ, ಈ ವರ್ಷವೂ ಸಹ ಸೌಂದರ್ಯ ಸ್ಪರ್ಧೆಯನ್ನ ಏರ್ಪಡಿಸಲಾಗಿತ್ತು. ಆದ್ರೆ ಇದರಲ್ಲಿ ಧನ್ಯಾ @ ದೀಪಿಕಾ ಸ್ಪರ್ಧಿಸುತ್ತಿದ್ದಾರೆ ಅನ್ನೋದು ಹಲವರಿಗೆ ಗೊತ್ತಿರಲಿಲ್ಲ. ಆದ್ರೆ ಈಗ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ, ಅದರಲ್ಲಿ ಗೆದ್ದು, ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಇದರ ಬಗ್ಗೆ ಹಾಗೂ ತಾವು ಗೆದ್ದಿರುವ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ. ಜೊತೆಗೆ, ಅವರು ಕಿರೀಟ ಧರಿಸುವ ಫೋಟೋಗಳನ್ನು ಸಹ ಅಪ್ಲೋಡ್ ಮಾಡಿ, ಸಂಸತ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳಿಗೆ ಹಾಗೂ ತನ್ನ ಗೆಳೆಯನಿಗೆ ಧನ್ಯವಾದ ತಿಳಿಸಿದ ದೀಪಿಕಾ

ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019 ನಲ್ಲಿ ಗೆದ್ದಿರುವ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ದೀಪಿಕಾ ತಮ್ಮ ಅಭಿಮಾನಿಗಳಿಗೆ ಹಾಗೂ ತನ್ನ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. ಹೌದು. ನನ್ನ ಈ ಎಲ್ಲಾ ಸಾಧನೆಗೆ ನನ್ನ ಅಭಿಮಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಜೊತೆಗೆ ನನ್ನ ಗೆಳೆಯನಾದ ಆಕರ್ಷ್ ನನ್ನ ಬೆನ್ನೆಲುಬಾಗಿ ನಿಂತಿದ್ದರು. ಅವರು ಇಲ್ಲ ಎಂದಿದ್ದರೆ, ನಾನು ಗೆಲ್ಲಲ್ಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಪ್ರತಿ ಹೆಜ್ಜೆಗೂ ಅವರು ನನಗೆ ಸಹಾಯ ಹಾಗೂ ಪ್ರೋತ್ಸಾಹ ನೀಡಿದ್ದಾರೆ. ಹಾಗಾಗಿ ಈ ಗೆಲುವು ನಿಮಗೆ ಸೇರಬೇಕಾದದ್ದು ಎಂದು ತನ್ನ ಗೆಳೆಯನಿಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಧನ್ಯಾ @ ದೀಪಿಕಾ ಈಗ ದಕ್ಷಿಣ ಭಾರತದಲ್ಲೇ ಫೇಮಸ್ ಆಗಿದ್ದಾರೆ. ನಿಜಕ್ಕೂ ಇದು ಅವರಿಗೆ ಹೆಮ್ಮೆಯ ವಿಷಯವಾಗಿದೆ.

LEAVE A REPLY

Please enter your comment!
Please enter your name here