ನನ್ನ ಮಗಳು ಬಂದ ಕೂಡಲೇ ಆ ವಿಷಯದ ಬಗ್ಗೆ ವಿಚಾರಿಸುತ್ತೇನೆ. – ದೀಪಿಕಾ ತಾಯಿ

0
1008

ಕನ್ನಡದ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ದಿನದಿಂದ ದಿನಕ್ಕೆ ಅಭಿಮಾನಿಗಳಿಂದ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಹೌದು. ಪ್ರಾರಂಭದಲ್ಲಿ ಕಾರ್ಯಕ್ರಮ ಬೇಸರ ತರಿಸಿದರೂ, ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಸ್ಪರ್ಧಿಗಳು ಸಹ ದೊಡ್ಮನೆಯಲ್ಲಿ ಬಹಳಷ್ಟು ಆಕ್ಟಿವ್ ಆಗಿ ಆಟೋಟಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಜನರು ದೊಡ್ಮನೆಯಲ್ಲಿನ ಸ್ಪರ್ಧಿಗಳಲ್ಲಿ ತಮಗಿಷ್ಟವಾದ ಒಬ್ಬ ಸ್ಪರ್ಧಿಗೆ ವೋಟ್ ಹಾಕುತ್ತಿದ್ದು, ಅವರನ್ನು ಗೆಲ್ಲಿಸುವ ಉತ್ಸಾಹದಲ್ಲಿದ್ದಾರೆ. ಅವರಲ್ಲಿ ದೀಪಿಕಾ ದಾಸ್ ಕೂಡ ಒಬ್ಬರಾಗಿದ್ದಾರೆ. ಹೌದು. ದೀಪಿಕಾ ದಾಸ್ ಅವರ ಆಟೋಟ ಹಾಗು ಎನರ್ಜಿ ನೋಡುತ್ತಿದ್ದರೆ, ಅವರು ಫಿನಾಲೆಗೆ ತಲುಪುತ್ತಾರೆ ಎಂದು ಅಭಿಮಾನಿಗಳು ಸಾರಿ ಸಾರಿ ಹೇಳುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ದೀಪಿಕಾ ಅವರ ತಾಯಿ ದೀಪಿಕಾ ಬಗ್ಗೆ ಒಂದು ಅಚ್ಚರಿ ವಿಷಯವನ್ನು ತಿಳಿಸಿದ್ದಾರೆ.

ಮಗಳು ಮನೆಯಿಂದ ಹೊರಬಂದ ಮೇಲೆ ವಿಚಾರಿಸುತ್ತೇನೆ

ಬಿಗ್ ಬಾಸ್ ಸೀಸನ್ 7ರಲ್ಲಿ ದೀಪಿಕಾ ದಾಸ್ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಇನ್ನು ಅವರ ಬಗ್ಗೆ ದಿನದಿಂದ ದಿನಕ್ಕೆ ಒಂದೊಂದು ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ಆದರೆ ಮನೆಯೊಳಗೇ ನಡೆದ ಒಂದು ವಿಚಾರವಾಗಿ ದೀಪಿಕಾ ತಾಯಿಗೆ ಆಶ್ಚರ್ಯವಾಗಿದೆ. ಜೊತೆಗೆ ಅದರ ಬಗ್ಗೆ ಖಂಡಿತ ವಿಚಾರಿಸುತ್ತೇವೆ ಎಂದು ಹೇಳಿದ್ದಾರೆ. ಹೌದು. ಕಳೆದ ಕೆಲವು ದಿನಗಳ ಹಿಂದೆ ದೊಡ್ಮನೆಯಲ್ಲಿ ಒಂದು ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ದೀಪಿಕಾ ತಾನು ಪ್ರೀತಿಸಿ ಮೋಸ ಹೋಗಿದ್ದರ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಇನ್ನು ವಿಚಾರ ದೀಪಿಕಾ ಅವರ ಮನೆಯವರಿಗೆ ತಿಳಿದಿರಲಿಲ್ಲವಂತೆ. ಹಾಗಾಗಿ ಮಗಳು ಮನೆಗೆ ಬಂದ ಕೂಡಲೇ ವಿಚಾರಿಸುವುದಾಗಿ ಅವರ ತಾಯಿ ತಿಳಿಸಿದ್ದಾರೆ.

ಶೈನ್ ಹಾಗು ದೀಪಿಕಾ ವಿಚಾರ ಅಷ್ಟೊಂದು ಗಂಭೀರ ಅಲ್ಲ

ಇನ್ನು ಈಗಿನ ಸೀಸನ್ ನಲ್ಲಿ ಶೈನ್ ಹಾಗು ದೀಪಿಕಾ ಹೆಚ್ಚು ಸುದ್ದಿಯಲ್ಲಿದ್ದಾರೆ. ಹಾಗಾಗಿ ಈ ಸೀಸನ್ ನ ಪ್ರಣಯ ಪಕ್ಷಿಗಳು ಇವರೇ ಎಂದು ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ದೀಪಿಕಾ ಅವರ ತಾಯಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೌದು. ದೊಡ್ಮನೆಯಲ್ಲಿ ನಡೆಯುತ್ತಿರುವುದು ಒಂದು ಸ್ನೇಹ ಅಷ್ಟೇ. ಅದಕ್ಕೂ ಮೀರಿ ಏನು ಇಲ್ಲ. ಅಲ್ಲದೆ. ಈಗ ಅವರು ಅಲ್ಲಿ ಅಷ್ಟೊಂದು ಸ್ನೇಹದಿಂದ ಇರಬಹುದು. ಆದರೆ ಮನೆಯಿಂದ ಹೊರಬಂದ ಮೇಲೆ ಒಬ್ಬೊರಿಗೊಬ್ಬರು ಭೇಟಿಯಾಗುತ್ತಾರೋ ಅಥವಾ ಇಲ್ಲವೋ ಎನ್ನುವುದೇ ಅನುಮಾನ. ಆದ್ರೆ ಅವರ ಮಧ್ಯೆ ಇರುವುದು ಒಳ್ಳೆಯ ಸ್ನೇಹ ಎಂದು ದೀಪಿಕಾ ತಾಯಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ದೀಪಿಕಾ ದಾಸ್ ಅವರ ಪ್ರೇಮ ಕಥೆ ಅವರ ಮನೆಯವರಿಗೆ ತಿಳಿದಿರಲಿಲ್ಲವಂತೆ. ಹಾಗಾಗಿ ದೀಪಿಕಾ ಅವರ ತಾಯಿ ನನ್ನ ಮಗಳು ಮನೆಗೆ ಬಂದ ಕೂಡಲೇ ನಾನು ಅದರ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here