ದೀಪಿಕಾ ಟ್ರಿಕ್ಸ್ ಬಲೆಗೆ ಬಿದ್ದ ಶೈನ್ ಶೆಟ್ಟಿ : ಗಾಬರಿಯಾದ ಮನೆಯವರು

0
693
deepika and shain shetty

ಕನ್ನಡದ ಬಿಗ್ ಬಾಸ್ ಸೀಸನ್ 7 ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು. ಸ್ಪರ್ಧಿಗಳ ಆಟೋಟಗಳು ಹಾಗು ಅವರ ಎಕ್ಸ್ಟ್ರಾ ಎಫರ್ಟ್ ಗಳು ಎಲ್ಲರನ್ನು ಕಾರ್ಯಕ್ರಮ ವೀಕ್ಷಿಸುವುದತ್ತ ಬರಮಾಡಿಕೊಳ್ಳುತ್ತಿದೆ. ಇನ್ನು ಕುರಿ ಪ್ರತಾಪ್ ಅವರ ಕಾಮಿಡಿ, ವಾಸುಕಿಯವರ ಸಂಗೀತ ಈ ರೀತಿ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಾಗಿ ಜನರು ಕಾರ್ಯಕ್ರಮವನ್ನು ಮರೆಯದೆ ನೋಡುತ್ತಿದ್ದಾರೆ. ಆದ್ರೆ ಮನೆಯಲ್ಲಿ ನಡೆಯುತ್ತಿರುವ ಕೆಲವು ವಿಚಾರಗಳು ಜನರಿಗೆ ಆಶ್ಚರ್ಯ ಹುಟ್ಟಿಸಿದರೆ, ಇನ್ನು ಕೆಲವು ವಿಚಾರಗಳು ಬೇಸರ ತರಿಸುತ್ತಿವೆ. ಅದೇ ರೀತಿ ಈಗ ಶೈನ್ ಶೆಟ್ಟಿ ವಿಚಾರದಲ್ಲಿ ಆಶ್ಚರ್ಯವೊಂದು ಇಂದಿನ ಎಪಿಸೋಡ್ ನಲ್ಲಿ ನಡೆಯಲಿದೆ.

ದೀಪಿಕಾ ಮಾತಿಗೆ ಬೆಲೆ ಕೊಟ್ಟರಾ ಶೈನ್ ಶೆಟ್ಟಿ?

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳ ಜೊತೆಗೆ ಹಸಿ ಬಿಸಿ ಪ್ರೇಮ ಪ್ರಸಂಗಗಳು ಕೂಡ ನಡೆಯುತ್ತಿವೆ. ಆದ್ರೆ ಯಾರು ಯಾರ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎನ್ನುವುದು ಮಾತ್ರ ಸರಿಯಾಗಿ ತಿಳಿಯುತ್ತಿಲ್ಲ. ಆದ್ರೆ ಒಬ್ಬರ ಜೊತೆಗೆ ಇನ್ನೊಬ್ಬರು ಹೆಚ್ಚು ಆತ್ಮೀಯರಾಗಿದ್ದಾರೆ. ಇನ್ನು ಶೈನ್ ಶೆಟ್ಟಿ ಈಗ ದೀಪಿಕಾ ಹೇಳಿದ ಒಂದು ಮಾತಿಗೆ ಅವರ ಇಷ್ಟಕ್ಕೆ ವಿರುದ್ಧವಾದ ಕೆಲಸವನ್ನು ಮಾಡಿದ್ದಾರಾ ಎನ್ನುವುದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ. ಹೌದು. ಶೈನ್ ಶೆಟ್ಟಿ ಬಹಳ ಇಷ್ಟಪಟ್ಟು ಬಿಟ್ಟಿದ್ದ ಗಡ್ಡದ ಮೇಲೆ ಕಣ್ಣು ಬಿದ್ದಿದ್ದು, ಅದನ್ನು ತೆಗೆಯುವಂತೆ ಕೆಲವು ಟ್ರಿಕ್ಸ್ ಗಳನ್ನೂ ಉಪಯೋಗಿಸುತ್ತಾರೆ. ಅದರಂತೆ ಇಂದು ಶೈನ್ ಶೆಟ್ಟಿ ತಮ್ಮ ಗಡ್ಡಕ್ಕೆ ಬ್ಲೇಡ್ ಹಾಕಿದ್ದಾರೆ ಎನ್ನುವುದು ಇಂದು ತಿಳಿಯಲಿದೆ.

ಶೈನ್ ಮುಖಕ್ಕೆ ಬಟ್ಟೆ ಮುಚ್ಚಿಸಿ ಕರೆತಂದ ವಾಸುಕಿ

ಇನ್ನು ದೀಪಿಕಾ ಉಪಯೋಗಿಸಿದ ಟ್ರಿಕ್ಸ್ ಬಲೆಗೆ ಬಿದ್ದ ಶೈನ್ ನೇರವಾಗಿ ವಾಷ್ ರೂಮ್ ಬಳಿ ಹೋಗುತ್ತಾರೆ. ಹೋದವರು ಕೈಯಲ್ಲಿ ರೇಸರ್ ಹಿಡಿದು, ಶೇವ್ ಮಾಡುವವರಂತೆ ನಿಲ್ಲುತ್ತಾರೆ. ಇನ್ನು ಅವರ ಈ ನಿರ್ಧಾರಕ್ಕೆ ಉಳಿದ ಸ್ಪರ್ಧಿಗಳೆಲ್ಲಾ ಆಶ್ಚರ್ಯ ವ್ಯಕ್ತಪಡಿಸಿದ್ದು, ಇದು ಆಗದಿರುವ ಕೆಲಸ ಎಂದು ಹೇಳುತ್ತಾರೆ. ಆದರೆ ಒಳಹೋದ ಶೈನ್ ಅವರನ್ನು ವಾಸುಕಿ ಹೊರ ಬರುವಾಗ ಮುಖಕ್ಕೆ ಬಟ್ಟೆ ಮುಚ್ಚಿಸಿ ಕರೆತರುತ್ತಾರೆ. ಇದರಿಂದ ಎಲ್ಲರಿಗು ಆಶ್ಚರ್ಯವಾಗಿದೆ. ಒಂದು ವೇಳೆ ಶೈನ್ ಗಡ್ಡವನ್ನು ತೆಗೆದಿದ್ದೆ ಆದ್ರೆ ದೀಪಿಕಾಗೆ ಕಣ್ಣೀರು ಹಾಕುವ ಕೆಲಸ ತಪ್ಪಿದ್ದಲ್ಲ. ಇನ್ನು ಶೈನ್ ಕೂಡ ಯಾವುದೇ ಸಂದರ್ಭದಲ್ಲೂ ಗಡ್ಡ ತೆಗೆಯದೇ ಇದ್ದವರು ದೀಪಿಕಾ ಬಳಸಿದ ಟ್ರಿಕ್ಸ್ ಒಂದಕ್ಕೆ ಗಡ್ಡ ತೆಗೆಯುತ್ತಾರೆ ಅನ್ನೋದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.

ಒಟ್ಟಿನಲ್ಲಿ ತನ್ನ ಗಡ್ಡದ ಮೇಲೆ ಅಪಾರ ಪ್ರೀತಿ ಹೊಂದಿದ್ದ ಶೈನ್ ಶೆಟ್ಟಿ ಹೇಗೆ ಗಡ್ಡ ತೆಗೆಯುವ ನಿರ್ಧಾರಕ್ಕೆ ಕೈ ಹಾಕುತ್ತಾರೆ. ಅಲ್ಲದೆ ದೀಪಿಕಾ ಕೂಡ ಅದ್ಯಾವ ರೀತಿಯ ಟ್ರಿಕ್ಸ್ ಉಪಯೋಗಿಸಿರುತ್ತಾರೆ ಎಂಬುದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.

LEAVE A REPLY

Please enter your comment!
Please enter your name here