ಮೋದಿಯವರ ಹೆಸರು ಕೇಳುತ್ತಿದ್ದರೆ, ದಾವೂದ್ ಎದೆಯಲ್ಲಿ ನಡುಕ ಹುಟ್ಟುವುದಾದ್ರೂ ಏಕೆ?

0
1078
davud and modi

ಮೋದಿ ಅನ್ನೋ ಹೆಸರಿನಲ್ಲೇ ಒಂದು ಶಕ್ತಿ ಇದೆ ಅಂತ ಹಲವೆಡೆ ಸಾಭೀತಾಗಿದೆ. ಯಾಕಂದ್ರೆ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ, ತಮ್ಮದೇ ಆದ ವರ್ಚಸ್ಸನ್ನ ಎಲ್ಲೆಡೆ ತೋರಿಸಿದ್ದಾರೆ. ಹಾಗಾಗಿ ಮೋದಿ ಅನ್ನೋ ಹೆಸರು ಹಲವರ ನಿದ್ದೆ ಕೆಡಿಸಿದೆ. ಅದರಲ್ಲೂ ಯಾವಾಗ ಪಾಕಿಸ್ಥಾನದವರಿಗೆ ತಕ್ಕ ಪಾಠ ಕಲಿಸಿದರೋ, ಆಗಿಂದ ಇನ್ನೂ ಮೋದಿಯವರಿಗಿರುವ ಬೆಲೆ ಹಾಗೂ, ಅವರ ಮೇಲಿನ ಭಯ ಎರಡು ಹೆಚ್ಚಾಗಿದೆ. ಈಗ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವದಂತೂ ಶತ್ರುಗಳಿಗೆ ಸಹಿಸುವುದಕ್ಕೆ ಆಗುತ್ತಿಲ್ಲ.

ಹೌದು. ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ, ಯಾರಿಗಾದರೂ ಹೆದರುತ್ತಾನೆ ಅಂದ್ರೆ, ಅದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ. ಹೌದು. ನರೇಂದ್ರ ಮೋದಿಯವರ ಹೆಸರು ಕೇಳುತ್ತಿದ್ದರೆ, ಭೂಗತ ಲೋಕದ ದೊರೆಗೆ ನಡುಕ ಉಂಟಾಗುತ್ತದೆ. ಆದರೆ ಚುನಾವಣೆ ಬಂದಾಗಿನಿಂದ ದಾವೂದ್ ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿದ್ದ. ಯಾಕಂದ್ರೆ, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಅಂತ. ಆದ್ರೆ ಈ ಬಾರಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗುತ್ತಿರೋದು ದಾವೂದ್ ಗೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಭೂಗತ ಲೋಕದ ದೊರೆ, ಬಿಲ ಸೇರುವಂತಾಗಿದೆ.

ದಾವೂದ್ ಮೇಲಿದೆ ಮೋದಿ ಕಣ್ಣು

ಕಳೆದ ಬಾರಿ ಮೋದಿಯವರು ಪ್ರಧಾನಿಯಾಗಿದ್ದಾಗಲೇ, ದಾವೂದ್ ನನ್ನ ವಶಕ್ಕೆ ಪಡೆಯೋಕೆ ಪ್ರಯತ್ನ ಪಟ್ಟಿದ್ದರು. ಆದರೆ ಅದಕ್ಕೆ ಪಾಕಿಸ್ತಾನ ಸರ್ಕಾರ ಅಡ್ಡಾ ಬರುತ್ತಿತ್ತು. ಆದರೆ ಅವನ ವ್ಯವಹಾರ ಹಾಗೂ ಆತನ ಸಹಚರರನ್ನೆಲ್ಲಾ ಬಗ್ಗು ಬಡಿದ್ದಿದ್ದರು. ಆದ್ರೆ ದಾವೂದ್ ಮಾತ್ರ, ಕೈಗೆ ಸಿಕ್ಕಿರಲಿಲ್ಲ. ಆದ್ರೆ ಈ ಬಾರಿ ಮೋದಿಯವರ ಮೊದಲ ಕಣ್ಣು ಅವನ ಮೇಲಿದೆ. ಇದರಿಂದ ದಾವೂದ್ ಕೂಡ, ಭಯದಲ್ಲಿ ಒಂದೊಂದು ಕ್ಷಣ ಕಳೆಯುವಂತಾಗಿದೆ. ಯಾಕಂದ್ರೆ, ಈಗಾಗಲೇ ಮೋದಿಯವರು, ಎಲ್ಲಾ ದೇಶಗಳಿಗೂ ಮಾಹಿತಿ ರವಾನೆ ಮಾಡಿದ್ದಾರೆ. ದಾವೂದ್ ಯಾವ ದೇಶದಲ್ಲಿದ್ದರೂ, ಆತನನ್ನ ಭಾರತಕ್ಕೆ ಹಸ್ತಾಂತರಿಸಬೇಕು ಎಂದು. ದಾವೂದ್ ಪಾಕಿಸ್ಥಾನದಲ್ಲಿದ್ದಾನೆ ಅನ್ನೋ ವಿಷಯ ಎಲ್ಲರಿಗೂ ಗೊತ್ತು. ಆದ್ರೆ ಬಲವಂತವಾಗಿ ಅಲ್ಲಿಗೆ, ನುಗ್ಗುವುದಕ್ಕೆ ಆಗುವುದಿಲ್ಲ. ಹಾಗಾಗಿ ಮೋದಿಯವರು, ಎಲ್ಲಾ ದೇಶಗಳಿಗೆ ಮಾಹಿತಿ ನೀಡಿದ್ದಾರೆ. ಆತನನ್ನ ಭಾರತಕ್ಕೆ ಹಸ್ತತಾಂತರಿಸಿಲ್ಲವಾದರೆ, ತಕ್ಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ದಾವೂದ್ ಸಹಚರನನ್ನ ವಶಕ್ಕೆ ಪಡೆದ ಭಾರತ ಸರ್ಕಾರ

ಮೋದಿಯವರ ಕಣ್ಣು, ದಾವೂದ್ ಮೇಲೆ ಎಷ್ಟಿದೆ ಅನ್ನೋದಕ್ಕೆ ಈಗ ಒಂದು ಘಟನೆ ನಡೆದಿದೆ. ಹೌದು. ನಿನ್ನೆಯಷ್ಟೇ ದಾವೂದ್ ಸಹಚರನೊಬ್ಬನನ್ನ ಭಾರತೀಯ ಪೊಲೀಸರು ಬಂಧಿಸಿದ್ದಾರೆ. ಹೌದು. ದಾವೂದ್ ಸಹಚರನಾದ ಯೂನಸ್ ಮಿಯಾ ಅನ್ಸಾರಿಯನ್ನ ನಿನ್ನೆ ನೇಪಾಳದಲ್ಲಿ ಬಂಧಿಸಲಾಗಿದೆ. ಅಕ್ರಮವಾಗಿ ಕೋಟ್ಯಾಂತರ ಹಣ ವರ್ಗಾಯಿಸುತ್ತಿದ್ದ ಅನ್ನೋ ಖಚಿತ ಮಾಹಿತಿ ತಿಳಿದ ಭಾರತೀಯ ಪೊಲೀಸರು, ಆತನನ್ನ ನಿನ್ನೆ ಬಂಧಿಸಿದ್ದಾರೆ. ಆದ್ರೆ ಆತನಿಗೆ, ನೇಪಾಳದ ಮಿನಿಸ್ಟರ್ ಬೆಂಬಲ ಇದೆ ಅನ್ನೋ ಮಾತುಗಳು ಕೇಳಿಬಂದಿದ್ದರೂ, ಅದು ಎಷ್ಟರ ಮಟ್ಟಿಗೆ ನಿಜ ಎಂದು ಇನ್ನೂ ಸಾಭೀತಾಗಲಿಲ್ಲ. ಆದರೆ ತನ್ನ ಸಹಚರನನ್ನ ಬಂಧಿಸಿರೋದು, ದಾವೂದ್ ಗೆ ನಡುಕ ಹುಟ್ಟಿಸಿದೆ.

ದಾವೂದ್ ಗೆ ಕಾಡುತ್ತಿರುವ ಜೀವಭಯ

ಈಗಾಗಲೇ ದಾವೂದ್ ಸಹಚರನೊಬ್ಬನನ್ನ ಬಂಧಿಸಿರೋದು, ದಾವೂದ್ ಗೆ ನುಂಗಲಾರದ ತುತ್ತಾಗಿದೆ. ಜೊತೆಗೆ, ಯಾವಾಗ ಮೋದಿ ನನ್ನ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಾರೆ ಅನ್ನೋ ಜೀವಭಯದಲ್ಲಿ ದಾವೂದ್ ಬದುಕುತ್ತಿದ್ದಾನೆ. ಈಗಾಗಲೇ ಮೋದಿಯವರು, ಎಲ್ಲಾ ದೇಶದ ನಾಯಕರಿಗೂ ಮಾಹಿತಿ ರವಾನೆ ಮಾಡಿದ್ದಾರೆ ಅನ್ನೋ ವಿಷಯ ಕೂಡ ದಾವೂದ್ ಗೆ ತಿಳಿದಿದೆ. ಯಾವ ಪಾಕಿಸ್ತಾನಕ್ಕೂ ಹೆದರದ ಮೋದಿ, ನನ್ನನ್ನ ಏನು ಬೇಕಾದರೂ ಮಾಡಬಹುದು ಅಂತ ಕ್ಷಣ ಕ್ಷಣಕ್ಕೂ ಭಯದಲ್ಲೇ ಬದುಕುವಂತಾಗಿದೆ.

ನಿಜಕ್ಕೂ ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದಿರೋದು ಹಲವರ ನಿದ್ದೆ ಕೆಡುವುದಕ್ಕೆ ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ದಾವೂದ್ ಗೆ ಜೀವಭಯ ಶುರುವಾಗಿದೆ. ಎಲ್ಲಿ, ಯಾವಾಗ, ಯಾವ ಕ್ರಮ ಕೈಗೊಳ್ತಾರೆ ಮೋದಿ ಅಂತ. ಒಟ್ಟಿನಲ್ಲಿ ದಾವೂದ್ ಗೆ, ಇನ್ಮುಂದೆ ಟೈಮ್ ಕೆಟ್ಟಿದೆ ಅನ್ನೋದಂತೂ ನಿಜ.

LEAVE A REPLY

Please enter your comment!
Please enter your name here