ಹುಚ್ಚ ವೆಂಕಟ್ ಕುರಿತು ಡಿ ಬಾಸ್ ತಮ್ಮ ಆಪ್ತರ ಬಳಿ ಹೇಳಿದ್ದಾದ್ರು ಏನು?

0
609

ಕೆಲ ವರ್ಷಗಳ ಹಿಂದೆ ಹುಚ್ಚ ವೆಂಕಟ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇವರು ಮುಖ್ಯ ಸೆಳೆತವಾಗಿದ್ದು, ಕಾರ್ಯಕ್ರಮದಲ್ಲಿ ಮನೋರಂಜನೆಗೆ ಮತ್ತೊಂದು ಪದವೇ ಹುಚ್ಚ ವೆಂಕಟ್ ಎನ್ನುವ ರೀತಿಯಲ್ಲಿತ್ತು. ಬಿಗ್ ಬಾಸ್ ಕಾರ್ಯಕ್ರಮದಲ್ಲು ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡುವ ಮೂಲಕ ಶೋ ನಿಂದ ಹೊರ ಬಿದ್ದಿದ್ದರು. ನಂತರ ತಮ್ಮ ಹುಚ್ಚ ವೆಂಕಟ್ ಸಿನಿಮಾವನ್ನು ಮರು ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಇವರ ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದರು. ಆಮೇಲೆ ಹುಚ್ಚ ವೆಂಕಟ್ ಅವರ ಯಾವ ಸುದ್ದಿಯು ಹೊರ ಬಿದ್ದಿರಲಿಲ್ಲ. ತಮ್ಮ ಪಾಡಿಗೆ ತಾವು ಸೈಲೆಂಟ್ ಆಗಿದ್ದರು.

ಹುಚ್ಚ ವೆಂಕಟ್ ಒಬ್ಬ ಹುಡುಗಿಗೆ ಪೀಡಿಸಿದ್ದರು

ಇತ್ತೀಚಿಗಷ್ಟೆ ಹುಚ್ಚ ವೆಂಕಟ್ ಅವರ ವರ್ತನೆಯನ್ನು ನೀವು ನೋಡಿರುತ್ತೀರಿ. ಮಡಿಕೇರಿಯಲ್ಲಿ ನಡೆದ ಘಟನೆ ನಂತರ ಮತ್ತೊಮ್ಮೆ ಹುಚ್ಚ ವೆಂಕಟ್ ಬೆಂಗಳೂರಿನಲ್ಲಿ ವಿವಾದವನ್ನು ಮಾಡಿಕೊಂಡಿದ್ದರು. ಬೆಂಗಳೂರು ಮತ್ತು ಹಿಂದೂಪುರದ ರಾಜಾನುಕುಂಟೆ ಸಮೀಪದಲ್ಲಿರುವ ಹರದೇಶನಹಳ್ಳಿಯ ಟೋಲ್ ಹತ್ತಿರ ಹುಚ್ಚ ವೆಂಕಟ್ ಒಬ್ಬ ಹುಡುಗಿಗೆ ಪೀಡಿಸಿದ್ದರು. ನನ್ನನ್ನು ಮದುವೆಯಾಗು ಎಂದು ಯುವತಿಯನ್ನು ಬಲವಂತ ಮಾಡಿದ್ದನರು. ರಸ್ತೆಯ ಬದಿಯಲ್ಲಿ ಕಾರ್ ಅನ್ನು ನಿಲ್ಲಿಸಿ ಯುವತಿಯನ್ನು ಕಾಡಿಸಿದ್ದರು. ಮುಂದೆ ಓದಿ

ವೆಂಕಟ್ ಅವರನ್ನು ಹುಚ್ಚ ವೆಂಕಟ್ ಎಂದು ಕರೆಯಬೇಡಿ

ಹುಚ್ಚ ವೆಂಕಟ್ ಅವರ ಕುರಿತು ಈಗ ಡಿ ಬಾಸ್ ತಮ್ಮ ಆಪ್ತರ ಹತ್ತಿರ ಮಾತನಾಡಿದ್ದರಂತೆ. ವೆಂಕಟ್ ಅವರ ವರ್ತನೆಯಿಂದಾಗಿ ಕನ್ನಡ ಚಿತ್ರರಂಗದ ಮರ್ಯಾದೆ ಹಾಳಾಗುತ್ತಿದೆ. ಅವರನ್ನು ಕರೆದು ಬುದ್ದಿ ಹೇಳಿ, ಸಾದ್ಯವಾದರೆ ಸ್ವಲ್ಪ ಹಣಕಾಸಿನ ಸಹಾವವನ್ನು ಮಾಡಿ ಎಂದು ಹೇಳಿದ್ದಾರಂತೆ.ಯಾರು ಸಹ ವೆಂಕಟ್ ಅವರನ್ನು ಹುಚ್ಚ ವೆಂಕಟ್ ಎಂದು ಕರೆಯಬೇಡಿ. ಯಾರಿಗಾದರೂ ಸರಿ ಆತ್ಮವಿಶ್ವಾಸವು ಇದ್ದೆ ಇರುತ್ತದೆ, ಅದಕ್ಕೆ ದಕ್ಕೆ ಉಂಟಾದಾಗ ಈ ರೀತಿ ಆಡುತ್ತಾರೆ ಎಂದು ದರ್ಶನ ಅವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸಾಕಷ್ಟು ಜನರಿಗೆ ಡಿ ಬಾಸ್ ಸಾಹಯವನ್ನು ಮಾಡಿದ್ದರು.

ಪ್ರಥಮ್ ಸಲಹೆಯನ್ನು ನೀಡಿದ್ದರು

ಇನ್ನು ಬಿಗ್ ಬಾಸ್ ಸ್ಪರ್ಧೆಯಲ್ಲಿ ಹುಚ್ಚ ವೆಂಕಟ್ ಸ್ಪರ್ದಿಸಿರುವ ಒಂದು ಸೀಸನ್ ನಲ್ಲಿ ಪ್ರಥಮ್ ಸಹ ಭಾಗವಹಿಸಿದ್ದರು. ತುಂಬ ಹತ್ತಿರದಿಂದ ಪ್ರಥಮ್, ಹುಚ್ಚ ವೆಂಕಟ್ ಅವರನ್ನು ನೋಡಿರಿವುದರಿಂದ ಈ ವಿಚಾರದ ಕುರಿತು ಪ್ರಥಮ್ ಸಲಹೆಯನ್ನು ನೀಡಿದ್ದರು. ಹುಚ್ಚ ವೆಂಕಟ್ ಎಂದು ಪ್ರಚಾರ ಮಾಡುವ ಬದಲು, ವೆಂಕಟ್ ಆಗಿ ಅವರನ್ನು ಬಿಡುವುದು ನಾವೆಲ್ಲ ಅವರಿಗೆ ಮಾಡುವ ಒಂದು ದೊಡ್ಡ ಉಪಕಾರವಾಗಿದೆ. ವೆಂಕಟ್ ಅವರ ಮೇಲೆ ಕರುಣೆ, ಅನುಕಂಪ ತೋರುವ ಬದಲು ಅವಮಾನ ಮಾಡದೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ ಎಂದು ಪ್ರಥಮ್ ಈ ಹಿಂದೆ ಹೇಳಿದ್ದರು.

LEAVE A REPLY

Please enter your comment!
Please enter your name here