ಪ್ರಾಣಿಯ ಮೇಲೆ ಇರುವ ಅಭಿಮಾನವನ್ನು ಇನ್ನಷ್ಟು ಮೆರೆದ ದಚ್ಚು

0
819
darshan prani

ನಮ್ಮ ಸ್ಯಾಂಡಲ್ ವುಡ್ ನಟರು, ನಟನೆ ಮಾಡುವುದರ ಜೊತೆಗೆ, ಕೆಲವು ಉತ್ತಮ ಹವ್ಯಾಸಗಳನ್ನೂ ಸಹ ರೂಢಿಸಿಕೊಂಡಿರುತ್ತಾರೆ. ಹೌದು. ಒಬ್ಬೊಬ್ಬರು, ಒಂದೊಂದು ರೀತಿ ಕಲೆಯನ್ನ ಹೊಂದಿರುತ್ತಾರೆ. ಕೆಲವರು ಕ್ರೀಡೆ ವಿಷಯವನ್ನ ಅಳವಡಿಸಿಕೊಂಡಿರ್ತಾರೆ, ಇನ್ನೂ ಕೆಲವರು ಪ್ರಾಣಿ, ಪಕ್ಷಿಗಳನ್ನ ಸಾಕೋ ಅಂತ ಹವ್ಯಾಸ ಮಾಡಿಕೊಂಡಿರ್ತಾರೆ. ಈ ರೀತಿ ಪ್ರಾಣಿ, ಪಕ್ಷಿಗಳನ್ನ ಸಾಕುವ ಆಸಕ್ತಿಯನ್ನ ಹೆಚ್ಚಾಗಿ ಹೊಂದಿರುವವರು ಅಂದ್ರೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು. ನಮ್ಮ ದಚ್ಚು ಗೆ ಪ್ರಾಣಿ, ಪಕ್ಷಿ ಸಾಕುವುದು, ಅವುಗಳ ಪೋಷಣೆ ಮಾಡುವುದು ಅಂದ್ರೆ, ತುಂಬಾ ಇಷ್ಟ. ಹಾಗಾಗಿ, ಪ್ರಾಣಿ ಪಕ್ಷಿಗಳನ್ನ ಸಾಕುವ ವಿಚಾರದಲ್ಲಿ ಇವರು ತುಂಬ ಮುಂದಿದ್ದಾರೆ. ಅಲ್ಲದೆ ಇವರು ತಮ್ಮ ಫಾರ್ಮ್ ಹೌಸ್ ನಲ್ಲಿ, ಒಂದು ಮೃಗಾಲಯವನ್ನೇ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಬಿಡುವು ಸಿಕ್ಕಾಗ, ಯಾವಾಗಲು ದಚ್ಚು ಇಲ್ಲೇ ಕಾಲ ಕಳೆಯುತ್ತಾರೆ. ಈಗ ದಚ್ಚು ಮತ್ತೆ 4 ಪ್ರಾಣಿಗಳ ದತ್ತು ನವೀಕರಣ ಮಾಡಿಕೊಂಡಿದ್ದಾರೆ.

4 ಪ್ರಾಣಿಗಳನ್ನು ದತ್ತು ನವೀಕರಣ ಮಾಡಿಕೊಂಡ ದಾಸ

ದಾಸನಿಗೆ ಪ್ರಾಣಿಗಳು ಅಂದ್ರೆ ಪ್ರಾಣ. ಅವರು ಮನುಷ್ಯರನ್ನು ನಂಬುವುದಕ್ಕಿಂತ ಪ್ರಾಣಿಗಳನ್ನು ನಂಬುತ್ತಾರೆ. ಹಾಗಾಗಿ ನೆಚ್ಚಿನ ಪ್ರಾಣಿಗಳಿಗೋಸ್ಕರ ತಮ್ಮ ಫಾರ್ಮ್ ಹೌಸ್ ಅನ್ನು ಕಟ್ಟಿಸಿದ್ದಾರೆ. ಅಲ್ಲಿ ಸಾಕಷ್ಟು ಪ್ರಾಣಿಗಳನ್ನು ದಚ್ಚು ಸಾಕಿದ್ದಾರೆ. ದಚ್ಚು ಸಾಕಿರುವ ಪ್ರಾಣಿಗಳು ಒಂದು ಕಡೆ ಆದರೆ, ಮತ್ತೊಂದು ಕಡೆ ಕೆಲವು ಪ್ರಾಣಿಗಳನ್ನು ದತ್ತು ನವೀಕರಣ ಮಾಡಿಕೊಂಡಿದ್ದಾರೆ. ಹೌದು. ದರ್ಶನ್ ಅವರು ಸಾಕಷ್ಟು ಕಡೆ ಪ್ರಾಣಿಗಳನ್ನು ನವೀಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಮೈಸೂರಿನಲ್ಲಿ ಸಹ ನವೀಕರಣ ಮಾಡಿಕೊಂಡಿದ್ದರು. ಆದ್ರೆ ಈಗ ಮತ್ತೆ 4 ಪ್ರಾಣಿಗಳನ್ನು ನವೀಕರಣ ಮಾಡಿಕೊಂಡಿದ್ದಾರೆ. ಹೌದು. ಇಂದು ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು 4 ಪ್ರಾಣಿಗಳನ್ನು ದತ್ತು ನವೀಕರಣ ಮಾಡಿಕೊಂಡಿದ್ದಾರೆ.

ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ದತ್ತು ನವೀಕರಣ

ಇಂದು ವಿಶ್ವ ಹುಲಿ ದಿನಾಚರಣೆ. ಇಂದು ಹಲವೆಡೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಯಾವ ಯಾವ ರಾಜ್ಯದಲ್ಲಿ ಎಷ್ಟೆಷ್ಟು ಹುಲಿಗಳು ಇವೆ. ಹುಲಿಗಳ ಸಂರಕ್ಷಣೆಯಲ್ಲಿ ಯಾವ ರಾಜ್ಯ ಮೊದಲ ಸ್ಥಾನ ಮೊದಲಿದೆ ಎಂಬುದನ್ನೆಲ್ಲಾ ತಿಳಿದುಕೊಂಡಿದ್ದಾರೆ. ಆ ಪಟ್ಟಿಯಲ್ಲಿ ಮಧ್ಯಪ್ರದೇಶ 526 ಹುಲಿಗಳನ್ನು ಹೊಂದುವ ಮೂಲಕ ಅಗ್ರ ಸ್ಥಾನ ಪಡೆದಿದೆ. ಇನ್ನು ಕರ್ನಾಟಕ 524 ಹುಲಿಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಕರ್ನಾಟಕದಲ್ಲಿ 118 ಹುಲಿಗಳು ಹೆಚ್ಚಾಗಿವೆ ಎಂದು ಸಮೀಕ್ಷೆ ತಿಳಿಸಿದೆ. ಈ ಸಂದರ್ಭದಲ್ಲಿ ನಮ್ಮ ದಚ್ಚು ಸಹ ಒಂದು ಹುಲಿಯನ್ನು ದತ್ತು ನವೀಕರಣ ಮಾಡಿಕೊಂಡಿದ್ದಾರೆ.

ಪ್ರಾಣಿಗಳ ಮೇಲಿರುವ ಪ್ರೀತಿಯನ್ನು ಮತ್ತೊಮ್ಮೆ ತೋರಿಸಿದ ಯಜಮಾನ

ಇನ್ನು ದಚ್ಚು ಇಂದು ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿ, 4 ಪ್ರಾಣಿಗಳನ್ನು ದತ್ತು ನವೀಕರಣ ಮಾಡಿಕೊಂಡಿದ್ದಾರೆ. ಹೌದು. ಒಂದು ಗಂಡು ಹುಲಿ, ಎರಡು ಅನಾಕೊಂಡ ಹಾಗು ಒಂದು ಆನೆಯನ್ನು ದರ್ಶನ್ ದತ್ತು ಪಡೆದಿದ್ದಾರೆ. ಮೈಸೂರಿನ ಮೃಗಾಲಯದಲ್ಲಿ ದಚ್ಚು ಪ್ರಾಣಿಗಳನ್ನು ದತ್ತು ಪಡೆದಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಸಹ ಅವರು ಪ್ರಾಣಿಗಳನ್ನು ದತ್ತು ಪಡೆದಿದ್ದರು. ಈಗ ಮತ್ತೊಮ್ಮೆ 4 ಪ್ರಾಣಿಗಳನ್ನು ದತ್ತು ಪಡೆದು, ಪ್ರಾಣಿಗಳ ಮೇಲೆ ತಮಗಿರುವ ಪ್ರೀತಿಯನ್ನು ತೋರಿಸಿದ್ದಾರೆ.

ಒಟ್ಟಿನಲ್ಲಿ ದರ್ಶನ್ ಅವರು ಪ್ರಾಣಿಗಳ ಮೇಲೆ ಇಟ್ಟಿರುವ ಪ್ರೀತಿಯಿಂದ ಆಗಾಗ ಕೆಲವು ಪ್ರಾಣಿಗಳನ್ನು ದತ್ತು ಪಡೆಯುತ್ತಲೇ ಇರುತ್ತಾರೆ. ಅದಕ್ಕೋಸ್ಕರ ಇಂದು ವಿಶ್ವ್ವ ಹುಲಿ ದಿನವಾಗಿದ್ದರಿಂದ, ಇಂದು ಸಹ 4 ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.

LEAVE A REPLY

Please enter your comment!
Please enter your name here