ಮಗನಿಗೆ ಕುದುರೆ ಸವಾರಿ ಹೇಳಿಕೊಟ್ಟ ಡಿ ಬಾಸ್ ದರ್ಶನ್

0
574
darshan and vineesh

ಸ್ಯಾಂಡಲ್ ವುಡ್ ನಲ್ಲಿ ಡಿ ಬಾಸ್ ಅಂದ್ರೆ ಏನೋ ಒಂದು ರೀತಿ ಕ್ರೇಜ್. ಹೌದು. ದೇಶವಲ್ಲದೆ ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರ ಎಲ್ಲ ಸಿನಿಮಾಗಳನ್ನು ಅಭಿಮಾನಿಗಳು ಮಿಸ್ ಮಾಡದೇ ನೋಡುತ್ತಾರೆ. ಇನ್ನು ದರ್ಶನ್ ಗೆ ಅನೇಕ ಹವ್ಯಾಸಗಳಿವೆ. ಅದರಲ್ಲಿ ಮುಖ್ಯವಾಗಿ ಪ್ರಾಣಿಗಳ ವಿಚಾರದಲ್ಲಿ ತೋರಿಸುವ ಕಾಳಜಿ ಬಹಳ ಮುಖ್ಯವಾಗಿದೆ. ಹೌದು. ದಚ್ಚುಗೆ ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಕುದುರೆ ಸವಾರಿ ಅಂದ್ರೆ ಅವರಿಗೆ ಪ್ರಾಣ. ಹಾಗಾಗಿ ಬೇಸರವಾದಾಗಲೆಲ್ಲಾ ತಮ್ಮ ಸ್ನೇಹಿತರೊಂದಿಗೆ ಕುದುರೆ ಸವಾರಿ ಮಾಡುತ್ತಲೇ ಇರುತ್ತಾರೆ. ಆದರೆ ಇಷ್ಟುದಿನ ಅವರು ತಮ್ಮ ಸ್ನೇಹಿತರ ಜೊತೆಗೆ ಸವಾರಿ ಮಾಡುತ್ತಿದ್ದರು. ಆದ್ರೆ ಇಂದು ಅವರು ತಮ್ಮ ಮಗನಿಗೆ ಸವಾರಿ ಕಲಿಸುವುದರ ಜೊತೆಗೆ, ಅವನೊಂದಿಗೆ ಕುದುರೆ ಸವಾರಿ ಮಾಡಿದ್ದಾರೆ.

ಮಗನಿಗೆ ಕುದುರೆ ಸವಾರಿ ಹೇಳಿಕೊಟ್ಟ ಡಿ ಬಾಸ್

ದರ್ಶನ್ ಪ್ರಾಣಿಪ್ರಿಯ ಎನ್ನುವುದು ಎಲ್ಲರಿಗು ಗೊತ್ತು. ಆದರೆ ಅವರ ಮಗ ಕೂಡ ಪ್ರಾಣಿಪ್ರಿಯ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಹೌದು. ತಂದೆಯಂತೆ ಮಗ ವಿನೀಶ್ ಕೂಡ ಪ್ರಾಣಿಪ್ರಿಯ. ಸಮಯವಿದ್ದಾಗಲೆಲ್ಲಾ ತಂದೆಯ ಫಾರ್ಮ್ ಹೌಸ್ ಗೆ ಹೋಗಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಾರೆ. ಜೊತೆಗೆ ಹಾಲು ಕರೆಯುವುದನ್ನು ಸಹ ತಂದೆಯಿಂದ ಕಲಿತಿದ್ದಾರೆ. ಈ ರೀತಿ ಪ್ರಾಣಿಗಳ ಮೇಲೆ ಹೆಚ್ಚು ಒಲವಿರುವ ವಿನೀಶ್ ಇಂದು ತಂದೆಯ ಸಹಾಯದಿಂದ ಕುದುರೆ ಸವಾರಿ ಮಾಡಿದ್ದಾರೆ. ಹೌದು. ಫಾರ್ಮ್ ಹೌಸ್ ನಲ್ಲಿ ದರ್ಶನ್ ಅನೇಕ ಕುದುರೆಗಳನ್ನು ಸಾಕಿದ್ದಾರೆ. ಆದರೆ ಅದರಲ್ಲಿ ಮುಖ್ಯವಾಗಿ ಎರಡು ಬಿಳಿ ಕುದುರೆಗಳಿವೆ. ಅವುಗಳನ್ನು ಇಂದು ತಂದೆ ಮಗ ಸವಾರಿ ಮಾಡಿದ್ದಾರೆ.

ಸಾಹೋರೇ ಸಾಹೋ ಎನ್ನುತ್ತಿರುವ ಅಭಿಮಾನಿಗಳು

ಇನ್ನು ದರ್ಶನ್ ಹಾಗು ವಿನೀಶ್ ಕುದುರೆ ಸವಾರಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೆ ತಡ ದಚ್ಚು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸಾಹೋರೇ ಸಾಹೋ ಎಂದು ಜೈಕಾರ ಹಾಕುತ್ತಿದ್ದಾರೆ. ಇನ್ನು ವಿನೀಶ್ ಕೂಡ ಯಾವುದೇ ಭಯವಿಲ್ಲದೆ ತಂದೆಗೆ ಸರಿಸಮನಾಗಿ ಕುದುರೆ ಸವಾರಿ ಮಾಡಿದ್ದಾರೆ. ಇನ್ನು ದರ್ಶನ್ ಕೂಡ ತಮ್ಮ ಮಗನನ್ನು ಬಹಳ ಸರಳವಾಗಿ ಬೆಳೆಸುತ್ತಿದ್ದಾರೆ. ವಿದ್ಯೆಯ ಜೊತೆಗೆ, ಕೃಷಿ, ಪ್ರಾಣಿಗಳ ಒಲವು ಈ ರೀತಿಯ ಹವ್ಯಾಸಗಳನ್ನು ಸಹ ಬೆಳೆಸುತ್ತಿದ್ದಾರೆ. ಜೊತೆಗೆ ತಮ್ಮ ಮಗನನ್ನು ಸಿನಿಮಾ ರಂಗಕ್ಕೆ ಕರೆತರುವ ಕನಸನ್ನು ಸಹ ದಚ್ಚು ಹೊತ್ತಿದ್ದಾರೆ.

ಒಟ್ಟಿನಲ್ಲಿ ದರ್ಶನ್ ತಮ್ಮ ಮಗನನ್ನು ಬಹಳಷ್ಟು ಸರಳವಾಗಿ ಬೆಳೆಸುತ್ತಿರುವುದರ ಜೊತೆಗೆ ಪ್ರಾಣಿಗಳ ಜ್ಞಾನವನ್ನು ಹೆಚ್ಚು ತಿಳಿಸುತ್ತಿದ್ದಾರೆ. ಅಲ್ಲದೆ ಆತನಿಗೆ ಪ್ರಾಣಿಗಳ ಮೇಲೆ ಹೆಚ್ಚು ಒಲವು ಮೂಡುವಂತೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here