ದರ್ಶನ್ ನನ್ನ ದತ್ತು ಮಗನಲ್ಲ, ಸ್ವಂತ ಮಗ ಎಂದು ಸುಮಲತಾ ಹೇಳಿದ್ದಾದ್ರೂ ಏಕೆ?

0
455
darshan and sumalatha

ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಾಲೆಂಜಿಂಗ್ ಸ್ಟಾರ್ ಅಂದ್ರೆ ಅದೇನೋ ಒಂಥರಾ ಎಲ್ಲರಿಗು ಕ್ರೇಜ್. ಹೌದು. ಅವರ ನಟನೆಯನ್ನು ಇಷ್ಟ ಪಡದೆ ಇರುವವರಿಲ್ಲ. ಹಾಗಾಗಿ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ದರ್ಶನ್ ಅಂದ್ರೆ ಕೇವಲ ಹೊರಗಿನವರು ಮಾತ್ರ ಇಷ್ಟ ಪಡುವುದಿಲ್ಲ. ಬದಲಿಗೆ ಅನೇಕ ಕಲಾವಿದರು ಸಹ ಅವರನ್ನು ಇಷ್ಟ ಪಡುತ್ತಾರೆ. ಅವರಲ್ಲಿ ಮೊದಲಿಗೆ ಅಂಬರೀಷ್ ಆಗಿದ್ದರು. ಹೌದು. ದರ್ಶನ್ ಅವರನ್ನು ತನ್ನ ದೊಡ್ಡ ಮಗ ಎಂದು ಅಂಬಿ ಭಾವಿಸಿದ್ದರು. ಆದ್ರೆ ಅವರು ನಿಧರಾದ ನಂತರ ಆ ಮಾತು ಅವರೊಂದಿಗೆ ಮಣ್ಣು ಸೇರಲಿಲ್ಲ. ಬದಲಿಗೆ ಸುಮಲತಾ ಅಂಬರೀಷ್ ಅದನ್ನು ಎತ್ತಿ ಹಿಡಿಯುತ್ತಿದ್ದಾರೆ. ಹೌದು. ಇಷ್ಟುದಿನ ದರ್ಶನ್ ನನ್ನ ದೊಡ್ಡ ಮಗ ಎಂಬ ಹೇಳಿಕೆ ನೀಡುತ್ತಿದ್ದರು. ಆದ್ರೆ ಈಗ ದರ್ಶನ್ ನನ್ನ ಸ್ವಂತ ಮಗ ಎಂದು ಸುಮಲತಾ ಹೇಳಿದ್ದಾರೆ.

ದರ್ಶನ್ ನನ್ನ ದತ್ತು ಮಗನಲ್ಲ, ಸ್ವಂತ ಮಗ

ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕ ಸಿನಿಮಾ ಮುಹೂರ್ತ ಇಂದು ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ನಡೆದಿದೆ. ಹೌದು. ಐತಿಹಾಸಿಕ ಕಥೆಯುಳ್ಳ ಈ ಚಿತ್ರಕ್ಕೆ ಇಂದು ಅದ್ದೂರಿ ಚಾಲನೆ ಸಿಕ್ಕಿದ್ದು, ಮುಹೂರ್ತ ಕಾರ್ಯಕ್ರಮದಲ್ಲಿ ಸುಮಲತಾ ಅವರು ಭಾಗಿಯಾಗಿದ್ದರು. ಇನ್ನು ಈ ಸಮಯದಲ್ಲಿ ಮಾಧ್ಯಮದವರ ಮುಂದೆ ಮಾತನಾಡಿದ ಸುಮಲತಾ ಅವರು, ದರ್ಶನ್ ಬಗ್ಗೆ ಮಾತನಾಡುವುದಕ್ಕೆ ನನಗೆ ಬಹಳ ಹೆಮ್ಮೆಯಾಗುತ್ತದೆ. ಯಾಕಂದ್ರೆ ಅವನು ನನ್ನ ಮಗ. ಹೌದು. ದರ್ಶನ್ ನನ್ನ ದತ್ತು ಮಗನಲ್ಲ, ಅವನು ನನ್ನ ಸ್ವಂತ ಮಗ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ನಾನು ರಾಜ ಮಾತೆಯಾಗಿ ಬಣ್ಣ ಹಚ್ಚಿದ್ದೇನೆ

ಇನ್ನು ಈ ಚಿತ್ರದಲ್ಲಿ ಸುಮಲತಾ ಅವರು ಕೂಡ ಅಭಿನಯಿಸಿದ್ದು, ಇದರ ಬಗ್ಗೆ ಸ್ವತಃ ಅವರೇ ತಿಳಿಸಿದ್ದಾರೆ. ಹೌದು. ಐತಿಹಾಸಿಕ ಸಿನಿಮಾದಲ್ಲಿ ನಟಿಸೋದು ಅಂದ್ರೆ ನನಗೂ ಬಹಳ ಸಂತೋಷ. ಹಾಗಾಗಿ ನಾನು ಈ ಸಿನಿಮಾದಲ್ಲಿ ರಾಜ ಮಾತೆಯಾಗಿ ನಟಿಸುತ್ತಿದ್ದೇನೆ. ಇನ್ನು ಚಿತ್ರ ದೇಶದೆಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ ಎನ್ನುವ ನಂಬಿಕೆ ನಮಗಿದೆ. ಯಾಕಂದ್ರೆ ಚಿತ್ರದುರ್ಗದ ಕಥೆ ಎಲ್ಲರಿಗು ಗೊತ್ತಿದೆ. ಆದರೆ ಮದಕರಿ ನಾಯಕನ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಹಾಗಾಗಿ ಚಿತ್ರ ಯಶಸ್ವಿ ಕಾಣುತ್ತದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.

ಎಲ್ಲರೂ ನನಗಿಂತ ಹಿರಿಯರೇ ಇದ್ದಾರೆ – ದರ್ಶನ್

ಇನ್ನು ಈ ಸಮಯದಲ್ಲಿ ದರ್ಶನ್ ಕೂಡ ಮಾತನಾಡಿದ್ದಾರೆ. ಹೌದು. ಚಿತ್ರದಲ್ಲಿ ಎಲ್ಲರೂ ಹಿರಿಯ ಕಲಾವಿದರಿದ್ದಾರೆ. ಅವರು ದರ್ಶನ್ ಕೂತ್ಕೋ ಅಂದರೆ ಕುತ್ಕೋಬೇಕು, ನಿಂತ್ಕೋ ಅಂದರೆ ನಿಂತ್ಕೋಬೇಕು. ಯಾಕೆಂದರೆ ಎಲ್ಲರೂ ನನ್ನ ಸಿನಿಯರ್ಸ್ ಎಂದು ಹೇಳಿದರು. ಚಿತ್ರದಲ್ಲಿರುವ ಬಹಳ ಕಲಾವಿದರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಗಂಡುಗಲಿ ಮದಕರಿ ನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ. ಮದಕರಿ ನಾಯಕನ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ. ಅಲ್ಲದೆ ರಾಜಮಾತೆ ಪಾತ್ರದಲ್ಲಿ ಸುಮಲತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗ ಆರಂಭವಾಗಿದೆ, ತಯಾರಿಗಳು ನಡೆಯುತ್ತಿದೆ ಎಂದು ದರ್ಶನ್ ತಿಳಿಸಿದರು.

ನಿಜಕ್ಕೂ ಸುಮಲತಾ ಅವರು ದರ್ಶನ್ ಅವರ ಬಗ್ಗೆ ಬಹಳಷ್ಟು ಹೆಮ್ಮೆ ಪಡುತ್ತಾರೆ ಎಂಬ ಮಾತುಗಳು ಅವರ ಮಾತುಗಳಿಂದಲೇ ತಿಳಿಯುತ್ತದೆ. ಹಾಗಾಗಿ ದರ್ಶನ್ ಅವರನ್ನು ನನ್ನ ಸ್ವಂತ ಮಗ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here