ಡಾಕ್ಟರ್ ರಾಜ್ ಕುಮಾರ್ ಅವರ ಜನ್ಮದಿನದಂದು ವಿಶೇಷವಾಗಿ ಶುಭಾಶಯ ಹೇಳಿದ ದರ್ಶನ್ ಹಾಗು ಸುದೀಪ್

0
1477

ಏಪ್ರಿಲ್ 24 ಈ ದಿನಾಂಕ ಕನ್ನಡಿಗರು ಮರೆಯದಕ್ಕೆ ಸಾದ್ಯವೇ ಇಲ್ಲ, ಕನ್ನಡ ಸಿನಿರಂಗದ ಮೇರು ನಟರಾದ, ನಟಸಾರ್ವಭೌಮ ಎಂದೇ ಗುರುತಿಸಿಕೊಂಡ ಡಾಕ್ಟರ್ ರಾಜ್ ಕುಮಾರ್ ಅವರು ಜನಿಸಿದ ದಿನ. ಅಭಿಮಾನಿಗಳು ಈ ದಿನ ಹಬ್ಬದ ದಿನದಂತೆ ಆಚರಿಸುತ್ತಾರೆ, ಸಡಗರ, ಸಂಭ್ರಮದ ವಾತಾವರಣ. ಅಭಿಮಾನಿಗಳೇ ದೇವರು ಎಂದು ರಾಜ್ ಕುಮಾರ್ ಅವರು ನಂಬಿದ್ದರು, ನಾಟಸಾರ್ವಭೌಮನ ನಟನೆಗೆ ಮನಸೋತವರು ಒಬ್ಬರ ಇಬ್ಬರಾ ಖಚಿತವಾಗಿ ಹೇಳೋದಕ್ಕೆ ಲೆಕ್ಕ ಸಿಗುವುದಿಲ್ಲ. ರಾಜ್ ಕುಮಾರ್ ಅವರ ಸಿನೆಮಾ ಬಿಡುಗಡೆ ಆದರೆ ಸಾಕು ಆಭಿಮಾನಿಗಳು ಮುಂಜಾನೆ ಇಂದಾನೆ ಟಿಕೆಟ್ ಗಾಗಿ ಸಾಲುಕಟ್ಟಿ ಟಿಕೆಟ್ ಕೌಂಟರ್ ಮುಂದೆ ನಿಲ್ಲುತ್ತಿದ್ದರು. ನಿಜ ಜೀವನದಲ್ಲಿಯು ಅಷ್ಟೇ ತುಂಬ ಸರಳವಾಗಿ ಇರುತ್ತಾರೆ, ತಮ್ಮದೇ ಆದಂತಹ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು ಅದರಂತೆಯೇ ನಡೆಯುತ್ತಿದ್ದರು.

ಕನ್ನಡ ಚಿತ್ರರಂಗ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ರಾಜಣ್ಣನ ಹೆಸರು ಅಜರಾಮರ

ಕಿಚ್ಚ ಸುದೀಪ್ ಅವರು ರಾಜ್ ಕುಮಾರ್ ಅವರ ಜನ್ಮದಿನದ ಶುಭಾಶಯಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಾಕುವುದರ ಮೂಲಕ ಕೋರಿದ್ದಾರೆ. ಅದ್ಬುತವಾಗಿ ರಾಜ್ ಅವರ ಬಗ್ಗೆ ಮಾತಾನಾಡಿ ಶುಭಾಶಯ ಹೇಳಿದ್ದಾರೆ, ಇದರಿಂದಾನೆ ಗೊತ್ತಾಗುತ್ತೆ ರಾಜ್ ಕುಮಾರ್ ಅವರ ಮೇಲೆ ಸುದೀಪ್ ಗೆ ಎಷ್ಟು ಗೌರವ ಇದೇ ಅಂತಾ. ಕನ್ನಡ ಚಿತ್ರರಂಗ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ರಾಜಣ್ಣನ ಹೆಸರು ಅಜರಾಮರ ಎಂದು ಹೇಳಿದ್ದಾರೆ, ಡಾಕ್ಟರ್ ರಾಜ್ ಕುಮಾರ್ ಅವರು ತಾವು ಮಾಡಿದ ಸಾಧನೆ ಇಂದಾನೆ ಒಂದು ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ, ರಾಜ್ ಕುಮಾರ್ ಅವರು ಮಾಡಿದ ಕೆಲಸಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಕಿಚ್ಚ ಸುದೀಪ್.

raajkumar

ರಾಜ್ ಕುಮಾರ್ ಅವರು ಅಭಿನಯಿಸಿದ್ದ ಚಲನಚಿತ್ರಗಳು ಸದಾ ಕಾಲ ನಮ್ಮ ನೆನಪಿನಲ್ಲಿ ಇರುತ್ತದೆ

ರಾಜ್ ಅವರು ಈ ದಿನ ನಮ್ಮ ಜೊತೆ ಇಲ್ಲದಿರುವುದು ಒಂದು ದುಖದ ಸಂಗತಿ ಆಗಿದೆ, ಆದರೆ ಅವರು ಅಭಿನಯಿಸಿದ್ದ ಚಲನಚಿತ್ರಗಳು ಸದಾ ನಮ್ಮ ನೆನಪಿನಲ್ಲಿ ಇರುತ್ತದೆ. ಕಲಾವಿದರಿಗೆ ಸಾವಿಲ್ಲ ಅನ್ನೋ ಮಾತು ಅಕ್ಷರ ಸಹ ಸತ್ಯ ಅಂತಾ ರಾಜ್ ಅವರು ನಿರೂಪಿಸಿದ್ದಾರೆ. ಸುದೀಪ್ ಅವರು ಟ್ವೀಟ್ ಮಾಡಿದ್ದೆ ತಡ ಹೆಚ್ಚಿನ ಸಂಖೆಯಲ್ಲಿ ಜನರು ರೇಟ್ವೀಟ್ ಮಾಡುವ ಮೂಲಕ ಡಾಕ್ಟರ್ ರಾಜ್ ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಹುಟ್ಟು ಹಬ್ಬದ ಶುಭಾಷಯಗಳು ಕೋರಿದ್ದಾರೆ. ರಾಜ್ ಕುಮಾರ್ ಅವರ ಅಭಿಮಾನಿಗಳಿಗಂತು ಈ ದಿನ ಒಂದು ಮಹತ್ವವಾದ ದಿನ ಅಂತಾನೆ ಹೇಳಬಹುದು.

raajanna

ರಾಜ್ ಅವರ ಚಿತ್ರಗಳು, ನಡೆದು ಬಂದ ದಾರಿ, ಆದರ್ಶಗಳು ಸದಾ ನಮ್ಮಗೆ ಸ್ಪೂರ್ತಿದಾಯಕವಾಗಿರುತ್ತದೆ

ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ನಲ್ಮೆಯ ಅಣ್ಣಾವ್ರು ನಾಟಸಾರ್ವಭೌಮ ಡಾಕ್ಟರ್ ರಾಜಣ್ಣನವರಿಗೆ ಹುಟ್ಟು ಹಬ್ಬದ ದಿನದಂದು ಹೃದಯ ಪೂರ್ವಕ ನಮನಗಳು, ಅವರ ಚಿತ್ರಗಳು, ನಡೆದು ಬಂದ ದಾರಿ, ಆದರ್ಶಗಳು, ಸದಾ ನಮ್ಮಗೆ ಸ್ಪೂರ್ತಿದಾಯಕವಾಗಿರುತ್ತದೆ ಎಂದು ಹೇಳುವುದರ ಮೂಲಕ ಕರ್ನಾಟಕದ ಕಲಾಭೂಷಣನಿಗೆ ಹುಟ್ಟುಹಬ್ಬದ ಶುಭಾಷಯಗಳು ಕೋರಿದ್ದಾರೆ. ಸಿನಿರಂಗದ ಕಲಾವಿದರಲ್ಲದೆ ಸಾಕಷ್ಟು ಆಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ರಾಜ್ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲಾ ಪಾತ್ರಕ್ಕು ರಾಜ್ ಅವರು ಬಣ್ಣ ಹಚ್ಚಿದ್ದಾರೆ, ಒಂದೇ ಪಾತ್ರಕ್ಕೆ ಇವರು ಸೀಮಿತವಾಗಿರಲಿಲ್ಲ. ಇಂತಹ ಪಾತ್ರ ಮಾಡಿಲ್ಲ ಅಂತಾ ಹೇಳಲು ಸಾಧ್ಯವೇ ಇಲ್ಲ ನಟನೆಯಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರಿಗೆ ರಾಜ್ ಕುಮಾರ್ ಯೇ ಸರಿಸಾಟಿ.

LEAVE A REPLY

Please enter your comment!
Please enter your name here