ದರ್ಶನ್ ಮನೆಯನ್ನು ಕೆಡವಲು ಮುಂದಾಗಿರುವ ಬಿಬಿಎಂಪಿ. ಯಾವ ಕಾರಣಕ್ಕೆ?

0
714
darshan and bbmp

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸರ್ದಾರ ಎಂಬ ಹೆಸರನ್ನು ಪಡೆದಿದ್ದಾರೆ. ಹೌದು. ತಮ್ಮ ಸಿನಿಮಾಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಸದ್ಯಕ್ಕೆ ಕುರುಕ್ಷೇತ್ರ ಸಿನಿಮಾದ ಯಶಸ್ವಿಯಲ್ಲಿ ಇದ್ದಾರೆ. ಆದರೆ ಈ ಸಮಯದಲ್ಲಿ ಅವರಿಗೆ ಒಂದು ಶಾಕಿಂಗ್ ಸುದ್ದಿಯು ಸಹ ಕೇಳಿಬಂದಿದೆ. ಹೌದು. ರಾಜ ಕಾಲುವೆ ಎಂದ ಕೂಡಲೇ, ದರ್ಶನ್ ಅವರ ಹೆಸರು ಸಹ ಕೇಳಿಬರುತ್ತದೆ. ಯಾಕಂದ್ರೆ ರಾಜ ಕಾಲುವೆಗೆ ಸಂಬಂಧಿಸಿದ ಸ್ವಲ್ಪ ಜಾಗದಲ್ಲಿ ಅವರು ಮನೆಯನ್ನು ಕಟ್ಟುಕೊಂಡಿದ್ದಾರೆ. ಹಾಗಾಗಿ ಇದೇ ವಿಚಾರವಾಗಿ ಸಾಕಷ್ಟು ಬಾರಿ ಮಾತುಕತೆ ನಡೆದಿದೆ. ಆದರೆ ಅದರ ಉಪಯೋಗ ಹಾಗು ಪ್ರತಿಕ್ರಿಯೆ ಮಾತ್ರ ಏನು ಸಿಕ್ಕಿರಲಿಲ್ಲ. ಆದರೆ ಈಗ ದರ್ಶನ್ ಮನೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆಯಂತೆ. ಹಾಗಾಗಿ ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.

ದರ್ಶನ್ ಮನೆಯನ್ನು ಕೆಡವಲಿದೆಯಾ ಬಿಬಿಎಂಪಿ?

ರಾಜಕಾಲುವೆ ವಿಚಾರ ಯಾವಾಗ ಕೇಳಿಬಂದರೂ ಅದರಲ್ಲಿ ದರ್ಶನ್ ವಿಷಯ ಕೂಡ ಇರುತ್ತದೆ. ಯಾಕಂದ್ರೆ ದರ್ಶನ್ ರಾಜಕಾಲುವೆಗೆ ಸಂಬಂಧಿಸಿದ ಸ್ವಲ್ಪ ಸ್ಥಳದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದಾರೆ. ಹಾಗಾಗಿ ಅದರ ವಿಚಾರವಾಗಿ ಈಗ ದಚ್ಚು ಸಂಕಷ್ಟವನ್ನು ಎದುರಿಸುವ ಸಾಧ್ಯತೆ ಇದೆ. ಯಾಕಂದ್ರೆ ರಾಜಕಾಲುವೆ ಇದ್ದ 7.31 ಜಾಗವನ್ನು ಐಡಿಯಲ್ಸ್ ಹೋಮ್ಸ್​ನವರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿಯಾದ 22 ಗುಂಟೆ ಶ್ಯಾಮನೂರು ಶಿವಶಂಕ್ರಪ್ಪರ ಎಸ್.ಎಸ್. ಆಸ್ಪತ್ರೆ ಹಾಗೂ 2 ಗುಂಟೆ ಜಾಗ ದರ್ಶನ್ ಹೆಸರಿನಲ್ಲಿದೆ. ಅಂತೆಯೇ 69 ಒತ್ತುವರಿದಾರರಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಆದರೆ ಅದರ ಬಗೆ ದರ್ಶನ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಬಿಬಿಎಂಪಿ ಅವರ ಮನೆಯನ್ನು ಕೆಡುವುದರ ಬಗ್ಗೆ ಚಿಂತನೆ ನಡೆಸುತ್ತಿದೆಯಂತೆ.

ಸೂಚನೆ ನೀಡಿರುವ ಸಿಎಂ ಯಡಿಯೂರಪ್ಪ

ಇನ್ನು ರಾಜಕಾಲುವೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ. ಹೌದು. ಈಗ ಬಿಎಸ್​ವೈ ರಾಜಕಾಲುವೆ ಒತ್ತುವರುದಾರರಿಗೆ ಖಡಕ್​ ಸೂಚನೆ ನೀಡಿದ್ದಾರೆ. “ಯಾರೇ ರಾಜಾಕಾಲುವೆ ಒತ್ತುವರಿ ಮಾಡಿದರೂ ನಾವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳಿಗೆ ಈಗಾಗಲೇ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ,” ಎಂದು ಅವರು ಹೇಳಿದ್ದಾರೆ. ಈ ಮೂಲಕ ಎಷ್ಟೇ ಪ್ರಭಾವಿ ಆದರೂ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಸ್​ವೈ ಪರೋಕ್ಷವಾಗಿ ಹೇಳಿದ್ದಾರೆ. ಈ ಮೂಲಕ ದರ್ಶನ್​ ಅದೃಷ್ಟದ ಮನೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆಯಂತೆ.

ಯಾವುದೇ ಪ್ರತಿಕ್ರಿಯೆ ನೀಡದ ದಚ್ಚು

ರಾಜಕಾಲುವೆ ವಿಚಾರಕ್ಕೆ ಸಂಬಂಧಿಸಿದ ಮಾತುಕತೆ ಇಂದು ನಿನ್ನೆಯದಲ್ಲ. ಇದು 2016ರಿಂದಲೂ ನಡೆಯುತ್ತಿದೆ. ಹೌದು. ಬಿಬಿಎಂಪಿ, ಕಂದಾಯ ಇಲಾಖೆ ವರದಿಗಳಲ್ಲಿ ಒತ್ತುವರಿ ದೃಢಪಟ್ಟಿತ್ತು. ಸರ್ಕಾರಕ್ಕೂ ವರದಿ ರವಾನೆಯಾದಾಗ ಜಾಗ ವಶಕ್ಕೆ ಸೂಚನೆ ನೀಡಿತ್ತು. ದಕ್ಷಿಣ ವಿಭಾಗದ ಎಸಿ ಸಲ್ಲಿಸಿದ್ದ ವರದಿ ಪ್ರಶ್ನಿಸಿ ಈ ಪ್ರಭಾವಿಗಳು ಸ್ಟೇ ತಂದಿದ್ದರು. 2016ರಲ್ಲೇ ಈ ಬೆಳವಣಿಗೆಗಳು ನಡೆದಿತ್ತಾದರೂ, ಈ ಸ್ಟೇ ತೆರವಿಗೆ ಪ್ರಯತ್ನಗಳೇ ನಡೆದಿಲ್ಲ. ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾಗಿ ಬಿಬಿಎಂಪಿ ಈಗಾಗಲೇ ದರ್ಶನ್ ಗೆ ನೋಟಿಸ್ ನೀಡಿದೆ. ಆದರೆ ದರ್ಶನ್ ಮಾತ್ರ ನೋಟಿಸ್ ಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ. ಆದ್ರೆ ಯಡಿಯೂರುಪ್ಪ ಅವರು ಮಾತ್ರ, ಕ್ರಮ ತೆಗೆದುಕೊಳ್ಳಿ ಎಂದು ಬಿಬಿಎಂಪಿ ಅವರಿಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ರಾಜಕಾಲುವೆ ವಿಚಾರವಾಗಿ ದರ್ಶನ್ ತಮ್ಮ ಮನೆಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ರೆ ಇದರ ಬಗ್ಗೆ ದಚ್ಚು ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹಾಗಾದ್ರೆ ಮುಂದಿನ ದಿನಗಳಲ್ಲಿ ಬಿಬಿಎಂಪಿ ಕ್ರಮ ತೆಗೆದುಕೊಳ್ಳುತ್ತಾ, ಅಥವಾ ದರ್ಶನ್ ಏನಾದ್ರು ಪ್ರತಿಕ್ರಿಯಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here