ಪರಿಸರದ ರಕ್ಷಣೆಗಾಗಿ ಕೇಂದ್ರ ರೈಲ್ವೆ ಸರ್ಕಾರದವರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ

0
518

ಸ್ವಾತಂತ್ರ ದಿನಾಚರಣೆಯ ದಿನದಂದು ಪ್ರಧಾನ ಮಂತ್ರಿ ದೇಶದ ಅಭಿವೃದ್ಧಿ ಕುರಿತು ಭಾಷಣವನ್ನು ಮಾಡಿದ್ದರು. ಹೀಗೆ ಮಾತನಾಡುವಾಗ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಪ್ಲಾಸ್ಟಿಕ್ ಎನ್ನುವ ವೈರಿಯಿಂದ ನಾವು ಹೋರಾಡಬೇಕಾಗಿದೆ. ದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕು. ಅಭಿಯಾನ ಮಾಡುವ ಮೂಲಕ ಜನರಿಗೆ ಜಾಗ್ರತಿ ಮೂಡಿಸಬೇಕಾಗಿದೆ ಎಂದು ಹೇಳಿದ್ದರು. ಪ್ಲಾಸ್ಟಿಕ್ ಒಂದು ಜೈವಿಕ ವಿಘಟನೀಯ ವಸ್ತುವಾಗಿದ್ದು, ಪ್ಲಾಸ್ಟಿಕ್ ಕೊಳೆಯೋದಿಕ್ಕೆ ಅನೇಕ ವರ್ಷಗಳ ಕಾಲ ಬೇಕಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ವಸ್ತುವನ್ನು ಬಳಕೆ ಮಾಡುವುದರಿಂದ ಪರಿಸರಕ್ಕೆ ಬಹಳ ತೊಂದರೆಯಾಗುತ್ತದೆ. ಪ್ಲಾಸ್ಟಿಕ್ ನಲ್ಲಿರುವ ಕೆಮಿಕಲ್ ಕಂಪೌಂಡ್ಸ್ ನಿಂದ ಮನುಷ್ಯರ ಮೇಲೆಯು ಪರಿಣಾಮ ಬೀರುತ್ತಿದೆ.

ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

ಆದ್ದರಿಂದ ಅಕ್ಟೋಬರ್ 2 ರಿಂದ, ಭಾರತೀಯ ರೈಲ್ವೇಸ್ ನವರು, ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಿದ್ದಾರೆ. ರೈಲ್ವೆ ಮುಖ್ಯಸ್ಥರು ಸಿಬ್ಬಂದಿಗಳಿಗೆ ಇನ್ನು ಮುಂದೆ ಸಿಂಗಲ್ ಹ್ಯಾಂಡ್ ಪ್ಲಾಸ್ಟಿಕ್ ಉಪಯೋಗಿಸಬಾರದೆಂದು ಸೂಚನೆಯನ್ನು ನೀಡಿದ್ದಾರೆ. ಐಆಸಿಟಿಸಿ ಸರ್ಕಾರ ಪ್ಲಾಸ್ಟಿಕ್ ವೈರಿಯನ್ನು ತಡೆಗಟ್ಟಲು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದು, ಮೋದಿ ಭಾಷಣದ ನಂತರ ಪ್ಲಾಸ್ಟಿಕ್ ರದ್ದಿನ ವಿಚಾರಕ್ಕೆ ಸಂಭಂದ ಪಟ್ಟ ಹಾಗೆ ಇಂಡಿಯನ್ ರೈಲ್ವೇಸ್ ನವರು ಇಂತಹದೊಂದು ನಿರ್ಣಯವನ್ನು ತೆಗೆದುಕೊಂಡಿದ್ದಾರೆ.  ಗಾಂಧಿ ಜಯಂತಿಯ ದಿನದಂದು ಇಂಡಿಯನ್ ರೈಲ್ವೇಸ್ ಈ ನಿಯಮವನ್ನು ಜಾರಿಗೆ ತರಲಿದ್ದಾರೆ.

ನೀರಿನ ಬಾಟಲ್ ಗಳನ್ನು ನಾಶ ಪಡಿಸಲು ಹೊಸ ಪ್ಲಾನ್

ರೈಲ್ವೆ ಸಿಬ್ಬಂದಿಗಳಿಗೆ ಮತ್ತು ಅಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಪ್ಲಾಸ್ಟಿಕ್ ವಸ್ತುಗಳ ಬಗ್ಗೆ ಜಾಗ್ರತರನ್ನಾಗಿ ಮಾಡಲಿದ್ದು, ಇದರ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಿದ್ದಾರೆ. ಸಂಸ್ಥೆಯವರು ಸಹ ವಾಟರ್ ಬಾಟಲಿ ಗಳನ್ನು ನಾಶ ಮಾಡುವಂತಹ 1,853 ಯಂತ್ರವನ್ನು ಸುಮಾರು 360 ರೈಲ್ವೆ ನಿಲ್ದಾಣಗಳಲ್ಲಿ ನಿರ್ಮಾಣ ಮಾಡಲಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವ ನಾಗರಿಕರಿಗೆ ತಮ್ಮ ರೈಲು ನಿಲ್ದಾಣ ಬಂದ ನಂತರ, ನೀರಿನ ಬಾಟಲಿಗಳನ್ನು ಯಂತ್ರಕ್ಕೆ ಹಾಕಿ ಹೋಗಬೇಕೆನ್ನುವ ಸೂಚನೆಯನ್ನು ನೀಡಿದ್ದಾರೆ. ಇಂಡಿಯನ್ ರೈಲ್ವೇಸ್ ವೇಸ್ಟ್ ಜನರೇಟರ್ ಎಂದು ಗುರುತಿಸಿಕೊಂಡಿದ್ದು ಈಗ ಪ್ಲಾಸ್ಟಿಕ್ ವೇಸ್ಟ್ ನಿಭಾಯಿಸುವ ನಿಯಮಗಳನ್ನು ಪಾಲಿಸಬೇಕಾಗಿದೆ.

ಪ್ಲಾಸ್ಟಿಕ್ ಎಂಬ ಕಟು ವೈರಿಯಿಂದ ನಾವು ಪಾರಾಗಬೇಕಾಗಿದೆ

73 ನೇ ಸ್ವಾತಂತ್ರ ದಿನೋತ್ಸವದ ಪ್ರಯುಕ್ತ ಮೋದಿಯವರು ಡೆಲ್ಲಿಯಲ್ಲಿ ಧ್ವಜಾರೋಹಣವನ್ನು ಮಾಡಿದ್ದು, ನಂತರ ಭಾಷಣವನ್ನು ಮಾಡಿದ್ದರು. ಜನರಲ್ಲಿ ಜಾಗ್ರತಿ ಮೂಡಿಸುವ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿ ಮಾತನಾಡಿದ್ದರು . ಪ್ಲಾಸ್ಟಿಕ್ ಎಂಬ ಕಟು ವೈರಿಯಿಂದ ನಾವು ಪಾರಾಗಬೇಕಾಗಿದೆ. ಪ್ಲಾಸ್ಟಿಕ್ ಬಳಕೆಯ ನಿಯಂತ್ರಣಕ್ಕೆ ತರಲು ಅಭಿಯಾನ ನಡೆಸುವ ಮೂಲಕ ಜನರಲ್ಲಿ ಜಾಗ್ರತಿಯನ್ನು ಮೂಡಿಸಬೇಕಾಗಿದೆ.

ಪ್ಲಾಸ್ಟಿಕ್ ಚೀಲವನ್ನು ನಮ್ಮಿಂದ ಅಪೇಕ್ಷಿಸಬೇಡಿ ಎನ್ನುವ ಫಲಕ ಪ್ರತಿ ಅಂಗಡಿ ಮುಂಗಟ್ಟುಗಳಲ್ಲಿ ಹಾಕಬೇಕಾಗಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿಕೊಂಡು ಚೀಲ ತಯಾರಿಸುವುದರ ಬದಲು ಬಟ್ಟೆಯನ್ನು ಉಪಯೋಗಿಸಿಕೊಂಡು ಚೀಲವನ್ನು ತಯಾರಿಸಬೇಕಾಗಿದೆ ಎನ್ನುವ ಸಲಹೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here