ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಿಚ್ಚ ಪಡೆಯುವ ಸಂಭಾವನೆ ಎಷ್ಟು? ನಿಜಕ್ಕೂ ಶಾಕ್

0
616

ನಮ್ಮ ಜನರು ಕಿರುತೆರೆ ಕಾರ್ಯಕ್ರಮಗಳಿಗೆ ಬಹಳಷ್ಟು ಮಹತ್ವ ನೀಡುತ್ತಾರೆ. ಹಾಗಾಗಿ ಕನ್ನಡ ಕಿರುತೆರೆ ಕಾರ್ಯಕ್ರಮಗಳು ಕನ್ನಡದಲ್ಲಿ ಬಹಳಷ್ಟು ಹೆಸರು ಮಾಡುತ್ತಿವೆ. ಅದರಲ್ಲೂ ಬಿಗ್ ಬಾಸ್ ಎಲ್ಲರ ನೆಚ್ಚಿನ ಕಾರ್ಯಕ್ರಮವಾಗಿದೆ. ಹೌದು. ಬಿಗ್ ಬಾಸ್ ಕಾರ್ಯಕ್ರಮ ಯಾವಾಗ ಬರುತ್ತ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬಂದರೆ, ಕೆಲವು ಹೆಸರಗಳನ್ನು ತಂಡ ಬಹಿರಂಗಪಡಿಸಿದೆ. ಇನ್ನು ಈ ಬಾರಿಯೂ ಕಾರ್ಯಕ್ರಮದ ನಿರೂಪಣೆಯನ್ನು ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ. ಆದ್ರೆ ಕಿಚ್ಚ ಈ ಕಾರ್ಯಕ್ರಮಕ್ಕೆ ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಅನ್ನೋದು ಎಲ್ಲರಿಗು ಇರುವ ಪಶ್ನೆಯಾಗಿದೆ. ಯಾಕಂದ್ರೆ ಇಲ್ಲಿಯವರೆಗೂ ಕಿಚ್ಚ ತಾವು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪಡೆಯುವ ಸಂಭಾವನೆಯನ್ನುಬಹಿರಂಗ ಪಡಿಸಿಲ್ಲ. ಬದಲಿಗೆ ಕೆಲವ್ರಯೂ ಅಂದಾಜು ಮೇಲೆ ಹೇಳುತ್ತಿದ್ದರು. ಆದರೆ ಈಗ ಕಿಚ್ಚನ ಸಂಭಾವನೆಯ ಬಗ್ಗೆ ಒಂದು ಸಣ್ಣ ಸುಳಿವು ಸಿಕ್ಕಿದೆಯಂತೆ.

ಕಿಚ್ಚನ ಸಂಭಾವನೆ ಬಗ್ಗೆ ಸಿಕ್ಕಿದ ಸಣ್ಣ ಸುಳಿವು

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಲ್ಲ ಭಾಷೆಯ ನಿರೂಪಕರು ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನೋ ಕುತೂಹಲ ಎಲ್ಲರಿಗು ಇದೆ. ಅದರಂತೆ ಸಲ್ಮಾನ್ ಖಾನ್ ತಮ್ಮ ಸಂಭಾವನೆ ಬಗ್ಗೆ ಬಹಿರಂಗಪಡಿಸಿದ್ದರು. ಹೌದು. ಸಲ್ಮಾನ್ ಖಾನ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸುಮಾರು ೪೦೦ ಕೋಟಿ ರೂ ಸಂಭಾವನೆ ಪಡೆಯುತ್ತಾರಂತೆ. ನಿಜಕ್ಕೂ ಇದನ್ನು ಕೇಳಿದ ಕೂಡಲೇ ಎಲ್ಲರಿಗು ಆಶ್ಚರ್ಯವಾಗಿತ್ತು. ಅದರಂತೆ ಕಿಚ್ಚನ ಸಂಭಾವನೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಿಗು ಉಂಟಾಗಿತ್ತು. ಆದ್ರೆ ಕಿಚ್ಚ ಮಾತ್ರ ತಮ್ಮ ಸಂಭಾವನೆ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಆದರೆ ಈಗ ಕಿಚ್ಚನ ಸಂಭಾವನೆ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ.

ಸುಮಾರು 20 ಕೋಟಿ ರೂ ಸಂಭಾವನೆ ಪಡೆಯುತ್ತಿರುವ ಪೈಲ್ವಾನ್

ಇನ್ನು ಕಿಚ್ಚ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈ ಮೊದಲು ಸುಮಾರು ೨೦ ಕೋಟಿ ರೂ ಪಡೆಯುತ್ತಿದ್ದರಂತೆ. ಹೌದು. ಕಿಚ್ಚ ಬಿಗ್ ಬಾಸ್ ಕಾರ್ಯಕ್ರಮದವರ ಜೊತೆಗೆ ೫ ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರಂತೆ. ಐದು ಆವೃತ್ತಿಗಳಿಗೆ ನಿರೂಪಣೆಗಾಗಿ ಸುದೀಪ್ ದೊಡ್ಡ ಮೊತ್ತವನ್ನ ಪಡೆದುಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಐದು ಆವೃತ್ತಿಗಾಗಿ ಸುದೀಪ್ 20 ಕೋಟಿ ಸಂಭಾವನೆ ಸ್ವೀಕರಸಿದ್ದಾರೆ ಎನ್ನಲಾಗಿದೆ. ಇನ್ನು ಕಿಚ್ಚ ವಾರದಲ್ಲಿ ಎರಡು ಸಂಚಿಕೆಯನ್ನು ನಡೆಸಿಕೊಡುತ್ತಾರೆ. ಶನಿವಾರ ‘ಕಿಚ್ಚನ ಜೊತೆ ವಾರದ ಕಥೆ’ ಹಾಗೂ ಭಾನುವಾರ ‘ಸಂಡೆ ಸ್ಪೆಷಲ್ ವಿತ್ ಸುದೀಪ್’ ಎಪಿಸೋಡ್ ಮಾಡಿಕೊಡುತ್ತಾರೆ. ಐದು ಆವೃತ್ತಿಗೆ 20 ಕೋಟಿ ಅಂದ್ರೆ ಒಂದು ಆವೃತ್ತಿಗೆ 4 ಕೋಟಿ ಚಾರ್ಜ್ ಮಾಡ್ತಾರೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಹೆಚ್ಚು ಸಂಭಾವನೆ ಪಡೆಯುತ್ತಾರಾ?

ಇನ್ನು ಕಿಚ್ಚ ಈ ಬಾರಿ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೌದು. ಕಿಚ್ಚ ಇಲ್ಲಿಯವರೆಗೂ ೨೦ ಕೋಟಿ ರೂ ಸಂಭಾವನೆ ಪಡೆಯುತ್ತಿದ್ದರು. ಆದ್ರೆ ಈಗ ಕಿಚ್ಚ ತಮ್ಮ ಸಂಭಾವನೆಯನ್ನು ಹೆಚ್ಚು ತೆಗೆದುಕೊಳ್ಳುವ ಸಾಧ್ಯತೆ ಇದೆಯಂತೆ. ಆದರೆ ಕಿಚ್ಚನ ಸಂಭಾವನೆ ಅಪೇಕ್ಷೆ ಎಷ್ಟಿದೆ ಎಂಬುದು ಕಾರ್ಯಕ್ರಮದವರಿಗೂ ಗೊತ್ತಿಲ್ಲವಂತೆ. ಆದ್ರೆ ಎಷ್ಟು ಸಂಭಾವನೆಯಾದ್ರೂ ಅವರು ಕೊಡಲು ರೆಡಿ ಇದ್ದಾರಂತೆ. ಯಾಕಂದ್ರೆ ಕಿಚ್ಚನನ್ನು ಬಿಟ್ಟರೆ, ಈ ಕಾರ್ಯಕ್ರಮವನ್ನು ನಡೆಸಿಕೊಡಲು ಅಂತಹ ನಿರೂಪಕರು ಯಾರು ಕಾಣಿಸುತ್ತಿಲ್ಲವಂತೆ. ಹಾಗಾಗಿ ಕಿಚ್ಚ ಈ ಬಾರಿಯೂ ಹೆಚ್ಚಿನ ಸಂಭಾವನೆ ಪಡೆಯುವ ಸಾಧ್ಯತೆ ಇದೆಯಂತೆ.

ಒಟ್ಟಿನಲ್ಲಿ ಕಿಚ್ಚ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪಡೆದುಕೊಳ್ಳುವ ಸಂಭಾವನೆ ಬಗ್ಗೆ ಒಂದು ಸಣ್ಣ ಸುಳಿವನ್ನು ನೀಡಿದ್ದಾರೆ. ಆದರೆ ಹಳೆಯ ಎಪಿಸೋಡ್ ಗಳಿಗೆ ಅವರು 20 ಕೋಟಿ ಪಡೆದಿದ್ದರು. ಆದರೆ ಈ ಬಾರಿಯ ಸಂಭಾವನೆ ಬಗ್ಗೆ ಎಲ್ಲರಿಗು ಕುತೂಹಲವಿದೆ. ಅದಷ್ಟೇ ಕಿಚ್ಚ ಮಾತ್ರ ಈ ಬಗ್ಗೆ ಯಾವ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

LEAVE A REPLY

Please enter your comment!
Please enter your name here