ದೊಡ್ಮನೆಯಲ್ಲಿ ಜಡೆ ಜಗಳ ಶುರುವಾಗಲು ಕಾರಣವಾದ್ರು ಏನು? ಸುದೀಪ್ ಹೇಳಿದ್ದೆ ನಿಜವಾಯ್ತಾ?

0
763
bigboss jade jagala

ಕನ್ನಡದ ಕಿರುತೆರೆ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಎಲ್ಲರ ನೆಚ್ಚಿನ ಕಾರ್ಯಕ್ರಮವಾಗಿದ್ದು, ರಾತ್ರಿ 9 ಗಂಟೆಯಾದರೆ ಸಾಕು ಎಲ್ಲರೂ ರಿಮೋಟ್ ಪಕ್ಕಕ್ಕಿಟ್ಟು ಟಿವಿ ಮುಂದೆ ಕೂರುತ್ತಾರೆ. ಯಾಕಂದ್ರೆ ತರ್ಲೆ, ತಮಾಷೆ, ಕೋಪ, ಆಟ, ಗೇಂ ಪ್ಲಾನ್ ಎಲ್ಲವು ಒಂದೇ ತೆರೆ ಮೇಲೆ ಕಾಣೋದ್ರಿಂದ ಅಭಿಮಾನಿಗಳು ಬಹಳಷ್ಟು ಕುತೂಹಲದಿಂದ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಆದರೆ ಇಲ್ಲಿ ನಡೆಯುವ ಒಂದು ವಿಚಿತ್ರ ಏನೆಂದರೆ ಒಬ್ಬರು ಇಂದು ವರ್ತಿಸಿದ ರೀತಿ, ಮಾರನೇ ದಿನ ವರ್ತಿಸುವುದಿಲ್ಲ. ಹೌದು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿರುತ್ತಾರೆ. ಅದಕ್ಕೆ ಇಲ್ಲಿ ಹಲವರು ಸಾಕ್ಷಿಯಾಗಿದ್ದಾರೆ. ಆದರೆ ಕಣ್ಣಿಗೆ ಕಾಣುವ ರೀತಿ ಇರುವವರು ಅಂದ್ರೆ ಪ್ರಿಯಾಂಕಾ ಹಾಗು ಭೂಮಿ ಶೆಟ್ಟಿ. ಹೌದು. ದೊಡ್ಮನೆಗೆ ಬಂದಾಗ ಎರಡು ದೇಹ ಒಂದೇ ಜೀವ ಎನ್ನುವ ರೀತಿ ಇದ್ದ ಇವರು ಈಗ ಹಾವು, ಮುಂಗುಸಿಗಳಂತೆ ವರ್ತಿಸುತ್ತಿದ್ದಾರೆ. ಅದಕ್ಕೆ ಒಂದು ಮುಖ್ಯ ಕಾರಣವೂ ಸಹ ಇದೆ.

ದೊಡ್ಮನೆಯಲ್ಲಿ ಶುರುವಾಗಿದೆ ಜಡೆ ಜಗಳ

ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭ ಆದಾಗಿಂದ ಹೆಚ್ಚು ಸ್ನೇಹವನ್ನು ವ್ಯಕ್ತಪಡಿಸುತ್ತಿದ್ದವರು ಅಂದ್ರೆ ಭೂಮಿ ಹಾಗು ಪ್ರಿಯಾಂಕಾ. ಅವರ ಸ್ನೇಹವನ್ನು ನೋಡಿ, ಬೇರೆಯವರು ಹೊಟ್ಟೆ ಉರಿದುಕೊಳ್ಳುವ ರೀತಿ ಇದ್ರು. ಅಲ್ಲದೆ ಮೊದಲ ವಾರ ಭೂಮಿ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡು ಬ್ಯಾಂಡೇಜ್ ಹಾಕಿಕೊಂಡಾಗ, ಆಕೆಗೆ ಸ್ನಾನ ಮಾಡಿಸುತ್ತಿದ್ದವರು ಇದೇ ಪ್ರಿಯಾಂಕಾ. ಯಾವಾಗಲೂ ಅಂಟಿಕೊಂಡೇ ಓಡಾಡುತ್ತಿದ್ದ ಇವರಿಬ್ಬರು ಇದೀಗ ಹಾವು-ಮುಂಗುಸಿಯಂತೆ ಆಡುತ್ತಿದ್ದಾರೆ.ಹೌದು. ಭೂಮಿ ಹಾಗು ಪ್ರಿಯಾಂಕಾ ಮಧ್ಯೆ ಜಡೆ ಜಗಳ ಶುರುವಾಗಿದೆ. ಜೊತೆಗೆ ಒಬ್ಬರ ಬೆನ್ನು ಹಿಂದೆ ಮತ್ತೊಬ್ಬರು ಮಾತನಾಡುತ್ತಿದ್ದಾರೆ.

ಇವರ ನಡುವಿನ ಕಿರಿಕ್ ಗೆ ಕಾರಣವಾದ್ರು ಏನು?

ಮೊದಲ ವಾರದ ಎಲಿಮಿನೇಷನ್ ಸಮಯದಲ್ಲಿ ಎಲ್ಲರೂ ಪ್ರಿಯಾಂಕಾ ಅವರನ್ನು ಸೋಮಾರಿ ಎಂದಿದ್ದರು. ಆಗ ಬೇಸರಗೊಂಡ ಪ್ರಿಯಾಂಕಾ ತಮ್ಮ ಗೇಂ ಪ್ಲಾನ್ ಅಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರು. ಜೊತೆಗೆ ಭೂಮಿ ಅವರೊಂದಿಗಿನ ಮಾತುಕತೆ ಕೂಡ ಕಡಿಮೆಯಾಗಿತ್ತು. ಹಾಗಾಗಿ ಭೂಮಿ, ಪ್ರಿಯಾಂಕಾ ವಿರುದ್ಧ ಬೇಸರಮಾಡಿಕೊಂಡರು. ಆದರೂ ಪ್ರಿಯಾಂಕಾ ಹೋಗಿ, ಭೂಮಿಯನ್ನು ಸಮಾಧಾನ ಪಡಿಸಿದ್ದರೂ ಸಹ, ಭೂಮಿ ಸಮಾಧಾನವಾಗಿರಲಿಲ್ಲ. ಅದಾದ ಬಳಿಕ ಇವರಿಬ್ಬರ ನಡುವಿನ ಮಾತುಕತೆ ಅಷ್ಟೇ ಇತ್ತು. ಆದ್ರೆ ಯಾವಾಗ ಪ್ರಿಯಾಂಕಾ ರಾಣಿಯಾಗಿ ಆಳ್ವಿಕೆ ನಡೆಸಿದರೋ, ಆ ಸಮಯದಲ್ಲಿ ಆದಂತಹ ಕೆಲವು ಬದಲಾವಣೆಗಳು ಭೂಮಿಗೆ ಇಷ್ಟವಾಗಲಿಲ್ಲ. ಆಗಲೂ ಸಹ ಭೂಮಿ, ಪ್ರಿಯಾಂಕಾ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಹಿಂದೆ ಮುಂದೆ ಮಾತನಾಡುತ್ತಿರುವ ನಟಿಯರು

ಇನ್ನು ಇವರಿಬ್ಬರು ಈಗ ಹಾವು, ಮುಂಗುಸಿಗಳಂತೆ ವರ್ತಿಸುತ್ತಿರುವ ವಿಚಾರ ಎಲ್ಲರಿಗು ತಿಳಿದಿದೆ. ಇನ್ನು ಅವರು ಅದನ್ನು ತಮ್ಮ ಗೇಮ್ ನಲ್ಲಿ ತೋರಿಸಬೇಕು. ಆದ್ರೆ ಅವರು ಒಬ್ಬರ ಬಗ್ಗೆ, ಇನ್ನೊಬ್ಬರ ಬಳಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಹೌದು. ಒಂದೆಡೆ ಪ್ರಿಯಾಂಕಾ ಆಡಳಿತ ವೈಖರಿ ಬಗ್ಗೆ ಆಕೆಯ ಬೆನ್ನ ಹಿಂದೆ ಭೂಮಿ ಶೆಟ್ಟಿ ಮಾತನಾಡುತ್ತಾರೆ. ಇನ್ನೊಂದು ಕಡೆ ಭೂಮಿ ಶೆಟ್ಟಿ ಸೇಫ್ ಗೇಮ್ ಆಡ್ತಿಲ್ವಾ ಅಂತ ಕುರಿ ಪ್ರತಾಪ್ ಬಳಿ ಪ್ರಿಯಾಂಕಾ ಪ್ರಶ್ನೆ ಮಾಡುತ್ತಾರೆ. ಈ ರೀತಿ ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡುತ್ತ ಮನೆಯಲ್ಲಿ ಕಟ್ಟಿ ಮಸೆಯುತ್ತಿದ್ದಾರೆ.

ನಿಜಕ್ಕೂ ಇವರನ್ನು ನೋಡಿದಾಗ ಏನು ಹೇಳಬೇಕು ಅಂತಾನೆ ಗೊತ್ತಾಗುವುದಿಲ್ಲ. ಯಾಕಂದ್ರೆ ಪ್ರಾಣ ಸ್ನೇಹಿತರಿಗಿಂತಲೂ ಹೆಚ್ಚಾಗಿದ್ದ ಗೆಳತಿಯರು ಈಗ ಹಾವು, ಮುಂಗುಸಿಗಳಂತೆ ವರ್ತಿಸುತ್ತಿದ್ದಾರೆ. ಮೂಡನಿನ ದಿನಗಳಲ್ಲಿ ಇವರಿಬ್ಬರ ಜಡೆ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದೇ ಆಶ್ಚರ್ಯವಾಗಿದೆ.

LEAVE A REPLY

Please enter your comment!
Please enter your name here