ಬಸವಣ್ಣನವರನ್ನ ಏಕೆ ನಾವು ಈ ದಿನವೇ ನೆನೆಯಬೇಕು?

0
1127

ದೇವರು, ಅಂದ್ರೆ ನಮ್ಮ ಜನರಿಗೆ ತುಂಬಾ ಭಕ್ತಿ. ಆದ್ರೆ ದೇವರು ಹೇಗಿದ್ದಾನೆ ಅನ್ನೋದನ್ನ ಮಾತ್ರ ಯಾರೂ ನೋಡಿಲ್ಲ. ನಮ್ಮಲ್ಲಿ ಕೆಲವು ದೇವರು, ಮೊದಲು ಮನುಷ್ಯನ ರೂಪ ಹೊತ್ತಿದ್ದರು ಅಂತ ಹೇಳ್ತಾರೆ. ಹೌದು. ರಾಮ, ಆಂಜನೇಯ ಈ ರೀತಿ ಕೆಲವು ದೇವರುಗಳು ಮನುಷ್ಯ ರೂಪ ಹೊತ್ತಿದ್ದರು. ಹಾಗಾಗಿ ಅವರನ್ನ ಮನುಷ್ಯ ರೂಪ ಹೊತ್ತಿದ್ದ ದೇವರು ಅಂತ ಎಲ್ಲರೂ ನಂಬುತ್ತಾರೆ.

ಇನ್ನೂ ಕೆಲವ್ರು ಹೇಗೆ ಅಂದ್ರೆ, ಮನುಷ್ಯನನ್ನ ತಮ್ಮ ಅಂತರಾತ್ಮದಲ್ಲಿ ದೇವರು ಎಂದು ನಂಬುತ್ತಾರೆ. ಹೌದು. ಜಗದ ಉದ್ಧಾರಕ್ಕಾಗಿ ಶ್ರಮಿಸಿ, ದೇಹತ್ಯಾಗ ಮಾಡಿದವರನ್ನ ಹಾಗೂ ಜೀವನದ ವಿಷಯದಲ್ಲಿ ಬೇಸತ್ತು, ಕೇವಲ ದೇವರ ಜಪದಲ್ಲಿ, ಮುಳುಗಿ ದೇಹತ್ಯಾಗ ಮಾಡಿದವರನ್ನ ಇನ್ನೂ ಕೆಲವ್ರು ದೇವರೆಂದು ಪೂಜೆ ಮಾಡುತ್ತಿದ್ದಾರೆ. ಅವರ ಸಾಲಿನಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳರ ಮಾಚಯ್ಯ, ಬಸವಣ್ಣ ಹಾಗೂ ಇತರರು ಈ ಸಾಲಿನಲ್ಲಿ ಬರುತ್ತಾರೆ. ಹಾಗಾಗಿ ಅವರು ಮಾಡಿರುವ ಸಾಧನೆಯನ್ನ ಹಾಗೂ, ಕ್ರಾಂತಿಯ ಸಲುವಾಗಿ ಅವರನ್ನ ಕುರಿತು ಅವರ ಜಯಂತಿಯನ್ನ ಆಚರಿಸಿಲಾಗುತ್ತದೆ.

ಬಸವಣ್ಣ

ಈ ಭೂಮಿಯ ಮೇಲೆ ಪ್ರತಿದಿನ ಎಷ್ಟೋ ಜನ ಹುಟ್ಟುತ್ತಾರೆ, ಎಷ್ಟೋ ಜನ ಸಾಯುತ್ತಾರೆ. ಆದ್ರೆ,ಅವರೆಲ್ಲನ್ನೂ ನಮ್ಮ ಸಮಾಜ ನೆನಪಿಟ್ಟುಕೊಂಡಿಲ್ಲ. ಯಾಕಂದ್ರೆ, ಅವರು ಸಮಾಜಕ್ಕೆ ಬೇಕಾದ ಕೆಲಸಗಳನ್ನ ಮಾಡಿರಲ್ಲ. ಆದ್ರೆ ಅದರಲ್ಲೂ ಮನುಕುಲ ಸದಾ ನೆನಪಿಟ್ಟುಕೊಳ್ಳುವಂತಹ ಛಾಪನ್ನು ಮೂಡಿಸಿದ ಅಸಾಧಾರಣ ವ್ಯಕ್ತಿಗಳು ಅನೇಕರು ಹುಟ್ಟಿ ಕಣ್ಮರೆಯಾಗಿದ್ದಾರೆ. ಅವರಲ್ಲಿ ಕನ್ನಡ ನಾಡಿನ ಭವ್ಯ ಇತಿಹಾಸದ ಮಧ್ಯಕಾಲೀನದಲ್ಲಿ ಉದಯಿಸಿದ ಅಪರೂಪದ ಚೇತನ ಬಸವಣ್ಣನವರು. ಅವರು ಅವತಾರಪುರುಷರು, ವಿಭೂತಿ ಪುರುಷರು, ಯುಗಪ್ರವರ್ತಕರು. ಅಂತಹ ಮಹಾನುಭಾವರನ್ನು ಪ್ರಾತಃಸ್ಮರಣೀಯರೆಂದು ಶ್ರದ್ಧಾಭಕ್ತಿಯಿಂದ ಈಗಲೂ ಸ್ಮರಿಸುತ್ತೇವೆ.

ಬಸವ ಜಯಂತಿ

12ನೇ ಶತಮಾನದಲ್ಲಿ ಸಾಮಾಜಿಕ ಕ್ರಾ೦ತಿಗೆ ಕಾರಣಾರಾದ ಮಹಾನ್ ವ್ಯಕ್ತಿಗಳಲ್ಲಿ ಜಗಜ್ಯೊತಿ ಬಸವಣ್ಣನವರು ಒಬ್ಬರು. ಬಸವಣ್ಣನವರು ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ ಬಾಗೇವಾಡಿಯಲ್ಲಿ ಜನಿಸಿದರು. ಬಸವಣ್ಣನವರು ಮತ್ತು ಶಿವಶರಣರು ಸ್ವೀಕರಿಸಿ, ಆಚರಿಸಿದ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಯೋಗ, ಮಹಿಳಾ ಸಬಲೀಕರಣ, ದಲಿತೋದ್ದಾರ ಮತ್ತು ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಜನತೆಗೆ ನೀಡಿದವರು. ಹಾಗಾಗಿ ವೈಶಾಖ ಶುದ್ಧ ತದಿಗೆಯಂದು, ಲಿಂಗಾಯತ ಮತದ ಸ್ಥಾಪಕರಾದ ಬಸವಣ್ಣನವರ ಜನ್ಮದಿನವಾದ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ. ಬಸವ ಜಯಂತಿಯು ಲಿಂಗಾಯತರ ಹಾಗೂ ಸರ್ವಧರ್ಮೀಯರ ಅತ್ಯಂತ ಪ್ರಮುಖ ಹಬ್ಬ. ಕರ್ನಾಟಕದಾದ್ಯಂತ ಇದನ್ನು ಬಹಳ ವೈಭವ ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ.

ಇಂದಿಗೂ ಪಾಲಿಸುತ್ತಿರುವ ಆದರ್ಶಗಳು

ಬಸವಣ್ಣನವರು ಕಾಲವಾಗಿ ಎಂಟು ಶತಮಾನಗಳ ಮೇಲಾದರೂ ಅವರ ಬದುಕಿನ ಆದರ್ಶಗಳು ಈಗಲೂ ಪ್ರಸ್ತುತವಾಗಿವೆ. ಕಾಲದ ಮರಳಿನ ಮೇಲೆ ಅವರು ಇಟ್ಟ ದೃಢವಾದ ಹೆಜ್ಜೆಯ ಗುರುತುಗಳನ್ನು ಅಳಿಸಿಹಾಕಲು ಯಾವ ಸುನಾಮಿ ಅಲೆಯಿಂದಲೂ, ಚಂಡಮಾರುತದಿಂದಲೂ ಇದುವರೆಗೂ ಸಾಧ್ಯವಾಗಿಲ್ಲ. ಅಂತಹ ಮಹೋನ್ನತ ವ್ಯಕ್ತಿತ್ವ ಅವರದು. ಅವರು ಪಾಲಿಸುತ್ತಿದ್ದ ನಿಯಮಗಳನ್ನ ಹಾಗೂ ಆದರ್ಶಗಳನ್ನ ಈಗಲೂ ಪಾಲಿಸುತ್ತಿದ್ದಾರೆ. ಅದರಲ್ಲೂ ಅವರ ಜಯಂತಿಯ, ದಿನ ಅವುಗಳನ್ನ ಇನ್ನೂ ಹೆಚ್ಚಾಗಿ ಪಾಲಿಸುತ್ತಾರೆ. ಹೌದು. ಬಸವಣ್ಣನವರು ನಡೆದುಬಂದ ಹಾದಿಯಲ್ಲೇ ಈಗಲೂ ಹಲವರು ಬದುಕುತ್ತಿದ್ದಾರೆ. ಅವರಿಗೆ ಸಲ್ಲದ, ವಿಷಯಗಳನ್ನ ಮಾಡದೇ, ಜೀವನದಲ್ಲಿ ಅವರು ಪಾಲಿಸಿದಂತ ನಿಯಮಗಳಡಿಯಲ್ಲಿ ಬದುಕುತ್ತಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಕ್ರಾಂತಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದ ಬಸವಣ್ಣನವರು, ಜಗತ್ತನ್ನೇ ಗೆದ್ದರು. ಇವರ ರೀತಿಯಲ್ಲೇ ಇನ್ನೂ ಕೆಲವರಿದ್ದಾರೆ. ಅಲ್ಲಮಪ್ರಭು, ಮಡಿವಾಳರ ಮಾಚಯ್ಯ ಹಾಗೂ ಅಕ್ಕಮಹಾದೇವಿ. ಇವರೆಲ್ಲರೂ ಸಹ ಸಾಮಾಜಿಕ ಕ್ರಾಂತಿಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದವರು. ಈಗ ಇವರು ಮಾಡಿರುವ ಕೆಲಸಗಳನ್ನ ನೆನೆಯುತ್ತ, ಇವರ ಜಯಂತಿಗಳನ್ನ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here