ಪರಭಾಷಾ ನಟಿಯಾಗಿದ್ದರು, ಕನ್ನಡದಲ್ಲಿ ಟ್ವೀಟ್ ಮಾಡಿ ಕನ್ನಡಾಭಿಮಾನ ಮೆರೆದ ಅನುಷ್ಕಾ ಶರ್ಮಾ

0
742
anushka sharma

ಈಗಿನ ಕಾಲದಲ್ಲಿ ನಮ್ಮ ಕನ್ನಡಿಗರು ಕೆಲವು ಕಲಾವಿದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ನಮ್ಮ ಕನ್ನಡ ನೆಲದಲ್ಲಿ ಹುಟ್ಟಿ, ಕನ್ನಡ ಮಾತನಾಡಲು ಬರುವುದಿಲ್ಲ ಎನ್ನುತ್ತಾರೆ ಎಂದು ಹಲವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೌದು. ಅಲ್ಲದೆ ಇತ್ತೀಚಿಗೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕಿಡಿಕಾರುತ್ತಿದ್ದರು. ಯಾಕಂದ್ರೆ ನಮ್ಮ ನಾಡಿನ ಹುಡುಗಿಯಾಗಿ, ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೇಳುತ್ತಾರೆ ಎಂದು ಅವರ ಮೇಲೆ ಗರಂ ಆಗಿದ್ದರು. ಆದ್ರೆ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅದೇ ಸಮಯದಲ್ಲಿ ತಮ್ಮ ತಾಯಿಗೆ ಕನ್ನಡದಲ್ಲಿ ಶುಭಾಶಯ ಕೋರಿದ್ದರು. ಅದನ್ನು ನೋಡಿದ ಅಭಿಮಾನಿಗಳು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ ಈಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಕನ್ನಡದಲ್ಲಿ ಒಂದು ಪದವನ್ನು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಅನುಷ್ಕಾಗೆ ಇರುವ ಕನ್ನಡಾಭಿಮಾನಕ್ಕೆ ಮನಸೋತ ಕನ್ನಡಿಗರು

ಇತ್ತೀಚಿಗೆ ನಮ್ಮ ಕಲಾವಿದರು ಕನ್ನಡ ಬಳಕೆಯನ್ನು ಕಡಿಮೆ ಮಾಡಿದ್ದಾರೆ ಎಂದು ನಮ್ಮ ಕನ್ನಡಿಗರು ಆಗಾಗ ಬೇಸರ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಈ ಮಧ್ಯೆ ರಶ್ಮಿಕಾ ಕಿರಿಕ್ ಕೂಡ ಆಗಿತ್ತು. ಆದ್ರೆ ಆ ಮಧ್ಯೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಶುಭಾಶಯ ಕೋರುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದ್ರೆ ಈಗ ಅನುಷ್ಕಾ ಶರ್ಮಾ ಕನ್ನಡಿಗರ ಮನ ಗೆದ್ದಿದ್ದಾರೆ. ಹೌದು. ವಿರಾಟ್ ಕೊಹ್ಲಿ ಅವರನ್ನು ಮದುವೆಯಾದ ಬಳಿಕ ಅನುಷ್ಕಾ ಚಿತ್ರರಂಗದಿಂದ ದೂರವಿದ್ದು, ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸದಾಕಾಲ ಸಕ್ರಿಯಾಗಿರುತ್ತಾರೆ. ಇದೆ ರೀತಿ ಅವರು ಟ್ವಿಟ್ಟರ್ ನಲ್ಲಿ ಒಂದು ವೀಡಿಯೋ ಅಪ್ಲೋಡ್ ಮಾಡಿ, ಅದರ ಬಗ್ಗೆ ಮೊದಲು ಇಂಗ್ಲಿಷ್ ನಲ್ಲಿ ಬರೆದು, ನಂತರ ಕೊನೆಯಲ್ಲಿ ‘ಅಷ್ಟೇ’ ಎಂದು ಕನ್ನಡದಲ್ಲಿ ಬರೆದಿದ್ದಾರೆ.

‘ಅಷ್ಟೇ’ ಎಂದು ಕನ್ನಡದಲ್ಲಿ ಬರೆದ ಅನುಷ್ಕಾ ಶರ್ಮಾ

ಟ್ವಿಟ್ಟರ್ ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ ಅನುಷ್ಕಾ ಶರ್ಮಾ ತಮಗನಿಸಿದ ಮಾತುಗಳನ್ನೆಲ್ಲ ಮೊದಲು ಇಂಗ್ಲಿಷ್ ನಲ್ಲಿ ಬರೆದಿದ್ದಾರೆ. ಹೌದು. ವಿಡಿಯೋ ಹಾಕಿ ಅದಕ್ಕೆ ಅನುಷ್ಕಾ, ಈಗ ಇಂಟರೆನೆಟ್ ಪಾಸಿಟಿವಿಟಿಯ ಸಮಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಹ್ಯಾಪಿ ಟ್ವೀಟ್ಸ್ ಎಂಬ ಹ್ಯಾಶ್‍ಟ್ಯಾಗ್ ಬಳಸಿದ್ದಾರೆ. ವಿಡಿಯೋದಲ್ಲಿ ಅನುಷ್ಕಾ ಇಂಗ್ಲಿಷ್‍ನಲ್ಲೇ ಎಲ್ಲ ಟ್ವೀಟ್‍ಗಳನ್ನು ಓದಿದ್ದಾರೆ. ಬಳಿಕ ವಿಡಿಯೋ ಕೊನೆಯಲ್ಲಿ ಅನುಷ್ಕಾ ‘ಅಷ್ಟೇ’ ಎಂಬ ಪದವನ್ನು ಹೇಳಿದ್ದಾರೆ. ಇನ್ನು ಅನುಷ್ಕಾ ‘ಅಷ್ಟೇ’ ಎಂಬ ಪದವನ್ನು ಬಳಸಿ ಬರೆದ ಕೂಡಲೇ, ಎಲ್ಲ ಅಭಿಮಾನಿಗಳು ಅವರಿಗೆ ಮೆಚ್ಚುಗೆ ತಿಳಿಸಿದ್ದಾರೆ.

ಕನ್ನಡ ಬರದಿದ್ದರೂ, ಕನ್ನಡದ ಬಗ್ಗೆ ಅಭಿಮಾನ ಮೆರೆದ ಅನುಷ್ಕಾ

ಅನುಷ್ಕಾ ಶರ್ಮಾ ಮೂಲತಃ ಉತ್ತರ ಪ್ರದೇಶದವರು. ಆದರೆ ಇವರು ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಓದಿದರು. ನಂತರ ತಮ್ಮ ಪದವಿಯನ್ನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮುಗಿಸಿದರು. ಆ ನಂತರ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ರೀತಿ ಅನುಷ್ಕಾ ಉತ್ತರ ಪ್ರದೇಶದವರಾಗಿರೋದ್ರಿಂದ ಅವರಿಗೆ ಕನ್ನಡ ಬಳಕೆ ಕಡಿಮೆ. ಆದ್ರೆ ಈಗ ಅವರು ಇದ್ದಕ್ಕಿದ್ದಂತೆ ಕನ್ನಡದಲ್ಲಿ ‘ಅಷ್ಟೇ’ ಎಂಬ ಪದವನ್ನು ಬರೆಯುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು. ಕನ್ನಡದ ಹುಡುಗಿಯಾದ ರಶ್ಮಿಕಾ ಮಂದಣ್ಣ ಕನ್ನಡ ಬರುವುದಿಲ್ಲ ಎಂದು ಹೇಳುತ್ತಾರೆ. ಆದ್ರೆ ಟಾಲಿವುಡ್ ಹಾಗು ಬಾಲಿವುಡ್ ನಟಿಯರಾದ ಅನುಷ್ಕಾ ಶೆಟ್ಟಿ ಹಾಗು ಅನುಷ್ಕಾ ಶರ್ಮಾ ಕನ್ನಡದ ಮೇಲೆ ಇಟ್ಟಿರುವ ಅಭಿಮಾನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ಪರ ಭಾಷೆಯ ಕಲಾವಿದರಿಗೆ ನಮ್ಮ ಕನ್ನಡದ ಮೇಲಿರುವ ಅಭಿಮಾನವನ್ನು ನೋಡಿದಾಗ ನಿಜಕ್ಕೂ ಸಂತಸವಾಗುತ್ತದೆ. ಹಾಗಾಗಿ ಅವರ ಟ್ವೀಟ್ ಗೆ ಎಲ್ಲ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here