‘2100’ ರೈತರ ಸಾಲ ತೀರಿಸುವುದರ ಮೂಲಕ ಮಾನವೀಯತೆ ಮೆರೆದ ಬಿಗ್ ಬಿ

0
3094
amithab bachhan

ಮನುಷ್ಯ ಹುಟ್ಟಿದಾಗಿನಿಂದಲೂ ಕಷ್ಟ, ಸುಖ ಎಲ್ಲವನ್ನೂ ಅನುಭವಿಸುತ್ತಾನೆ. ಆದ್ರೆ ಕಾಲ ಬದಲಾದಂತೆ ಅವನ ಜೀವನ ಬದಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾಗದ ಜೀವನ ಅಂದ್ರೆ ಅದು ರೈತರದ್ದು. ಯಾಕಂದ್ರೆ ರೈತ, ಜೀವನ ಪರಿಯಂತ ಕಷ್ಟ ಪಡುವುದೇ ಆಗುತ್ತದೆ. ಯಾಕಂದ್ರೆ ಸರಿಯಾದ ಮಳೆ ಬರದೇ, ಆತನಿಗೆ ಬೆಳೆ ಬೇಯಲು ಆಗುತ್ತಿಲ್ಲ. ಬೆಳೆ ಬೆಳೆದರೆ, ಅದಕ್ಕೆ ಸರಿಯಾದ ಬೆಲೆ ಸಿಗಿವುದಿಲ್ಲ ಈ ರೀತಿ ಎಲ್ಲ ಕಡೆಯಿಂದಲೂ ಆತ ನೋವನ್ನ ಅನುಭವಿಸುತ್ತಿದ್ದಾನೆ. ಎಷ್ಟೋ ಕಡೆ ರೈತರು ಆತ್ಮಹತ್ಯೆಯತ್ತ ವಾಲುತ್ತಿದ್ದಾರೆ. ಯಾಕಂದ್ರೆ ಬೆಳೆ ಬೆಳೆಯಲು ಆತ ಸಿಕ್ಕ ಸಿಕ್ಕವರ ಬಳಿ ಸಲ ಮಾಡುತ್ತಾನೆ. ಆದ್ರೆ ಆ ಸಾಲವನ್ನ ತೀರಿಸಲಾಗದೆ ಮಣ್ಣು ಸೇರುತ್ತಿದ್ದಾನೆ.

ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ರೈತ ಪಡಬಾರದ ಕಷ್ಟ ಪಡುತ್ತಿದ್ದಾನೆ. ಅವರ ಸಹಾಯಕ್ಕೆ ಯಾರು ಮುಂದಾಗುತ್ತಿಲ್ಲ. ಸರ್ಕಾರದವರಾದರೂ ಅವರ ಪರವಾಗಿ ನಿಲ್ಲಬಹುದು. ಆದ್ರೆ ಸರ್ಕಾರವು ಸಹ, ಅವರ ವಿಷಯದಲ್ಲಿ ಸಮಯ ತೆಗೆದುಕೊಳ್ಳುತ್ತಿದೆ. ಸರ್ಕಾರ ತೆಗೆದುಕೊಳ್ಳುವ ಸಮಯದಲ್ಲಿ ರೈತ, ಎಲ್ಲರಿಂದ ದೂರಾಗುತ್ತಿದ್ದಾನೆ. ಹಾಗಾಗಿ ರೈತರ ಸಹಾಯಕ್ಕಾಗಿ ಇತ್ತೀಚಿಗೆ ದೊಡ್ಡ ದೊಡ್ಡ ವ್ಯಕ್ತಿಗಳು ಅಥವಾ ಸಿನಿಮಾ ನಟರು ಮುಂದಾಗುತ್ತಿದ್ದಾರೆ. ಹೌದು. ತಮ್ಮಿಂದಾಗುವ ಸಹಾಯವನ್ನ ಮಾಡುವ ಮೂಲಕ, ರೈತರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ಈಗ ಅದೇ ರೀತಿ, ನಮ್ಮ ಬಿಗ್ ಬಿ ಕೂಡ ರೈತರ ಸಲ ತೀರಿಸುವದರ ಮೂಲಕ, ತಮ್ಮ ಮಾನವೀಯತೆಯನ್ನ ಮೆರೆದಿದ್ದಾರೆ.

ರೈತರ ಸಂಕಷ್ಟಕ್ಕೆ ನೆರವಾದ ಬಿಗ್ ಬಿ

ಅಮಿತಾಬ್ ಬಚ್ಚನ್ ಅವರಿಗೆ ರೈತರ ಮೇಲೆ ಅಪಾರ ವಿಶ್ವಾಸವಿದೆ. ಜೊತೆಗೆ ಅವರು ಕಷ್ಟದಲ್ಲಿರುವ ರೈತರ ಮೇಲೆ ತುಂಬಾ ಕರುಣೆ ಹಾಗೂ ಮಮತೆ ತೋರುತ್ತಾರೆ. ಹಾಗಾಗಿ ಅವರು ಕೆಲವು ವರ್ಷಗಳಿಂದ ತಮ್ಮ ಜೀವನದಲ್ಲಿ ಹೊಸ ನಿಯಮವನ್ನ ಅವರಿಗೆ ಅವರೇ, ರೂಢಿಸಿಕೊಂಡಿದ್ದರು. ವರ್ಷದಲ್ಲಿ ನನ್ನಿಂದ ಆದಷ್ಟು ರೈತರ ಸಾಲ ಮನ್ನಾ ತೀರಿಸುತ್ತೇನೆ ಅಂತ. ಅದರಂತೆ ಅವರು ಕೆಲವು ವರ್ಷಗಳಿಂದ ರೈತರ ಸಾಲ ತೀರಿಸುತ್ತಿದ್ದಾರೆ. ಈಗ ಪ್ರತಿವರ್ಷದಂತೆ ಈ ವರ್ಷವೂ ಸಹ 2100 ರೈತರ ಸಾಲ ತೀರಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2,100 ರೈತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್

ಬಿಗ್-ಬಿ ಅಮಿತಾಬ್ ಬಚ್ಚನ್ ಬಿಹಾರ ರಾಜ್ಯದ ಸುಮಾರು 2,100 ಬಡ ರೈತರ ಸಾಲ ತೀರಿಸಿದ್ದಾರೆ. ಹೌದು. ಬಿಗ್ ಬಿ ಮಗನಾದ ಅಭಿಷೇಕ ಬಚ್ಚನ್ ಮತ್ತು ಶ್ವೇತಾ ಅವರು, ತಮ್ಮ ತಂದೆ ಮಾಡುತ್ತಿರುವ ಈ ಸಹಾಯಕ್ಕೆ ಸಾಥ್ ನೀಡಿದ್ದಾರೆ. ಬಿಗ್ ಬಿ ಗೆ ರೈತರ ಮೇಲೆ ಅಪಾರ ಮಮತೆಯಿದೆ. ಹಾಗಾಗಿ ಅವರು ಸಾಲದ ಸುಳಿಯಲ್ಲಿ ಸಿಲುಕಿ, ಯಾವುದೇ ಕಾರಣಕ್ಕೂ ಜೀವ ಕಳೆದುಕೊಳ್ಳಬಾರದು ಅನ್ನೋ ನಿಟ್ಟಿನಲ್ಲಿ ಈ ಸಹಾಯವನ್ನ ಮಾಡುತ್ತಿದ್ದಾರೆ. ಇದರ ಬಗ್ಗೆ ಬಿಗ್ ಬಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಹಿಂದೆಯೂ ಸಹ ಸಾಲ ತೀರಿಸಿದ್ದ ಬಿಗ್ ಬಿ

ರೈತರ ಸಂಕಷ್ಟಕ್ಕೆ ನೆರವಾಗುತ್ತಿರೋ ಅಮಿತಾಬ್ ಬಚ್ಚನ್ ಅವರು, ಪ್ರತಿವರ್ಷ ಇಂತ ಕೆಲಸ ಮಾಡುತ್ತಲೇ ಇದ್ದಾರೆ. ಹಾಗಾಗಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ 1,398 ರೈತರ 3.99 ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಿದ್ದರು. ಅದಕ್ಕೂ ಮೊದಲು 350 ರೈತರ ಸಾಲವನ್ನು ಪಾವತಿಸಿದ್ದರು. ಆದ್ರೆ ಈ ಬಾರಿ ಅದರ ಸಂಖ್ಯೆಯನ್ನ ಹೆಚ್ಚಿಸಿದ್ದಾರೆ. ಕೆಲವರಿಗೆ ಬ್ಯಾಂಕ್ ಗಳ ಮೂಲಕ ಸಾಲ ಮರುಪಾವತಿ ಮಾಡಿದರೆ, ಇನ್ನೂ ಕೆಲವರಿಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್ ಅವರು ನೀಡಿದ್ದಾರೆ. ಇಂಥ ಸಂತಸ ಸುದ್ದಿಯನ್ನ ಅಮಿತಾಬ್ ಬಚ್ಚನ್ ಅವರು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ರೈತರ ಸಂಕಷ್ಟಕ್ಕೆ ಸರ್ಕಾರ ನೆರವುಗುದರ ಬದಲು, ಈ ರೀತಿಯ ಸಿನಿಮಾ ನಟರು ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳು ಮುಂದಾಗುತ್ತಿದ್ದಾರೆ. ನಿಜಕ್ಕೂ ಬಿಗ್ ಬಿ ಅವರ ಈ ಸಹಾಯಕ್ಕೆ ಅಭಿನಂದನೆ ತಿಳಿಸಲೇ ಬೇಕು.

LEAVE A REPLY

Please enter your comment!
Please enter your name here