ಕಾರ್ಯಕ್ರಮಕ್ಕೆ ಬಂದ ಸ್ಪರ್ಧಿಯ ಕಾಲಿಗೆ ಬಿದ್ದು, ಆಶೀರ್ವಾದ ಪಡೆದ ಬಿಗ್ ಬಿ. ಯಾರೀ ಮಹಿಳೆ?

0
791
amithab bachhan

ಅಮಿತಾಬ್ ಬಚ್ಚನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಮಿತಾಬ್ ಅಂದ್ರೆ ಎಲ್ಲರಿಗು ಇಷ್ಟ. ಯಾಕಂದ್ರೆ ತಮ್ಮ ನಟನೆಯ ಮೂಲಕ, ಹಾಗು ತಮ್ಮ ಖಡಕ್ ಡೈಲಾಗ್ ಗಳ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಹೌದು. ಇನ್ನು ಅವರು ಬಾಲಿವುಡ್ ನ ಹಿರಿಯ ನಟನಾಗಿದ್ದಾರೆ. ಹಾಗಾಗಿ ಆಗೊಂದು, ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವರದ್ದೇ ನಿರೂಪಣೆಯ ಕಾರ್ಯಕ್ರಮ ಅಂದ್ರೆ ಅದು ಕೌನ್ ಬನೇಗಾ ಕರೋಡ್ ಪತಿ. ಹೌದು. ಈ ಕಾರ್ಯಕ್ರಮಕ್ಕೆ ಅಮಿತಾಬ್ ಬಚ್ಚನ್ ಅವರೇ ನಿರೂಪಕರು. ಇನ್ನು ಇದರಲ್ಲಿ ಸಾಕಷ್ಟು ಜನ ಬಂದು ಹಣ ಗಳಿಸಿಕೊಂಡು ಹೋಗಿದ್ದಾರೆ. ಅದರಂತೆ ಈಗ ಮತ್ತೆ ಈ ಸೀಸನ್ ಶುರು ಮಾಡಿದ್ದಾರೆ. ಆದ್ರೆ ಈ ಸೀಸನ್ ಗೆ ಬಂದ ಸ್ಪರ್ಧಿಯ ಕಾಲಿಗೆ ಬಿದ್ದು, ಆಶೀರ್ವಾದ ಪಡೆದಿದ್ದಾರೆ. ಹಾಗಾದ್ರೆ ಆ ಸ್ಪರ್ಧಿ ಯಾರು? ಅನ್ನೋದನ್ನು ನೀವೇ ನೋಡಿ.

ಸ್ಪರ್ಧಿ ಕಾಲಿಗೆ ಬಿದ್ದು, ಆಶೀರ್ವಾದ ಪಡೆದ ಬಿಗ್ ಬಿ

ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಪುನಃ ಆರಂಭಗೊಂಡಿದ್ದು, ಈ ಬಾರಿಯ ಕಾರ್ಯಕ್ರಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ‘ಕರ್ಮವೀರ್’ ಎಂಬ ವಿಶೇಷ ಸಂಚಿಕೆಗಳು ಈ ಬಾರಿ ಪ್ರಸಾರಗೊಳ್ಳಲಿವೆ. ಇನ್ನು ಈ ಈ ವಿಶೇಷ ಸಂಚಿಕೆಗೆ ಮೊದಲು ಸ್ಪರ್ಧಿಯಾಗಿ ಸಮಾಜ ಸೇವೇಕಿ ಬಂದಿದ್ದಾರೆ. ಹೌದು. ಸಮಾಜ ಸೇವಕಿ ಸಿಂಧುತಾಯಿ ಸಪ್ಕಾಲ್ ಅವರು ಸ್ಪರ್ಧಿಯಾಗಿ ಬಂದಿದ್ದಾರೆ. ಅವರು ಬಂದೊಡನೆ ಬಿಗ್ ಬಿ ಅವರ ಕಾಲಿಗೆ ನಮಸ್ಕರಿಸುವ ಮೂಲಕ ವಿಶೇಷ ಅತಿಥಿಯನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದಾರೆ.

ಸಾಕಷ್ಟು ಸಮಾಜ ಸೇವೆ ಮಾಡಿರುವ ಸಿಂಧುತಾಯಿ ಸಪ್ಕಾಲ್

ಸಿಂಧುತಾಯಿ ಸಪ್ಕಾಲ್ ಅವರು ಮೂಲತಃ ಮಹಾರಾಷ್ಟ್ರದವರು. ಇವರು ಅನೇಕ ರೀತಿಯ ಸಮಾಜ ಸೇವೆಯನ್ನು ಮಾಡಿದ್ದಾರೆ. ಹೌದು. ಇವರು 20 ವರ್ಷದವರಿದ್ದಾಗ, ಇವರ ಅತ್ತೆ ಇವರನ್ನು ಮನೆಯಿಂದ ಹೊರಹಾಕಿದ್ದರಂತೆ. ಆಗ ಇವರು ತಮ್ಮ ಚಿಕ್ಕ ಮಗಳನ್ನು ಕರೆದುಕೊಂಡು ಹೋಗಿ, ಸ್ಮಶಾನದಲ್ಲಿ ವಾಸಿಸಲು ಮುಂದಾದರಂತೆ. ಜೊತೆಗೆ ರೈಲ್ವೆ ಸ್ಟೇಷನ್ ಅಲ್ಲಿ ಹಾಡು ಹೇಳುವುದರ ಮೂಲಕ, ತಮ್ಮ ಜೀವನೋಪಾಯ ನಡೆಸುತ್ತಿದ್ದರಂತೆ. ಆದ್ರೆ ಆ ಸಮಯದಲ್ಲಿ ಅವರ ತಲೆಗೆ ಒಂದು ಯೋಚನೆ ಬಂದಿದ್ದು, ತಾಯಿ ಇಲ್ಲದ ಮಕ್ಕಳು ಬಹಳಷ್ಟು ಜನ ಇದ್ದಾರೆ. ಅವರನ್ನೆಲ್ಲ ಕರೆದುಕೊಂಡು ಬಂದು, ಸಾಕುವುದಾಗಿ ನಿರ್ಧಾರ ಮಾಡುತ್ತಾರೆ. ತಾವು ಸ್ಮಶಾನದಲ್ಲಿ ವಾಸಿಸುತ್ತಿದ್ದರು, ಯಾವುದಕ್ಕೂ ಅಂಜದೆ, ತಾಯಿ ಇಲ್ಲದ ಮಕ್ಕಳನ್ನು ಕರೆತಂದು ಸಾಕುತ್ತಾರೆ. ಒಟ್ಟಿನಲ್ಲಿ ಇದುವರೆಗೂ ಅವರು 1200 ಮಕ್ಕಳನ್ನು ದತ್ತು ಪಡೆದಿದ್ದಾರೆ.

ಅನೇಕ ಪ್ರಶಸ್ತಿ ಪಡೆದಿದ್ದಾರೆ

ಇನ್ನು ಇವರು ಅನೇಕ ಮಕ್ಕಳನ್ನು ದತ್ತು ಪಡೆದು ಸಾಕಿದ್ದಾರೆ. ಸದ್ಯ ಅವರು 36 ಸೊಸೆಯಂದಿರು, 272 ಅಳಿಯಂದಿರು ಮತ್ತು 450ಕ್ಕೂ ಹೆಚ್ಚು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಅಲ್ಲದೆ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಹೌದು. ಸಿಂಧುತಾಯಿ ಅವರ ಸೇವೆಗೆ 750ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ. 2013ರಲ್ಲಿ ಐಕಾನಿಕ್ ಮದರ್ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸಿಂಧುತಾಯಿ ಅವರನ್ನು ಗೌರವಿಸಲಾಗಿದೆ. 2010ರಲ್ಲಿ ಮಹಾರಾಷ್ಟ್ರ ಸರ್ಕಾರದ ಅಹಿಲ್ಯಾಬಾಯಿ ಹೋಲ್ಕರ್, 2012ರಲ್ಲಿ ಸಿಎನ್‍ಎನ್-ಐಬಿಎನ್ ಮತ್ತು ರಿಲಯನ್ಸ್ ಫೌಂಡೇಶನ್ ವತಿಯಿಂದ ನೀಡಲಾಗುವ ‘ರಿಯಲ್ ಹೀರೋ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2018ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂ ದ್ ಅವರು ‘ನಾರಿ ಶಕ್ತಿ’ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಒಟ್ಟಿನಲ್ಲಿ ತನ್ನ ಕಷ್ಟವನ್ನು ಮರೆತು, ಅನೇಕ ಮಕ್ಕಳನ್ನು ದತ್ತು ಪಡೆದು ಅವರನ್ನು ಸಾಕುತ್ತಿದ್ದಾರೆ. ಇನ್ನು ಇವರು ಈಗ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕೆ ಬಂದಿದ್ದು , ಸಂತಸದ ವಿಷಯವಾಗಿದೆ. ಹಾಗಾಗಿ ಬಿಗ್ ಬಿ, ಅವರ ಕಾಲಿಗೆ ಬಿದ್ದು, ನಮಸ್ಕರಿಸಿದ್ದಾರೆ. ಇನ್ನು ಇವರು ಕಾರ್ಯಕ್ರಮದಲ್ಲಿ 25 ಲಕ್ಷ ಹಣವನ್ನು ಗೆದ್ದಿದ್ದಾರೆ.

LEAVE A REPLY

Please enter your comment!
Please enter your name here