ಸಿಬಿಐ ಅಧಿಕಾರಿಗಳಿಂದ ಅಲೋಕ್ ಕುಮಾರ್ ವಿಚಾರಣೆ ಸಾಧ್ಯತೆ. ಯಾವ ಕಾರಣಕ್ಕೆ?

0
819
alok cbi

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಸದ್ದು ಗೊದ್ದಲಗಳು ನಡೆಯುತ್ತಿವೆ. ಒಂದೊಂದು ದಿನಕ್ಕೂ ನಮ್ಮ ರಾಜಕಾರಣಿಗಳು ಹೊಸ ಹೊಸ ಸುದ್ದಿಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಹೌದು. ಇತ್ತೀಚಿಗೆ ರಾಜಕೀಯದಲ್ಲಿ ಹೆಚ್ಚಾಗಿ ಸುದ್ದಿ ಮಾಡುತ್ತಿರುವ ವಿಷಯ ಅಂದ್ರೆ ಅದು ಫೋನ್ ಟ್ಯಾಪಿಂಗ್. ಈ ಫೋನ್ ಟ್ಯಾಪಿಂಗ್ ವಿಚಾರವನ್ನು ಸಿಬಿಐ ಗೆ ವಹಿಸಲಾಗಿದೆ. ಹಾಗಾಗಿ ಸಿಬಿಐ ಬಹಳಷ್ಟು ಚುರುಕಾಗಿ ತನಿಖೆ ನಡೆಸುತ್ತಿದೆ. ಈಗಾಗಲೇ ಇದರ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದರು. ಹೌದು. ಈ ವಿಚಾರದಲ್ಲಿ ನನ್ನನ್ನು ಯಾರು, ಏನು ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಅದರಂತೆ ಸಿಬಿಐ ಅಧಿಕಾರಿಗಳು ಪ್ರತಿಯೊಬ್ಬರ ವಿಚಾರಣೆ ನಡೆಸುತ್ತಿದ್ದಾರೆ. ಇಂದು ಫೋನ್​ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್​ಆರ್​ಪಿ ಎಡಿಜಿಪಿ‌ ಅಲೋಕ್ ಕುಮಾರ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆಯಂತೆ.

ಸಿಬಿಐ ಅಧಿಕಾರಿಗಳಿಂದ ಅಲೋಕ್ ಕುಮಾರ್ ವಿಚಾರಣೆ ಸಾಧ್ಯತೆ

ಫೋನ್ ಟ್ಯಾಪಿಂಗ್ ವಿಚಾರದಲ್ಲಿ ದಿನದಿಂದ ದಿನಕ್ಕೆ ಹಲವರ ಹೆಸರು ಕೇಳಿಬರುತ್ತಿದೆ. ಅದೇ ರೀತಿ ಈಗ ಕೆಎಸ್​ಆರ್​ಪಿ ಎಡಿಜಿಪಿ‌ ಅಲೋಕ್ ಕುಮಾರ್ ಅವರ ಹೆಸರು ಕೇಳಿಬಂದಿದೆ. ಹೌದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಧಿಕಾರವಧಿಯಲ್ಲಿ ಅಲೋಕ್ ಕುಮಾರ್ ಅವರನ್ನು ನಗರದ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. ಆದ್ರೆ ಬಿಜೆಪಿ ಸರ್ಕಾರ ಬಂದ ಮೇಲೆ, ಅವರ ವರ್ಗಾವಣೆಯಾಯಿತು. ಈ ಸಮಯದಲ್ಲಿ ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಅವರ ಹೆಸರು ಕೇಳಿಬರುತ್ತಿದೆ. ಹೌದು. ಆಡುಗೋಡಿಯ ಸಿಸಿಬಿ ಟೆಕ್ನಿಕಲ್ ವಿಂಗ್​ನಿಂದ ಆಡಿಯೋವನ್ನು ಪೆನ್​ಡ್ರೈವ್​ಗೆ ಹಾಕಿ ಆಗಸ್ಟ್ ೨ರಂದು ಪೊಲೀಸ್ ಆಯುಕ್ತರ ಕಚೇರಿಗೆ ನೀಡಲಾಗಿದೆ ಎಂದು ಸಿಸಿಬಿ ವರದಿ ನೀಡಿತ್ತು. ಇದೇ ವರದಿಯ ಅಧಾರದಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವರ್ಗಾವಣೆ ಮಾಡಿತ್ತು. ಹೀಗಾಗಿ ಇಂದು ಅಲೋಕ್ ಕುಮಾರ್​​ ಅವರನ್ನು ಸಿಬಿಐ ವಿಚಾರಣೆ ಮಾಡುವ ಸಾಧ್ಯತೆ ಇದೆಯಂತೆ.

ಮಾಹಿತಿ ನೀಡುವಂತೆ ಸಿಮ್ ಕಂಪನಿಗಳಿಗೆ ನೋಟಿಸ್ ನೀಡಿದ ಸಿಬಿಐ

ಸಿಬಿಐ ಅಧಿಕಾರಿಗಳು ಇದರ ಸಲುವಾಗಿ ಎಲ್ಲ ರೀತಿಯಲ್ಲೂ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಹಾಗಾಗಿ ಏರ್ಟೆಲ್, ಜಿಯೋ, ವೊಡಾಫೋನ್ ಸೇರಿದಂತೆ ಹಲವು ಸಿಮ್ ಕಂಪನಿಗಳನ್ನು ಸಂಪರ್ಕಿಸಿದ್ದಾರೆ. 2018ರ ಆಗಸ್ಟ್​​ನಿಂದ ಈವರೆಗೆ ಯಾವ್ಯಾವ ನಂಬರ್ ಟ್ಯಾಪ್ ಆಗಿದೆ, ಯಾವ ಅಧಿಕಾರಿಗಳ ಹೆಸರಲ್ಲಿ ಟ್ಯಾಪಿಂಗ್​ಗೆ ಅನುಮತಿ ಪಡೆಯಲಾಗಿದೆ, ಕೋರಿಕೆ ಪತ್ರದಲ್ಲಿ ಯಾವ ಪ್ರಕರಣ ನಮೂದು ಮಾಡಿದ್ದಾರೆ ಇತ್ಯಾದಿ ಮಾಹಿತಿಯನ್ನು ಕೋರಿ ಸಿಮ್ ಕಂಪನಿಗಳಿಗೆ ನೋಟೀಸ್ ನೀಡಲಾಗಿದೆ. ಇದರ ಜೊತೆಗೆ ಕೆಲ ನಂಬರ್​ಗಳ ಕಾಲ್ ರೆಕಾರ್ಡ್ ಕೂಡ ನೀಡುವಂತೆ ಸಿಬಿಐ ಅಧಿಕಾರಿಗಳು ಕೇಳಿದ್ದಾರೆ. ಕೇವಲ ಮೊಬೈಲ್​ ಸಂಸ್ಥೆಗಳಿಗೆ ನೋಟಿಸ್ ನೀಡುವುದು ಮಾತ್ರವಲ್ಲ ಟೆಕ್ನಿಕಲ್ ಸೆಲ್​ ಸಿಸ್ಟಮ್​ನಲ್ಲಿರುವ ಎಲ್ಲಾ ಸಾಫ್ಟ್​ವೇರ್ ಮತ್ತು ಹಾರ್ಡ್ ಡಿಸ್ಕ್​ಗಳನ್ನು ಸಿಬಿಐ ತನ್ನ ವಶಕ್ಕೆ ಪಡೆದಿದೆಯಂತೆ.

ಒಟ್ಟಿನಲ್ಲಿ ಇಂದು ಅಲೋಕ್ ಕುಮಾರ್ ಅವರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಯಾಕಂದ್ರೆ ಚುನಾವಣೆ ಸಮಯದಲ್ಲಿ ಅನೇಕ ಕರೆಗಳು, ಹಾಗು ಕಾಲ್ ರೆಕಾರ್ಡ್ ಗಳಿಗೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ಅವರ ಹೆಸರು ಕೇಳಿಬರುತ್ತಿದೆಯಂತೆ. ಹಾಗಾಗಿ ಅವರ ವಿಚಾರಣೆಗೆ ಸಿಬಿಐ ಮುಂದಾಗಿದೆ.

LEAVE A REPLY

Please enter your comment!
Please enter your name here