ಸಿನಿಮಾರಂಗದಲ್ಲೊಂದು ಮರೆಯಲಾರದಂತಹ ಮಾಣಿಕ್ಯ ಎಂದು ಹೇಳಿದ ಅಲಿ

0
896

ಕನ್ನಡ ಭಾಷೆಯ ಚಲನಚಿತ್ರಗಳು ಈಗ ಬಿಗ್ ಬಡ್ಜೆಟ್ ನಲ್ಲಿ ತಯಾರಾಗುತ್ತಿವೆ. ಉದಾಹರಣೆಗೆ ರಾಕಿಂಗ್ ಸ್ಟಾರ್ ಅಭಿನಯದ ಕೆ‌ಜಿ‌ಎಫ್ ಚಿತ್ರವೆ ಸಾಕ್ಷಿ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಐ ಲವ್ ಯು ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವುದರಿಂದ ಈಗ ತಮಿಳು ಭಾಷೆಯಲ್ಲು ಸಿನಿಮಾ ತಯಾರಾಗಲಿದೆ. ತಮಿಳಿನಲ್ಲಿ ರೀಮೇಕ್ ಆಗಲಿದೆ. ಐ ಲವ್ ಯು ಚಿತ್ರ ನೋಡಿದ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಸಂಜಯ್ ಲಲ್ವಾನಿ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಚಿತ್ರ ಅವರಿಗೆ ಬಹಳ ಇಷ್ಟವಾಗಿರುವ ಕಾರಣದಿಂದಾಗಿ ರೀಮೇಕ್ ಮಾಡಲು ಮುಂದಾಗಿದ್ದಾರೆ.

ಕನ್ನಡ ಚಿತ್ರಗಳ ರೀಮೇಕ್ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದಾರೆ

ಕನ್ನಡ ಚಿತ್ರರಂಗದ ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಅನೇಕ ಪರಭಾಷೆಯ ಕಲಾವಿದರು ಸಹ ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪರ ಭಾಷೆಯ ಕಲಾವಿದರು ಸಹ ಕನ್ನಡ ಚಿತ್ರ ರಂಗದ ಬಗ್ಗೆ ಅಪಾರವಾದ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಬೇರೆ ಭಾಷೆಯವರು ಸಹ ಕನ್ನಡ ಚಿತ್ರಗಳ ರೀಮೇಕ್ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆ‌ಜಎಫ್ ಚಿತ್ರದ ನಂತರ, ಅನೇಕ ಪರ ಭಾಷೆಯ ಕಲಾವಿದರು ಕನ್ನಡ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಐ ಲವ್ ಯು ಚಿತ್ರದಲ್ಲಿ ತೆಲುಗಿನ ಖ್ಯಾತ ಹಾಸ್ಯ ಕಲಾವಿದ ಸಾಧುಕೋಕಿಲ ಅವರು ಕಾಣಿಸಿಕೊಂಡಿದ್ದರು.

ಸಿನಿಮಾ ರಂಗದಲ್ಲೊಂದು ಮರೆಯಲಾಗದ ಮಾಣಿಕ್ಯ

ತೆಲುಗು ಚಿತ್ರರಂಗದ ಮತ್ತೊಬ್ಬ ಹಾಸ್ಯ ಕಲಾವಿದರಾದ ಅಲಿ ಅವರು ಸಹ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಸೂಪರ್ ಚಿತ್ರದಲ್ಲಿ ಅಲಿ ಬಣ್ಣ ಹಚ್ಚಿದ್ದರು. ಈಗ ಅಲಿ, ಕೋಮಲ್ ಅಭಿನಯದ ಕೆಂಪೆಗೌಡ 2 ಚಿತ್ರದಲ್ಲಿ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ಆಡಿಯೋ ಬಿಡುಗಡೆಯ ಸಮಾರಂಭಕ್ಕೆ ಅಲಿ ಅವರು ಆಗಮಿಸಿದ್ದರು. ಇದೇ ವೇಳೆಯಲ್ಲಿ ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಡಾಕ್ಟರ್ ರಾಜ್ ಅವರು ದೇವರಿಗೆ ಸಮಾನರಾದವರು, ಅವರು ಸಿನಿಮಾ ರಂಗದಲ್ಲೊಂದು ಮರೆಯಲಾಗದ ಮಾಣಿಕ್ಯ ಎಂದು ಹಾಡಿ ಹೊಗಳಿದ್ದಾರೆ. ಡಾಕ್ಟರ್ ರಾಜ್ ಅವರ ನಟನೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿತ್ತು.

ಬೇರೆ ಭಾಷೆಯ ಕಲಾವಿದರನ್ನು ನಟನೆಯ ಮೂಲಕ ಸೆಳೆದ ಏಕೈಕ ನಟ

ರಾಜ್ ಕುಟುಂಬಕ್ಕೂ ನನಗು ಒಳ್ಳೆಯ ಬಾಂಧವ್ಯ ಇದೆ. ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ನನಗೆ ಆತ್ಮೀಯರು ಎಂದು ಹೇಳಿದ್ದಾರೆ. ಬೇರೆ ಭಾಷೆಯ ಕಲಾವಿದರನ್ನು ನಟನೆಯ ಮೂಲಕ ಸೆಳೆದ ಏಕೈಕ ಕನ್ನಡ ಚಿತ್ರರಂಗದ ನಟ ಡಾಕ್ಟರ್ ರಾಜ್ ಕುಮಾರ್. ಹೌದು. ಡಾಕ್ಟರ್ ರಾಜ್, ಚಿತ್ರದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಇಂದಿಗೂ ಸಹ ರಾಜ್ ಅವರನ್ನು ಅಭಿಮಾನಿಗಳು ಮರೆತಿಲ್ಲ. ಅವರು ಈ ದಿನ ನಮ್ಮ ಜೊತೆ ಇಲ್ಲವಾದರು ಸಹ, ಅವರು ಮಾಡಿದ ಚಿತ್ರಗಳು ಜೀವಂತವಾಗಿವೆ.

ಸರಳ ವ್ಯಕ್ತಿತ್ವಕ್ಕೆ ಇನ್ನೊಂದು ಹೆಸರೇ ಡಾಕ್ಟರ್ ರಾಜ್. ಪರ ಭಾಷೆಯ ಚಿತ್ರದ ನಿರ್ದೇಶಕರಿಂದ ಅನೇಕ ಅವಕಾಶಗಳು ರಾಜ್ ಅವರಿಗೆ ಬಂದಿತ್ತು. ಆದರೆ ರಾಜ್ ಕುಮಾರ್ ಅವರು ಪರ ಭಾಷೆಯ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಲಿಲ್ಲ. ಡಾಕ್ಟರ್ ರಾಜ್ ಅವರ ಭಾಷಾಭಿಮಾನವನ್ನು ಸಹ ನಾವು ಮೆಚ್ಚಿಕೊಳ್ಳಬೇಕಾಗುತ್ತದೆ. ಗೋಕಾಕ್ ಚಲುವಳಿಯಲ್ಲೂ ಸಹ ಡಾಕ್ಟರ್ ರಾಜ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here