ಬಡತನದಲ್ಲು ಪರಿಸರದ ಸಿರಿತನವನ್ನು ಮೆರೆದ ಪ್ರಕೃತಿ ಪ್ರೇಮಿ

0
749

ಹಸಿರೆ ಉಸಿರು ಎನ್ನುವ ತತ್ವವನ್ನು ಈ ವ್ಯಕ್ತಿ ಪ್ರತಿನಿತ್ಯ ಪಾಲಿಸುತ್ತ ಬರುತ್ತಿದ್ದಾರೆ. ದಾವಣಗೆರೆಯಲ್ಲಿ ಈ ಪ್ರಕೃತಿ ಪ್ರೇಮಿ ಮಾಡಿದ ಕೆಲಸವನ್ನು ನೋಡುತ್ತಿದ್ದರೆ ನಿಜಕ್ಕೂ ಸಂತಸವಾಗುತ್ತದೆ. ಮರ ಗಿಡಗಳನ್ನು ಸ್ವಂತ ಮಗುವಿನಂತೆ ಪೋಷಿಸುತ್ತಿದ್ದಾರೆ. ಸಾಲುಮರದ ತಿಮ್ಮಕ್ಕ ಸಾವಿರ ಸಸಿಗಳನ್ನು ನೆಡುವ ಮೂಲಕ ಸಾಧನೆಯನ್ನು ಮಾಡಿದ್ದರು. ಜನರು ವೀರಾಚಾರಿ, ಅವರನ್ನು ಸಾಲುಮರದ ವೀರಾಚಾರಿ ಎಂದು ಕರೆಯುತ್ತಿದ್ದಾರೆ. ಗಿಡ ಮರಗಳ ವಿಷಯದಲ್ಲಿ ವಿಶೇಷವಾದ ರೀತಿಯಲ್ಲಿ ಕಾಳಜಿಯನ್ನು ವಹಿಸಿ ಸಾಕಿ ಸಲಹುತ್ತಿದ್ದಾರೆ. ಮೊದಲು ಇವರು ಚಿತ್ರದುರ್ಗದ ಗ್ರಾಮವಾದ ನಂದಿಹಳ್ಳಿ ನಿವಾಸಿಯಾಗಿದ್ದರು. ಮುಂದೆ ಓದಿ

ಗ್ರಾಮ ಪಂಚಾಯಿತಿಯವರಿಗೆ ಸವಾಲನ್ನು ಹಾಕಿದ್ದರು

ನಂತರದ ದಿನಗಳಲ್ಲಿ ಕುಲಮೆ ಕೆಲಸ ಮಾಡಲು ದಾವಣಗೆರೆಯ ಜಿಲ್ಲೆಯಲ್ಲಿರುವ ಮಿಟ್ಟಲ ಗ್ರಾಮಕ್ಕೆ ಬರುತ್ತಾರೆ. ಪರಿಸರದ ಕುರಿತು ಹೆಚ್ಚು ಒಲವು ಇವರಿಗೆ ಇದ್ದ ಕಾರಣದಿಂದಾಗಿ, ಗ್ರಾಮ ಪಂಚಾಯಿತಿಯವರ ಹತ್ತಿರ, ಬಸ್ ನಿಲ್ದಾಣದ ಬಳಿ ಗಿಡ ನೆಡುವುದಕ್ಕಾಗಿ ಎರಡು ಗಿಡಗಳನ್ನು ಕೇಳಿದ್ದರು. ಆದರೆ ಗ್ರಾಮ ಪಂಚಾಯಿತಿಯವರು ಗಿಡವನ್ನು ನೀಡಲು ಒಪ್ಪಿರಲಿಲ್ಲ. ಇದರಿಂದ ಬೇಸರವಾದ ವೀರಾಚಾರಿ ಗ್ರಾಮ ಪಂಚಾಯಿತಿಯವರಿಗೆ ಸವಾಲನ್ನು ಹಾಕಿದ್ದರು. ಮುಂಬರುವ ದಿನಗಳಲ್ಲಿ ಇಡೀ ದಾವಣಗೆರೆ ಜಿಲ್ಲೆ ತುಂಬ ನಾನೊಬ್ಬನೆ ಗಿಡಗಳನ್ನು ನೆಡುವುದಾಗಿ ಪ್ರತಿಜ್ಞೆಯನ್ನು ಮಾಡಿದ್ದರು.

ಬಡತನದಲ್ಲೂ  ಪರಿಸರದ ಸಿರಿತನವನ್ನು ಮೆರೆದ ಪ್ರಕೃತಿ ಪ್ರೇಮಿ

ಅಂದು ಪಣತೊಟ್ಟ ವೀರಚಾರಿಯವರು ಸತತ 35 ವರ್ಷಗಳಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಅಧಿಕವಾದ ಗಿಡಗಳನ್ನು ನೆಟ್ಟಿದ್ದಾರೆ. ಗಿಡಗಳನ್ನು ನೆಡುವುದರ ಜೊತೆಗೆ ಗಿಡಗಳಿಗೆ ನೀರನ್ನು ಹಾಕಿ ಸುರಕ್ಷಿತವಾಗಿ, ಗಿಡಗಳಿಗೆ ತೊಂದರೆ ಆಗಲಾರದಂತೆ ಕಾವಲಾಗಿ ನೋಡಿಕೊಂಡಿದ್ದರು. ಬಡತನದಲ್ಲೂ ಇವರು ಪರಿಸರದ ಸಿರಿತನವನ್ನು ಮೆರಿದಿದ್ದಾರೆ. ಬಡತನದಲ್ಲಿದ್ದರು ಸಹ ಇವರು ತಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಿ ಅದರಿಂದ ಬಂದ ಹಣದಲ್ಲಿ ಗಿಡಗಳನ್ನು ಖರೀದಿಸಿದ್ದರು. ಇನ್ನು ಹೆಚ್ಚು ಗಿಡಗಳನ್ನು ರಸ್ತೆಯ ಬದಿಯಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ನೆಡಲು ಶುರು ಮಾಡಿದ್ದರು.

ಕುಟುಂಬದವರು ಸಹ ಕೈ ಜೋಡಿಸಿದ್ದರು

ಮೊದಲು ವೀರಾಚಾರಿಯವರು ಈ ಕೆಲಸವನ್ನು ಪ್ರಾರಂಭಿಸಿದ್ದಾಗ, ಜನರು ಇವರನ್ನು ನೋಡಿ ಗೇಲಿ ಮಾಡುತ್ತಿದ್ದರಂತೆ. ಆದರೆ ಜನರ ಮಾತುಗಳಿಗೆ ಕಿವಿ ಕೊಡದೆ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗಿದ್ದರು. ಆದರೆ ವೀರಾಚಾರಿ ಅವರು ನೆಟ್ಟ ಸಸಿಗಳು ಇಂದು ಮರವಾಗಿ ಬೆಳೆದು ನಿಂತಿದ್ದು, ಸಾಕಷ್ಟು ಜನರಿಗೆ ನೆರಳನ್ನು ನೀಡುತ್ತಿದೆ.

ಇನ್ನು ಗಿಡಗಳಿಂದಾಗಿ ಪ್ರಾಣಿ ಪಕ್ಷಿಗಳಿಗೂ ಸಹ ನೆರವಾಗಿದೆ. ಇವರ ಈ ಕಾರ್ಯವನ್ನು ಗುರುತಿಸಿದ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಇವರ ಕೆಲಸಕ್ಕೆ ಕುಟುಂಬದವರು ಸಹ ಕೈ ಜೋಡಿಸಿದ್ದರು. ಬಡತನದಲ್ಲು ಓಡವೆಗಳನ್ನು ಮಾರಿ ಗಿಡಗಳನ್ನು ತರುತ್ತಿದ್ದರು. ಆದರೂ ನಾವು ವಿರೋಧಿಸಿರಲಿಲ್ಲ ಎಂದು ಪ್ರಕೃತಿ ಪ್ರೇಮಿಯ ಪತ್ನಿಯಾದ ಅನುಸೂಯಮ್ಮ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here