3000ಕ್ಕಿಂತಲೂ ಹೆಚ್ಚು ಪುಶ್ ಅಪ್ಸ್ ಮಾಡಿ ಐಷಾರಾಮಿ ಅಪಾರ್ಟ್ಮೆಂಟ್ ಗೆದ್ದ 6ರ ಪೋರ

0
2884
6 year boy

ವ್ಯಾಯಾಮ ಮಾಡೋದು, ಯೋಗಾಭ್ಯಾಸ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟ. ಯಾಕಂದ್ರೆ ಅದು ನಮ್ಮ ಆರೋಗ್ಯ ಕಾಪಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತಾಗುತ್ತದೆ. ಹಾಗಾಗಿ ವ್ಯಾಯಾಮ ಮಾಡೋದು ಅಥವಾ ಜಿಮ್ ಗೆ ಹೋಗೋದು ಇದನ್ನೆಲ್ಲಾ ಮಾಡುತ್ತಲೆ ಇರುತ್ತಾರೆ. ಆದ್ರೆ ಇದನ್ನೆಲ್ಲಾ ಸ್ವಲ್ಪ ಬುದ್ದಿ ಬಂದಿರುವಂತಹ ದೊಡ್ಡವರು ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ೬ ವರ್ಷದ ಪೋರ, ಯಾರು ಮಾಡದಂತ ಅಚ್ಚರಿ ಕೆಲಸವನ್ನು ಮಾಡಿದ್ದಾನೆ. ಹೌದು. ದೊಡ್ಡವರಿಂದಲೂ ಆಗದಿರುವಂತಹ ಕೆಲಸವನ್ನು ಇವನು ಮಾಡಿದ್ದಾನೆ. ತನ್ನ ವಯಸ್ಸಿಗೆ ಮೂರು ಸಾವಿರಕ್ಕೂ ಹೆಚ್ಚು ಪುಶ್ ಅಪ್ಸ್ ಮಾಡಿದ್ದಾನೆ. ಹೌದು. 6 ವರ್ಷದ ಈ ಬಾಲಕ ಮೂರು ಸಾವಿರಕ್ಕಿಂದಲೂ ಹೆಚ್ಚಿನ ಪುಶ್ ಅಪ್ಸ್ ಮಾಡಿ, ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಗೆದ್ದಿದ್ದಾನೆ. ಜೊತೆಗೆ ದಾಖಲೆ ಪುಸ್ತಕಕ್ಕೆ ಸೇರಿದ್ದಾನೆ.

ಮೂರು ಸಾವಿರಕ್ಕಿಂತಲೂ ಹೆಚ್ಚು ಪುಶ್ ಅಪ್ಸ್ ಮಾಡಿದ 6ರ ಪೋರ

ಈ ಪೋರನ ಹೆಸರು ಇಬ್ರಾಹಿಂ ಲ್ಯೋನೋವ್. ಇವನು ಮೂಲತಃ ರಷ್ಯಾದ ನೋವಿ ರೆದಾಂತ್ ನಿವಾಸಿ. ಇವನಿಗೆ ಈಗ ಸರಿಯಾಗಿ 6 ವರ್ಷ. ಇವನು ತನ್ನ ವಯಸ್ಸಿಗೆ ಆಟ ಆಡಿಕೊಂಡು ಲೈಫ್ ಎಂಜಾಯ್ ಮಾಡಬೇಕು. ಆದ್ರೆ ದೊಡ್ಡವರ ಕೈಯಲ್ಲೂ ಆಗದೆ ಇರುವಂತಹ ಕೆಲಸವನ್ನು ಮಾಡಿ, ಎಲ್ಲರಿಂದ ಶಬ್ಬಾಸ್ ಎನಿಸಿಕೊಂಡಿದ್ದಾನೆ. ಹೌದು. ಒಂದು ನಿಮಿಷವೂ ಬಿಡುವಿಲ್ಲದೆ, ಬರೋಬ್ಬರಿ 3,270 ಪುಶ್ ಅಪ್ಸ್ ಮಾಡಿದ್ದಾನೆ. ಇನ್ನು ಈ ಬಗ್ಗೆ ಮೊದಲು ಯಾರು ನಂಬಿರಲಿಲ್ಲ. ಹಾಗಾಗಿ ಇದೇ ವಿಚಾರವಾಗಿ ಒಂದು ಸ್ಪರ್ಧೆ ಏರ್ಪಡಿಸಿದ್ದರು. ಸ್ಪರ್ಧೆಯಲ್ಲಿ ಈ ಪೋರ ತನ್ನ ಕೈ ಚಳಕ ತೋರಿಸಿದ್ದಾನೆ. ಹೌದು. ಈ ಬಾಲಕ ಈ ರೀತಿ ಪುಶ್ ಅಪ್ಸ್ ಮಾಡುತ್ತಾನೆ ಅನ್ನೋದನ್ನು ತಿಳಿದ ಕೆಲವು ಕ್ರೀಡಾಪಟುಗಳು ಸ್ಪರ್ಧೆ ಏರ್ಪಡಿಸಿದ್ದರು. ಅದರಲ್ಲಿ ಗೆದ್ದು, ಈಗ ದೊಡ್ಡ ಐಷಾರಾಮಿ ಅಪಾರ್ಟ್ಮೆಂಟ್ ಗೆದ್ದಿದ್ದಾನೆ.

ಐಷಾರಾಮಿ ಅಪಾರ್ಟ್ಮೆಂಟ್ ಗೆದ್ದ ಪುಟ್ಟ ಪೋರ

ಇನ್ನೂ ಇಬ್ರಾಹಿಂ ಹಾಗೂ ಆತನ ತಂದೆ ಇಬ್ಬರೂ ಕ್ರೀಡಾ ಕ್ಲಬ್‍ನ ಸದಸ್ಯರು. ಮೊದಲಿನಿಂದಲೂ ಇವರ ತಂದೆಗೆ ಈ ಪುಶ್ ಅಪ್ಸ್ ಬಗ್ಗೆ ಬಹಳಷ್ಟು ಆಸಕ್ತಿ ಇತ್ತು. ಹಾಗಾಗಿ ಈ ಪುಶ್ ಅಪ್ಸ್ ಸ್ಪರ್ಧೆಗಾಗಿ ಬಹಳಷ್ಟು ಶ್ರಮಿಸಿದ್ದರು. ಇನ್ನೂ ಇಬ್ರಾಹಿಂ ಲ್ಯೋನೋವ್ ಕೂಡ ತನಗೆ ಬಂದಿದ್ದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸತತ 3,270 ಪುಶ್ ಅಪ್ಸ್ ಮಾಡಿ ತನ್ನ ಫಿಟ್ನೆಸ್ ನಿಂದಲೇ ಸ್ಥಳೀಯ ಕ್ರೀಡಾ ಸಂಸ್ಥೆಯ ಗಮನ ಸೆಳೆದಿದ್ದಾನೆ. ಬಾಲಕನ ಫಿಟ್ನೆಸ್ ಕಂಡು ಆಶ್ಚರ್ಯಪಟ್ಟ ಕ್ರೀಡಾ ಸಂಸ್ಥೆ ಇಬ್ರಾಹಿಂಗೆ ದೊಡ್ಡ ಐಶಾರಾಮಿ ಅಪಾರ್ಟ್‌ಮೆಂಟ್‌ ಒಂದನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದೆ. ಇನ್ನೂ ಇದೇ ರೀತಿ 2018ರಲ್ಲಿ 5 ವರ್ಷದ ಬಾಲಕನೊಬ್ಬ ಬರೋಬ್ಬರಿ 4,150 ಪುಶ್ ಅಪ್ಸ್ ಮಾಡುವ ಮೂಲಕ ಮರ್ಸಿಡೀಸ್ ಕಾರನ್ನು ಗೆದ್ದಿದ್ದನು. ಈ ವೇಳೆ ರಷ್ಯಾದ ಪ್ರಧಾನಿ ಅವರು ಬಾಲಕನಿಗೆ ಈ ಕಾರಿನ ಕೀಯನ್ನು ಹಸ್ತಾಂತರಿಸಿದ್ದರು. ಈಗ ಈ ಬಾಲಕ ಐಷಾರಾಮಿ ಅಪಾರ್ಟ್ಮೆಂಟ್ ಪಡೆಯುವುದರ ಜೊತೆಗೆ ದಾಖಲೆ ಪುಸ್ತಕಕ್ಕೆ ಸೇರಿದ್ದಾನೆ.

ರಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಇಬ್ರಾಹಿಂ

ಇಬ್ರಾಹಿಂ ನ ಈ ಅಸಾಧಾರಣ ಕೆಲಸಕ್ಕೆ ಕ್ರೀಡಾ ಸಂಸ್ಥೆಯವರು ದೊಡ್ಡ ಅಪಾರ್ಟ್ಮೆಂಟ್ ನೀಡಿದ್ದಾರೆ. ಜೊತೆಗೆ ರಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲೆ ನಿರ್ಮಿಸಿದ್ದಾನೆ. ಹೌದು. ಚಿಕ್ಕ ವಯಸ್ಸಿನಲ್ಲೆ ಈ ರೀತಿ ಅಸಾಮಾನ್ಯ ಸಾಧನೆ ಮಾಡಿರುವ ಬಾಲಕ ದಾಖಲೆ ಸೃಷ್ಟಿಸಿದ್ದಾನೆ. ಈ ದೇಶದಲ್ಲಿ ಈ ರೀತಿಯ ಅಸಾಮಾನ್ಯ ಕಾರ್ಯಕ್ಕೆ ಕೈ ಹಾಕುವುದು ಸಾಮಾನ್ಯ. ಈಗಾಗಲೇ ಸಾಕಷ್ಟು ಮಕ್ಕಳು ಈ ರೀತಿಯ ಪುಶ್ ಅಪ್ಸ್ ಮಾಡಿದ್ದಾರೆ. ಹೌದು. ಇಬ್ರಾಹಿಂ ಮಾತ್ರವಲ್ಲ ಇಲ್ಲಿನ ಹಲವು ಮಕ್ಕಳು ಈ ರೀತಿ ಪುಶ್ ಅಪ್ಸ್ ಸ್ಪರ್ಧೆಯಲ್ಲಿ ಗೆದ್ದು ಐಶಾರಾಮಿ ಉಡುಗೊರೆಯನ್ನು ಪಡೆದಿದ್ದಾರೆ. ಈಗ ಅದರ ಸಲಿಗೆ ಇಬ್ರಾಹಿಂ ಕೂಡ ಸೇರಿದ್ದಾನೆ. ಇನ್ನೂ ಈ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿರೋದ್ರಿಂದ, ಜನರು ಇಬ್ರಾಹಿಂ ಗೆ ಶುಭ ಹಾರೈಸುತ್ತಿದ್ದಾರೆ.

ನಿಜಕ್ಕೂ ಇಂಥ ಅಚ್ಚರಿಯನ್ನು ನೋಡಿದಾಗ ಒಂದು ಕ್ಷಣ ಆಶ್ಚರ್ಯವಾಗುತ್ತದೆ. ಯಾಕಂದ್ರೆ, 6 ವರ್ಷದ ಪೋರ ಈ ರೀತಿಯ ಅಸಾಮಾನ್ಯ ಕೆಲಸ ಮಾಡಿದ್ದಾನೆ ಅಂದ್ರೆ, ನಿಜಕ್ಕೂ ಎಲ್ಲರೂ ಬಾಯಿಯ ಮೇಲೆ ಬೆರಳಿಟ್ಟು, ನೋಡುತ್ತಾರೆ.

LEAVE A REPLY

Please enter your comment!
Please enter your name here