ಸಂಜೆಯ ಬಣ್ಣಕ್ಕೆ ರಂಗು ಹಚ್ಚಲೆಂದೇ ಹೂ ಮಾರಲು ಬರುತ್ತಿದ್ದ ಆ ಹುಡುಗಿ

An Evening Girl

This is neither a story of an evening girl nor it has any kind of instances close to reality; just a flow of words, expressions and perceptions put out connecting them to the life around. Have a read.

ಮಲ್ಲಿಗೆ ಸೊಗಸು ಕಣ್ರೀ. ಅದೇನ್ ಪರಿಮಳ ಅದರದ್ದು. ಜಾಸ್ಮಿನ್ ಅಂತಾರೆ ನೋಡಿ, ನಮ್ಮ ಮಲ್ಲಿಗೆ ಅಂದರೆ ಅದೇನೋ ಬಿಡುವಿಲ್ಲದ ಆಪ್ತತೆ ನನಗೆ. ನನ್ನ ಹುಡುಗಿ ಹೆಸರು ಮಲ್ಲಿಗೆ ಮತ್ತು ಅಮ್ಮ ನ ಇಷ್ಟದ ಹೂ ಸಹ ಮಲ್ಲಿಗೆ. ಮನೆಯ ಹಿತ್ತಲಲ್ಲಿ ಬಿಟ್ಟ ಮಲ್ಲಿಗೆ ಮೊಗ್ಗಿನಿಂದ ಜಡೆ ಹೆಣೆದು, ಗಂಡು ಮಗುವಾದ ನನ್ನನ್ನು ತುಸು ಹೊತ್ತಿಗೆ ಹೆಣ್ಣಾಗಿಸಿದ ಆ ಬಾಲ್ಯ, ಇನ್ನೂ ಆಗಷ್ಟೇ ಮಳೆ ನಿಂತು ತೇವ ಗೊಂಡ ನೆಲದ ಹಾಗೆ ಹಸಿ ಯಾಗಿದೆ.

A Evening girl

An Evening Girl in Bus Stand

ಊರಿನ ಹಳೆ Bus Stand ನಲ್ಲಿ, ಸಂಜೆಯ ಬಣ್ಣಕ್ಕೆ ರಂಗು ಹಚ್ಚಲೆಂದೇ ಹೂ ಮಾರಲು ಬರುತ್ತಿದ್ದ ಆ ಹುಡುಗಿ ಇನ್ನೂ ಮಾಸದ ನೆನಪು. ಬುಟ್ಟಿ ತುಂಬಾ ದುಂಡು ಮಲ್ಲಿಗೆ ಮತ್ತು ಮುಖದ ಮೇಲೆ ಸಣ್ಣ ಕಿರು ನಗೆ. ರೂಪವತಿ ಏನೂ ಅಲ್ಲ ಆದರೆ ಅವಳ ಇರುವಿಕೆ ಖುಷಿ ಕೊಡುತಿತ್ತು. ಸ್ವಲ್ಪ ಹೊತ್ತು ಹರಟುತ್ತಿದ್ದೆವು, ನಗುತ್ತಿದ್ದೆವು, ಮತ್ತು ಯಾರೋ ಬರಬಹುದು ಎಂದು ಆ ತಿರುವಿನ ದಿಗಂತಕ್ಕೆ ಮುಖ ಮಾಡಿ ಸುಮ್ಮನೆ ಕಾಯುತ್ತಾ ಕೂತು ಬಿಡುತ್ತಿದ್ದೆವು. ಆ ದಿನಗಳು ಈಗಲೂ ಕಾಡುತ್ತವೆ ಮತ್ತು ಕಂಡರಿಯದ ರೂಪಕಗಳಿಗೆ ತಾಕಿಸಿ ಮೌನ ತೀರಕ್ಕೆ ನನ್ನನ್ನು ಒಂಟಿ ಮಾಡಿ ಹೋಗುತ್ತವೆ.

Advertisements

ಒಂದು ಹುಡುಗಿಯ ಸುಂದರ ಮುಡಿಯನ್ನು ಸೇರುವ ಆ ಮಲ್ಲಿಗೆ, ಆಗಂತುಕನ ಪಾದ ಸೇರಿ ಪಾವನವಾಗುವ ಆ ಮಲ್ಲಿಗೆ ಮತ್ತು ಶವ ಯಾತ್ರೆಯ ಮಲ್ಲಿಗೆಯ ನಡುವೆ ಜೀವನ ಬಂದು ನಿಂತಾಗ ಸಾವಿರ ಕಂಬದ ಪ್ರಶ್ನೆಯ ಮನೆಯಲ್ಲಿ ನಾನು ಮತ್ತೆ ಒಂಟಿ.

an evening girl - pillars

ಅರೇ! ಜೀವನ ಶವ ಯಾತ್ರೆಯ ಮಲ್ಲಿಗೆ ಹೂವಾಗಿ ಹೋಯಿತೇ?

ಅದೆಷ್ಟೋ ತಾಕಲಾಟಕ್ಕೆ ಸಿಲುಕಿ ಕುಂಟುತ್ತಾ ಓಡುತ್ತಾ ಬೀಳುತ್ತಾ ಸಾಗುವ ಈ ಜೀವನದಲ್ಲಿ ಮಲ್ಲಿಗೆ ಮತ್ತೆ ಕಂಪಿಸುವಳೇ? ಅಮ್ಮನ ಇಷ್ಟದ ಹೂವು ಬಾಡದಂತೆ ಕಾಪಾಡಿಕೊಳ್ಳುತ್ತೇನೆ ಆದರೂ ಅದರ ಘಮ ಉಳಿಸಿ ಕೊಳ್ಳ ಬಲ್ಲೆನೇ? ಮಲ್ಲಿಗೆ ಹೂವೇ ನಾನು, ಆದರೆ ಶವಯಾತ್ರೆಯ ಮಲ್ಲಿಗೆ ಆಗಲಾರೆನು. ಕೊನೆ ಉಸಿರಿನ ತಾಪಕ್ಕೆ ಕಾಯುವ ಆ ಜೀವ ಇದ್ದಾಗ ಸುಖ ಕೊಡಲು ಇಷ್ಟ ಪಡುತ್ತೇನೆಯೇ ಹೊರತು ದೀಪ ಆರಿದ ಮೇಲೆ ಉಳಿಯುವ ಅಗೋಚರ ಕತ್ತಲು ನಾನಾಗಲಾರೆ.

ಶವದ ಮೇಲೆ ಇದ್ದರೂ ಗುಡಿಯ ಅಂಗಳಲ್ಲಿ ಬಿದ್ದರೂ ಮಲ್ಲಿಗೆ ಮಲ್ಲಿಗೆ ನೇ ಆದರೆ ಸಮಾಜ ಅದನ್ನು ನೋಡುವ ಪರಿ ಭಯ ಹುಟ್ಟಿಸುತ್ತದೆ. ಶವಯಾತ್ರೆಯ ಮಲ್ಲಿಗೆ ಹೂವು ಮೈಲಿಗೆ ಆದರೆ ದೇವರ ಪ್ರಸಾದ ರೂಪದಲ್ಲಿ ಬಂದ ಮಲ್ಲಿಗೆ ಪಾವನ ರೂಪಿ. ಯಾಕೆ, ಎಷ್ಟೋ ಜನಗಳ ಮನದಲ್ಲಿ ದೇವರೂ ದಿವಂಗತನೇ. ಅವರವರ ಭಾವಕ್ಕೆ ಎಂದು ಸುಮ್ಮನೆ ಇರುವುದೋ ಅಥವಾ ಕೆಣಕಿ ಘಾಸಿ ಮಾಡಿಕೊಂಡು ಆಧ್ಯಾತ್ಮದ ಉಪಚಾರ ಮಾಡುವುದೋ , ಪ್ರಶ್ನೆಗಳು ಸಾವಿರಾರು.

Advertisements

An Evening girl - Jasmine

ಒಬ್ಬ ವೇಶ್ಯೆಗೂ ಅಭಧ್ರತೆಯೇ? ಯಾವ ರೀತಿಯದ್ದು? ಮಾನದ್ದೇ ಅಥವಾ ಪ್ರಾಣದ್ದೇ? ಮಠಗಳಲ್ಲಿ ಮಾರುಕಟ್ಟೆ, ಬಾರಿನಲ್ಲಿ ದೇವರ ಹುಡುಕಾಟ, ಬರೀ ರಾತ್ರಿಗಳಿಗೆ ಮೀಸಲಾದ ಪ್ರೇಮ, ಜ್ಯೋತಿಷ್ಯದ ನಾಳೆಗಳು ಮತ್ತು ಇಂದಿನ ಸಾಧಕರು – ಬದುಕು ಐಟಂ ಸಾಂಗ್ ಕೆಟ್ಟ್ ಹೋಯಿತು. ಕಿಕ್ ಇರತ್ತೆ ಆದರೆ ಸುಖ ಇರಲ್ಲ.

ಒಮ್ಮೆ ಹೊಗಳುವ ಜನ ಇನ್ನೊಮ್ಮೆ ಕೀಳಾಗಿಸುತ್ತಾರೆ. ಅಂದು ಬೆನ್ನು ತಟ್ಟಿದ ಕೈ ಇಂದು ಚೂರಿ ಹಿಡಿಯುತ್ತದೆ. ಸಾಗುತ್ತಾ ಸುಮಾರು ದೂರ ಬಂದಿರುವೆ. ಸಾಕು ಎಂದಾಗಲೇ ಬದುಕು ಇನ್ನಷ್ಟು ಬೇಕು. ಸಂಬಂಧಗಳು ಬೇಕು, ಸ್ಪಂದಿಸುವ ಮನಸ್ಸುಗಳು ಬೇಕು ಮತ್ತು ಹುಣ್ಣಿಮೆ ರಾತ್ರಿಯ ಚಂದಿರನನ್ನು ನೋಡಲು ಜೊತೆಯಾಗುವ ಗೆಳತಿ ಬೇಕು.

An evening girl - full moon

ಈಗ ಊರಿನ ಅದೇ ಹಳೆ ಬಸ್ ಸ್ಟಾಂಡ್ ನಲ್ಲಿ ನಿಂತು ಕಾದರೂ ಆ ಹೂ ಮಾರುವ ಹುಡುಗಿ ಬರುವ ಲಕ್ಷಣಗಳಿಲ್ಲ. ಸಂಜೆ ಜಾರುತಿದೆ. ಮತ್ತೆ ತಿರುವಿನ ದಿಗಂತಕ್ಕೆ ಮುಖ ಮಾಡಿ ಕೂತಿದ್ದೇನೆ. ನೋಡೋಣ. ಯಾರಾದರು ಬರುತ್ತಾರಾ ಎಂದು.

Advertisements

ಓದಲು ಸಮಯ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಈ ಬರಹದ ಬಗ್ಗೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ನಿಮಗೆ ಇಷ್ಟವಾದಲ್ಲಿ ಈ ರೀತಿಯ ಅಂಕಣಕಗಳನ್ನು ಹೆಚ್ಚಾಗಿ ಪ್ರಕಟಿಸಲು ಇಷ್ಟ ಪಡುತ್ತೇವೆ.