17 unknown things about Karnataka / ಕರ್ನಾಟಕ ಮತ್ತು ಕನ್ನಡ ಭಾಷೆಯ ಬಗ್ಗೆ ನೀವು ಹೆಮ್ಮೆ ಪಡುವಂತಹ 17 ರೋಚಕ ವಿಷಯಗಳು

unknown things about karnataka

ಕನ್ನಡ ಎಂದರೆ ನೊರೆ ಹಾಲು ಕುಡಿದಂತೆ, ಸಿಹಿ ಜೇನು ಸವಿದಂತೆ. ಪ್ರಪಂಚದ ಬಹು ಪ್ರಾಚೀನ ಬಾಷೆಗಳಲ್ಲಿ ಒಂದಾದ ಕನ್ನಡ, ನಮ್ಮೆಲ್ಲರ ಪಾಲಿಗೆ ಬರೀ ಭಾಷೆ ಅಲ್ಲ, ಒಂದು ಭಾವವೇ ಎಂದರೆ ತಪ್ಪಾಗಲಾರದು. ಕರ್ನಾಟಕದ ರಾಜ್ಯ ಭಾಷೆ ಹಾಗೂ ಕನ್ನಡಿಗರ ಹೃದಯ ಬಾಷೆಯಾಗಿರುವ ಕನ್ನಡ ತನ್ನ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಹೆಸರು ವಾಸಿ. ಕುವೆಂಪು ಇಂದ ಕಂಬಾರರ ವರೆಗೆ, ಡಾ. ರಾಜಕುಮಾರ್ ರಿಂದ ಪಂಡಿತ್ ಭೀಮಸೇನ್ ಜೋಶಿ ವರೆಗೆ, ಮತ್ತು ಗುಬ್ಬಿ ವೀರಣ್ಣ ರಿಂದ ಶಂಕರ್ ನಾಗ್ ವರೆಗೆ, ಅದೆಷ್ಟೋ ಶ್ರೇಷ್ಠರು ಕರ್ನಾಟಕ ವನ್ನು ಮತ್ತು ಕನ್ನಡವನ್ನು ಭಾರತದ ಭೂ ಪಟದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ. ಈ ಸಾಲಿಗೆ ಕನ್ನಡವನ್ನು ಸುಲಲಿತವಾಗಿ ಮಾತನಾಡುವ ಪ್ರತಿಯೊಬ್ಬ ಕನ್ನಡಿಗನೂ ಸಹ ಸೇರುತ್ತಾನೆ.

ನೀವು ಕರ್ನಾಟಕದ ಬಗ್ಗೆ ಮತ್ತು ಕನ್ನಡ ಭಾಷೆಯ ಹಿರಿಮೆಯ ಬಗ್ಗೆ ಓದಿರಬಹುದು ಆದರೂ ಎಲ್ಲೋ ಹಲವು ವಿಷಯಗಳು ನಮ್ಮ ಗಮನಕ್ಕೆ ಬಂದೇ ಇರಲ್ಲ. ಇಂದು ನಾವು ಕನ್ನಡ ಮತ್ತು ಕನ್ನಡ ನಾಡಿನ ಬಗ್ಗೆ ಇರುವ ಕೆಲವು ವಿಷಯಗಳನ್ನು ಹೊತ್ತು ನಿಮ್ಮ ಮುಂದೆ ಬಂದಿದ್ದೇವೆ. ಇದನ್ನು ಓದಿದ ಮೇಲೆ, ನಾನೂ ಒಬ್ಬ ಕನ್ನಡಿಗ ಎಂದು ಹೇಳಲು ನೀವು ಹೆಮ್ಮ ಪಡುತ್ತೀರಿ ಮತ್ತು ಅದರಲ್ಲಿ ಅನುಮಾನವೇ ಇಲ್ಲ.

Advertisements

Click Here to Read this Article in English – Unknown Things about Karnataka and Kannada

ದಕ್ಷಿಣ ಭಾರತದ ಪ್ರಸಿದ್ಧ ತಿಂಡಿಗಳನ್ನು ಈ ಜಗತ್ತಿಗೆ ಪರಿಚಯಿಸಿದ್ದು ಕನ್ನಡಿಗರು

ನಿಮಗೆ ಗೊತ್ತೇ, ರವೇ ಇಡ್ಲಿಯು ಮೊಟ್ಟ ಮೊದಲ ಬಾರಿಗೆ ತಯಾರಾಗಿದ್ದು ಕರ್ನಾಟಕದಲ್ಲಿ ಎಂದು? ಎರಡನೇ ಮಹಾಯುದ್ಧದ ಸಮಯದಲ್ಲಿ, ಇಡ್ಲಿ ಮಾಡಲು ಅಕ್ಕಿ ಕಮ್ಮಿ ಬೀಳುತ್ತದೆ. ಆಗ ಮ್. ಟಿ. ಆರ್ . ಅವರು ಸೀಮೋಲೀನಾ ಎಂಬ ಪದಾರ್ಥವನ್ನು ಬಳಸಿ ಒಂದು ಪ್ರಯೋಗ ಮಾಡುತ್ತಾರೆ. ಆ ಪ್ರಯೋಗ ದಲ್ಲಿ ಹುಟ್ಟಿಕೊಂಡಿದ್ದೇ ಇಂದಿನ ಜನಪ್ರಿಯ ತಿಂಡಿಯಾದ ರವೇ ಇಡ್ಲಿ.

ಮಸಾಲೆ ದೋಸೆ ಯಾರು ತಾನೇ ತಿಂದಿರಲ್ಲ? ನೆನ್ಸ್ಗೊಂಡ್ರೆ ಸಾಕು ಬಾಯಲ್ಲಿ ನೀರೂರಿಸುವ ಈ ತಿಂಡಿಯ ಬಗ್ಗೆ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ. ಇದನ್ನು ಪರಿಚಯಿಸಿದ್ದು ಸಹ ಕನ್ನಡಿಗರೇ ಮತ್ತು ಈ ಸಾಲಿಗೆ ರಾಗಿ ಮುದ್ದೆ, ಚಿತ್ರನ್ನ ,ಜೋಳದ ರೊಟ್ಟಿ,,ಮಿರ್ಚಿ ಬೋಂಡಾ, ಮತ್ತು ಮೈಸೂರು ಪಾಕ್ ನಂತಹ ತಿಂಡಿಗಳೂ ಸೇರುತ್ತವೆ. ಅದಿಕ್ಕ ಅಲ್ವೇ ಹೇಳೋದು, ಕನ್ನಡ ಭಾಷೆ ಚೆಂದ ಮತ್ತು ಕನ್ನಡದ ಊಟ ಬಲು ಚೆಂದ ಎಂದು.

Advertisements

unknown things about karnataka

ಕರ್ನಾಟಕ ಭಾರತದ ಬಹು ದೊಡ್ಡ ಕಾಫಿ ರಫ್ತು ಮಾಡುವ ರಾಜ್ಯಗಳಲ್ಲಿ ಒಂದು

ಬಾಬಬುಡಂಗಿರಿ, ಕೊಡಗು, ಚಿಕ್ಕಮಗಳೂರು, ಮತ್ತು ಹಾಸನ ಇರಬೇಕಾದರೆ, ಕಾಫಿ ರಫ್ತಿಗೆ, ಕರ್ನಾಟಕ ಒಂದು ಡಾರ್ಲಿಂಗ್ ಸ್ಟೇಟ್ ಎಂದೇ ಹೇಳಬಹುದು. ಆಹಾ! ಚಿಕ್ಕಮಗಳೂರ್ ಕಾಫಿ ಯಾರಿಗೆ ತಾನೇ ಇಷ್ಟ ಇಲ್ಲ? ಅದು ಸವಿದವರಿಗೇ ಗೊತ್ತು.

karnataka

ಬೇರೆ ರಾಜ್ಯದವರಿಗೆ ತಿರುಪತಿ, ಅಮ್ರಿತ್ಸರ್ ಇರಬಹುದು ಆದರೆ ಕರ್ನಾಟಕ ದಲ್ಲಿ ಕುಕ್ಕೆ ಸುಬ್ರಮಣ್ಯ ಇದೆ ಸ್ವಾಮಿ

ಭಾರತದ ಅತೀ ಹೆಚ್ಚು ಜನರನ್ನು ಆಕರ್ಷಿಸುವ ಧಾರ್ಮಿಕ ಕೇಂದ್ರಗಳೆಂದರೆ ತಿರುಪತಿ ಮತ್ತು ಅಮ್ರಿತ್ಸರ್. ಆದರೆ ನಿಮಗೆ ಗೊತ್ತಿರಲಿ, ನಮ್ಮ ಕುಕ್ಕೆ ಏನೂ ಕಮ್ಮಿ ಇಲ್ಲ. ಸುಬ್ರಮಣ್ಯನ ದರ್ಶನಕ್ಕಾಗಿ ಜನಸಾಗರವೇ ಹರಿದು ಬರುತ್ತದೆ. ಗಣ್ಯ ವ್ಯಕ್ತಿಗಳಿಂದ ಹಿಡಿದು ಸಾಮಾನ್ಯ ಜನರ ವರೆಗೂ, ಕುಕ್ಕೆ ಎಂದರೆ ಒಂದು ಶಕ್ತಿ ಕೇಂದ್ರ. ಸರ್ಪ ದೋಷ ಮತ್ತು ಹಲವಾರು ಧಾರ್ಮಿಕ ಮಹತ್ವಕ್ಕೆ ಕರ್ನಾಟಕದ ಕುಕ್ಕೆ ಹೆಸರು ವಾಸಿ.

unknown things about karnataka

ಎಲೆಕ್ಷನ್ ನಲ್ಲಿ ಬಳಸುವ ಬ್ಲಾಕ್ ಇಂಕ್ ತಾಯಾರಾಗುವುದು ಕರ್ನಾಟಕ ದಲ್ಲಿ

ಮೈಸೂರ್ ಪೇಂಟ್ಸ್ ಮತ್ತು ವರಿನ್ಸ್ ಲಿಮಿಟೆಡ್ ಗಳು ಮಾತ್ರ ಅಧಿಕೃತ ಕೇಂದ್ರಗಳು ಮತ್ತು ಇವುಗಳಿಗೆ ಮಾತ್ರ ಎಲೆಕ್ಷನ್ ಗಳಲ್ಲಿ ಬಳಸುವ ಇಂಕ್ ಅನ್ನು ತಯಾರಿಸುವ ಹಕ್ಕು ಇರುತ್ತದೆ. ಅರೇ, ಇದು ನಿಮಗೆ ಗೊತ್ತಿತ್ತೇ?

Advertisements

unknown things about karnataka

ಕರ್ನಾಟಕದ ಒಂದು ರಾಜ್ಯದಲ್ಲಿ ಹರಿಯುತ್ತವೆ ಪಂಚ ಪುಣ್ಯ ನದಿಗಳು

ನಿಮಗೆಲ್ಲ ಗೊತ್ತಿರೋ ಹಾಗೆ, ಪಂಜಾಬನ್ನು ೫ ನದಿಗಳ ರಾಜ್ಯ ಎಂದು ಕರಿಯುತ್ತಾರೆ ಆದರೆ ಕರ್ನಾಟಕದ ಒಂದು ಜಿಲ್ಲೆಯಲ್ಲಿ ೫ ನದಿಗಳು ಇದೆ ಎಂದರೆ ನೀವು ನಂಬಲೇ ಬೇಕು. ಹೌದು ವಿಜಾಪುರ ಜಿಲ್ಲೆಯಲ್ಲಿ ಹರಿಯುತ್ತವೆ ಕೃಷ್ಣ, ಭೀಮ, ದೋಣಿ ಮತ್ತು ಉಪ ನದಿಗಳು.

ಇಂಜಿನಿಯರ್ ಡೇ ಆಚರಿಸುವದು ಒಬ್ಬ ಕನ್ನಡಿಗನ ನೆನಪಿನಲ್ಲಿ

ಯಾರ ಹೆಸರು ಕೇಳಿದರೆ ಹಾಗೆ ಒಂದು ಮಿಂಚಿನಂಥ ಸಂಚಲನ ಉಂಟಾಗುತ್ತದೋ ಮತ್ತು ಪ್ರತಿಯೊಬ್ಬ ಕನ್ನಡಿಗನ ಎದೆ ಗರ್ವದಿಂದ ಉಬ್ಬುತ್ತದೋ, ಆ ಹೆಸರೇ ಶ್ರೀ. ಸರ್. ಎಂ. ವಿಶ್ವೇಶ್ವರಯ್ಯ. ಭಾರತದ ಎಷ್ಟೋ ಕಟ್ಟಡಗಳು ಮತ್ತು ಕರ್ನಾಟಕದ ಕೆ.ರ್.ಸ್ ಆಣೆಕಟ್ಟಿನ ಹಿಂದಿರುವ ವ್ಯಕ್ತಿ, ಕರ್ನಾಟಕದ ಹೆಮ್ಮೆಯ ಇಂಜಿನಿಯರ್.

unknown things about karnataka

ಅತೀ ಹೆಚ್ಚು ಹುಲಿಗಳು ಇರುವ ರಾಜ್ಯ ಎಂದರೆ ನಮ್ಮ ಕರ್ನಾಟಕ

ನ್ಯಾಷನಲ್ ಟೈಗರ್ ಸೆನ್ಸಸ್ ರಿಪೋರ್ಟ್, ೨೦೧೪ ರ ಪ್ರಾಕಾರ, ಕರ್ನಾಟಕ, ಹೆಚ್ಚು ಹುಲಿಗಳನ್ನು ಹೊಂದಿರುವ ಏಕೈಕ ರಾಜ್ಯ. ‘ಹುಲಿಗಳನ್ನು ಸಂರಕ್ಷಿಸಿ’ ಎಂಬ ಕೂಗು ಕೇಳಿ ಬರುತ್ತಿರುವ ಸಮಯದಲ್ಲಿ, ನಾವು ಈ ನಿಟ್ಟಿನಲ್ಲಿ ಕೈಕೊಂಡಿರುವ ಕಾರ್ಯ ನಿಜಕ್ಕೂ ಪ್ರಸಂಶೆಗೆ ಅರ್ಹ.

Advertisements

karnataka

ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಭಾರತದ ಹೆಮ್ಮೆ

ಭಾರತದ ಅತೀ ಪುರಾತನವಾದ ಗ್ರಂಥಾಲಯಗಳಲ್ಲಿ ಒಂದಾದ, ಈ ಓರಿಯೆಂಟಲ್ ಇನ್ಸ್ಟಿಟ್ಯೂಟ್ ನಲ್ಲಿ ಚಾಣಕ್ಯ ನ ಅರ್ಥಶಾಸ್ತ್ರದ ಮನು ಲಿಪಿ ಇದೆ. ಇದು ನಿಮಗೆ ಬೇರೆ ಎಲ್ಲಿಯೂ ನೋಡಲು ಸಿಗುವುದಿಲ್ಲ. ಸಮಯ ಸಿಕ್ಕಾಗ ಒಮ್ಮೆ ಈ ಗ್ರಂಥಾಲಯಕ್ಕೆ ಭೇಟಿ ನೀಡಿ.

unknown things about karnataka

ಶಂಕರ ನಾಗ್ ರ ಒಂದು ಮುತ್ತಿನ ಕಥೆ

ನಿಮಗೆಲ್ಲ ಗೊತ್ತಿರೋ ಹಾಗೆ, ಸಮುದ್ರದ ಅಡಿಯಲ್ಲಿ ಒಂದು ಸಿನೆಮಾವನ್ನು ತೆಗೆದ ಮೊಟ್ಟ ಮೊದಲನೆಯ ಭಾರತೀಯನೆಂದರೆ ಅದು ನಮ್ಮೆಲ್ಲರ ಪ್ರೀತಿಯ ಶಂಕರ್ ನಾಗ್ ರವರು. ಈ ಚಿತ್ರದಲ್ಲಿ ಕನ್ನಡ ಕಣ್ಮಣಿ ಡಾ. ರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ ಮತ್ತು ಈ ಸಿನಿಮಾ ಮೀನು ಹಿಡಿಯುವ ಜನಾಂಗದ ಮೇಲೆ ಹೆಣೆಯಾಲಾಗಿದೆ. ಡಾ ರಾಜ್ ರ ಪಾತ್ರಕ್ಕೆ ಮೊದಲು ಆಯ್ಕೆ ಆದವರು ಭಾರತದ ಕ್ರಿಯಾಶೀಲ ನಟರಾದ ನಾಸೀರುದ್ದೀನ್ ಶಾಹ್. ಆದರೆ ಶಂಕರ್ ಕೊನೆಗೆ ಆಯ್ಕೆ ಮಾಡಿದ್ದು ಡಾ. ರಾಜ್ ರನ್ನು. ಇಂದು ಈ ಸಿನಿಮಾ ಭಾರತದ ಚಿತ್ರ ರಂಗದ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎಂದರೆ ಅತಿಶಯೋಕ್ತಿ ಅಲ್ಲ ಎಂದು ನಾವು ಭಾವಿಸುತ್ತೇವೆ.

ಮಣಿರತ್ನಮ್ ರವರ ಮೊದಲ ಚಿತ್ರ ಬಂದದ್ದು ಕನ್ನಡದಲ್ಲೇ

ಇವತ್ತು ನಮಗೆ ಮಣಿರತ್ನಮ್ ಎಂದರೆ ಸ್ಟಾರ್ ನಿರ್ದೇಶಕ ಮತ್ತು ಅವರ ಚಿತ್ರಗಳಾದ ರೋಜಾ, ದಿಲ್ ಸೆ, ಬಾಂಬೆ, ಇರುವರ್, ಮತ್ತು ಗುರು ಭಾರತದಾದ್ಯಂತ ಹೆಸರು ಮಾಡಿವೆ. ಆದರೆ ನಿಮಗೆ ಗೊತ್ತಿರಲಿ, ಮಣಿರತ್ನಮ್ ಮೊದಲು ನಿರ್ದೇಶನ ಮಾಡಿದ್ದು ಒಂದು ಕನ್ನಡ ಚಿತ್ರ ವನ್ನು.. ಅದರ ಹೆಸರು ‘ಪಲ್ಲವಿ ಅನು ಪಲ್ಲವಿ’ ಎಂದು ಮತ್ತು ಇದರಲ್ಲಿ ‘ಅನಿಲ್ ಕಪೂರ್’ ಹೀರೋ ಆಗಿ ನಟಿಸುತ್ತಾರೆ. ಒಂದು ವಿಭಿನ್ನವಾದ ರೋಮ್ಯಾಂಟಿಕ್ ಹಿನ್ನಲೆಯಲ್ಲಿ ಹೆಣೆದ ಚಿತ್ರ ಇದಾಗಿತ್ತು. ಇಂದಿಗೂ ಈ ಸಿನೆಮಾದ ಹಾಡುಗಳೆಂದರೆ ಕನ್ನಡಿಗರಿಗೆ ಬಲು ಪ್ರೀತಿ.

ಭಾರತದ ಮೊದಲ ಪ್ರೈವೇಟ್ ರೇಡಿಯೋ ಸ್ಟೇಷನ್ ಆಗಿದ್ದು ಕರ್ನಾಟಕ ದಲ್ಲೇ

೧೯೩೫, ರಲ್ಲಿ ಪ್ರೊಫೆಸರ್ ಮ್.ವಿ ಗೋಪಾಲಸ್ವಾಮಿ ಅವರು ಭಾರತದ ಮೊದಲ ಪ್ರೈವೇಟ್ ರೇಡಿಯೋ ಸ್ಟೇಷನ್ ನನ್ನನು ಸೆಟ್ ವೈಪ್ ಮಾಡುತ್ತಾರೆ ಮಾತ್ತು ಅದು ಕರ್ನಾಟಕದಲ್ಲಿ ಎಂಬುದು ಹೆಮ್ಮೆಯ ಸಂಗತಿ .

Advertisements

ತನ್ನ ಗಾಯನಕ್ಕೆ ನ್ಯಾಷನಲ್ ಅವಾರ್ಡ್ ಪಡೆದ ಏಕೈಕ ಭಾರತದ ಸೂಪರ್ ಸ್ಟಾರ್ ನಟ ಎಂದರೆ ಡಾ. ರಾಜಕುಮಾರ್

ರಾಜಕುಮಾರ್ ಎಂದರೆ ಕನ್ನಡದ ಶಕ್ತಿ ಮತ್ತು ಕನ್ನಡಿಗರ ಪಾಲಿಗೆ ಮರೆಯಲಾಗದ ಮಾಣಿಕ್ಯ. ನಿಮಗೆ ಗೊತ್ತಿರಲೇಬೇಕು, ರಾಜ್ ಕುಮಾರ್ ರವರು ಜೀವನ ಚಿತ್ರ ಸಿನಿಮಾದ ‘ನಾದಮಯ’ ಎಂಬ ಹಾಡಿಗೆ ನ್ಯಾಷನಲ್ ಅವಾರ್ಡ್ ಅನ್ನು ಪಡೆಯುತ್ತಾರೆ. ಈ ಮೂಲಕ ಅವರು ಗಾಯನಕ್ಕೆ ನ್ಯಾಷನಲ್ ಅವಾರ್ಡ್ ಪಡೆದ ಭಾರತದ ಸೂಪರ್ ಸ್ಟಾರ್ ನಟ ಎಂಬ ಕೀರ್ತಿ ಗೆ ಭಾಜನ ರಾಗುತ್ತಾರೆ. ಒಮ್ಮೆ ಹೇಳಿ ಡಾ. ಡಾ. ಡಾ. ಡಾ. ರಾಜಕುಮಾರ್ ಗೆ, ಜೈ.

unknown things about karnataka

ಇದು ನಾವು ಕಾಲರ್ ಟೈಟ್ ಮಾಡಿಕೊಳ್ಳುವಂತಹ ವಿಷಯ

ಭಾರತದ ರಾಷ್ಟ್ರ ಧ್ವಜವನ್ನು ತಯಾರಿಸುವ ಅಧಿಕೃತ ಹಕ್ಕು ಇರೋದು ಕರ್ನಾಟಕಕ್ಕೆ ಮಾತ್ರ ಎಂಬುದು ಕಾಲರ್ ಟೈಟ್ ಮಾಡಿಕೊಳ್ಳುವ ವಿಷಯ ಅಲ್ಲವೇ. ಹೌದು ಹುಬ್ಬಳ್ಳಿ ಯಲ್ಲಿರುವ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘಕ್ಕೆ ಮಾತ್ರ ಭಾರತದ ಧ್ವಜವನ್ನು ತಯಾರಿಸುವ ಹಕ್ಕು ಮತ್ತು ಪರ್ಮಿಷನ್ ಇರುವುದು. ಅಂದರೆ ಇಡೀ ಭಾರತದಲ್ಲಿ ಹಾರಾಡುವ ಧ್ವಜಗಳೆಲ್ಲವೂ ತಾಯಾರಾಗುವದು ಕರ್ನಾಟಕದಲ್ಲಿ. ವ್ಹಾ! ಎಂತಹ ಹೆಮ್ಮೆ.

karnataka

ಬ್ರಿಟೀಷರ ವಿರುದ್ಧ ಮೊದಲು ಹೋರಾಟ ಮಾಡಿದ ಹೋರಾಟಗಾತಿ ಕನ್ನಡದ ಕಿತ್ತುರೂ ರಾಣಿ ಚೆನ್ನಮ್ಮ

ಹಲವಾರು ಬಾರಿ ಈ ಶ್ರೇಣಿಯನ್ನು ನಾವು ರಾಣಿ ಲಕ್ಷ್ಮಿ ಬಾಯಿ ರವರಿಗೆ ಕೊಟ್ಟು ಬಿಡುತ್ತೇವೆ ಆದರೆ ಇತಿಹಾಸ ಹೇಳುತ್ತದೆ, ಬ್ರಿಟೀಷರ ವಿರುದ್ಧ ಮೊದಲು ಆರ್ಭಟಿಸಿದ ಹೆಣ್ಣು ಹುಲಿ ಎಂದರೆ ನಮ್ಮ ಕರ್ನಾಟಕದ ವೀರ ರಾಣಿ ಚೆನ್ನಮ್ಮ. ಇದರ ಬಗ್ಗೆ ಹಲವು ಚರ್ಚೆಗಳೂ ಸಹ ಆಗಿವೆ. ಏನೇ ಆಗಲಿ ಇಬ್ಬರೂ ಈ ಭಾರತ ಮಾತೆಯ ವೀರ ಪುತ್ರಿಯರೇ ಅಲ್ಲವೇ?

ರಾಣಿ ಚೆನ್ನಮ್ಮ (೧೭೭೮- ೧೮೨೯)

ಝಾನ್ಸಿ ಲಕ್ಷ್ಮಿ ಬಾಯಿ (೧೮೨೮- ೧೮೫೮)

Advertisements

ಭಾರತದ ಎರಡನೇ ಪ್ರಸಿದ್ಧ ಪ್ರವಾಸಿ ಕೇಂದ್ರ ನಮ್ಮ ಮೈಸೂರು ಅರಮನೆ

ವಿಶ್ವ ಪ್ರಸಿದ್ಧ ತಾಜ್ ಮಹಲ್ ಬಿಟ್ಟರೆ ಭಾರತದ ಅತೀ ಹೆಚ್ಚು ಪ್ರಸಿದ್ಧ ಪ್ರವಾಸಿ ಕೇಂದ್ರ ಎಂದರೆ ನಮ್ಮ ಮೈಸೂರು ಅರಮನೆ ಸ್ವಾಮಿ. ಇದು ನಾವು ಹೇಳುತಿರುವುದು ಅಲ್ಲ, ಒಂದು ಸಮೀಕ್ಷೆ ಹೀಗೆ ಹೇಳುತ್ತದೆ. ತಾಜ್ ಮಹಲ್ ಪ್ರೀತಿಯ ಮತ್ತು ಕಲಾಕೃತಿಯ ಸಂಕೇತ ವಾದರೆ, ಮೈಸೂರು ಅರಮನೆ ಕರ್ನಾಟಕದ ಸಂಸ್ಕೃತಿಯ ರೂವಾರಿ.

unknown things about karnataka

ವಿಕಿಪೀಡಿಯ ದಲ್ಲಿ ಇರುವ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದು

ನಿಮಗೆ ಈ ವಿಕಿಪೀಡಿಯ ಲೋಗೋ ದಲ್ಲಿ ‘ವಿ’ ಎಂಬ ಕನ್ನಡ ಅಕ್ಷರ ಕಾಣಿಸುತ್ತಿದೆಯೇ? ವಿಶ್ವದ ಗ್ಲೋಬ್ ಮೇಲೆ ಇರುವ ಏಕೈಕ್ ಇಂಡಿಕ್ ಭಾಷೆ ಎಂದರೆ ಅದು ಕನ್ನಡ. ಇದು ಹೆಮ್ಮೆಯ ವಿಷಯವಲ್ಲದೆ ಇನ್ನೇನು?

unknown things about karnataka

ಇನ್ನೊಂದಿಷ್ಟು ವಿಷಯಗಳು

ಕರ್ನಾಟಕದ ರಾಜ್ಯ ವೃಕ್ಷ – ಗಂಧ

ಕರ್ನಾಟಕದ ಎಂಬ್ಲೆಮ್ – ಗಂಡೆಬೇರುಂಡ

ಕರ್ನಾಟಕದ ರಾಜ್ಯ ಪಕ್ಷಿ – ಇಂಡಿಯನ್ ರೋಲರ್

ಕರ್ನಾಟಕದ ರಾಜ್ಯ ಪ್ರಾಣಿ – ಏಶಿಯನ್ ಎಲಿಫೆಂಟ್

ಕರ್ನಾಟಕದ ರಾಜ್ಯ ಹೂವು – ಕಮಲಾ

ಇವು ಕರ್ನಾಟಕ ಮತ್ತು ಕನ್ನಡ ಭಾಷೆ ಬಗ್ಗೆ ಇರುವ ಮತ್ತು ಅನೇಕರಿಗೆ ಗೊತ್ತಿರದ ಕೆಲವು ವಿಷಯಗಳು. ನಿಮಗೆ ಈ ಮಾಹಿತಿ ಉಪಯುಕ್ತ ಅನಿಸಿದರೆ, ಈ ಲೇಖನವನ್ನು ಲೈಕ್ ಮಾಡಿ ಮತ್ತು ಎಲ್ಲ ಕನ್ನಡಿಗರಿಗೂ ತಲಪುವಂತೆ ಶೇರ್ ಮಾಡಿ.

ಇದರಲ್ಲಿ ನಾವು ತಿಳಿದೋ ತಿಳಿಯದೆಯೋ ಏನಾದರೂ ತಪ್ಪುಗಳನ್ನು ಮಾಡಿದ್ದರೆ ದಯವಿಟ್ಟು ಮನ್ನಿಸಿ.

Get the Best of Metrosaga delivered to your inbox. Subscribe to Metrosaga and never miss an update from us.