ಉಪ್ಪಿ ಮತ್ತೆ ನಿರ್ದೇಶನಕ್ಕೆ ಎಂಟ್ರಿ. ವಾಟ್ ಅಬೌಟ್ ಸಿನಿಮಾ ಅಂಡ್ ರಾಜಕೀಯದ ಬಗ್ಗೆ ಉಪೇಂದ್ರ ಏನು ಹೇಳಿದರು?

upendra is back

ಉಪೇಂದ್ರ, ಕನ್ನಡ ಚಿತ್ರರಂಗ ಹಾಗು ಈ ನಾಡು ಕಂಡ ರಿಯಲ್ ಸ್ಟಾರ್. ಬುದ್ದಿವಂತ ಅಂತಲೇ ಹೆಸರು ಮಾಡಿರುವ ಉಪೇಂದ್ರ ಎಂದರೆ ಸಿನಿ ಪ್ರೇಮಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಅದೊಂಥರಾ ಕ್ರೇಜ್. ಇಂಡಸ್ಟ್ರಿ ಯಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೆ, ತನ್ನ ಸ್ವಂತ ಪರಿಶ್ರಮ ದಿಂದ ಹಾಗೂ ಕ್ರಿಯಾಶೀಲತೆ ಇಂದ ಉಪೇಂದ್ರ ಸ್ಟಾರ್ ಆದ ಪರಿ ಇದೆ ನೋಡಿ, ಅದು ಎಲ್ಲರಿಗೂ ಸ್ಪೂರ್ತಿ.

ಅರೇ, ಅದೇನು ದೊಡ್ಡ ವಿಷಯ. ಇವರು ಎಲ್ಲರ ಹಾಗೆಯೇ ಒಬ್ಬ ಸ್ಟಾರ್ ಅಂತ ನೀವು ಅಂದು ಕೊಂಡಿದ್ದರೆ ಕ್ಷಮಿಸಿ, ಉಪೇಂದ್ರ ಈ ಕ್ಯಾಟೆಗರಿ ಗೆ ಸೇರುವ ವ್ಯಕ್ತಿ ಅಲ್ಲ. ಉಪೇಂದ್ರ ಅವರ ಐಡಿಯಾ ಗಳು, ಈ ದೇಶಕ್ಕಾಗಿ ಕಾಣುತ್ತಿರುವ ಕನಸುಗಳು ಮತ್ತು ಜೀವನದ ಮೌಲ್ಯಗಳನ್ನು ಇವರು ಅರಿತು ಕೊಂಡಿರುವ ಬಗೆ – ಉಪೇಂದ್ರರನ್ನು ಡಿಫರೆಂಟ್ ಆಗಿಸುತ್ತದೆ.

Advertisements

ಕೆಲವು ತಿಂಗಳುಗಳ ಹಿಂದೆ

ನಿಮಗೆಲ್ಲ ಗೊತ್ತಿರುವ ಹಾಗೆ, ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಮತ್ತು ಪ್ರಜಾಕೆಯ ಎಂಬ ಪಕ್ಷ ವನ್ನು ಕಟ್ಟುತ್ತಾರೆ. ನಾವೆಲ್ಲರೂ ಅಚ್ಚರಿ ಪಡುವಂತಹ ಪ್ರಣಾಳಿಕೆಗಳನ್ನು ನಮ್ಮ ಮುಂದೆ ಇಡುತ್ತಾರೆ. ಮಾಧ್ಯಮ, ಅಭಿಮಾನಿಗಳು ಹಾಗು ಬಹುತೇಕ ಕನ್ನಡಿಗರು ಉಪೇಂದ್ರ ಅವರ ಪ್ರೋತ್ಸಾಹಕ್ಕಾಗಿ ನಿಲ್ಲುತ್ತಾರೆ. ಎಲ್ಲವು ಅಂದು ಕೊಂಡಂತೆ ನಡೆಯುತ್ತಿರುವಾಗ ಒಂದು ಭಿನ್ನಮತ, ಅದೇ ಹಳೆ ಸ್ವಾರ್ಥದ ಮನೋಭಾವ ಪಕ್ಷದಲ್ಲಿ ಭುಗಿಲೇಳುತ್ತದೆ. ಯಾವುದು ಬೇಡ ಅಂತಲೇ ಉಪೇಂದ್ರ ಸಾರಿ ಸಾರಿ ಹೇಳುತ್ತಿದರೋ, ಅದೇ ತಮ್ಮ ಪಕ್ಷದಲ್ಲಿ ನಡೆದ ಕೂಡಲೇ, ಉಪೇಂದ್ರ ಪಕ್ಷ ಬಿಡುತ್ತಾರೆ.

ಮುಂದೆ ಏನಾಯಿತು ಎಂದು ನಿಮಗೆಲ್ಲ ಗೊತ್ತಿದೆ. ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತದೆ ಹಾಗು ಎಲ್ಲ ರಾಜಕೀಯದ ನಾಟಕಗಳನ್ನು ನಾವು ನೋಡುತ್ತೇವೆ. ನಾನು ಎಂದಿಗೂ ಬೇರೆ ಪಕ್ಷಗಳ ಜೊತೆ ಕೈ ಜೋಡಿಸುವುದಿಲ್ಲ ಅದರಲ್ಲೂ ಕಾಂಗ್ರೆಸ್ ಪಕ್ಷ,  ಬಿ. ಜೆ. ಪಿ ಗಿಂತಲೂ ಡೇಂಜರಸ್ ಎಂದು ಹೇಳಿದ ಕುಮಾರ ಸ್ವಾಮಿ ಮೈತ್ರಿಗೆ ಮುಂದಾಗುತ್ತಾರೆ ಅಂಡ್ ರಾಜ್ಯದ ಮುಖ್ಯ ಮಂತ್ರಿ ಸಹ ಆಗುತ್ತಾರೆ.

ಈ ನಿಟ್ಟಿನಲ್ಲಿ ವಿಜಯವಾಣಿ ದಿನ ಪತ್ರಿಕೆ ಗೆ ಉಪೇಂದ್ರ ರವರು ನೀಡಿದ ಸಂದರ್ಶನದ ಕೆಲ ಆಯ್ದ ಭಾಗಗಳನ್ನು ನಿಮ್ಮ ಮುಂದೆ ಇಡಲು ಇಷ್ಟ ಪಡುತ್ತೇವೆ. ಇಲ್ಲಿ ಅವರು ತಮ್ಮ ಪ್ರಜಾಕೀಯದ ನಿಲುವುಗಳು ಹಾಗು ಮುಂದಿನ ಸಿನೆಮಾಗಳ ಬಗ್ಗೆ ಮಾತನಾಡಿದ್ದಾರೆ.

Advertisements

upendra is back

ಐ ಲವ್ ಯೂ ಎಂದರು ಉಪ್ಪಿ

ರಾಜಕಾರಣದ ಜೊತೆ ಸಿನೆಮಾದಲ್ಲೂ ಫುಲ್ ಬಿಜಿಯಾಗಿರುವ ಸೂಚನೆ ನೀಡಿದ್ದಾರೆ ‘ರಿಯಲ್ ಸ್ಟಾರ್’. ಆರ್. ಚಂದ್ರು ನಿರ್ದೇಶನದ ‘ಐ ಲವ್ ಯೂ ‘ ನಲ್ಲಿ ಡಿಫರೆಂಟ್ ರೋಲ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಿನಿಮಾ ಸೆಟ್ಟೇರಿದ್ದು ಚಂದ್ರು ಈ ಸಿನಿಮಾದ ಕಥೆ ಹೇಳಿದಾಗ ನನಗೆ ಇಷ್ಟ ಆಯಿತು ಎಂದು ಉಪೇಂದ್ರ ಹೇಳಿದ್ದಾರೆ. ಮುಂದೆ ಅದರ ಬಗ್ಗೆ ಮಾತನಾಡುತ್ತ, ಚಂದ್ರು ಅವರು ರಿಲೋಡ್ ಆಗಿದ್ದಾರೆ ಅನಿಸಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ನನ್ನ ‘ಏ’, ‘ಉಪೇಂದ್ರ’ ಚಿತ್ರಗಳ ಅಂಶಗಳು ಮತ್ತು ಚಂದ್ರು ಅವರ ‘ತಾಜ್ಮಹಲ್’ ‘ಚಾರ್ಮಿನಾರ್’ ಸಿನೆಮಾಗಳ ಛಾಯೆಗಳು ಇಲ್ಲಿವೆ. ಇದೆಲ್ಲದರ ಜೊತೆಗೆ ಒಂದಷ್ಟು ಹೊಸ ಅಂಶಗಳನ್ನು ಸೇರಿಸಿದ್ದಾರೆ. ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತವಾಗುವಂತಹ ಕಥೆ ಮಾಡಿದ್ದಾರೆ ಎಂದು ಉಪೇಂದ್ರ ಹೇಳಿದರು.

ಪ್ರಜಾಕೀಯದ 15 ಶಾಶಕರು ಇದ್ದಿದ್ದರೇ…?

ಒಂದು ವೇಳೆ ಪ್ರಜಾಕೀಯದ ೧೫ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಶಾಶಕರಾಗಿ ಹೊರ ಬಂದಿದ್ದಾರೆ ಏನಾಗುತ್ತಿತ್ತು ಎಂದು ಉಪೇಂದ್ರ ಅವರನ್ನು ಕೇಳಿದಾಗ, ಅವರು ಸಿಂಪಲ್ ಆಗಿ ಹೀಗೆ ಉತ್ತರಿಸಿದರು.

‘ಒಂದು ವೇಳೆ ನಾನು ಅಂದು ಕೊಂಡಂತೆ ಎಲ್ಲವೂ ಆಗಿ, ನನ್ನ ಪಕ್ಷದಿಂದ ೧೫ ಮಂದಿ ಚುನಾಯಿತರಾಗಿದ್ದಾರೆ, ಉತ್ತಮ ಪಕ್ಷಕ್ಕೆ ಖಂಡಿತ ಸಹಾಯ ಇರುತಿತ್ತು. ನಮಗೆ ಅಧಿಕಾರ ಬೇಕಾಗಿಲ್ಲ. ನಾವಂದುಕೊಂಡ ೪ ಅಂಶಗಳು ಜಾರಿಗೆ ತಂದಿದ್ದರೆ ಸಾಕಿತ್ತು. ಅಷ್ಟೇ ನಮ್ಮೆ ಬೇಡಿಕೆಯಾಗಿರುತ್ತಿತ್ತು. ಟ್ರಾಫಿಕ್ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಬದಲಾವಣೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂದು ಬಯಸುತ್ತಿದ್ದೆ.

Advertisements

Read: ಬೆಂಗಳೂರಿನ ಬಿಗ್ ಟ್ರಾಫಿಕ್ ಸಮಸ್ಯೆಗೆ ಉಪೇಂದ್ರ ಅವರ ಕಡೆ ಇಂದ ಸೂಪರ್ ಮಾಸ್ಟರ್ ಪ್ಲಾನ್. ವಾಟ್ ಎನ್ ಐಡಿಯಾ!
upendra is back
Source: Vijayavani

ನಮ್ಮ ಜನರೇ ಹಿಂಗೇ ಸ್ವಾಮಿ. ಹೌದಾ?

ನಮ್ಮ ಜನರು ಇನ್ನು ಗುಲಾಮಗಿರಿ ಹಾಗು ರಾಜರ ಸಂಸ್ಥೆಯಿಂದ ಹೊರಬಂದಿಲ್ಲ ಎಂದು ಉಪೇಂದ್ರ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ದೊಡ್ಡ ವ್ಯಕ್ತಿ ಎಂದ ಕೂಡಲೇ ನಮಗೆ ಆಸಕ್ತಿ ಜಾಸ್ತಿ ಆಗಿಬಿಡುತ್ತದೆ. ದುಡ್ಡು ಇರುವವರ ಜೊತೆ ಸೇರಿ ಎಲ್ಲೋ ನಾವು ಆ ದುಡ್ಡಿನ ಆಸೆಗೆ ಆಕರ್ಷಿತರಾಗುತ್ತಿದ್ದೇವೆ ಎಂಬುದು ಉಪ್ಪಿ ಅಭಿಮತ. ಯಾರೋ ಒಬ್ಬ ಚೆನ್ನಾಗಿ ಓದಿ ಕೊಂಡವನು, ವಿಚಾರವಂತ ಚುನಾವಣೆಗೆ ನಿಂತರೆ ಅವರತ್ತ ನಮಗೆ ಆಸಕ್ತಿಯೇ ಹುಟ್ಟುವುದಿಲ್ಲ. ವ್ಯಕ್ತಿತ್ವಕ್ಕಿಂತ ನಮಗೆ ವ್ಯಕ್ತಿ ಕಾಣಿಸುತ್ತಾನೆ. ನನ್ನ ಇಂತಹ ಆಲೋಚನಿಗೆಳು ಕೆಲವರಿಗೆ ಭ್ರಮೆ ಎನಿಸುತ್ತದೆ. ಆದರೆ, ನನಗೆ ಈ ಭ್ರಮಾಲೋಕವೇ ಇಷ್ಟ ಎಂದು ಉಪ್ಪಿ ಹೇಳುತ್ತಾರೆ.

upendra is back

ಬ್ಯಾಕ್ ಟು ಬ್ಯಾಕ್ ಆರು ಸಿನಿಮಾಗಳು

ಸಿನಿಮಾ ನನ್ನ ವೃತ್ತಿ. ಪ್ರಜಾಕೀಯ ನನ್ನ ಕನಸು ಎಂದು ಉಪ್ಪಿ ಹೇಳುತ್ತಲೇ ಬಂದಿದ್ದಾರೆ. ಈಗ ಉಪೇಂದ್ರ ಅವರ ಸಿನಿ ಬದುಕು ಹೇಗೆ ಸಾಗಿದೆ ಎಂದು ನೋಡಿದರೆ, ಕೈಯಲ್ಲಿ ಐದಾರು ಸಿನಿಮಾಗಳು ಇವೆ ಎಂದು ಹೇಳಿದ್ದಾರೆ. ‘ಐ ಲವ್ ಯೂ’ ಶುರುವಾಗಿದ್ದರೆ, ಅವರ ‘ಹೋಂ ಮಿನಿಸ್ಟರ್’ ಸಿನಿಮಾ ಕೊನೆ ಹಂತದ ಶೂಟಿಂಗ್ ನಲ್ಲಿದೆ. ಇದರ ಜೊತೆ ಕನಕಪುರ ಶ್ರೀನಿವಾಸ್ ನಿರ್ಮಾಣದ ‘ಅಧೀರ’ ಸಿನೆಮಾಗೂ ಉಪ್ಪಿ ಹೀರೋ. ಕೆ. ಮಂಜು ನಿರ್ಮಾಣದ ಒಂದು ಸಿನೆಮಾದ ತಯಾರಿ ನಡೆದಿದ್ದು ಮೈಸೂರು ಮೂಲದ ನಿರ್ಮಾಪಕರಿಗೆ ಕಾಲ್ ಶೀಟ್ ಕೂಡ ಕೊಟ್ಟಿರುವ ಸುದ್ದಿ ಇದೆ.

upendra is back

ನೋಟು ಬ್ಯಾನ್ ವಿಷಯವಾಗಿ ನಿರ್ದೇಶಕ ಉದಯ್ ಪ್ರಕಾಶ್ ಮಾಡಬೇಕಿದ್ದ ‘MODI’ ಚಿತ್ರದಲ್ಲಿ ಉಪೇಂದ್ರ ನಾಯಕ ನಟರಾಗಿ ನಟಿಸಬೇಕಿತ್ತು. ಆದರೆ, ಸದ್ಯ ಅದರ ಕಥೆ ಮೇಲೆ ಇನ್ನೂ ಸ್ವಲ್ಪ ವರ್ಕ್ ಮಾಡಲಾಗುತ್ತಿದೆ. ಅದೂ ಕೂಡ ಉಪ್ಪಿ ಲಿಸ್ಟ್ ನಲ್ಲಿದೆ. ಇದೆಲ್ಲದರ ಮಧ್ಯೆ ತಮ್ಮದೇ ನಿರ್ದೇಶನದ ಸಿನೆಮಾಕ್ಕೂ ಅವರು ತಯಾರಿ ಮಾಡಿ ಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಮಾಧ್ಯಮ ದೊಂದಿಗೆ ಹಂಚಿ ಕೊಂಡಿದ್ದಾರೆ.

Advertisements