ಉಪೇಂದ್ರರ ಹೊಸ ಪಕ್ಷದ ಲಾಂಚ್ ಬೆನ್ನಿನಲ್ಲೇ ಕೇಳಿ ಬಂತು ‘ಮೋದಿ ವಿರೋಧಿ’ ಎಂಬ ಸುಳ್ಳು ಆರೋಪ

0
16842
upendra party

ಇಂದು ಉಪೇಂದ್ರ ರವರು ತಮ್ಮ ಹೊಸ ಪಕ್ಷದ ಲಾಂಚ್ ಇಟ್ಟುಕೊಟ್ಟಿದ್ದರು ಮತ್ತು ಪಕ್ಷದ ಹೆಸರನ್ನು ಕೆ.ಪಿ.ಜೆ.ಪಿ (ಕರ್ನಾಟಕ ಪ್ರಜ್ಞಾವಂತ ಪಕ್ಷ) ಎಂದು ಅನೌನ್ಸ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ, ಉಪೇಂದ್ರ ರವರು ಪಕ್ಷದ ಮುಂದಿನ ಹಾದಿ, ಅವರ ಯೋಜನೆಗಳನ್ನು ಪತ್ರಿಕಾ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಕೊನೆಗೂ ಬಹು ನಿರೀಕ್ಷೆ ಹುಟ್ಟಿಸಿದ್ದ ಉಪೇಂದ್ರ ರವರ ಪಕ್ಷದ ಹೆಸರು ಅನಾವರಣಗೊಂಡಿದೆ. ಇದರೊಂದಿಗೆ ನವ ಕರ್ನಾಟಕ ಕಟ್ಟುವ ಹೊಸ ಕನಸನ್ನು ಬಿತ್ತಿದ ಉಪೇಂದ್ರ ರವರು, ನಾನು ನೆಕ್ಸ್ಟ್ ಮ್.ಜಿ.ರ್ ಆಗಲಿ ಅಥವಾ ನ್.ಟಿ.ರ್ ಆಗಲು ಇಷ್ಟ ಪಡುವುದಿಲ್ಲ ಅಂಡ್ ನಾನು ಉಪೇಂದ್ರ ನಾಗಿಯೇ ಇರಲು ಇಚ್ಛೆ ಪಡುತ್ತೇನ ಎಂದು ಹೇಳಿ ನೆರದಿದ್ದ ಜನರ ಚಪ್ಪಾಳೆಗೆ ಭಾಜನರಾದರು.

ಪ್ರೆಸ್ ಮೀಟ್ ನ ಲೈವ್ ವಿಡಿಯೋ ಇಲ್ಲಿದೆ

ಹೀಗೆ ಒಂದು ಒಳ್ಳೆಯ ಕೆಲಸ ಪ್ರಾರಂಭ ವಾಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ರಾಜಕೀಯದ ಕರಿ ನೆರಳು ಉಪೇಂದ್ರ ರವರ ಹಾದಿಗೆ ಬಂದಂತಾಗಿದೆ. ಶೋಭಾ ಕರಂದ್ಲಾಜೆ ರವರು ಉಪೇಂದ್ರ ಮತ್ತು ಪಕ್ಷ, ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅರೇ, ಏನಿದು? ಇದನ್ನು ನೋಡುತ್ತಿದ್ದರೆ ಎಲ್ಲೋ ಏನೋ ಮಿಸ್ ಹೊಡಿತಿದೆ ಅನ್ಸಲ್ವಾ? ಇಷ್ಟು ದಿನ ಕೇಳಿಬರದ ಆರೋಪ, ಪಕ್ಷದ ಲಾಂಚ್ ಸಮಯದಲ್ಲಿ ಕೇಳಿ ಬಂದಿದೆ ಎಂದರೆ, ಇದು ರಾಜಕೀಯದ ದಾಳ ಎಂದು ಅರಿಯಲು ಕನ್ನಡಿಗರಿಗೆ ತುಂಬಾ ಸಮಯ ಬೇಕಾಗಿಲ್ಲ ಅನಿಸುತ್ತದೆ.

 

ಒಂದು ಕ್ಷಣ ಉಪೇಂದ್ರ ರವರು ಹಾಗೆ ಹೇಳಿದ್ದಾರೆ ಅಂತ ಅಂದು ಕೊಂಡರೂ ನಂಬಲು ಸಾಕ್ಷಿ ಪುರಾವೆ ಬೇಕಲ್ಲ ಸ್ವಾಮಿ? ನಾವು ಇಲ್ಲಿ ಯಾವ ಪಕ್ಷದ ಪರವಾಗಿಯೂ ಅಥವಾ ವಿರುದ್ಧವಾಗಿಯೂ ಬರೆಯುತಿಲ್ಲ ಬಟ್ ಸತ್ಯ ಅನ್ನೋದು ಪಕ್ಷಾತೀತ ಎಂದು ನಂಬುತ್ತೇವೆ. ಹೀಗೆ ಒಬ್ಬ ವ್ಯಕ್ತಿಯ ಇಮೇಜ್ ಅನ್ನು ಹಾಳು ಮಾಡುವುದು ಎಷ್ಟು ಸರಿ ಎಂಬ ವಿಚಾರ ಅಷ್ಟೇ.

ಶೋಭಾ ಕರಂದ್ಲಾಜೆ ಗೆ ಇದು ಶೋಭೆ ತರುವ ವಿಷಯ ಅಲ್ಲ

ಉಪೇಂದ್ರ ರವರು ಎಲ್ಲಿಯೂ ಯಾವ ಪಕ್ಷದ ಬಗ್ಗೆಯೂ ಅವಹೇಳನಕಾರಿ ಮಾತುಗಳಿರಲಿ, ಒಂದು ಚಿಕ್ಕ ಆರೋಪ ಸಹಿತ ಮಾಡಿಲ್ಲ. ಅವರ ಪ್ರಯತ್ನ ಅವರು ಮಾಡಲಿ ನಮ್ಮ ಕೆಲಸ ನಾವು ಮಾಡುತೇವೆ, ಒಟ್ಟಿನಲ್ಲಿ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದೇ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶೋಭಾ ಅವರು ಈ ಆರೋಪ ಯಾಕೆ ಮಾಡಿದರು ಎಂಬ ಪ್ರಶ್ನೆಯನ್ನು ನಾವು ನಿಮಗೇ ಬಿಡುತ್ತೇವೆ? ಹಾಗೆ ಈ ವಿಷಯವಾಗಿ ಕಾನೂನು ಹೋರಾಟ ನಡೆಸುತ್ತೇವೆ ಎಂಬ ಶೋಭಾ ಅವರ ಹೇಳಿಕೆ ಹಾಸ್ಯಾಸ್ಪಧ ಎನಿಸುತ್ತದೆ. ನರೇಂದ್ರ ಮೋದಿ ಯವರ ವಿಚಾರಗಳನ್ನು ಪಬ್ಲಿಕ್ ನಲ್ಲಿ ಹೊಗಳಿದ ಉಪೇಂದ್ರ ರವರಿಗೆ ಈ ಯೋಚನೆ ಎಲ್ಲಿಂದೆ ಬರಬೇಕು? ದುರಂತ ಎಂದರೆ ಇದೇ ಸತ್ಯ ಎಂದು ಕೆಲವರು ನಂಬಿದ್ದಾರೆ.

upendra party

ಅದೇನೇ ಇರಲಿ, ದಿಸ್ ಐಸ್ ಜಸ್ಟ್ ಎ ಬಿಗಿನಿಂಗ್. ಉಪೇಂದ್ರ ರವರು ಈ ಹಾದಿಯಲ್ಲಿ ಹಲವಾರು ಟೀಕೆಗಳನ್ನು ಮತ್ತು ಆರೋಪಗಳನ್ನು ಎದುರಿಸ ಬೇಕಾಗುತ್ತದೆ. ಇನ್ನೂ ಪಕ್ಷ ಅಧಿಕಾರಕ್ಕೇ ಬಂದಿಲ್ಲ, ಈಗಲೇ ಇಲ್ಲ ಸಲ್ಲದ ಆರೋಪಗಳು ಕೇಳಿ ಬರುತ್ತಿವೆ ಅಂದರೆ ನೀವೇ ಊಹೆ ಮಾಡಿ, ಮುಂದಿನ ಆ ದಿನಗಳು ಹೇಗಿರಬಹುದೆಂದು.

ಹೊಸ ಪಕ್ಷದ ಲಾಂಚ್ ಗೆ ನಾವು ಉಪೇಂದ್ರ ಅಂಡ್ ಟೀಮ್ ಗೆ ಶುಭ ಕೋರುತ್ತೇವೆ. ಭವ್ಯ ಭಾರತ ಮತ್ತು ನವ ಕರ್ನಾಟಕದ ಕನಸು ಹೊತ್ತು ನಾನು ನಿಮ್ಮನ್ನು ಬೀಳ್ಕೊಳ್ಳುತ್ತೇನೆ.

Get the Best of Metrosaga delivered to your inbox. Subscribe to Metrosaga and never miss an update from us.

Comments

comments

[jetpack_subscription_form]
SHARE
Previous article12 Reasons Why Shankar Nag is still a Superstar in Karnataka
Next article18 Quotes By Chanakya You Should Consider and Internalize for your Well-being
mm
Shrinag is a writer, designer, and a social media buff who loves to scribble, explore and present the things in a creative way. When he is not writing or designing, he loves reading books, meditate, travel, and paint.

LEAVE A REPLY

Please enter your comment!
Please enter your name here