ಬೆಂಗಳೂರು ಅಂದರೆ ಹೊರ ನೋಟಕ್ಕೆ ಒಂದು ಸುಸಜ್ಜಿತ ನಗರ, ಐ.ಟಿ ಸಿಟಿ, ಮಹಾ ನಗರ, ಅರ್ಬನ್ ಕ್ಲಾಸ್ ಸೌಲಭ್ಯ ಇರುವ ನಗರ ಎಂದೆಲ್ಲಾ ಅನಿಸುವುದು ನಿಜ ಆದರೂ ವಾಸ್ತವ್ಯದಲ್ಲಿ ಇಲ್ಲಿ ಎಲ್ಲವೂ ಸುಸಜ್ಜಿತ ವಾಗಿದೆಯೇ ಎಂಬುದು ಪ್ರಶ್ನೆ. ನೀವು ಬೆಂಗಳೂರಿನವರು ಆಗಿದ್ದರೆ ಅಥವಾ ಇಲ್ಲಿ ವಾಸವಾಗಿದ್ದಾರೆ ನಿಮಗೆ ಇಲ್ಲಿಯ ಸಮಸ್ಯೆಗಳ ಬಗ್ಗೆ ಅರಿವು ಇರುತ್ತದೆ. ನರಕ ಎನಿಸುವ ಟ್ರಾಫಿಕ್ ಸಮಸ್ಯೆ, ಹೆಚ್ಚುತ್ತಿರುವ ಜನಸಂಖ್ಯೆ, ಕುಡಿಯುವ ನೀರಿನ ಸಮಸ್ಯೆ ಒಂದು ಕಡೆ ಆದರೆ ಇಲ್ಲಿಯ ರೋಡು ಮತ್ತು ಡ್ರೈನೇಜ್ ವ್ಯವಸ್ಥೆ ಮತ್ತು ಅದರಿಂದ ಉಂಟಾಗುವ ತೊಂದರೆಗಳು ವಿಪರೀತ ಅಂತಲೇ ಹೇಳಬಹುದಾಗಿದೆ.
ನಿಮಗೆಲ್ಲ ಗೊತ್ತಿರುವ ಹಾಗೆ, ಕಳೆದ ಬಾರಿ ಹೊಡೆದ ಮಳೆಗೆ ಹೇಗೆ ಇಡೀ ನಗರವೇ ತತ್ತರಿಸಿ ಬೆಂಡಾಗಿ ಹಲವು ಸಾವುಗಳನ್ನು ನೋಡಿತ್ತು ಎಂದು. ಹೌದು, ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದರೆ ಸಾಕು, ರೋಡ್ ಗೆ ನೀರು ನುಗ್ಗುವುದು, ಮರಗಳು ಬೀಳುವುದು, ಟ್ರಾಫಿಕ್ ಜಾಮ್ ಆಗುವುದು ಸರ್ವೇ ಸಾಮಾನ್ಯ ವಾಗಿ ಹೋಗಿದೆ. ಒಂದು ಮಳೆಯನ್ನೂ ತಡೆಯಲಾರದಂತಹ ವ್ಯವಸ್ಥೆ ನಮ್ಮಲ್ಲಿ ಇದೆ ಅಂದರೆ ನೀವೇ ಯೋಚಿಸಿ, ಇಲ್ಲಿಯ ಕಾಮಗಾರಿ ಯಾವ ಸ್ಥಿತಿಯಲ್ಲಿ ಇದೆ ಎಂದು. ಡ್ರೈನೇಜ್ ಸಮಸ್ಯೆ ಬಗೆಹರಿಸಲಾಗದಂತಹ ಸಮಸ್ಯೆ ಏನೂ ಅಲ್ಲ. ಒಂದು ಪ್ಲಾನಿಂಗ್ ಮತ್ತು ಉತ್ತಮ ಐಡಿಯಾ ಮೂಲಕ ಇದನ್ನು ಸುಲಭವಾಗಿ ಬಗೆಹರಿಸಬಹುದು ಎಂದು ಪ್ರಜಾಕೀಯದ ಉಪೇಂದ್ರ ಮತ್ತು ಸೌರವ್ ಬಾಬು ಹೇಳುತ್ತಿದ್ದಾರೆ. ಬನ್ನಿ ಅದೇನು ಅಂತ ನೋಡೋಣ.
ಈಗಿರುವ ಸಮಸ್ಯೆ ಮತ್ತು ಕಾಮಗಾರಿ ವ್ಯವಸ್ಥೆ
ನೀವು ನೋಡಿರಬಹುದು. ನಮ್ಮಲ್ಲಿ ರೋಡ್ ಸೈಡ್ ಡ್ರೈನೇಜ್ ಸಿಸ್ಟಮ್ ನ ಅಳವಡಿಕೆ ಇದೆ. ಅಂದರೆ, ರೋಡ್ ಪಕ್ಕ ಡ್ರೈನೇಜ್. ಟಾರ್ ರೋಡ್ ಮೇಲೆ ಬಿದ್ದ ಮಳೆ ನೀರು ಹರಿದು ಈ ಡ್ರೈನೇಜ್ ಸೇರಲಿ ಎಂದು. ಸಮಸ್ಯೆ ಏನು ಅಂದರೆ, ಆ ನೀರು ಹರಿದು ಮೋರಿ ಸೇರಲು ಸುಸಜ್ಜಿತವಾದ ಡ್ರೈನೇಜ್ ಸಿಸ್ಟಮ್ ಇಲ್ಲದೆ ಇರುವುದು. ನಮ್ಮಲ್ಲಿ ಮೋರಿ, ಬಾಕ್ಸ್ ಆಕಾರದಲ್ಲಿ ಇರುತ್ತದೆ ಮತ್ತು ಕೆಳಗಡೆ ಪಟ್ಟಿ ಕಟ್ಟಿಕೊಂಡು ಸಿಮೆಂಟ್ ಹಾಕಿರುತ್ತಾರೆ. ನಂತರ ಅದರ ಮೇಲೆ ಕಲ್ಲು ಹಾಕಿ ಮುಚ್ಚಲಾಗಿರುತ್ತದೆ. ಇಲ್ಲಿ ನೀವು ಗಮನಿಸಬೇಕಾದ ಅಂಶ ಎಂದರೆ ನೀರು ಮತ್ತು ಟಾರು ಎಣ್ಣೆ ಶೀಗೆ ಕಾಯೀ ಇದ್ದ ಹಾಗೆ. ವಿಪರೀತ ಮಳೆನೀರಿನ ದೆಸೆ ಇಂದ ಮತ್ತು ಅದು ಮೋರಿ ಸೇರದೆ ಇರುವುದರಿಂದ ರೋಡ್ ಗಳು ಹಾಳಾಗುತ್ತಿರುವುದು.
ಮಳೆ ಕಸ ಮತ್ತು ಇತರೆ ಕಸ ಪದಾರ್ಥಗಳು ಸಿಕ್ಕಿ ಮೋರಿ ಜಾಮ್ ಆಗುತ್ತವೆ. ಅದನ್ನು ತೆಗೆಯಲು ಜನ ಬರದಿರುವ ಕಾರಣದಿಂದ ಬ್ಲಾಕೇಜ್ ಆಗುತ್ತದೆ. ಒಮ್ಮೊಮ್ಮೆ ಕಸ ತೆಗೆದು ರೋಡ್ ಬದಿಗೆ ಹಾಕಿರುತ್ತಾರೆ ಮತ್ತು ಇದು ರೋಡ್ ಬ್ಲಾಕೇಜ್ ಗೆ ಕಾರಣ ಆಗುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಷಯವೇ. ಇದು ಒಂದು ದಂಧೆ ಥರ. ರೋಡ್ ಸ್ಲಿಟ್ ಎಂಬ ಹೆಸರಿನಲ್ಲಿ ಆಗುತ್ತಿರುವ ಒಂದು ಬಿಸಿನೆಸ್ ಅಂತಾನೆ ಹೇಳಬಹುದು. ಕಲ್ಲು ಹಾಕಲು ಒಂದು ಕಾಂಟ್ರಾಕ್ಟ್, ಕಸ ಎತ್ತಲು ಒಂದು ಕಾಂಟ್ರಾಕ್ಟ್ ಮತ್ತು ಮೋರಿ ಕಟ್ಟಲು ಒಂದು ಕಾಂಟ್ರಾಕ್ಟ್ – ಹೀಗೆ ಇಡೀ ವ್ಯವಸ್ಥೆಯೇ ಇದರಲ್ಲಿ ಸೇರಿ ಕೊಂಡಿದೆ.
ರೋಡ್ ಹಾಳಾಗುವುದು ಹೇಗೆ ಎಂದು ನಿಮಗೆ ಗೊತ್ತಿದೆಯಾ?
ಬಸ್, ಲಾರಿ ಮತ್ತು ಇತರೆ ವಾಹನಗಳಿಂದ ರೋಡ್ ಹಾಳಾಗುತ್ತದೆ ಎಂದು ನೀವು ತಿಳಿದಿದ್ದರೆ ನೀವು ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ. ಮೊದಲೇ ಹೇಳಿರುವ ಹಾಗೆ ಟಾರ್ ಮತ್ತು ನೀರು, ಎಣ್ಣೆ ಶೀಗೆ ಕಾಯೆ ಇದ್ದ ಹಾಗೆ. ನೀರು ಹರಿದು ಮೋರಿ ಸೇರದೆ ರೋಡ್ ಮೇಲೆ ನಿಂತರೆ ಅದು ಸಮಸ್ಯೆ ಆಗುತ್ತದೆ. ನಂತರ ಒಂದು ಲಾರಿ ಹೋದರೆ ಸಾಕು ಅಲ್ಲಿ ಒಂದು ಗುಂಡಿ ನಿರ್ಮಾಣವಾಗುತ್ತದೆ.
ಇದಕ್ಕೆ ಪರಿಹಾರ : ಪೈಪ್ ಡ್ರೈನೇಜ್ ಸಿಸ್ಟಮ್
ಅಮೇರಿಕಾ ಮಾದರಿಯಲ್ಲಿ ಒಂದು ಸುಸರ್ಜಿತ ಪೈಪ್ ಡ್ರೈನೇಜ್ ಸಿಸ್ಟಮ್ ಮಾಡಿದರೆ ಈಗಿರುವ ಸಮಸ್ಯೆ ಯನ್ನು ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಬಗೆ ಹರಿಸಬಹುದು ಎಂಬುದು ಒಂದು ಐಡಿಯಾ. ಈಗಿರುವ ಮುಕ್ಕಾಲು ಇಂಚು ಪೈಪ್ ಹಾಕುವ ಬದಲು 6 ಅಡಿಯ ಪೈಪ್ ಹಾಕಿ ಚೇಂಬರ್ ವ್ಯವಸ್ಥೆ ಮಾಡಿದರೆ ಮಳೆ ನೀರು ಆರಾಮಾಗಿ ಡ್ರೈನೇಜ್ ಗೆ ಸೇರಿಕೊಳ್ಳುತ್ತದೆ. ಇದು ನೆಲದ ಅಡಿ ಬರುವ ಕಾರಣ ಗುಂಡಿ ಮೋರಿ ಎಂಬ ಸಮಸ್ಯೆ ಇರುವುದಿಲ್ಲ.
ಯಾವ ರೀತಿ ಇದನ್ನು ಮಾಡುವುದು? ನಮ್ಮಲ್ಲಿ ಇದು ಆಗುತ್ತಾ?
ಈಗಿರುವ ವ್ಯವಸ್ಥೆ ಯಲ್ಲಿ ಒಂದು ಬಾಕ್ಸ್ ಆಕಾರದ ಗುಂಡಿ ಅಂದರೆ ಒಂದು ಡ್ರೈನೇಜ್ ಸಿಸ್ಟಮ್ (1 km) ಗೆ ಮೂರು ತಿಂಗಳ ಸಮಯ ಬೇಕಾಗುತ್ತದೆ. ಮೊದಲು ಗುಂಡಿ ತೋಡುತ್ತಾರೆ, ಅದರ ಸೆಮೆಂಟಿಂಗ್ ಆಗುತ್ತದೆ, ನಂತರ ಕಲ್ಲು ಮುಚ್ಚುತ್ತಾರೆ ಮತ್ತು ಅಲ್ಲಲ್ಲಿ ಓಪನಿಂಗ್ ಅಂದರೆ ರಂಧ್ರಗಳನ್ನು ಬಿಟ್ಟಿರುತ್ತಾರೆ. ನೀರು ಎಲ್ಲಿ ಹೋಗಬೇಕು ಅಲ್ಲಿ ಓಪನಿಂಗ್ ಮಾಡದೆ ಸುಮ್ಮನೆ 10-20 ಅಡಿಗೆ ಓಪನಿಂಗ್ ಮಾಡಿರುತ್ತಾರೆ. ಅಕಸ್ಮಾತ್ ಈ ಓಪನಿಂಗ್ ನಲ್ಲಿ ಕಸ ಸೇರಿಕೊಂಡರೆ ಅದು ಬ್ಲಾಕೇಜ್ ಗೆ ಕಾರಣ ಆಗುತ್ತದೆ.
ಇದಕ್ಕೆ ಪರಿಹಾರವಾಗಿ ಪೈಪ್ ಸಿಸ್ಟಮ್ ಮಾಡಿದರೆ ಹೇಗೆ? 3 ತಿಂಗಳಲ್ಲಿ ಮಾಡುವ ಕೆಲಸವನ್ನು ಒಂದೇ ವಾರದಲ್ಲಿ ಯಾರಿಗೂ ಸಮಸ್ಯೆ ಆಗದೆ ಇರೋ ಥರ ಮಾಡಬಹುದಾಗಿದೆ. ಈಗಿರುವ ವ್ಯವಸ್ಧೆಯಲ್ಲೀ, ಬಾಕ್ಸ್ ಕಟ್ಟುವ ಬದಲು 3-4 ಅಡಿ ಕೆಳಗೆ ತೋಡಿ, ಸಿಮೆಂಟ್ ಪೈಪ್ ಜೋಡಣೆ ಮಾಡಿ ಮತ್ತು ಪ್ರತಿ 50 ಅಡಿಗೆ ಒಂದು ಚೇಂಬರ್ ನಿರ್ಮಾಣ ಮಾಡಲಾಗುತ್ತದೆ.
ಬಾಕ್ಸ್ ಆದರೆ ಕಸ ಕಟ್ಟಿಕೊಳ್ಳುವ ಸಾಧ್ಯತೆ ತುಂಬಾ ಇರುತ್ತದೆ. ಪೈಪ್ ಇಲಿ ಜಾರು ಇರುವ ಕಾರಣ ಕಸ ಕಟ್ಟಿ ಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ. ಒಂದು ವೇಳೆ ಕಟ್ಟಿದ್ದೇ ಆದರೆ ಚೇಂಬರ್ ನ ಮ್ಯಾನ್ ಹೋಲ್ ನಲ್ಲಿ ಇಳಿದು ಅದನ್ನು ಕ್ಲೀನ್ ಮಾಡಬಹುದಾಗಿದೆ. ರೌಂಡ್ ಆಕಾರ ಇದ್ದರೆ ನೀರು ಸುಲಭವಾಗಿ ಹರಿಯುತ್ತದೆ ಮತ್ತು ಸರಾಗವಾಗಿ ಡ್ರೈನೇಜ್ ಅನ್ನು ಸೇರುತ್ತದೆ. ಇದರಿಂದ ನೀರು ರೋಡ್ ಸೇರಿ ರೋಡ್ ಹಾಳಾಗಿ ಹೋಗುವುದಿಲ್ಲ ಅನ್ನೋದು ವಿಷಯ.
ನಮ್ಮಲ್ಲಿ ರೋಡ್ ಗಳು ಚಿಕ್ಕದಾಗಿರುತ್ತವೆ. ಇದು ಹೇಗೆ ಸಾಧ್ಯ?
ಇದು ಸಮಸ್ಯೆ ಆಗುವುದಿಲ್ಲ ಎಂದು. ರೋಡ್ ಚಿಕ್ಕದಿದ್ದರೂ ಅದರ ರೀತಿಯೇ ಪೈಪ್ ಹಾಕಬಹುದಾಗಿದೆ. For Example: ಎರಡು ಅಡಿ ಡಯಾಮೀಟರ್ ಫುಟ್ಪಾತ್ ಇದೆ ಅಂದುಕೊಂಡರೂ ಎರಡೇ ಅಡಿ ಪೈಪ್ ಹಾಕಿದರೂ ಆಯಿತು. ಇಲ್ಲಿ ಪೈಪ್ ನೆಲದ ಅಡಿ ಇರುವುದರಿಂದ ಸಮಸ್ಯೆ ಆಗುವುದಿಲ್ಲ. ಮೇಲಾಗಿ ಅದರ ಮೇಲೆ ಮುಚ್ಚಿ ನಾವು ಸಸಿ ಹಾಕಬಹುದು, ಮತ್ತು ವಾಕಿಂಗ್ ಪಾತ್ ಮಾಡಿಕೊಳ್ಳಬಹುದು. ಇದು ಒಂದು ಸಾರಿಯ ಕೆಲಸ ಮತ್ತು ಪದೇ ಪದೇ ಕಾಮಗಾರಿಯ ಕೆಲಸ ಬರುವುದಿಲ್ಲ. ಕನಿಷ್ಠ ಅಂದರೂ 20 ವರ್ಷ ಸಮಸ್ಯೆ ಉಂಟಾಗುವುದಿಲ್ಲ ಎಂಬುದು ಇದರ ವಿಶೇಷತೆ. ಜಸ್ಟ್ ಆಗಾಗ ಚೇಂಬರ್ ಕ್ಲೀನ್ ಮಾಡಿಕೊಂಡು ಹೋದರೆ ಆಗುತ್ತದೆ. ಈ ಚೇಂಬರ್ ಒಂದು ತೊಟ್ಟಿ ಥರ ಇರುತ್ತದೆ ಮತ್ತು ಪೈಪ್ ಬಂದು ಇಲ್ಲಿ ಸೇರಿಕೊಳ್ಳುತ್ತದೆ.
ಇದಕ್ಕೆ ತುಂಬಾ ಖರ್ಚು ಆಗುತ್ತದೆಯಾ ?
ನಿಮಗೆ ಆಶ್ಚರ್ಯ ಆಗ್ಬಹುದು. ಈಗಿರುವ ವ್ಯವಸ್ಥೆ ಗಿಂತ 50% ಅಷ್ಟು ಕಡಿಮೆ ಖರ್ಚಿನಲ್ಲಿ ಇದನ್ನು ಅಳವಡಿಸಬಹುದಾಗಿದೆ. 3 ತಿಂಗಳು ತೆಗೆದುಕೊಳ್ಳುವ ಕೆಲಸ ಬರಿ 7 ದಿನಗಳಲ್ಲಿ ಆಗುತ್ತದೆ ಎಂದರೆ ಯಾಕಾಗಬಾರದು. ಹೌದು ಇದೇನೂ ಹೊಸ ಐಡಿಯಾ ಏನೂ ಅಲ್ಲ. ಎಷ್ಟೋ ದೇಶಗಳಲ್ಲಿ ಇದನ್ನು ಅಳವಡಿಸಿದ್ದಾರೆ ಆದರೆ ನಮಗೆ ಹೊಸದು ಎಂದು ಹೇಳಬಹುದು.
ಈ ಪೈಪ್ ಮುಂದೆ ಮಳೆ ನೀರಿನ ಉಳಿತಾಯಕ್ಕೆ ಸಹ ಉಪಯೋಗವಾಗುತ್ತದೆ. ಇದರ ಬಗ್ಗೆ ತಿಳಿಯಲು ಈ ವಿಡಿಯೋ ನೀವು ನೋಡಬಹುದು.
ಐಡಿಯಾ ಏನೋ ಚೆನ್ನಾಗಿದೆ. ಆದರೆ ಇದು ಅಂದು ಕೊಂಡಷ್ಟು ಸುಲಭ ಅಲ್ಲ ಆದರೆ ಕಷ್ಟವೂ ಅಲ್ಲ. ಐಡಿಯಾ ಗಳ ಮೂಲಕ ಸಮಾಜ ಕಟ್ಟಲು ಹೋರಾಡುತ್ತಿರುವ ಉಪೇಂದ್ರ ಮತ್ತು ಅವರ ಪಕ್ಷಕ್ಕೆ ಜಯ ಸಿಗಲಿ ಎಂದು ನಾವು ಆಶಿಸುತ್ತೇವೆ. ನೀವು ಈ ರಾಜ್ಯದ ಪ್ರಜೆಯಾಗಿ ಅರ್ಹ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ಹಾಕಿದ್ದೇ ಆದರೆ, ನವ ಕರ್ನಾಟಕದ ಕನಸು ಖಂಡಿತಾ ನನಸು ಆಗುವುದರಲ್ಲಿ ಅನುಮಾನವಿಲ್ಲ.