ಹಿಂದೊಮ್ಮೆ ಭಾರತದ ಶಿಕ್ಷಣ ವ್ಯವಸ್ಥೆ ಅಂದರೆ ಇಡೀ ಜಗತ್ತೇ ತಿರುಗಿ ನೋಡುವಂತೆ ಇತ್ತು. ಈಚೆಗೆ ಸುಮಾರು ೬೦ ವರುಷಗಳನ್ನೂ ಗಣನೆಗೆ ತೆಗದು ಕೊಳ್ಳುವುದಾದರೆ, ಈ ಜಾತಿ ಮತ್ತು ರಾಜಕೀಯದ ಕರಿ ನೆರಳು ಅತ್ಯಮೂಲ್ಯವಾದ ಶಿಕ್ಷಣ ವ್ಯವಸ್ಥೆಯನ್ನು ಮಾರಾಟದ ವಸ್ತು ಆಗಿ ಬಳಸಿ ಕೊಂಡಿದ್ದು ನಾವೆಲ್ಲಾ ನೋಡಿದ್ದೇವೆ. ಜಾತಿ ಆಧಾರಿತ ಸೀಟ್, ಅರ್ಹರಿಗೆ ದೊರೆಯದ ಕಾಲೇಜು ಅಡ್ಮಿಶನ್, ತಾರತಮ್ಯ ರೀತಿಯ ಮೌಲ್ಯಮಾಪನ ಹೀಗೆ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಒಂದು ಶ್ರೇಷ್ಠ ಮಟ್ಟಕ್ಕೆ ತೆಗೆದು ಕೊಂಡು ಹೋಗಲು, ಮುಖ್ಯವಾಗಿ ಸರ್ಕಾರೀ ಆಡಳಿತ ಶ್ರಮಿಸ ಬೇಕು. ಈ ನಿಟ್ಟಿನಲ್ಲಿ, ಡಿಫರೆಂಟ್ ಆಗಿ ತಮ್ಮ ಮೂರನೇ ಪ್ರಣಾಳಿಕೆಯಲ್ಲಿ ಉಪೇಂದ್ರ ಅವರು ನಾಡಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ. ಪ್ರಣಾಳಿಕೆಯಲ್ಲಿ ಇರುವ ಕೆಲವು ಅಂಶಗಳನ್ನು ನಿಮ್ಮ ಮುಂದೆ ಇಡಲು ಇಷ್ಟ ಪಡುತ್ತೇವೆ.
ಮಾದರಿ ಶಿಕ್ಷಣ ವ್ಯವಸ್ಥೆ
– ಇನ್ನೋವೆಟಿವ್ ಮೊಡರ್ನ್ ಎಜುಕೇಶನ್ ಸಿಸ್ಟಮ್ (ಐ. ಎಂ. ಇ. ಎಸ್) ಸರಳ, ವಿಸ್ಮಯಿಧ್ಯಮಯ,ಒತ್ತಡರಹಿತ, ಮಗುವಿನ ಜೀವನಕ್ಕೆ ಉಪಯೋಗವಾಗುವ ಮತ್ತು ಅಳವಡಿಸಿಕೊಳ್ಳುವಂತಹ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲಾಗುವುದು.
– ಮಗುವಿಗೆ ಆರು ವರ್ಷವಾಗುವವರೆಗೂ ಅಂಗನವಾಡಿ ಹಾಗೂ ಶಿಶು ವಿಹಾರ (ಕಿಂಡರ್ ಗಾರ್ಡನ್) ಕಡ್ಡಾಯವಿರುವುದಿಲ್ಲ. ಮಕ್ಕಳು ತಂದೆ – ತಾಯಂದಿರ ಜೊತೆಗೆ ತಮ್ಮ ಅತ್ಯಮೂಲ್ಯವಾದ ಬಾಲ್ಯವನ್ನು ಕಳೆಯಲು, ಕಲಿಯಲು ಮತ್ತು ಅನುಬಂಧ ಬಾಂಧವ್ಯ ಬೆಳಿಸಿ ಕೊಳ್ಳಲು ಅನುಕೂಲವಾಗುತ್ತದೆ. (ತಂದೆ -ತಾಯಿ ಇಬ್ಬರೂ ಉದ್ಯೋಗಕ್ಕೆ ಹೋಗುವವರಾಗಿದ್ದರೆ ಅಥವಾ ಆಯ್ಕೆಯ ಮೇರೆಗೆ ಅಂಗನವಾಡಿ ಹಾಗೂ ಶಿಶು ವಿಹಾರಗಳಿಗೆ ಮಕ್ಕಳನ್ನು ಕಳುಹಿಸಬಹುದಾಗಿದೆ ).
– ಎಲ್ಲಾ ಸರಕಾರೀ ಶಾಲೆಯ ಹಾಗೂ ಅಂಗನವಾಡಿಯ ಮಕ್ಕಳು ಹಾಗೂ ಶಿಕ್ಷಕರಿಗೆ ಉಚಿತ ಸಾರಿಗೆ ಸೌಲಭ್ಯಗಳು ನೀಡಲಾಗುತ್ತದೆ. ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳ ಹಾಗೂ ಅಂಗನವಾಡಿ ಮೂಲಸೌಕರ್ಯಗಳು ಮತ್ತು ಸೌಲಭ್ಯಗಳು ಉತ್ಕ್ರುಷ್ಟ ಗುಣಮಟ್ಟಕ್ಕೆ ಏರಿಕೆ ಮಾಡಲಾಗುವುದು. (ಉ.ದಾ – ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ).
– ಒಂದನೇ ಮತ್ತು ಎರಡನೇ ತರಗತಿಯ ಶಾಲೆಯ ಮಕ್ಕಳಿಗೆ ಯಾವುದೇ ಬರೆಯುವುದು, ಓದುವುದೇ ಇರದೇ ಬರೀ ಆಟ, ಬೇರೆ ಮಕ್ಕಳ ಜೊತೆ ಬೆರೆಯುವುದು ಮತ್ತು ಶಾಲೆಗೆ ಹೊಂದಿಕೊಳ್ಳುವಂತೆ ಆಸಕ್ತಿ ಬೆಳೆಸಿಕೊಳ್ಳುವಂತಹ ಇತ್ಯಾದಿಗಳನ್ನು ದೃಶ್ಯ ಹಾಗೂ ಧ್ವನಿ ಮಾಧ್ಯಮಗಳಿಂದ ವೈವಿಧ್ಯಮಯ ಹಾಗೂ ಆಕರ್ಷಿತ ರೀತಿಯಲ್ಲಿ ಅಳವಡಿಸಲಾಗುವುದು. ಇದರಿಂದಾಗಿ ಮಕ್ಕಳಿಗೆ ವಸ್ತು ವಿಶೇಷತೆಗಳನ್ನು ಆಸಕ್ತದಾಯಕವಾಗಿ ಕಲಿಯುವುದಕ್ಕೆ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯವಾಗುತ್ತದೆ.
– ಟ್ಯಾಬ್ಲೆಟ್ಗಳ ಮೂಲಕ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿಯವರೆಗೆ ಸುಲಭವಾಗಿ ಮನೆಯಲ್ಲಿಯೇ ಕಲಿಸಬಹುದಾಗಿರುವುದರಿಂದ ಮನೆ ಕಲಿಕೆ (ಹೋಮ್ ಸ್ಕೂಲಿಂಗ್) ವ್ಯವಸ್ಥೆಯನ್ನು ಪ್ರೋತ್ಸಾಹ ಧನ ನೀಡುವುದರ ಮೂಲಕ ಉತ್ತೇಜಿಸಲಾಗುವುದು. (ಮನೆಯಲ್ಲಿಯೇ ಕಲಿಯಲು ಬಯಸುವ ಮಕ್ಕಳಿಗೂ ಈ ಟ್ಯಾಬ್ಲೆಟ್ಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು.) ಮತ್ತು ಸರ್ಕಾರದಿಂದ ನೇಮಿಸಲ್ಪಟ್ಟ ಶಿಕ್ಷಕರಿಂದ ಸಲಹೆ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
– ಸುಮಾರು 52 ಲಕ್ಷ ವಿದ್ಯಾರ್ಥಿಗಳಿಗೆ ಅಂದಾಜು 2600 ಕೋಟಿ ರೂಪಾಯಿಗಳನ್ನು ಸರ್ಕಾರವು ಟ್ಯಾಬ್ಲೆಟ್ಗಳ ಖರೀದಿಗಾಗಿ ನೀಡಲಾಗುತ್ತದೆ.
– ಪೋಷಕರ ಮನಸ್ಥಿತಿಗೆ ಹಾಗೂ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಮಕ್ಕಳನ್ನು ಶಾಲೆಗೆ/ ಮನೆಯಲ್ಲಿಯೇ ಕಲಿಕೆ/ ಮನೆಯಿಂದಲೇ ಆನ್ಲೈನ್ ಶಾಲೆಗೆ ಅವಕಾಶವಿರುತ್ತದೆ.
– 6、7、8 ನೇ ತರಗತಿಯ ಮಕ್ಕಳಿಗೆ ಮೂಲ ಸರಳ ಶಿಕ್ಷಣದೊಂದಿಗೆ ಕೌಶಲಾಧಾರೀತ ಪ್ರಾಯೋಗಿಕ ಶಿಕ್ಷಣವನ್ನು (ಪ್ರಾಜೆಕ್ಟ್ ವರ್ಕ್) ನೀಡಲಾಗುವುದು. ಇದರಿಂದ ಪ್ರತಿದಿನದ ಚಟುವಟಿಕೆಗಳಾದ ಬ್ಯಾಂಕಿಂಗ್, ಶಾಪಿಂಗ್, ಸಂಚಾರ ಪ್ರಜ್ಞೆ ಅಡಿಗೆ, ತೋಟಗಾರಿಕೆ, ಕೃಷಿ, ನೈರ್ಮಲ್ಯ ಐಟಿ ಮತ್ತು ತಾಂತ್ರಿಕ ಕೌಶಲ್ಯಗಳು, ಕ್ರೀಡೆಗಳು, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳು, ಹಾಸ್ಪಿಟಾಲಿಟಿ ಜೊತೆಗೆ ಅವರ ತಂದೆ-ತಾಯಿಯರ ವೃತ್ತಿಗಳ
– ಅರ್ಹತೆ ಆಧಾರಿಸಿ (Reserved for Deserved) ಸಿ.ಇ.ಟಿ, ನೀಟ್ನಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ (ರಾಂಕಿಂಗ್) ಅತ್ಯುತ್ತ್ತಮ ವಿದ್ಯಾರ್ಥಿಗಳಲ್ಲಿ ಇಂಜಿನಿಯರ್ ಕೋರ್ಸ್ ಗಳಿಗೆ 15%, ವೈಧ್ಯಕೀಯಕ್ಕೆ 30%, ಪದವಿ ಕೋರ್ಸುಗಳಿಗೆ 20% ವಿಧಾರ್ಥಿಗಳಿಗೆಸರ್ಕಾರದ ವತಿಯಿಂದ ಸಂಪೂರ್ಣವಾಗಿ ಖರ್ಚುವೆಚ್ಚಗಳನ್ನು ನೀಡಲಾಗುವುದು.
– ಸಾತ್ತಕೋತ್ತರ, ಮಾಸ್ಟರ್ ಮುಂತಾದ ಉನ್ನತ ಶಿಕ್ಷಣ ಅಧ್ಯಯನಗಳನ್ನು ಮುಂದುವರಿಸಲು ಮೆರಿಟ್ ಆಧಾರದ ಮೇಲೆ 10% ವಿಧಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುವುದು, ಉಚಿತ ಶಿಕ್ಷಣವನ್ನು ಪಡೆಯಲು ಕನಿಷ್ಠ 5 ವರ್ಷಗಳ ಕಾಲ ವೇತನದೊಂದಿಗೆ ಸರ್ಕಾರೀ ಸೇವೆ ಸಲ್ಲಿಸಲು ಬದ್ಧತೆ (ಕಮಿಟ್ಮೆಂಟ್) ನೀಡಬೇಕಾಗುತ್ತದೆ. ಲಭ್ಯತೆಯ ಆಧಾರದ ಮೇಲೆ ಈ ಬದ್ಧತೆಯನ್ನು ಬಳಸಿಕೊಳ್ಳಲಾಗುವುದು.
– ಖಾಸಗೀ ಶಾಲೆಗಳು ಹಾಗೂ ಕಾಲೇಜುಗಳ ಹೆಚ್ಚುವರಿ ಶುಲ್ಕವನ್ನು ನಿಯಂತ್ರಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು (ಅಗತ್ಯಕ್ಕಿಂತ ಅತಿಯಾದ ಶುಲ್ಕವನ್ನು ವಿಧಿಸುವುದನ್ನು ನಿರ್ಭಂಧಿಸಲಾಗುವುದು). ಖಾಸಗೀ ಶಾಲೆಗಳು ಹಾಗೂ ಕಾಲೇಜುಗಳು ಒದಗಿಸುವ ಸೌಲಭ್ಯಗಳ ಆಧಾರದ ಮೇಲೆ ಪೋಷಕರಿಗೆ ಶುಲ್ಕವನ್ನು ವಿಧಿಸುವಂತೆ ಕಾನೂನು ತರಲಾಗುವುದು.
– ಡಿಪ್ಲೊಮೋ, ಐಟಿಐ, ಇಂಜಿನಿಯರಿಂಗ್, ಪದವಿ, ಸಾತ್ತಕೋತ್ತರ ಹಾಗೂ ಇತರ ಎಲ್ಲಾ ಕೋರ್ಸ್’ಗಳ ವ್ಯಾಸಂಗದ ಅವಧಿ ಹಾಗು ಪಠ್ಯಕ್ರಮಗಳನ್ನು ಪ್ರಸ್ತುತ ತಂತ್ರಜ್ಞಾನ ಹಾಗೂ ಬೇಡಿಕೆಗಳ ಅನುಸಾರವಾಗಿ ಕಾಲ ಕಾಲಕ್ಕೆ ಪರಿಷ್ಕರಿಸಲಾಗುವುದು. (ಅಪ್ಗ್ರೇಡ್ ಮಾಡಲಾಗುವುದು).
– ಸೃಜನಶೀಲ ಕಲ್ಪನೆಗಳನ್ನು ನನಸಾಗಿಸಲು ಸರ್ಕಾರವು ವೇದಿಕೆಯನ್ನು ಕಲ್ಪಿಸುತ್ತದೆ. ಈ ವೇದಿಕೆಯ ಮೂಲಕ ಪೇಟೆಂಟ್ ಪಡೆಯುವುದರೊಂದಿಗೆ ಸಂಭಾವ್ಯ ಹೂಡಿಕೆದಾರರೊಂದಿಗೆ ಸಂಪರ್ಕ ಹೊಂದಲು ಪೆಟ್ರೋತ್ಸಾಹ ಸರ್ಕಾರವು ನೀಡುತ್ತದೆ.
– ಸಾಮಾನ್ಯಜ್ಞಾನದ ಅಭಿವೃದ್ಧಿಗಾಗಿ ಪ್ರಾಣಿ-ಪಕ್ಷಿ, ಗಿಡ-ಮರ, ಹೂವುಹಣ್ಣು ತಿಂಡಿ- ತಿನಿಸು ಇತ್ಯಾದಿಗಳ ಪರಿಚಯ ಮಾಡಿಕೊಡಲಾಗುವುದು. ಯಾವುದೇ ಬಲವಂತದ ಶಿಕ್ಷಣ ಇರುವುದಿಲ್ಲ. ಮಕ್ಕಳಿಗೆ ನೈತಿಕ ಶಿಕ್ಶಣವನ್ನು ಪರಿಚಯಿಸಲಾಗುವುದು. (ಉದಾ: ನಡವಳಿಕೆ, ಶುಚಿತ್ವ, ಸ್ವಂತಿಕೆ ಬಗೆಗಿನ ಕೌಶಲ್ಯಗಳು, ಮನೆ-ಶಾಲೆ-ಪರಿಸರದ ಬಗೆಗಿನ ಕಾಳಜಿ ಹಾಗೂ ಸ್ವಚ್ಛತೆ) ಇದರಿಂದಾಗಿ ಮಕ್ಕಳು ಹೆಚ್ಚು ಸೃಜನಾತಾಕವಾಗಿ ಕೌಶಲ್ಯವನ್ನು ರೂಡಿಸಿಕೊಳ್ಳುತ್ತಾರೆ.
– ಎಲ್ಲಾ ಸರಕಾರೀ ಶಾಲೆಯ ಮಕ್ಕಳಿಗೆ ಮೂರನೇ ತರಗತಿ ಇಂದ ನೋಟ್ ಬುಕ್ ಸೆಟ್ ಜೊತೆಗೆ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್ಗಳನ್ನು ನೀಡಲಾಗುವುದು. ದೃಶ್ಯ ಹಾಗೂ ಧ್ವನಿಗಳೊಂದಿಗೆ ಶಿಕ್ಷಣ ಕಲಿಸುವ (ಆಡಿಯೋ & ವಿಡಿಯೋ ಸಾರ್ಟ್’ಕ್ಲಾಸ್) ವ್ಯವಸ್ಥೆಯಿರುತ್ತದೆ. ಕನ್ನಡ, ಇಂಗ್ಲೀಷ್ ಮತ್ತು ಮೂರನೇ ಭಾಷೆಯನ್ನು ಸರಳ ವ್ಯಾಕರಣದೊಂದಿಗೆ ಓದುವುದು, ಬರೆಯುವುದು ಹಾಗೂ ಮಾತನಾಡುವುದನ್ನು ಕಲಿಸಲಾಗುವುದು.
– ಟ್ಯಾಬ್ಲೆಟ್ಗಳಲ್ಲಿ ಸಾಮಾನ್ಯಜ್ಞಾನ, ಸಮಾಜ ಶಾಸ್ತ್ರ, ಗಣಿತ, ವಿಜ್ಞಾನವನ್ನು ಜೀವನಕ್ಕೆ ಉಪಯೋಗವಾಗುವ ಮತ್ತು ಅಳವಡಿಸಿಕೊಳ್ಳುವಂತಹ ಎಲ್ಲಾ ವಿಷಯಗಳನ್ನು ದೃಶ್ಯ ಹಾಗೂ ಧ್ವನಿ ಮಾಧ್ಯಮಗಳಿಂದ ಟ್ಯಾಬ್ಲೆಟ್ಟೊಳಗೆ ಅಳವಡಿಸಿ ಮಕ್ಕಳಿಗೆ ಆಕರ್ಷಕ ರೀತಿಯಲ್ಲಿ ಕಲಿಸಿಕೊಡಲಾಗುವುದು. ಈ ಟ್ಯಾಬ್ಲೆಟ್ಗಳಲ್ಲಿ ಹತ್ತನೇ ತರಗತಿಯವರೆಗಿನ ಎಲ್ಲಾ ಪಠ್ಯಕ್ರಮಗಳು ಹಾಗೂ ಪಾಠಗಳನ್ನು ಅಳವಡಿಸಿರಲಾಗುತ್ತದೆ.
– ಹೊಸ ಶಿಕ್ಷಣ ವ್ಯವಸ್ಥೆಗಾಗಿ ತಂತ್ರಜ್ಞಾನ ಮತ್ತು ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಉತ್ತಮ ತರಬೇತಿ ಸರ್ಕಾರದ ವತಿ ಇಂದ ನೀಡಲಾಗುವುದು.
– ಎಸ್. ಎಸ್. ಎಲ್. ಸಿ (೧೦ ನೇ ತರಗತಿ) ನಂತರ ಅವಶ್ಯಕತೆಗಳ ಆಧಾರದ ಮೇಲೆ ಒಂದು ಅಥವಾ ಎರಡು ವರ್ಷಗಳ ಪೂರ್ವ ವೃತ್ತಿಪರ ಕೋರ್ಸ್ ಪಿ.ಪಿ.ಸಿ (ಪ್ರೀ ಪೆಟ್ರೋಫೆಷನಲ್ ಕೋರ್ಸ್) ಪ್ರಾರಂಭಿಸಲಾಗುವುದು.
– ಮಾರುಕಟ್ಟೆಯ ಪ್ರಸ್ತುತ ಬೇಡಿಕೆ ಹಾಗೂ ನೂತನ ತಂತ್ರಜ್ಞಾನಗಳ ಮಟ್ಟದಲ್ಲಿ ಕೈಗಾರಿಕೆ ಹಾಗೂ ಉದ್ಯೋಗ ಆಧಾರಿತ ವೃತ್ತಿಪರ ಶಿಕ್ಷಣ ವ್ಯವಸ್ಥೆಯ ಪಿ.ಪಿ.ಸಿ (ಪ್ರೀ ಪೆಟ್ರೋಫೆಷನಲ್ ಕೋರ್ಸ್) ಕೋರ್ಸುಗಳಿಗೆ ನೂತನ ತಂತ್ರಜ್ಞಾನಗಳ ಪಠ್ಯಕ್ರಮಗಳನ್ನು ರೂಪಿಸುವಲ್ಲಿ ಉದ್ಯಮಗಳು ಸಹ ಭಾಗವಹಿಸುತ್ತದೆ. ಪ್ರಾಯೋಗಿಕ ತರಬೇತಿಗಳೊಂದಿಗೆ ನಿರ್ಧಿಷ್ಠ ಉದ್ಯೋಗಗಳಿಗೆ ವಿಧಾರ್ಥಿಗಳನ್ನು ಈ ವ್ಯವಸ್ಥೆಯು ಪೂರೈಸುತ್ತದೆ.
– ಅರ್ಹತೆ ಆಧರಿಸಿ ಮೀಸಲಾತಿ ಮೆಟ್ರಿಕ್ (10ನೇ ತರಗತಿ) ನಂತರ ಪ್ರತಿಶತದ (ಪರ್ಸಂಟೇಜ್) ಆಧಾರದ ಮೇಲೆ ಅತ್ಯುತ್ಹ್ಮವಾಗಿ ತೇರ್ಗಡೆಯಾದ 15% ವಿಧಾರ್ಥಿಗಳಿಗೆ ಪಿ.ಯು. ಸಿ ಗಳಲ್ಲಿ ಮತ್ತು ಪಿ.ಪಿ.ಸಿ ಕೋರ್ಸ್ ಗಳಲ್ಲಿ ಸರ್ಕಾರದ ವತಿಯಿಂದ ಸಂಪೂರ್ಣವಾಗಿ ಶಿಕ್ಷಣದ ಖರ್ಚುವೆಚ್ಚಗಳನ್ನು ನೀಡಲಾಗುವುದು.
– ಮಗುವಿನ ಮೌಲ್ಯಮಾಪನವನ್ನು ಆರು ತಿಂಗಳಿಗೊಮ್ಮೆ ಮಾಡಲಾಗುತ್ತದೆ. ಆನ್ಲೈನ್ ಸ್ಕೂಲ್ ಮತ್ತು ಮನೆ ಕಲಿಕೆ (ಹೋಂ ಸ್ಕೂಲಿಂಗ್) ವಿದ್ಯಾರ್ಥಿಗಳು ತಿಂಗಳಿಗೊಮ್ಮೆ ಮೌಲ್ಯಮಾಪನಕ್ಕೆ ಷೋಷಕರ ಇಚ್ಚೆಗೆ ಅನುಗುಣವಾಗಿ ಒಳಪಡಬಹುದಾಗಿದೆ.
– ಪ್ರಾಥಮಿಕ ಹಂತದ ಶಿಕ್ಷಣವು ಭಾಷಾ ವಿಷಯಗಳನ್ನು ಹೊರತುಪಡಿಸಿ ಲಿಖಿತ ಪರೀಕ್ಷೆಗಳಿಂದ ಮುಕ್ತವಾಗಿರುತ್ತದೆ ಮಕ್ಕಳಲ್ಲಿ ಗ್ರಹಿಸುವಿಕೆ, ತರ್ಕ, ಸೃಜನಶೀಲತೆ, ಪ್ರಯೋಗಶೀಲತೆ, ವಿಶ್ಲೇಷಣೆ, ಅನ್ವಯಿಸುವಿಕೆ ತೊಡಗಿಸುವಿಕೆ, ಬುದ್ಧಿವಂತಿಕೆ ಸಾಮರ್ಥ್ಯಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
– ಹತ್ತನೇ ತರಗತಿಯ ಪರೀಕ್ಷೆಯು ಎಲ್ಲಾ ವಿಧಾರ್ಥಿಗಳಿಗೂ (ಆನ್ಲೈನ್ ಸ್ಕೂಲ್ ಮತ್ತು ಮನೆಕಲಿಕೆ (ಹೋಂ ಸ್ಕೂಲ್) ವಿದ್ಯಾರ್ಥಿಗಳು) ಅನ್ವಯ್ಸಿಸುತ್ತದೆ.
– ಮೂಲವೇತನದೊಂದಿಗೆ ಪೆಟ್ರೋತ್ಸಾಹ ಧನ ಆಧಾರಿತ ಕಾರ್ಯಕ್ರಮಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಲಯಗಳಲ್ಲಿ ಜಾರಿಗೆ ತರಲಾಗುವುದು. ಶಿಕ್ಷಕರು/ ಶಿಕ್ಷಕರ ತಂಡವು ನಿರ್ಧಿಷ್ಟಪಡಿಸಿದ ಪ್ರದೇಶಗಳ ಶಾಲೆಗಳನ್ನು ನಡೆಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೊಡಲಾಗುವುದು. ಕಾರ್ಯದಕ್ಷತಯ ಫಲಿತಾಂಶವನ್ನು ಸುಧಾರಿಸಲು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿರಲಾಗುತ್ತದೆ.
– ಕನ್ನಡದಲ್ಲಿ ಎಲ್ಲಾ ವೃತ್ಹಿಪರ ಶಿಕ್ಷಣವನ್ನು ಪಡೆಯಲು ಕೆಲವು ಇಂಗ್ಲಿಷ್ ಪದಗಳನ್ನು ಬಳಸಿಕೊಂಡು ಆಡುಭಾಷೆಯಲ್ಲಿಯೇ ಲಿಖಿತ ಪರೀಕ್ಷೆಗಳನ್ನು ಬರೆಯುವ ಮೂಲಕ ಇಂಜಿನಿಯರಿಂಗ್, ಮೆಡಿಕಲ್, ಡಿಪ್ಲೋಮ, ಪದವಿ ಹಾಗೂ ಎಲ್ಲಾ ಕೋರ್ಸ್ ಗಳಲ್ಲಿ ಅವಕಾಶ ಮಾಡಿ ಕೊಡಲಾಗುತ್ತದೆ.
ಇದು ಉಪೇಂದ್ರ ಅವರ ಪ್ರಣಾಳಿಕೆಯ ಅಂಶ ಗಳಾಗಿದ್ದವು. ಭಾರತದಲ್ಲಿ ಇರುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಿಮಗೆ ಏನು ಅನಿಸುತ್ತದೆ? ಎಲ್ಲಿ ಏನೂ ಮಾಡಿದರೆ ಇದರ ಸುಧಾರಣೆ ಆಗಬಹುದು? ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.