‘ಎನ್ ಐಡಿಯಾ ಕ್ಯಾನ್ ಚೇಂಜ್ ದಿ ಲೈಫ್’ ಅನ್ನೋ ಹಾಗೆ ಒಂದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮತ್ತು ಬೆಳವಣಿಗೆಗಾಗಿ ವಿನೂತನ ಎನಿಸಿಕೊಳ್ಳುವ ಐಡಿಯಾ ಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಹೇಗೆ ಹೊರ ರಾಜ್ಯಗಳು ಮತ್ತು ಹೊರ ದೇಶಗಳು ಈ ತರಹದ ಐಡಿಯಾ ಗಳನ್ನು ಇಟ್ಟು ಕೊಂಡು ತಮ್ಮ ಸಮಾಜದ ಸುಧಾರಣೆಗೆ ಮುಂದಾಗಿದ್ದಾರೋ ಹಾಗೆಯೇ ನಾವು ಆ ಹಾದಿಯಲ್ಲಿ ಹೆಜ್ಜೆ ಇಟ್ಟರೆ ಎಷ್ಟು ಚಂದ, ಅಲ್ವಾ? ಮೋದಿ ಅವರ ಗುಜರಾತ್ ಮಾದರಿ ಆಗಲಿ ಜಪಾನಿನ ತಂತ್ರಜ್ಞಾನ ಮಾದರಿ ಆಗಲಿ, ನಮಗೆ ಸ್ಫೂರ್ತಿಯೇ ಹೌದು. ಇಂತಹ ಐಡಿಯಾ ಗಳನ್ನು ಇಟ್ಟು ಕೊಂಡು ಸಮಾಜ ಕಟ್ಟುವ ಕಾಯಕ ಹೊತ್ತು ಬಂದಿರುವ ಪ್ರಜಾಕೀಯ ಪಕ್ಷದ ಒಂದು ಐಡಿಯಾ ವನ್ನು ನಿಮ್ಮ ಮುಂದೆ ಇಡಲು ಇಷ್ಟ ಪಡುತ್ತೇವೆ.
ನಿಮಗೆಲ್ಲ ಗೊತ್ತಿರುವ ಹಾಗೆ, ಬೆಂಗಳೂರಿನಲ್ಲಿ ಟ್ರಾಫಿಕ್ ನದ್ದೇ ದೊಡ್ಡ ಸಮಸ್ಯೆ. ದಿನೇ ದಿನೇ ಹೆಚ್ಚುತ್ತಿರುವ ಜನ ಸಂಖ್ಯೆ , ವಲಸೆ ಬರುತ್ತಿರುವ ಜನಗಳ ಕಾರಣದಿಂದಲೂ ಅಥವಾ ಒಂದು ನಗರವನ್ನು ಕಟ್ಟುವ ಅವ್ಯವಸ್ಥೆ ಇಂದಲೋ, ಇಂದು ಬೆಂಗಳೂರು ಸಹಿಸಿಲಾರದ ಟ್ರಾಫಿಕ್ ಸಮಸ್ಯೆಗೆ ಗುರಿ ಆಗಿ ಹೋಗಿದೆ. ಇದನ್ನು ಹೇಗೆ ಒಂದು ಸುವ್ಯವಸ್ಥಿತ ರೀತಿಯಲ್ಲಿ, ಕಡಿಮೆ ಖರ್ಚಿನಲ್ಲಿ ಬಗೆ ಹರಿಸಬಹುದು ಎಂಬ ಚರ್ಚೆಯಲ್ಲಿ, ಉಪೇಂದ್ರ ಅವರ ನೇತೃತ್ವದ ಪ್ರಜಕೀಯಾ ಪಕ್ಷವು (ಅನಂತ್ ಕೃಷ್ಣ ) ಈ ಸೂಪರ್ ಐಡಿಯಾ ವನ್ನು ಹಂಚಿಕೊಂಡಿದ್ದಾರೆ.
ಬಳಕೆ ಮಾಡದ ರೈಲ್ವೆ ಟ್ರ್ಯಾಕ್ ಗಳ ಮೂಲಕ ಒಂದು ಉತ್ತಮ ಕನೆಕ್ಟಿವಿಟಿ
ಬೆಂಗಳೂರಿನ ಸುತ್ತ ಮುತ್ತಲೂ ಒಂದೇ ಬ್ರಾಡ್ ಗೇಜ್ ಇರುವ ರೈಲ್ವೆ ಟ್ರ್ಯಾಕ್ ಗಳು ತುಂಬಾ ಇದ್ದಾವೆ. ಆದರೆ ಅದರಲ್ಲಿ ತುಂಬಾ ರೈಲ್ವೆ ಟ್ರ್ಯಾಕ್ ಗಳು ವಿರಳ ವಾಗಿ ಬಳಕೆಯಲ್ಲಿ ಇರುವುದು ಸುಮಾರು ಜನರಿಗೆ ಗೊತ್ತಿರದ ವಿಷಯ. ಬೆಂಗಳೂರಿನಿಂದ ಸೇಲಂಗೆ ಹೋಗುವ ರೈಲ್ವೆ ಟ್ರ್ಯಾಕ್ ಗಳನ್ನು ನಾವು ಸರಿಯಾಗಿ ಬಳಿಸಿ ಕೊಂಡರೆ, ಹೊಸೂರ್ ರೋಡ್, ಕೃಷ್ಣ ರಾಜ ಪುರಂ ಮತ್ತು ಬಹುತೇಕ ಐ ಟಿ ಬಿ ಟಿ ಇಂಡಸ್ಟ್ರಿಯಲ್ ಏರಿಯಾ ಗಳ ಟ್ರಾಫಿಕ್ ಸಮಸ್ಯೆ ಮತ್ತು ಬೊಮ್ಮಸಂದ್ರ – ಬೊಮ್ಮನಹಳ್ಳಿ ಬಳಿ ಇರುವ ಟ್ರಾಫಿಕ್ ಗೋಜನ್ನು ಪರಿಹರಿಸಬಹುದು.
ಇದು ಹೇಗೆ ಸಾಧ್ಯ?
ಈ ಸೇಲಂ- ಬೆಂಗಳೂರು ರೈಲ್ವೆ ಟ್ರ್ಯಾಕ್ ಏನಿದೆ ಇದು ಔಟರ್ ರಿಂಗ್ ರೋಡ್ ಮತ್ತು ನಾಗವಾರ ಲೇಕ್ ಹತ್ತಿರ ಹಾದು ಹೋಗುತ್ತದೆ. ನಾವು ಬೆಂಗಳೂರಿನಿಂದ ಬೊಮ್ಮಸಂದ್ರಕ್ಕೆ ಈ ಬಳಕೆ ಆಗದ ಟ್ರ್ಯಾಕ್ ನ ಮೇಲೆ ರೈಲ್ವೆ ಸರ್ವಿಸ್ ಅನ್ನು ಶುರು ಮಾಡಿದರೆ, ಜನರು ಈ ರೈಲುಗಳ ಬಳಕೆ ಮಾಡಬಹುದು. ಉದಾಹರಣೆಗೆ – ಯೆಲಹಂಕ ಟು ಬೊಮ್ಮಸಂದ್ರ, ನೆಲಮಂಗಲ ಟು ಬೊಮ್ಮಸಂದ್ರ, ಕೆಂಗೇರಿ ಟು ಬೊಮ್ಮಸಂದ್ರ ಮತ್ತು ಬೆಂಗಳೂರು ಸೆಂಟ್ರಲ್ ಟು ಬೊಮ್ಮಸಂದ್ರ. ಈಗ ಇವುಗಳನ್ನು ಹೇಗೆ ಕನೆಕ್ಟ್ ಮಾಡುವುದು ಅಂತ ನಿಮಗೆ ಅನಿಸಬಹುದು. ಈ ಟ್ರ್ಯಾಕ್ ಆಗಲೇ ಕನೆಕ್ಟೆಡ್ ಆಗಿರೋದ್ರಿಂದ ಹೊಸದಾಗಿ ಮಾಡುವ ಸಮಸ್ಯೆ ಇರುವುದುಲ್ಲ. ಜಸ್ಟ್ ಟೈಮಿಂಗ್ ಮತ್ತು ಲೋಡ್ ಅನ್ನು ನಾವು ಮ್ಯಾನೇಜ್ ಮಾಡಿರೆ ಸಾಕು ಎಂದು. ಸದ್ಯಕ್ಕೆ ಇದು ಒಂದು ಐಡಿಯಾ ಅಷ್ಟೇ ಮತ್ತು ಇದನ್ನು ಕಾರ್ಯ ರೂಪಕ್ಕೆ ತಂದರೆ, ಟ್ರಾಫಿಕ್ ಸಮಸ್ಯೆ ಶೇಕಡಾ ೫೦ ರಷ್ಟು ಕಡಿಮೆ ಆಗುವ ಎಲ್ಲ ಸಾಧ್ಯತೆಗಳು ಇವೆ.
ಸ್ವಲ್ಪ ಡೀಟೇಲ್ ಆಗಿ ನೋಡೋಣ
ಈ ಬೆಂಗಳೂರು ಸೇಲಂ ಟ್ರ್ಯಾಕ್, ಬೆಂಗಳೂರು ಕಂಟೋನ್ಮೆಂಟ್ ದಾಟಿದರೆ ಒಂದೇ ಮಾರ್ಗದ ಟ್ರ್ಯಾಕ್ ಆಗಿರುತ್ತದೆ. ಇದು ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ನಾಗವಾರ ಟ್ರ್ಯಾಕ್ ಗೆ ಸೇರಿ ಕೊಳ್ಳುತ್ತದೆ. ಇಲ್ಲಿ ಸೂಕ್ತವಾದ ಜಾಗದಲ್ಲಿ ಒಂದು ಸ್ಟೇಷನ್ ಕಟ್ಟಿಸಿ, ಬೇಕಾದ ವ್ಯವಸ್ಥೆ ಮಾಡಿದರೆ, ಕೇವಲ ಒಂದು ಕಿ.ಮೀ ನಲ್ಲಿ ಮಾನ್ಯತಾ ಟೆಕ್ ಪಾರ್ಕ್ ಸಿಗುತ್ತದೆ. ಒಂದು ವಾಕ್ ವೇ ಥರ ಮಾಡಿದರೆ ಅಲ್ಲಿ ಕೆಲಸ ಮಾಡುವ ಎಲ್ಲರೂ ಬೆಂಗಳೂರಿನ ಯಾವುದೇ ಮೂಲೆ ಇಂದ ಬಂದರೂ, ಈ ರೈಲಿನ ಸೇವೆ ಪಡೆಯಬಹುದು. ಮೆಜೆಸ್ಟಿಕ್ ಇಂದ ಕನೆಕ್ಟಿವಿಟಿ ಇದೆ, ಮೈಸೂರ್ ರೋಡ್ ಇಂದ ಬರೋರು ಕೆಂಗೇರಿ ಇಂದ ಬರಬಹುದು ಅಥವಾ ನಾರ್ತ್ ಕಡೆ ಇಂದ ಆದರೆ ತುಮಕೂರ್ ರೋಡ್ ಅಥವಾ ಯೆಲಹಂಕ ಕಡೆ ಇಂದ ಬರಬಹುದು. ಹೇಗೆ ಬಂದರೂ ಈ ವಾಕ್ ವೇ ಮೂಲಕ ಮಾನ್ಯತಾ ಟೆಕ್ ಪಾರ್ಕ್ ಗೆ ಆರಾಮಾಗಿ ಸೇರ ಬಹುದು. ಮಾಮೂಲಿ ರೋಡ್ ಮೂಲಕ ಬಂದರೆ ಏನಿಲ್ಲ ಅಂದರೂ ಎರಡು ಘಂಟೆ ಆಗುತ್ತದೆ. ಈ ರೈಲಿನ ಮೂಲಕ ಬಂದರೆ ಅರ್ಧ ಘಂಟೆ ಯಲ್ಲಿ ಆರಾಮಾಗಿ ಸೇರಬಹುದು ಅನ್ನುವುದು ಮುಖ್ಯವಾದ ವಿಷಯ.
ಒಂದೇ ಟ್ರ್ಯಾಕ್ ಹಲವು ಕನೆಕ್ಟಿವಿಟಿ
ಈ ಟ್ರ್ಯಾಕ್ ಸ್ವಲ್ಪ ಮುಂದೆ ಹಾದು ಔಟರ್ ರಿಂಗ್ ರೋಡ್ ಮತ್ತು ದೊಡ್ಡ ನೆಕ್ಕುಂದಿ ಹತ್ತಿರ ಬರುತ್ತದೆ. ನಿಮಗೆ ಗೊತ್ತಿರುವ ಹಾಗೆ ದೊಡ್ಡ ನೆಕ್ಕುಂದಿ ಹತ್ತಿರ ಬಾಗ್ಮನೆ ಟೆಕ್ ಪಾರ್ಕ್ ಇದೆ ಮತ್ತೆ ಅಲ್ಲೂ ಸಾವಿರಾರುಜನ ಕೆಲಸ ಮಾಡುತ್ತಾರೆ. ದೊಡ್ಡ ನೆಕ್ಕುಂದಿ ಬಳಿ ಇರುವ ಕೆರೆ ಹತ್ತಿರ ಒಂದು ಸ್ಟೇಷನ್ ಮಾಡಿ, ವಾಕ್ ವೇ ಮಾಡಿದರೆ, ಈ ಟ್ರ್ಯಾಕ್ ಅನ್ನು ಬಳಸಬಹುದು. ಇಷ್ಟೇ ಅಲ್ಲ ಇದು ಹೀಗೆ ಮುಂದು ವಾರಿತಾ ಐ.ಟಿ.ಪಿ.ಲ್ ಗೆ ಕನೆಕ್ಟ್ ಮಾಡಬಹುದು. ಹೀಗೆ ೪ ಕೆ.ಮೀ ಮುಂದೆ ಬಂದರೆ ಬೆಳ್ಳಂದೂರ್ ಸ್ಟೇಷನ್ ಇದೆ. ಈ ಬೆಂಗಳುರು-ಸೇಲಂ ಟ್ರ್ಯಾಕ್ ಅನ್ನು ಇಲ್ಲಿ ಕನೆಕ್ಟ್ ಮಾಡಿ, ರೈಲು ಓಡಿಸಿದರೆ, ಬೆಳ್ಳಂದೂರ್ ಸ್ಟೇಷನ್ ಇಂದ ರಿಂಗ್ ರೋಡ್ ಗೆ ಬರಿ ಅರ್ಧ ಕೆ.ಮೀ . ಈ ಮೂಲಕ ಕೆಂಗೇರಿ ಯಲ್ಲಿ ಇರುವ ಪ್ರಜೆಯೂ ಸಹ ಆರಾಮಾಗಿ ಇಲ್ಲಿಗೆ ಕನೆಕ್ಟ್ ಆಗಬಹುದು.
ಈ ಟ್ರ್ಯಾಕ್ ಮುಂದೆ ಸರ್ಜಾಪುರ್ ರೋಡ್, ಇಲೆಕ್ಟ್ರಾನಿಕ್ ಸಿಟಿ ಕೂಡ ಸೇರುತ್ತದೆ. ಇದರ ಬಗ್ಗೆ ತಿಳಿಯಲು ಈ ವಿಡಿಯೋ ನೀವು ನೋಡಬಹುದು.
ಐಡಿಯಾ ಏನೋ ಚೆನ್ನಾಗಿದೆ. ಆದರೆ ಇದು ಅಂದು ಕೊಂಡಷ್ಟು ಸುಲಭ ಅಲ್ಲ ಆದರೆ ಕಷ್ಟವೂ ಅಲ್ಲ. ಐಡಿಯಾ ಗಳ ಮೂಲಕ ಸಮಾಜ ಕಟ್ಟಲು ಹೋರಾಡುತ್ತಿರುವ ಉಪೇಂದ್ರ ಮತ್ತು ಅವರ ಪಕ್ಷಕ್ಕೆ ಜಯ ಸಿಗಲಿ ಎಂದು ನಾವು ಆಶಿಸುತ್ತೇವೆ. ನೀವು ಈ ರಾಜ್ಯದ ಪ್ರಜೆಯಾಗಿ ಅರ್ಹ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ಹಾಕಿದ್ದೇ ಆದರೆ, ನವ ಕರ್ನಾಟಕದ ಕನಸು ಖಂಡಿತಾ ನನಸು ಆಗುವುದರಲ್ಲಿ ಅನುಮಾನವಿಲ್ಲ.