ಇನ್ನೇನು ಲೋಕಸಭೆ ಚುನಾವಣೆಗೆ ಹೆಚ್ಚು ದಿನಗಳು ಉಳಿದಿಲ್ಲ. ಪಕ್ಷದ ಪ್ರಚಾರ ಜೋರಾಗಿ ನಡೆಸಿದ್ದಾರೆ, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು. ಮಂಡ್ಯದ ಜನತೆಗೆ ಈಗ ಆಗಲೇ ರಾಜಕೀಯದ ಬಿಸಿ ತಟ್ಟಿದೆ. ದಿನ ದಿಂದ ದಿನಕ್ಕೆ ಮಂಡ್ಯದ ಚುನಾವಣೆ ರೋಚಕ ತಿರಿವು ಪಡೆದುಕೊಳ್ಳುತ್ತಿದೆ. ಸುಮಲತಾ ವಿರುದ್ಧ ರೇವಣ್ಣ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ, ಇದನ್ನು ರಾಜ್ಯದ ಜನರು ಖಂಡಿಸಿದ್ದಾರೆ. ಇನ್ನೂ ಕಾಂಗ್ರೆಸ್ ಪರದಿಂದ ಸುಮಲತಾ ಅವರಿಗೆ ಟಿಕೆಟ್ ಕೊಡುವುದರ ವಿಷಯದಲ್ಲಿ ಖಾತರಿ ಪಡಿಸಲಿಲ್ಲ. ಇದೂ ರಾಜಕೀಯ ಕೊನೆ ಕ್ಷಣಗಳಲ್ಲಿ ಏನು ಬೇಕಾದರೂ ಆಗಬಹುದು, ಎನ್ನುವುದು ಸುಮಲತಾ ಅವರ ಅಭಿಪ್ರಾಯ. ಇಡೀ ಚಿತ್ರರಂಗದ ಕಲಾವಿದರು ಸುಮಲತಾ ಅವರ ನೆರವಿಗೆ ನಿಂತಿದ್ದಾರೆ.
ಕೋಟಿ ಕೋಟಿ ಹಣವನ್ನು ಪಕ್ಷದ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ? ಇಂತಹ ಬ್ರಷ್ಟ ರಾಜಕಾರಣಿಗಳಿಂದ ರಾಜ್ಯದ ಅಭಿವೃದ್ದಿಯನ್ನು ನಿರೀಕ್ಷಿಸುವುದು ಎಷ್ಟು ಮಟ್ಟಿಗೆ ಸರಿ ಎಂದ ರಿಯಲ್ ಸ್ಟಾರ್
ಚುನಾವಣೆಯ ದಿನಾಂಕ ಬಹಿರಂಗವಾಗಿ ವ್ಯಕ್ತ ಪಡಿಸಿದ್ದೆ ತಡ, ಪಕ್ಷದ ಪ್ರಚಾರಕ್ಕೆಂದೆ ಕೋಟಿ ಕೋಟಿ ಹಣವನ್ನು ರಾಜಕಾರಣಿಗಳು ಕರ್ಚು ಮಾಡುತ್ತಿದ್ದಾರೆ. ಇವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ರಿಯಲ್ ಸ್ಟಾರ್ ಉಪೇಂದ್ರ ಪ್ರಶ್ನಿಸಿದ್ದಾರೆ? ಬ್ರಷ್ಟಾಚಾರದ ಮೂಲಕ ಹಣವನ್ನು ಇಷ್ಟು ವರ್ಷಗಳ ವರೆಗೂ ಕೂಡಿಟ್ಟು, ಈಗ ಚುನಾವಣೆಯ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ. ಇಂತಹ ಬ್ರಷ್ಟ ರಾಜಕಾರಣಿಗರಿಂದ ನಾವು ಉತ್ತಮವಾದ ರಾಜ್ಯದ ಅಭಿವೃದ್ದಿಯನ್ನು ನಿರೀಕ್ಷಿಸುವುದು ಎಷ್ಟು ಮಟ್ಟಿಗೆ ಸರಿ ಎಂದು ಟ್ವೀಟ್ ಮಾಡಿದ್ದಾರೆ.
ಚುನಾವಣೆ ಗೆಲ್ಲುವುದಕ್ಕಾಗಿ ಪಕ್ಷಗಳು ಕೋಟಿ ಕೋಟಿ ಖರ್ಚು ಮಾಡುತ್ತಿರುವುದು ಕಾಣಿಸುತ್ತಿದ್ದರೂ ಅವರಿಂದ ಭ್ರಷ್ಟಾಚಾರ ಇಲ್ಲದ ಸರ್ಕಾರ ನಿರೀಕ್ಷಿಸುವುದು ಸರಿಯೇ?
— Upendra (@nimmaupendra) March 12, 2019
ಸೋಶಿಯಲ್ ಮೀಡಿಯಾ ಮೂಲಕ ಪ್ರಜಾಕೀಯ ಪಕ್ಷದ ಪ್ರಚಾರ ಇದೆ ಅಲ್ಲವೇ ರಿಯಲ್ ಪೋಲಿಟಿಕ್ಸ್
ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷಕ್ಕಾಗಿ ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ. ಯಾವುದೇ ಹಣವಿಲ್ಲದೆ ಕೇವಲ ಸೋಷಲ್ ಮೀಡಿಯಾ ಇಂದ ತಮ್ಮ ಪಕ್ಷದ ಪ್ರಚಾರವನ್ನು ಮಾಡುತ್ತಿದ್ದಾರೆ, ಇದೇ ಅಲ್ವಾ ರಿಯಲ್ ಪೋಲಿಟಿಕ್ಸ್ ಅಂದ್ರೆ. ಉಪ್ಪಿಯ ಪ್ರಕಾರ ನಾವು ಜನರ ಹತ್ತಿರ ಸಂಪರ್ಕ ಬೆಳೆಸಿ, ಅವರ ಪ್ರಾಬ್ಲಮ್ಸ್ ಏನು ಎಂದು ವಿಚಾರಿಸಿ ಆನಂತರ ಕ್ರಮ ತೆಗೆದುಕೊಳ್ಳಬೇಕು. ಅಭ್ಯರ್ಥಿಗಳಿಗೆ ಪರೀಕ್ಷೆ ಏರ್ಪಡಿಸಿ ಯಾರ ಆಲೋಚನೆ ಚೆನ್ನಾಗಿದೆಯೋ ಅವರನ್ನ ಮಾತ್ರ ಉಪೇಂದ್ರ ಅವರು ಆಯ್ಕೆ ಮಾಡಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಈಗಾಗಲೇ ರಾಜಕೀಯದ ಕಾಳಗ ಆರಂಭವಾಗಿದೆ, ಪ್ರಜಾಕೀಯದ ವತಿ ಇಂದ ಒಬ್ಬ ಕ್ಯಾಂಡಿಡೆಟ್ ಅನ್ನು ನಾವು ನಿಲ್ಲಿಸಲಿದ್ದೇವೆ ಎಂದು ಉಪ್ಪಿ ತಿಳಿಸಿದ್ದಾರೆ. ಅಭ್ಯರ್ಥಿಗಳ ಹೆಸರು, ಇನ್ನೂ ಯಾವ ಯಾವ ಪ್ರದೇಶಗಳಲ್ಲಿ ಭಾಗವಹಿಸಲಿದ್ದಾರೆ ಎನ್ನುವುದರ ಬಗ್ಗೆ ಉಪ್ಪಿ ತಿಳಿಸಲಿಲ್ಲ.
ಮಂಡ್ಯದ ಚುನಾವಣೆ ಇನ್ನಷ್ಟು ರಂಗೇರುತ್ತಿದೆ ಸುಮಲತಾ ಬೆನ್ನ ಹಿಂದೆ ನಿಂತ ಚಿತ್ರ ಕಲಾವಿದ ಚರಣ್ ರಾಜ್
ಸುಮಲತಾ ಅವರಿಗೆ ಇನ್ನೊಬ್ಬ ಸಿನಿರಂಗದ ಕಲಾವಿದ ಬೆಂಬಲವನ್ನು ನೀಡಿದ್ದಾರೆ, ಹೌದೂ ನನ್ನ ಕಡೆ ಇಂದ ಸಂಪೂರ್ಣ ಬೆಂಬಲ ಸುಮಲತಾ ಅವರಿಗೆ ಎಂದು ಚರಣ್ ರಾಜ್ ಹೇಳಿದ್ದಾರೆ. ಅಂಬರೀಶ್ ಅವರ ಮನೆಯ ಋಣ ನನ್ನ ಮೇಲಿದೆ ಅದನ್ನು ಸ್ವಲ್ಪ ಮಟ್ಟದ ವರೆಗೂ ತೀರಿಸುವುದಕ್ಕೆ, ಇದೊಂದು ಒಳ್ಳೆಯ ಅವಕಾಶ ನನಗೆ ಸಿಕ್ಕಿದೆ, ಅಂಬಿ ಅಣ್ಣ ನಡೆದ ದಾರಿಯಲ್ಲಿ ಸುಮಲತಾ ಅವರು ಕೂಡ ನಡೆಯುತ್ತಿದ್ದಾರೆ, ಆದ್ದರಿಂದ ಯಾವುದೇ ಸಮಯವಾದರೂ ಸರಿ ನಾನು ಸುಮಲತಾ ಪರ ಪ್ರಚಾರಕ್ಕೆ ಸಿದ್ಧ ಎಂದು ಮಾತನಾಡಿದ್ದಾರೆ. ಮಂಡ್ಯ ಚುನಾವಣೆ ಇನ್ನಷ್ಟು ರಂಗೇರುತ್ತಿದೆ. ದರ್ಶನ್ ಅವರ ಸಾತ್ ನಂತರ ಈಗ ಚರಣ್ ರಾಜ್ ಅವರು ಸಹ ಸುಮಲತಾ ಮೇಡಮ್ ಗೆ ಜೈ ಎಂದಿದ್ದಾರೆ.. ಸುಮಲತಾ ಅವರು ಯಾವ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದೇ ರಾಜ್ಯದ ಜನತೆಯ ಚಿಂತೆಯಾಗಿದೆ.
ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook