ಪಾಲಿಟಿಕ್ಸ್ ಇತಿಹಾಸದಲ್ಲೇ ಮೊದಲನೇ ಬಾರಿಗೆ ಎಲೆಕ್ಷನ್ ಕ್ಯಾಂಡಿಡೇಟ್ಸ್ ಗೆ ಪರೀಕ್ಷೆ. ಇದು ಉಪ್ಪಿಯ ಪ್ರಜಾಕೀಯ

upendra 50th movie

ರಾಜಕೀಯದಲ್ಲಿ ಪ್ರಜಾಕೀಯ ಅನ್ನೋ ಹೊಸ ಪಕ್ಷದ ಅಲೆ ಈ ಹಿಂದೆ ಎದ್ದು ಬಹಳ ಸದ್ದು ಮಾಡಿತ್ತು. ಉಪೇಂದ್ರ ನಾಯಕತ್ವದಲ್ಲಿ ಬಂದ ಪಕ್ಷ, ಕಾರಣಾಂತರದಿಂದಾಗಿ ಒಳ ಜಗಳದಿಂದ ಉಪೇಂದ್ರ ಕೊನೆ ಕ್ಷಣದಲ್ಲಿ ಪ್ರಜಾಕೀಯ ಪಕ್ಷದ ಕನಸು ಕೈ ಬಿಡುತ್ತಾರೆ ಮತ್ತೆ ಸಿನೆಮಾದತ್ತ ಇವರ ಪಯಣ ಸಾಗುತ್ತದೆ. ಉಪೇಂದ್ರ ಬೇರೆ ಪಕ್ಷಗಳ ಜೊತೆ ಕೈ ಜೋಡಿಸಬಹುದು, ಆದರೆ ಅಲ್ಲಿ ಇವರು ಅಂದುಕೊಂಡಂತೆ ರಾಜ್ಯದ ಬದಲಾವಣೆ ಮಾಡಲು ಆಗುವುದಿಲ್ಲ ಅಂತಾ ಅರಿತು ತಾವೇ ಸ್ವಂತಾವಾದ ಪಕ್ಷವನ್ನು ಸ್ಥಾಪಿಸುತ್ತಾರೆ. ಪಕ್ಷಕ್ಕೆ ಆಟೋ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಜೆಗಳಿಗಾಗಿ ನನ್ನ ಹೋರಾಟ, ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದೇ ನನ್ನ ಕರ್ತವ್ಯ ಎಂದು ಉಪೇಂದ್ರ ಅವರು ಈ ಹಿಂದೆ ಮಾತನಾಡಿದ್ದರು.

ಮತ್ತೊಮ್ಮೆ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಎಂದು ಧ್ವನಿ ಎತ್ತಿದ್ದಾರೆ

ಈಗ ಮತ್ತೊಮ್ಮೆ ಉಪೇಂದ್ರ ಪ್ರಜಾಕೀಯ ಎಂದು ಧ್ವನಿ ಎತ್ತಿದ್ದಾರೆ. ಈ ಬಾರಿ ನಡೆಯಲಿರುವ ಎಮ್‌ಪಿ ಎಲೆಕ್ಷನ್ ಅಲ್ಲಿ ಉಪೇಂದ್ರ ಅವರ ಪಕ್ಷ ಪ್ರಜಾಕೀಯ ಸ್ಪರ್ದಿಸಲಿದೆ ಅಂತಾ ಹೇಳಲಾಗಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಭಾಗವಹಿಸಲಿದೆ ಎಂದು ಉಪೇಂದ್ರ ತಿಳಿಸಿದ್ದಾರೆ. ನಮ್ಮ ಗುರುತು ಆಟೋ ಕರ್ನಾಟಕದ ಜನತೆ ನಮ್ಮ ಪಕ್ಷಕ್ಕೆ ಮತ ನೀಡಬೇಕು, ನಾವು ದುಡ್ಡಿಗಾಗಿ ಪ್ರಜಾಕೀಯ ಸ್ಥಾಪನೆ ಮಾಡಲಿಲ್ಲ, ಜನರ ಒಳಿತಾಗಿ ಹಾಗೂ ಅವರಿಗೆ ಉತ್ತಮವಾದ ಸೌಕರ್ಯಗಳನ್ನು ಕೊಡಬೇಕೆನ್ನುವುದೇ ಪಕ್ಷದ ಗುರಿ ಅಂತಾ ಪಕ್ಷದ ಮುಖ್ಯ ಸಂಸ್ಥಾಪಕ ಉಪೇಂದ್ರ ಅವರು ಮಾತನಾಡಿದ್ದಾರೆ. ಬೇರೆ ಯಾವ ಪಕ್ಷದೊಂದಿಗೆ ನಾವು ಸೇರುವುದಿಲ್ಲ ಅಂತಾ ಖಚಿತ ಪಡಿಸಿದ್ದಾರೆ.

Advertisements

upendra 50th movie

ಸೆಲೆಕ್ಸನ್, ಎಲೆಕ್ಷನ್,ಕಲೆಕ್ಸನ್ ರಿಜೆಕ್ಸನ್, ಪ್ರಮೋಷನ್ ಈ ಅಯ್ದು ಆದರ್ಶವೇ ಪ್ರಜಕೀಯದ ನಿಲುವು

ಜನರ ಸಮಸ್ಯೆಗಳನ್ನು ಏನು ಎಂದು ಕೇಳಿ ಆನಂತರ ಅದನ್ನು ಬಗೆಹರಿಸುವುದೇ ನಮ್ಮ ಕರ್ತವ್ಯ. ಈಗ ಇದರ ಮೇಲೆ ನಾವು ಗಮನ ಹರಿಸುತ್ತಿದ್ದೇವೆ ಅಂತಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸೆಲೆಕ್ಷನ್, ಎಲೆಕ್ಷನ್, ಕಲೆಕ್ಷನ್, ರಿಜೆಕ್ಷನ್, ಆನಂತರ ಪ್ರಮೋಷನ್ ಈ ಅಯ್ದು ಆದರ್ಶಗಳನ್ನು ಆಯುಧವಾಗಿ ಬಳೆಸಿಕೊಂಡು, ಪಕ್ಷವನ್ನು ಇನ್ನಷ್ಟು ಬಲಶಾಲಿಯನ್ನಾಗಿ ಮಾಡಲಿದ್ದೇವೆ ಎಂದು ಕರ್ನಾಟಕದ ರಿಯಲ್ ಸ್ಟಾರ್ ರಿಯಲ್ ಮಾತುಗಳನ್ನು ಆಡಿದ್ದಾರೆ. ಇಲ್ಲಿ ಯಾವ ಸ್ಟಾರ್ ನಾ ಆಧಾರಿತವನ್ನಾಗಿ ಇಟ್ಟುಕೊಂಡು ಪಕ್ಷಕ್ಕೆ ಮತ ಚಲಾಯಿಸಬೇಡಿ, ಜನಗಳೆ ನಿಜವಾದ ಸ್ಟಾರ್ ಅನ್ನೋ ಮನೋಭಾವ ಇಟ್ಟುಕೊಂಡು ಮತವನ್ನು ಚಲಾಯಿಸಿ ಎಂದು ಸಂದರ್ಶನ ಒಂದರಲ್ಲಿ ಉಪೇಂದ್ರ ಅವರು ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು ಎನ್ನುವುದು ಉಪ್ಪಿಯ ಆಲೋಚನೆ

ಜನರ ಇಚ್ಚೆಯಂತೆ ಇಲ್ಲಿ ರಾಜಕಾರಣ ನಡೆಯುತ್ತದೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅನಿಸಿಕೆಯೇ ವೇದವಾಕ್ಯ ಎಂದು ಉಪೇಂದ್ರ ಅವರು ವಿವರಣೆ ನೀಡಿದ್ದಾರೆ. ಮೊದಲು ಜನರು ತಮ್ಮ ಪ್ರಣಾಳಿಕೆ ಮೂಲಕ ಬರಬೇಕು, ತಮ್ಮ ಬದಾಲಾವಣೆಯ ಆಲೋಚನೆಗಳನ್ನ ವ್ಯಕ್ತ ಪಡಿಸಬೇಕು, ಆಮೇಲೆ ಅದನ್ನು ಕಾರ್ಯ ರೂಪಕ್ಕೆ ಹೇಗೆ ತರುತ್ತಿರಿ ಅಂತಾ ವಿವರಿಸಬೇಕು. ಇದೆಲ್ಲ ಆದ ನಂತರ ನಾವು ಚುನಾವಣೆಗೆ ಒಬ್ಬ ವ್ಯಕ್ತಿಯನ್ನು ನೇಮಕರಿಸಿ, ಆನಂತರ ಸಮೀಕ್ಷೆ ನಡೆಸಲಾಗುತ್ತದೆ. ಪ್ರಜೆಗಳ ನಿರೀಕ್ಷೆಯ ಮಟ್ಟವನ್ನು ತಲುಪುವುದರಲ್ಲಿ ವ್ಯಕ್ತಿ ಯಶಸ್ವಿ ಆದರೆ ಚುನಾವಣೆಗೆ ನಿಲ್ಲಿಸಲಾಗುವುದು, ಇಲ್ಲವಾದಲ್ಲಿ ಅಭ್ಯರ್ಥಿಯನ್ನು ವಜಾ ಗೊಳಿಸಲಾಗುವುದು, ನಾನು ಸ್ಪರ್ದಿಸುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲಾ ಅಂತಾ ಉತ್ತಮ ಪ್ರಜಕೀಯದ ಅಧ್ಯಕ್ಷರಾದ ಉಪೇಂದ್ರ ಅವರು ವರದಿ ನೀಡಿದ್ದಾರೆ.

upendra 50th movie

ಪರೀಕ್ಷೆ ನಂತರವೇ ಎಮ್‌ಪಿ ಸೀಟ್ ಎಂದು ಉಪ್ಪಿ ಘೋಷಿಸಿದ್ದಾರೆ

ಇತರ ರಾಜಕಾರಣಿಗಳು ಮಾತನಾಡಿದಂತೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವು ಇಂತಹ ಕೆಲಸವನ್ನು ಮಾಡುತ್ತೇವೆ ಅಂತಾ ಮಾತನಾಡುವುದು ತಪ್ಪು, ಜನರ ನೋವನ್ನು ಅವರ ಹತ್ತಿರ ಕೇಳಿ ಅದನ್ನು ಈಡೇರಿಸುವುದೇ ನಮ್ಮ ಉತ್ತಮ ಪ್ರಜಾಕಿಯದ ಧೇಯ ಎಂದರು ಉಪ್ಪಿ. 24 ಗಂಟೆ ಪ್ರಜೆಗಳೊಂದಿಗೆ ಸಂಪರ್ಕ ಹೊಂದು ಅವರ ಕಷ್ಟಕ್ಕೆ ನೆರವಾಗುವುದೇ ನಮ್ಮ ಪಕ್ಷದ ಉದ್ದೇಶ ಎಂದು ಸಂದರ್ಶನದ ವೇಳೆಯಲ್ಲಿ ರಿಯಲ್ ಮಾತನ್ನು ಆಡಿದ್ದಾರೆ ಸೂಪರ್ ಸ್ಟಾರ್. ನಾನು ಇಡುವ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ನಿಮ್ಮಗೆ ಎಮ್‌ಪಿ ಸೀಟ್, ಯಾವುದೇ ಜಿಲ್ಲೆ ಆಗಲಿ, ಊರಾಗಲಿ, ಜಸ್ಟ್ ನೀವು ಪರೀಕ್ಷೆಯನ್ನು ಕ್ಲಿಯರ್ ಮಾಡಿದರೆ ಸಾಕು ನಿಮ್ಮಗೆ ಪ್ರಜಾಕೀಯದ ಪಕ್ಷದ ವತಿ ಇಂದ ಎಮ್‌ಪಿ ಕುರ್ಚಿ ಖಾಯಮ್ಮು. ಇದೇ ಉಪ್ಪಿಯ ಡಿಫರೆಂಟ್ ಪ್ರಜಾಕೀಯ

Advertisements

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook