ಉಪೇಂದ್ರರ ಪಕ್ಷವನ್ನು ಯಾಕೆ ಬೆಂಬಲಿಸಬೇಕು ಎಂಬ ಪ್ರಶ್ನೆ ಗೆ ಇಲ್ಲಿದೆ ನೋಡಿ 5 ಪ್ರಬಲ ಉತ್ತರಗಳು

Reasons to Support Upendra party

ಉಪೇಂದ್ರ ಎಂಬ ಕನ್ನಡದ ಸ್ಟಾರ್ ನಟ, ಡಿಫರೆಂಟ್ ನಟ, ಮತ್ತು ಕ್ರಿಯಾಶೀಲ ಕಲಾವಿದ, ಈಗ ಸೋ ಕಾಲ್ಡ್ ಪಾಲಿಟಿಕ್ಸ್ ಗೆ ಪಾದಾರ್ಪಣೆ ಮಾಡಿದ್ದು ಮತ್ತು ಹೊಸ ಪಕ್ಷದ ಲಾಂಚ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ‘ ಕರ್ನಾಟಕ ಪ್ರಜ್ಞಾವಂಥ ಜನತಾ ಪಕ್ಷ ಎಂಬ ಪಕ್ಷವನ್ನು ಕಟ್ಟಿಕೊಂಡು, ದುಡ್ಡಿಲ್ಲದೆ ಚುನಾವಣೆ ಗೆಲ್ಲುತ್ತೇವೆ ಎಂದು ಬಂದಾಗ, ಅರೇ ಇದು ಸಾಧ್ಯ ನಾ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದ್ದು ಅಕ್ಷರಸಹ ಹೌದು. ಪಾಲಿಟಿಕ್ಸ್ ಚುನಾವಣೆ ಎಂದರೆ ಬರೀ ದುಡ್ಡು ಮತ್ತು ಜಾತಿ ಎಂಬ ಕಲ್ಪನೆ ನಮ್ಮಲ್ಲಿ ಅಚ್ಚಾಗಿ ಉಳ್ಕೊಂಡು ಬಿಟ್ಟೆದೆಯಲ್ಲ, ಆದ್ದರಿಂದ ಇಂತಹ ಪ್ರಶ್ನೆಗಳು ಹುಟ್ಟುವುದು ಸಹಜ ಬಿಡಿ. ಮೇಲಾಗಿ, ಹೀಗೆ ಸ್ವತಂತ್ರ ಪಕ್ಷ ಕಟ್ಟಿ ಸೋತವರ ಮತ್ತು ಆಡಿದಂತೆ ನಡೆದು ಕೊಳ್ಳದವರ ಉದಾಹರಣೆಗಳು ನಮ್ಮ ಮುಂದೆ ಇರುವುದರಿಂದ, ಇದೆಲ್ಲ ಸರ್ವೇ ಸಹಜ.

ಕರ್ನಾಟಕದಲ್ಲಿ ಉಪೇಂದ್ರ ಗೆದ್ದರೆ, ಒಂದು ಕ್ರಾಂತಿ ಆಗಬಹುದಾ? ಗೆದ್ದರೆ ಎಷ್ಟು ಸೀಟು ಗೆಲ್ಲಬಹುದು? ಇತಿಹಾಸವೇ ಇಲ್ಲದ ಒಂದು ಪಕ್ಷಕ್ಕೆ ಕನ್ನಡಿಗರು ಸಾಥ್ ಕೊಡ್ತಾರಾ? ಹೀಗೆ ಉಪೇಂದ್ರರ ಹೊಸ ಪಕ್ಷವನ್ನು ಯಾಕೆ ಬೆಂಬಲಿಸಬೇಕು ಎಂಬ ಪ್ರಶ್ನೆ ಹಾಕಿ ಕೊಂಡು ಕೂತಾಗ, ನಮಗೆ ಈ ಕೆಳಗಿನ 5 ಉತ್ತರಗಳು ಸಮಂಜಸ ಎನಿಸದವು. ಇವು ಒಂದು ವ್ಯಕ್ತಿಯ ಯೋಚನೆ (perspective) ಆಗಿರಬಹುದು ಅಥವಾ ಇಲ್ಲಿಯ ತನಕ ನಡೆದು ಬಂದ ರಾಜಕೀಯದ ಅವಲೋಕನ ಕೂಡ ಆಗಿರಬಹುದು. ಜಸ್ಟ್ ಎ ಥಾಟ್, ನಿಮ್ಮ ಮುಂದೆ ಇಡುತ್ತಿದ್ದೇವೆ.

Advertisements

#1 ದುಡ್ಡು ಬೇಕು ಮತ್ತು ದುಡ್ಡು ಬೇಕೇ ಬೇಕು ಎಂಬ ವ್ಯತ್ಯಾಸ

ದುಡ್ಡು ಇಲ್ಲದ ರಾಜಕಾರಣ ಎಂಬ ವಿಚಾರವೇ ಬಾಲಿಶ ಮತ್ತು ವಿಚಿತ್ರ. ಎಲ್ಲದಕ್ಕೂ ದುಡ್ಡು ಬೇಕು ಆದರೆ ದುಡ್ಡಿಲ್ಲದೆ ರಾಜಕಾರಣ ಹೇಗೆ? ಯಾಕಾಗಬಾರದು? ಒಂದು ಪಕ್ಷ ಕಟ್ಟಬೇಕು ಅಂದರೆ ದುಡ್ಡು ಬೇಕು, ವಿಷಯ ಅದು ಅಲ್ಲ. ದುಡ್ಡಿನ ಬುನಾದಿಯ ಮೇಲೆ ಪಕ್ಷ ಕಟ್ಟುವುದು ಇದೆಯಲ್ಲ , ಅದು ಗಮನಿಸಬೇಕಾದ ವಿಷಯ. ಇಂತಹ ವಿಚಾರ ಒಂದು ಇದೆಯಾ ಎಂಬ ಪ್ರಜ್ಞೆ ನಮ್ಮಲ್ಲಿ ಮೂಡಿಸಿದ ಕಾರಣಕ್ಕಾಗಿ ಮತ್ತು ಇದನ್ನು ನಾವು ಮಾಡುತ್ತೇವೆ ಎಂದು ಘಂಟಾ ಘೋಷವಾಗಿ ಹೇಳಿದ ಕಾರಣಕ್ಕಾಗಿ, ಮತ್ತು ಹೇಗೆ ಮಾಡುತ್ತೀವಿ ಎಂದು ಹೇಳಿದ ಸಲುವಾಗಿ ಆದರೂ ಒಂದು ಸಹಜ ಪ್ರೋತ್ಸಾಹ ಕೊಡಲೇಬೇಕು. ಇದು ಮುಂದಿನ ದಿನದಲ್ಲಿ ಯಾವ ರೂಪ ಪಡೆಯುತ್ತೆ ಎಂಬುವ ಖಾತರಿ ಇಲ್ಲವಾದರೂ, ಸಧ್ಯದ ಮಟ್ಟಿಗೆ ಇದು ಒಂದು ಕುತೂಹಲವನ್ನು ಹುಟ್ಟಿಸಿರುವುದಂತೂ ನಿಜ.

Reasons to Support Upendra party

#2 ಎಲ್ಲರಿಗೂ ಮುಕ್ತ ಆಹ್ವಾನ

ಈ ದೇಶದಲ್ಲಿ, ಯಾವುದಾದರೂ ರಾಜಕೀಯ ಪಕ್ಷ ಇಂತಹ ಮುಕ್ತ ಆಹ್ವಾನವನ್ನು ನೀಡಿದೆಯಾ? ಜನರೇ ಪ್ರಭುಗಳು ಆದರೆ ಅದು ಚುನಾವಣೆ ಸಮಯದಲ್ಲಿ ಮಾತ್ರ. ನಂತರ, ರಾಜಕಾರಣಿಗಳು ಹೇಗೆ ನಡೆದು ಕೊಳ್ಳುತ್ತಾರೆ ಎಂಬ ವಿವರಣೆ ನಿಮಗೆ ಪರಿಚಯ ಇಲ್ಲದ್ದು ಏನು ಅಲ್ಲ. ಈ ನಿಟ್ಟಿನಲ್ಲಿ, ಉಪೇಂದ್ರರ ಹೊಸ ಪಕ್ಷ ತುಸು ಭಿನ್ನವಾಗಿ ಕಾಣಿಸುತ್ತದೆ. ಪತ್ರಿಕಾ ಗೋಷ್ಠಿಯಲ್ಲಿ ಹೇಳಿದಂತೆ, ಉಪೇಂದ್ರರವರು ಹೀಗೊಂದು ಮುಕ್ತ ಆಹ್ವಾನ ನೀಡುತ್ತಾರೆ. ನಾನೊಬ್ಬನೇ ಏನು ಮಾಡಲು ಸಾಧ್ಯ ವಿಲ್ಲಾ, ಎಲ್ಲರೂ ಸೇರಿದರೆ ಏನಾದರೂ ಕ್ರಾಂತಿ ಆಗುತ್ತದೆ ಎಂಬ ವಿಚಾರಕ್ಕ್ಕೆ ಬೆಂಬಲಿಸದೆ ಇರಲು ಸಾಧ್ಯವೇ?

prajakeeya

#3 ಬೇರೆ ಪಕ್ಷಗಳ ಬಗ್ಗೆ ಟೀಕೆಯ ಮಾತು ಇಲ್ಲ

ಸಾಮಾನ್ಯವಾಗಿ, ನಾವು ನೋಡಿರುವ ಹಾಗೆ, ಬಹುಪಾಲು ರಾಜಕಾರಣಿಗಳು, ಬೇರೆ ಪಕ್ಷಗಳ ಟೀಕೆಯಲ್ಲಿಯೇ ತಮ್ಮ ಅರ್ಧ ಅವಧಿಯನ್ನು ಕಳೆಯುತ್ತಾರೆ. ‘ಅವರು ಏನೂ ಮಾಡಿಲ್ಲ, ನಾವು ಮಾತ್ರ ಎಲ್ಲವನ್ನೂ ಮಾಡಿದ್ದೇವೆ ‘, ಎಂಬ ಮಾತುಗಳ ಪ್ರಹಾರ ಮಾತ್ರ ಜೋರಾಗಿ ಕೇಳುಸಿತ್ತದೆ ವಿನಹ, ಕೆಲಸವನ್ನು ಮಾಡಿದ್ದು ನೀವು ಕಂಡಿದ್ದರೆ, ನೀವೇ ಪುಣ್ಯವಂತರು. ಪರಿಸ್ಥಿತಿ ಹೀಗಿರುವಾಗ, ಉಪೇಂದ್ರರ ಕೆ.ಪಿ.ಜೆ.ಪಿ, ಬೇರೆ ಪಕ್ಷಗಳ ಟೀಕೆ ನಾವು ಮಾಡುವುದಿಲ್ಲ, ಅವರ ಕೆಲಸ ಅವರು ಮಾಡಲಿ, ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದರೆ, ಎಷ್ಟೋ ಜನಕ್ಕೆ ಇದೇನ್ ಗುರು ಹಿಂಗೆಅನ್ನಿಸಿರೋದಕ್ಕೆ ಸಾಧ್ಯ ನೇ ಇಲ್ಲ. ಪತ್ರಿಕಾ ಗೋಷ್ಠಿಯಲ್ಲಿ, ಪತ್ರಕರ್ತರು ಎಷ್ಟೇ ಪ್ರಚೋದಿಸಿದರೂ, ಉಪೇಂದ್ರ ರವರು, ಬೇರೆ ಪಕ್ಷಗಳ ಬಗ್ಗೆ ಟೀಕೆ ಮಾಡಲೇ ಇಲ್ವಲ್ಲಾ? ಇಂತಹ ಪಕ್ಷ ಗೆಲ್ಲಬೇಕು ಎಂದು ಆಶಿಸುವದು ತಪ್ಪೇ?

Advertisements

Reasons to Support Upendra party

#4 ಪ್ರತಿಯೊಬ್ಬ ರಾಜಕಾರಣಿಯು ಈ ದೇಶದ ಒಬ್ಬ ‘Appointed employee’ ಎಂಬ ಆಲೋಚನೆ

ಉಪೇಂದ್ರರವರು ಮಾತಾಡಿದ ಒಂದು ವಿಡಿಯೋ ನೀವು ಕೇಳಿದ್ದರೆ, ಅದರಲ್ಲಿ ಈ ವಿಚಾರದ ಪ್ರಸ್ತಾಪ ಮಾಡುತ್ತಾ, ಪ್ರತಿಯೊಬ್ಬ ರಾಜಕಾರಣಿಯು ಈ ದೇಶದ ಆಯ್ಕೆಯಾದ ಒಬ್ಬ ನೌಕರ ಎಂದು ಹೇಳುತ್ತಾರೆ. ಇದು ಎಂತಹ ಶ್ರೇಷ್ಠವಾದ ವಿಚಾರ ಅಲ್ವಾ ಎಂದು ಎಲ್ಲರಿಗೂ ಅನ್ಸಿರುತ್ತದೆ. ನೀವು ವೋಟ್ ಮಾಡ್ತಿರೋ, ಬೆಂಬಲ ನೀಡ್ತಿರೋ ಅದು ಬೇರೆ ವಿಷಯ ಆದರೆ ಇಂತಹ ಯೋಚನೆಗೆ ನಾಂದಿ ಹಾಡಿದ ಉಪೇಂದ್ರ ರವರಿಗೆ ಹಾಟ್ಸ್ ಆಫ್ ಹೇಳಲೇ ಬೇಕು.

upendra politics

#5 ಓಪನ್ ಡೆಮಾಕ್ರಸಿ ಮತ್ತು ಓಪನ್ ಪಾರ್ಲಿಮೆಂಟ್ ಆಡಳಿತ

ಸರ್ಕಾರ ಎಂದರೆ ಅದು ಜನಕ್ಕಾಗಿ ಮತ್ತು ಅವರ ಕೆಲಸಕ್ಕಾಗಿ ಇರುವ ಒಂದು ವ್ಯವಸ್ಥೆ. ಅದಕ್ಕೆ ಒಂದು ಪ್ಲಾನಿಂಗ್ ಬೇಕು, ದಕ್ಷ ಆಡಳಿತ ಬೇಕು ಮತ್ತು ಸರ್ಕಾರದ ಎಲ್ಲಾ ಕೆಲಸಗಳೂ ಜನರಿಗೆ ತಿಳಿಯಬೇಕು ಎಂದು ಹೇಳುವ ಉಪೇಂದ್ರ ನಾವು ಓಪನ್ ಪಾರ್ಲಿಮೆಂಟ್ ಆಡಳಿತವನ್ನು ನಡೆಸುತ್ತೇವೆ ಮತ್ತು ಅಲ್ಲಿ, ಎಲ್ಲವೂ ಜಾಹಿರ ಎಂದು ಹೇಳಿದರು. ಒಂದು ಫ್ಲಯ್ ಓವರ್ ಮಾಡಬೇಕು ಅಂದರೆ, ಅದಕ್ಕೆ ಬೇಕಾದ ಪ್ಲಾನಿಂಗ್, ಕಾರಣ, ವ್ಯಚ್ಚ, ಮತ್ತು ಸಂಬಂಧ ಪಟ್ಟ ಇತರೆ ವಿಚಾರಗಳು ಮುಕ್ತವಾಗಿ ಚರ್ಚೆಯಾಗ ಬೇಕು ಎಂಬ ವಿಚಾರ ಅದೆಷ್ಟು ಸುಂದರ. ಹೀಗೆಲ್ಲ ಆಗಬೇಕು ಅಂದರೆ, ಈ ಪಕ್ಷವನ್ನು ಕನ್ನಡಿಗರು ಗೆಲ್ಲಿಸಬೇಕು.

Reasons to Support Upendra party

ಹೀಗೆ ನೀವು ಪಕ್ಷ ಬಿಡುಗಡೆ ಮಾಡಿದ ಧೆಯೆಗಳನ್ನು ಓದುತ್ತಾ ಹೋದರೆ, ಈ ರೀತಿಯಾದ ವಿಚಾರಗಳು ಕಾಣಸಿಗುತ್ತವೆ. ಇತರೆ ವಿಷಯಗಳನ್ನು ಕಾರ್ಯ ರೂಪಕ್ಕೆ ಬಾರದ ಕಾರಣ, ಪಕ್ಕಕ್ಕೆ ಇಟ್ಟರೂ, ಈ ಮೇಲಿನ ಕಾರಣಗಳಿಗಾದರೂ, ಉಪೇಂದ್ರರ ಈ ಪ್ರಯತ್ನವನ್ನು, ನಾವು ಅವಲೋಕಿಸಿ, ಪ್ರೋತ್ಸಾಹಿಸ ಬೇಕು ಎಂಬುದು ಕೆ.ಪಿ.ಜೆ.ಪಿ ಕಾರ್ಯಕರ್ತರ ಅನಿಸಿಕೆ ಮತ್ತು ನಿವೇದನೆ . 

Advertisements

ಈ ವಿಷಯವಾಗಿ ನಿಮ್ಮಲ್ಲಿರುವ ಅನಿಸಿಕೆಗಳನ್ನು ಹಂಚಿಕೊಳ್ಳಲು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.

Get the Best of Metrosaga delivered to your inbox. Subscribe to Metrosaga and never miss an update from us.