ಆಧುನಿಕವಾದ ಆಮೆ ಮೊಲದ ಕಥೆ ಹೇಳುವ ಭಟ್ಟರ ನೆಕ್ಸ್ಟ್ ಸಿನೆಮಾದ ರಿಲೀಸ್ ಡೇಟ್ ಫಿಕ್ಸ್

panchatantra

ಯೋಗರಾಜ್ ಭಟ್ಟರು ಮುಂಗಾರು ಮಳೆ ಸಿನೆಮಾದ ಮೂಲಕ ಹೊಸ ಟ್ರೆಂಡ್ ಅನ್ನೇ ಹುಟ್ಟು ಹಾಕಿದ ನಿರ್ದೇಶಕ. ಭಟ್ಟರ ಚಿತ್ರದಲ್ಲಿ ಏನೂ ಇಲ್ಲದಿದ್ದರು ಹಾಡು, ಸಂಭಾಷಣೆ, ಮನೋರಂಜನೆಗೆ ಕೊರತೆ ಇಲ್ಲ. ವಿಭಿನ್ನವಾದ ಸಾಹಿತ್ಯ ಚಿತ್ರಕ್ಕಾಗಿ ಬರೆದು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ವಾಸ್ತು ಪ್ರಕಾರ, ದನಕಾಯೋನು, ಡ್ರಾಮಾ ಸಿನಿಮಾ ಮಾಡಿ ಕರ್ನಾಟಕದ ಮನೆ ಮಾತಾಗಿದ್ದರು. ನಿರ್ದೇಶನವಲ್ಲದೆ ಅನೇಕ ಚಿತ್ರಗಳಿಗೆ ಹಾಡುಗಳನ್ನು ಗೀಚಿ ಸೈ ಎನ್ನಿಸಿಕೊಂಡಿದ್ದಾರೆ. ಅಭಿಮಾನಿಗಳು ವಿಕಟ ಕವಿ ಎಂದೇ ಭಟ್ಟರಿಗೆ ನಾಮಕರಣ ಮಾಡಿದ್ದಾರೆ.

ಪಂಚತಂತ್ರ  ಮಾರ್ಚ್ 29 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ

ಈಗ ಭಟ್ಟರು ಪಂಚತಂತ್ರ ಆನ್ನೋ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈಗಾಗಲೇ ಚಿತ್ರದ ಹಾಡು ಹಿಟ್ ಆಗಿವೆ, ಮಾರ್ಚ್ 29 ಕ್ಕೆ ಪಂಚತಂತ್ರ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಪ್ರೇಮಿಗಳ ದಿನದಂದೆ ಬಿಡುಗಡೆ ಆಗಬೇಕಿದ್ದ ಚಿತ್ರ, ಸ್ವಲ್ಪ ಅಡೆತಡೆಗಳು ಉಂಟಾದ್ದರಿಂದ ಮುಂದೂಡಲಾಗಿತ್ತು. ಮಾರ್ಚ್ ೨೯ಕ್ಕೆ ಪಂಚತಂತ್ರ ಬಿಡುಗಡೆಗೆ ಸಿದ್ದವಾಗಿದೆ. ಪ್ರೇಕ್ಷಕರನ್ನು ಯಾವ ರೀತಿ ಮೋಡಿ ಮಾಡಲಿದೆ ಎನ್ನುವುದೇ ಕೌತುಕದ ವಿಷಯ. ಯೋಗರಾಜ್ ಭಟ್ ಮತ್ತೆ ಜಾದೂ ಮಾಡಲಿದ್ದಾರ? ಗೊತಿಲ್ಲ ಕಾದು ನೋಡಲೇಬೇಕು.

Advertisements

panchatantra

ಭಟ್ಟರ ಚಿತ್ರದಲ್ಲಿ ಹೊಸ ಪ್ರತಿಭೆಗಳು

ಪಂಚತಂತ್ರ ಚಿತ್ರಕ್ಕೆ ಹೊಸ ಪ್ರತಿಭೆಗಳನ್ನು ಹಾಕಿ ಕೊಂಡು ಸಿನೆಮಾ ನಿರ್ದೇಶನ ಮಾಡಿದ್ದಾರೆ, ಹೊಸ ಕಲಾವಿದರಿಗೆ ಅವಕಾಶ ನೀಡಬೇಕೆನ್ನುವುದು ಭಟ್ಟರ ಮಾತು. ವಿಹಾನ್ ಗೌಡ ಚಿತ್ರದ ನಾಯಕ, ಈ ಹಿಂದೆ ೧/೪ ಕೆ‌ಜಿ ಪ್ರೀತಿ, ಸಿನೆಮಾ ಮೈ ಡಾರ್ಲಿಂಗ್ ಅನ್ನೋ ಚಿತ್ರಗಳಲ್ಲಿ ಅಭಿನಯಿಸಿದ್ದರು. ಈಗ ಭಟ್ಟರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಭಟ್ಟರು ೨೦ ವರ್ಷದ ತರಲೆ ಹುಡುಗನ ಪಾತ್ರಕ್ಕಾಗಿ ಹುಡುಕಾಡುವಾಗ ನಾನು ಅವರ ಕಣ್ಣಿಗೆ ಬೀಳುತ್ತೇನೆ ಎಂದು ವಿಹಾನ್ ಹೇಳುತ್ತಾರೆ. ನನ್ನಲ್ಲಿ ಭಟ್ಟರು ವಾಯಿಸ್, ಬಾಡಿ ಲ್ಯಾನ್ಗ್ವೇಜ್, ಪ್ರದರ್ಶನ ಮಾಡುವ ಶೈಲಿ ಎಲ್ಲಾ ಕಂಡ ನಂತರ ನಾಯಕ ನಟನ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ ಎಂದು ವಿಹಾನ್ ಗೌಡ ಮಾತನಾಡಿದ್ದಾರೆ.

panchatantra

ಚಿತ್ರ ಕಥೆಯ ತುಣುಕು

ಚಿತ್ರದ ಕಥೆ ಬಗ್ಗೆ ಮಾಧ್ಯಮದವರು ಕೇಳಿದಾಗ, ಇದು ಒಂದು ಆಮೆ ಮೊಲದ ಕತೆ ಮತ್ತು ಇದರಲ್ಲಿ ೨೦ ನಿಮಿಷಗಳ ಕಾಲ ರೇಸ್ ಅನ್ನು ನೀವು ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ. ಮೊದಲಿನಿಂದಲೂ ನನಗೆ ಕಾರ್ ಬಗ್ಗೆ ಕ್ರೇಜ್ ಜಾಸ್ತಿ, ಕಾರ್ ನ ವ್ಯಾಮೋಹ ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದೇನೆ ಎಂದು ವಿಹಾನ್ ಹೇಳಿಕೊಂಡಿದ್ದಾರೆ. ಅಕ್ಷರ ಗೌಡ, ಸೋನಲ್ ಮೊಂಟೆಯಿರೋ, ರಂಗಾಯಣ ರಘು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಧುನಿಕವಾದ ಆಮೆ ಮೊಲದ ಕಥೆ ಪಂಚತಂತ್ರ ಸಿನೆಮಾ ಸಾರುತ್ತದೆ ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ. ಯುವಕರು ಕೊನೆಗೂ ಪಂಚತಂತ್ರ ಚಿತ್ರಮಂದಿರಕ್ಕೆ ಪ್ರವೇಶಿಸಲಿದೆ ಅಂತಾ ನಿಟ್ಟುಸಿರು ಬಿಟ್ಟಿದ್ದಾರೆ. ಮಾರ್ಚ್ ೨೯ ಕ್ಕೆ ಎಲ್ಲರೂ ಪಂಚತಂತ್ರ ಚಿತ್ರವನ್ನೂ ನೋಡಲು ರೆಡಿ ಆಗಿ. ಆಲ್ ದಿ ಬೆಸ್ಟ್ ಫಾರ್ ಪಂಚತಂತ್ರ. ಅಂಡ್ ಭಟ್ಟರ ಸ್ಟೈಲ್ ನಲ್ಲೇ ಹೇಳುವುದಾದರೆ, ಜೈ ಪಂಚತಂತ್ರ.

ಲೈಕ್ ಅಂಡ್ ಫಾಲೋ MetroSaga – Kannada on Facebook 

Advertisements