ಆನೆ ನಡೆದಿದ್ದೇ ದಾರಿ – ಇಲ್ಲಿದೆ ನೋಡಿ ನಮ್ಮ ಡಿ-ಬಾಸ್ ಅವರ ಚಾಲೆಂಜಿಂಗ್ ಲೈಫ್ ಸ್ಟೋರಿ

darshan journey

ಒಂದು ಕಾಲದಲ್ಲಿ ಯಾರ ಕಣ್ಣಿಗೂ ಬೀಳದೆ ಇದ್ದವರು ಇವರು. ಅಂದ್ರೆ ಇವರ ಪಾತ್ರವನ್ನ ಯಾರು ಅಷ್ಟಾಗಿ ಗುರುತಿಸಿರಲಿಲ್ಲ. ಆದ್ರೆ ಈಗ ಎಲ್ಲ ನಿರ್ದೇಶಕರು, ಹಾಗು ನಿರ್ಮಾಪಕರು ಇವರ ಮನೆಗೆ ಹೋಗಿ ಕಾಯುತ್ತಾರೆ. ಇವರು ಯಾವದಾದ್ರು ಒಂದು ಡೇಟ್ ಕೊಟ್ರೆ ಸಾಕಪ್ಪ ಅಂತಾರೆ, ಕೆಲವು ನಿರ್ಮಾಪಕರು. ಅಷ್ಟರ ಮಟ್ಟಿಗೆ ಈಗ ಹೆಸರು ವಾಸಿಯಾಗಿದ್ದಾರೆ.

ನೋಡೋಕೆ ಆರಡಿ ಕಟೌಟು. ಎತ್ತ ಕಡೆಯಿಂದ ನೋಡಿದರು ಹುಡುಗಿಯರು ಫಿದಾ ಆಗೋದಂತೂ ನಿಜ. ಯಾಕಂದ್ರೆ ಇವರ ಎತ್ತರವೇ ಆ ರೀತಿ ಇದೆ. ನೋಡುಗರನ್ನ ಒಂದೇ ಸಾರಿ ಕಣ್ಮನ ಸೆಳೆಯುವಂತೆ ಮಾಡುತ್ತೆ. ಇವರಿಗೆ ಅಭಿಮಾನಿಗಳು ಒಬ್ಬರ, ಇಬ್ಬರ ಕೋಟ್ಯಾಂತರ ಜನರಿದ್ದಾರೆ. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ, ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಗೊತ್ತು. ಇವರ ನಟನೆಯನ್ನ ಮೆಚ್ಚಿದವರೇ ಇಲ್ಲ. ಇವರು ಮಾಡಿರುವ ಎಷ್ಟೋ ಚಿತ್ರಗಳು ನೂರು ದಿನ ಓಡಿವೆ. ಇನ್ನು ಕೆಲವು ಚಿತ್ರಗಳಿಗೆ ಸನ್ಮಾನ ಹಾಗೂ ಪ್ರಶಸ್ತಿಯನ್ನು ಪಡೆದಿದ್ದಾರೆ.

Advertisements

ಬಾಲ್ಯ ಜೀವನ

ಮೂಲತಃ ಮೈಸೂರು ಮೂಲದವರಾಗಿರುವ ದರ್ಶನ್ ಫೆಬ್ರವರಿ 16, 1977ರಂದು ಜನಿಸುತ್ತಾರೆ. ತಂದೆ ತೂಗುದೀಪ ಶ್ರೀನಿವಾಸ್ ಹಾಗೂ ತಾಯಿ ಮೀನಾ ತೂಗುದೀಪ. ಚಿಕ್ಕಂದಿನಿಂದಲೂ ಏನಾದ್ರು ಮಾಡಬೇಕು ಅನ್ನೋದು ಇವರ ಆಸೆಯಾಗಿತ್ತು. ಇವರಿಗೆ ಪ್ರಾಣಿಗಳು ಅಂದ್ರೆ ಬಹಳ ಇಷ್ಟ. ಮನುಷ್ಯರಿಗಿಂತ, ಪ್ರಾಣಿಗಳು ಅಂದ್ರೆ ಇವರಿಗೆ ತುಂಬಾ ಅಚ್ಚು, ಮೆಚ್ಚು. ಪ್ರಾಣಿಗಳನ್ನ ಸಾಕೋ ಆಸೆ ಇದ್ದಿದ್ರಿಂದ, ಮನೆಯಲ್ಲಿ ಪ್ರತಿದಿನ ಕಿರಿಕ್ ಮಾಡ್ಕೊಳ್ಳೋರು. ಇವರ ತಂದೆ ಒಬ್ಬ ಅದ್ಬುತ ಖಳನಟ. ಅನೇಕ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದಾರೆ. ಯಾವತ್ತೂ ಅವರಿಗೆ ನನ್ನ ಮಕ್ಕಳು ಸಿನಿಮಾ ರಂಗಕ್ಕೆ ಬರಲಿ ಅಂತ ಎನಿಸಿರಲಿಲ್ಲ. ಆದರೆ ಆ ಸಮಯದಲ್ಲಿ ನಾಯಕರ ಮಕ್ಕಳೆಲ್ಲಾ ಸಿನಿಮಾ ರಂಗಕ್ಕೆ ಕಾಲಿಡೋಕೆ ಶುರು ಮಾಡಿದ್ರು. ಅಲ್ಲಿ ವರೆಗೂ ತನ್ನ ಮಕ್ಕಳು ಸಿನಿಮಾ ರಂಗಕ್ಕೆ ಬರಲಿ ಅನ್ನೋ ಆಸೆ ತೂಗುದೀಪ ಶ್ರೀನಿವಾಸ್ ಅವ್ರಿಗೆ ಇರಲಿಲ್ಲ. ಆದ್ರೆ ಯಾವಾಗ ಬೇರೆ ನಟರ ಮಕ್ಕಳೆಲ್ಲಾ ಬರೋಕೆ ಮುಂದಾದ್ರೋ ಆಗ ನನ್ನ ಮಕ್ಕಳು ಸಹ ಬರಲಿ ಅನ್ನೋದು ಇವರಿಗೆ ಆಸೆಯಾಯಿತು. ಅಲ್ಲಿಂದ ದರ್ಶನ್ ತೂಗುದೀಪ್ ಅವರ ಜರ್ನಿ ಶುರುವಾಗುತ್ತೆ.

ಜೀವನ

ತಮ್ಮ ತಂದೆ ಆಸೆ ಪಟ್ಟಂತೆ ಸಿನಿಮಾ ರಂಗಕ್ಕೆ ಕಾಲಿಡಲು ಮುಂದಾದ್ರು. ಆದ್ರೆ ಅವಕಾಶ ಸಿಗೋದು ಬಹಳ ಕಷ್ಟ ಆಗಿತ್ತು. ಹಾಗಾಗಿ ಮೊದಲು ಅವರು ಧಾರಾವಾಹಿಗಳಲ್ಲಿ ನಟಿಸೋಕೆ ಶುರು ಮಾಡಿದ್ರು. 1990ರಲ್ಲಿ ಇವರು ಅಭಿನಯಕ್ಕೆ ಕಾಲಿಟ್ಟರು. ಚಿಕ್ಕ, ಪುಟ್ಟ ಧಾರಾವಾಹಿಗಳಲ್ಲಿ ನಟನೆ ಮಾಡಿ, ತಮ್ಮ ಪ್ರತಿಭೆಯನ್ನ ಹೊರ ಹಾಕ್ತಿದ್ರು. ಆಗ ಅವರಿಗೆ ಅದೆಲ್ಲಿಂದ ಅದೃಷ್ಟ ಕೂಡಿ ಬಂತೋ ಗೊತ್ತಿಲ್ಲ. 2001ರಲ್ಲಿ ಅವರಿಗೆ ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕನಾಗಿ ನಟಿಸೋ ಅವಕಾಶ ಕೂಡಿ ಬಂತು. ಆ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದೆ ತಡ, ದರ್ಶನ್ ಅವರಿಗೆ ಎಲ್ಲಿಲ್ಲದ ಸಂತೋಷವಾಗಿತ್ತು. ಯಾಕಂದ್ರೆ ತನ್ನ ತಂದೆ ಆಸೆಯನ್ನ ಪೂರೈಸೋಕೆ ಕಾಲ ಬಂತಲ್ಲಾ ಅಂತ, ಸಂತಸ ಪಟ್ಟಿದ್ದರು.

ಮೆಜೆಸ್ಟಿಕ್ ನಿಂದ ಶುರುವಾಯ್ತು ಕರಿಯನ ಹಾವಳಿ

ದರ್ಶನ್ ಅವರಿಗೆ ಮೆಜೆಸ್ಟಿಕ್ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದೆ ತಡ, ತನ್ನೆಲ್ಲಾ ಪ್ರತಿಭೆಯನ್ನ ಹೊರ ಹಾಕಬೇಕೆಂದು ನಿರ್ಧರಿಸಿದ್ದರು. ತನ್ನ ನೋವು, ನಲಿವುಗಳೆನ್ನೆಲ್ಲಾ ಬದಿಗಿಟ್ಟು, ಈ ಸಿನಿಮಾದಲ್ಲಿ ನಟಿಸಿದ್ರು. ಇವರಿಗೆ ಕೈ ಹಿಡಿದಿದ್ದೆ ಈ ಸಿನಿಮಾ. ಅಂದ್ರೆ ಇವರು ಮೊದಲ ಬಾರಿ ನಟಿಸಿದ ಚಿತ್ರವೇ, ಎಲ್ಲರ ಮನೆ, ಮನ ಗೆದ್ದಿತ್ತು. ಯಾಕಂದ್ರೆ ದರ್ಶನ್ ಚಿತ್ರದಲ್ಲಿ ಆ ರೀತಿ ನಟಿಸಿದ್ದರು. ನೋಡುಗರಿಗೆ ಒಂದೇ ಕ್ಷಣದಲ್ಲಿ ಅನಿಸಿತ್ತು. ಎಂತ ನಟನಯ್ಯ ಇವರು ಅಂತ. ಇದೆ ರೀತಿ ಚಂದನವನದಲ್ಲಿ ತಮ್ಮ ಕೆರಿಯರ್ ನ ಶುರು ಮಾಡಿದ್ರು.

Advertisements

ದರ್ಶನ್ ಅಭಿನಯಿಸಿದ ಚಿತ್ರಗಳು

ಮೆಜೆಸ್ಟಿಕ್, ಧ್ರುವ, ನಿನಗೋಸ್ಕರ, ಕಿಟ್ಟಿ,, ಕರಿಯ, ಲಾಲಿಹಾಡು, ನೀನಂದ್ರೆ ಇಷ್ಟ, ಲಂಕೇಶ್ ಪತ್ರಿಕೆ, ನಮ್ಮ ಪ್ರೀತಿಯ ರಾಮು, ದಾಸ, ಅಣ್ಣಾವ್ರು, ಧರ್ಮ, ದರ್ಶನ್, ಭಗವಾನ್, ಕಲಾಸಿಪಾಳ್ಯ, ಸರ್ದಾರ, ಅಯ್ಯ, ಶಾಸ್ತ್ರೀ, ಸ್ವಾಮಿ, ಮಂಡ್ಯ, ಸುಂಟರಗಾಳಿ, ದತ್ತ, ತಂಗಿಗಾಗಿ, ಭೂಪತಿ, ಅನಾಥರು, ಸ್ನೇಹಾನಾ ಪ್ರೀತಿನಾ, ಈ ಬಂಧನ, ಗಜ, ಇಂದ್ರ, ಅರ್ಜುನ, ನವಗ್ರಹ, ಯೋಧ, ಅಭಯ್, ಪೊರ್ಕಿ, ಶೌರ್ಯ, ಬಾಸ್, ಪ್ರಿನ್ಸ್, ಸಾರಥಿ, ಚಿಂಗಾರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಿರಾಟ್, ಬುಲ್ ಬುಲ್, ಬೃಂದಾವನ, ಮಿ.ಐರಾವತ, ಜಗ್ಗುದಾದ, ಚಕ್ರವರ್ತಿ, ತಾರಕ್, ಯಜಮಾನ. ಇಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ರೆ, ಇನ್ನೂ ನಿರೀಕ್ಷೆಯಲ್ಲಿರೋ ಚಿತ್ರಗಳು ಸಹ ಬರಲಿವೆ. ಕುರುಕ್ಷೇತ್ರ, ಒಡೆಯ ಹಾಗೂ ರಾಬರ್ಟ್ ಮೂವಿಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇವರು ನಾಯಕನಾಗಿ ಮಾತ್ರವಲ್ಲದೆ ಕೆಲವೊಂದು ಚಿತ್ರಗಳಲ್ಲಿ ವಿಶೇಷ ಅತಿಥಿಯಾಗಿ ನಟಿಸಿದ್ದಾರೆ. ಮಹಾಭಾರತ, ದೇವರ ಮಗ, ಭೂತಯ್ಯನ ಮಕ್ಕಳು, ಕುಶಲವೇ ಕ್ಷೇಮವೇ, ದಿಲ್ ಮೊನಾಲಿಸಾ, ಅರಸು, ಮೇಸ್ತ್ರಿ, ಸ್ನೇಹಿತರು, ಮುಮ್ತಾಜ್, ಅಗ್ರಜ, ನಾಗರಹಾವು ಹಾಗೂ ಚೌಕ ಚಿತ್ರಗಳಲ್ಲಿ ಅಥಿತಿಯಾಗಿ ಅಭಿನಯಿಸಿದ್ದಾರೆ.

ಮೊದಲು ಕೇವಲ ಒಬ್ಬ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಇವರು, ಈಗ ನಿರ್ಮಾಪಕ ಹಾಗೂ ವಿತರಕರಾಗಿದ್ದಾರೆ. ಅಲ್ಲಿಂದ ತಮ್ಮದೇ ಆದ ತೂಗುದೀಪ ಪ್ರೊಡಕ್ಷನ್ ಅನ್ನ ಶುರುಮಾಡಿದ್ರು. ಇವರು ಇದರಲ್ಲಿ ವಿತರಕರಾಗಿದ್ದಾರೆ, ತಮ್ಮ ದಿನಕರ್ ತೂಗುದೀಪ್ ನಿರ್ದೇಶಕರಾಗಿದ್ದಾರೆ. 2000ರಲ್ಲಿ ದರ್ಶನ್ ವಿಜಯಲಕ್ಸ್ಮಿ ಅವರನ್ನ ವಿವಾಹವಾಗ್ತಾರೆ . ಅವರಿಗೆ ಈಗ ವಿನೇಶ್ ಎಂಬ ಒಂದು ಗಂಡು ಮಗುವಿದೆ.

Advertisements

ದೊರೆತಿರುವ ಪ್ರಶಸ್ತಿಗಳು

ಜೀ ಕನ್ನಡ ಒನಿಡಾ ಸ್ಟೈಲ್ ಐಕಾನ್, tv9 – ಬೆಸ್ಟ್ ಆಕ್ಟರ್ (ಸಾರಥಿ), ಸುವರ್ಣ ಫಿಲಂ ಅವಾರ್ಡ್ಸ್ ಫೆವರೇಟ್ ಹೀರೊ (ಸಾರಥಿ), ಫಿಲಂ ಫೇರ್ ಅವಾರ್ಡ್ಸ್ ಸೌತ್ ಹಾಗೂ ಸೈಮಾ ಅವಾರ್ಡ್ಸ್ ಬೆಸ್ಟ್ ಆಕ್ಟರ್ (ಸಾರಥಿ). ಒಬ್ಬ ಆಟೋ ಡ್ರೈವರ್ ಆಗಿ ನಟಿಸಿದ ಸಾರಥಿ ಸಿನಿಮಾಕ್ಕೆ ಇಷ್ಟು ಅವಾರ್ಡ್ ಗಳು ಸಿಕ್ಕರೆ, ಇನ್ನೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾಗೆ ಹಲವು ಪ್ರಶಸ್ತಿಗಳು ದೊರೆತಿವೆ. ಬೆಂಗಳೂರು ಟೈಮ್ಸ್ ಫಿಲಂ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸುವರ್ಣ ಫಿಲಂ ಅವಾರ್ಡ್ಸ್, ಫಿಲಂ ಫೇರ್ ಬೆಸ್ಟ್ ಆಕ್ಟರ್ ಅವಾರ್ಡ್ ಹಾಗೂ ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ ಕಡೆಯಿಂದ ಪ್ರಶಸ್ತಿಗಳು ದೊರೆತಿವೆ.

ಪ್ರಾಣಿ ಪ್ರಿಯ ದರ್ಶನ್

ದರ್ಶನ್ ಅವರಿಗೆ ಮನುಷ್ಯರಿಗಿಂತ ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಯಾಕಂದ್ರೆ, ಇವರ ಪ್ರಕಾರ ಪ್ರಾಣಿಗಳಿಗೆ ಸ್ವಾರ್ಥ ಗುಣ ಇರುವುದಿಲ್ಲ. ಮೋಸ ಅನ್ನೋದು ಅವುಗಳಿಗೆ ಗೊತ್ತಿರಲ್ಲ ಅನ್ನೋದು ಇವರ ಅನಿಸಿಕೆ. ಹಾಗಾಗಿ ಇವರು ಪ್ರಾಣಿಗಳನ್ನ ತುಂಬಾ ಇಷ್ಟ ಪಡ್ತಾರೆ. ಪ್ರಾಣಿಗಳಿಗಾಗಿಯೇ ಒಂದು ದೊಡ್ಡ ಫಾರ್ಮ್ ಹೌಸ್ ಮಾಡಿಕೊಂಡಿದ್ದಾರೆ. ಪ್ರಾಣಿಗಳಲ್ಲಿಯೂ ಸಹ ಇವರಿಗೆ ಕುದುರೆ ಅಂದ್ರೆ ತುಂಬಾ ಇಷ್ಟ. ಇವರ ನೆಚ್ಚಿನ ಕುದುರೆಯನ್ನೇ, ತಮ್ಮ ಸಾರಥಿ ಸಿನಿಮಾಗೆ ಬಳಸಿಕೊಂಡಿದ್ದಾರೆ. ಆ ಸಿನಿಮಾದಲ್ಲಿ ಕುದುರೆ ಪಾತ್ರ ಬಹಳ ಮುಖ್ಯವಾಗಿದ್ದು, ಸಿನಿಮಾ ಅದ್ಭುತವಾಗಿ ಕಾಣಲು ಕಾರಣವಾಗಿದೆ. ಇನ್ನೂ ಇದೆ ರೀತಿ ಹಲವು ಪ್ರಾಣಿ, ಪಕ್ಷಿಗಳನ್ನ ಸಾಕಿದ್ದಾರೆ. ತಮಗೆ ಬೇಸರವಾದಾಗೆಲ್ಲ ಅಲ್ಲಿಗೆ ಹೋಗಿ, ತಮ್ಮ ನೋವನ್ನ ಮರೆಯುತ್ತಾರೆ.

ತನ್ನ ತಂದೆ ಆಸೆಯಂತೆ ದರ್ಶನ್ ಒಬ್ಬ ಅದ್ಭುತ ನಟರಾಗಿದ್ದಾರೆ. ತನ್ನ ಇಬ್ಬರು ಮಕ್ಕಳನ್ನ ಸಿನಿಮಾ ರಂಗದಲ್ಲಿ ನೋಡೋಕೆ ತೂಗುದೀಪ ಶ್ರೀನಿವಾಸ್ ಅವರಿಗೆ ಇಷ್ಟ ಇತ್ತು. ಆದ್ರೆ ದಿನಕರ್ ತೂಗುದೀಪ್ ಅವರಿಗೆ ನಟನೆಯಲ್ಲಿ ಆಸಕ್ತಿ ಕಡಿಮೆ ಇದ್ದಿದ್ದರಿಂದ, ಅವರು ನಿರ್ಮಾಣ ಹಾಗೂ ನಿರ್ದೇಶನದ ಕಡೆ ಗಮನ ಹರಿಸಿದರು. ಇನ್ನೂ ದರ್ಶನ್ ಅವರು ಒಂದರ ಹಿಂದೆ ಇನ್ನೊಂದು ಅನ್ನೋ ತರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಾರು ಕಾಣದ ವ್ಯಕ್ತಿ, ನಮ್ಮ ಚಂದನವನದಲ್ಲಿ ಈಗ ಇಂತ ಕಲಾವಿದ ಆಗಿರೋದು ನಮ್ಮ ಸ್ಯಾಂಡಲ್ ವುಡ್ ಗೆ ಒಂದು ಕೊಡುಗೆಯಾಗಿದೆ. ಮುಂದಿನ ದಿನಗಳಲ್ಲೂ ಇದೆ ರೀತಿ ಜಗ್ಗುದಾದ ಬೆಳೀಬೇಕು ಅನ್ನೋದು ಅಭಿಮಾನಿಗಳ ಆಸೆ.

Advertisements

ದರ್ಶನ ಅವರ ಯಜಮಾನ ಚಿತ್ರ ಭಾರಿ ಸಕ್ಸಸ್ ಅನ್ನು ಕಂಡಿದೆ. ಸಿನಿಮಾ ದಲ್ಲಿಇರುವ ವಿಶೇಷತೆಗಳು ಏನು? ಈ ಸಿನಿಮಾ ಅಷ್ಟು ದೊಡ್ಡ ಮಟ್ಟಿಗೆ ಸೌಂಡ್ ಮಾಡಿದ್ದೂ ಯಾಕೆ? ಈ ಕೆಲಗಿರುವ ವಿಡಿಯೋ ನೋಡಿ. ನಿಮಗೆ ಖಂಡಿತಾ ಇಷ್ಟ ಆಗುತ್ತೆ. ನಿಮಗೆ ಇಷ್ಟ ಆದಲ್ಲಿ ನಮ್ಮ ಯೌಟ್ಯೂಬ್ ಚಾನೆಲ್ ಗೆ Subscribe ಮಾಡಿ ಮತ್ತು ನಮ್ಮ ಈ ಪ್ರಯತ್ನವನ್ನು ಪ್ರೋತ್ಸಾಹಿಸಿ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook