ದಚ್ಚು ಶಾಕ್. ಯಜಮಾನನಿಗೆ ಸಿಕ್ತು ಅಪಾರ ಬೆಲೆ ಬಾಳುವ ಉಡುಗೊರೆ

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹಲವು ನಟರಿದ್ದಾರೆ.. ಆದರೆ ಒಬ್ಬ ನಾಯಕನನ್ನ, ಇನ್ನೊಬ್ಬ ನಾಯಕ ಇಷ್ಟ ಪಡೋದು ಕೆಡಿಮೆ.. ಯಾಕಂದ್ರೆ ಎಲ್ಲರಿಗೂ ಒಂದು ಅಸೆ ಇರುತ್ತೆ.. ನಾವು ಮೊದ್ಲು ಬೆಳೀಬೇಕು, ಆನಂತರ ಇನ್ನೊಬ್ಬರನ್ನ ಬೆಳೆಸಬೇಕು ಅಂತ.. ಹಾಗಾಗಿ ಮೊದ್ಲು ತಮ್ಮ ಏಳಿಗೆಯ ಬಗ್ಗೆ ಚಿಂತಿಸುತ್ತಾರೆ.. ಆದರೆ ಈ ನಟ ತನ್ನ ಏಳಿಗೆ ಜೊತೆಗೆ, ಜೊತೆಯಲ್ಲಿರುವವರ ಬಗ್ಗೆಯೂ ಯೋಚಿಸುತ್ತಾರೆ.. ಹಾಗಾಗಿ ಈ ನಟನಿಗೆ ಫ್ಯಾನ್ಸ್ ಫಾಲೊವೆರ್ಸ್ ಸಾಗರದಂತೆ ಇದೆ

ಹೌದು. ನಾನು ಡಿ ಬಸ್ ಅಭಿಮಾನಿ ಅಂತ ಹೇಳಿಕೊಳ್ಳೋಕೆ ಕೆಲವರಿಗೇನೋ ಹೆಮ್ಮೆ.ಜೊತೆಗೆ ಸಿರಿಯು ಹೌದು.. ದರ್ಶನ್ ಒಬ್ಬ ಕಲಾವಿದನೂ ಹೌದು, ಸಾಮಾನ್ಯರಂತೆ ಸೀದಾಸಾದವಾಗಿ ಬದುಕೋದು ಹೌದು.. ದರ್ಶನ್ ಎಲ್ಲ ನಟರಂತೆ ಅಲ್ಲ.. ಯಾವುದಾದರು ಒಂದು ಕಾರ್ಯಕ್ರಮಕ್ಕೆ ಬರಬೇಕು ಅಂದ್ರೆ ಕೆಲ ನಟರು, ಕಾರ್ಯಕ್ರಮಕ್ಕೆ ತಕ್ಕಂತೆ ರೆಡಿಯಾಗಿ ಬರ್ತಾರೆ.. ಆದ್ರೆ ದಚ್ಚು ಯಾವ ಕಾರ್ಯಕ್ರಮಕ್ಕಾದ್ರೂ ಹೋಗಲಿ, ಕೇವಲ ಸಿಂಪಲ್ ಮ್ಯಾನ್ ಆಗಿ ಹೋಗ್ತಾರೆ.. ಜನರಿಗೆ ಸೆಳೆಯೋ ಮೊದಲಶಂವೆ ಇದಾಗಿದೆ ಇಂತ ನಾಯಕನನ್ನ ಇಷ್ಟ ಪಡೋರು ಹೆಚ್ಚು.. ತಮ್ಮ ನೆಚ್ಚಿನ ನಾಯಕನಿಗೆ ಏನಾದ್ರು ಉಡುಗೊರೆ ಕೊಡಬೇಕು ಅನ್ನೋದು ಎಲ್ಲ ಅಭಿಮಾನಿಗಳ ಆಸೆ.. ಆದ್ರೆ ಒಬ್ಬ ನಟನಾಗಿದ್ದುಕ್ಕೊಂಡು, ಇನ್ನೊಬ್ಬ ನಟನಿಗೆ ಉಡುಗೊರೆ ಕೊಡಬೇಕು ಅಂತ ಅಂದುಕೊಳ್ಳೋದು ನಿಜಕ್ಕೂ ಒಳ್ಳೆಯ ವಿಷಯ..

Advertisements

ಅಪಾರ ಪ್ರಮಾಣದ ಉಡುಗೊರೆ ಪಡೆದ ದಚ್ಚು..

ಹೌದು.. ದರ್ಶನ್ ಹೋಗಿದ್ದ ಕಾರ್ಯಕ್ರಮವೊಂದರಲ್ಲಿ ಅಪಾರ ದರದ ಉಡುಗೊರೆಯೊಂದನ್ನ ಪಡೆದಿದ್ದಾರೆ.. ಹೌದು.. ಇತ್ತೀಚಿಗೆ ಉದ್ಗರ್ಷಸಿನಿಮಾ ಟ್ರೇಲರ್ ಗೆ ಆಗಮಿಸಿದ್ದರು.. ಈ ವೇಳೆ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿ, ಸಿನಿಮಾ ಹಾಗೂ ನಿರ್ದೇಶಕರ ಬಗ್ಗೆ ಮಾತನಾಡಿ ಶುಭಕೋರಿದರು.. ಆ ಸಮಯದಲ್ಲಿ ಇನ್ನೊಬ್ಬ ನಟ ದಚ್ಚು ಗೆ ಅಪಾರ ಪ್ರಮಾಣದ ಉಡುಗೊರೆಯೊಂದನ್ನ ನೀಡಿದ್ರು..

ಅಪಾರ ಪ್ರಮಾಣದ ಉಡುಗೊರೆ ನೀಡಿದವರಾದ್ರೂ ಯಾರು?

ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹೋದ ದರ್ಶನ್ ನನ್ನ ನೋಡಲು ಬಹಳಷ್ಟು ಅಭಿಮಾನಿಗಳು ಬಂದಿದ್ದರು.. ಆದರೆ ಅದರ ಮಧ್ಯೆದಲ್ಲಿ ಒಂದು ಉಡುಗೊರೆ ದಚ್ಚು ಕೈ ಸೇರಿತು.. ಹೌದು.. ಆ ವೇಳೆ ನಟ ಠಾಕೂರ್ ಅನೂಫ್ಫ್ ಸಿಂಗ್ ಅವರು ದರ್ಶನ್ ಗೆ ಒಂದು ವಕ್ಫ್ ನ್ನ ಉಡುಗೊರೆಯಾಗಿ ನೀಡ್ತಾರೆ.. ಆ ವಕ್ಫ್ ನ್ನ ನೋಡಿದ್ ಕೂಡಲೇ ದರ್ಶನ್ ಗೆ ಒಂದು ಕ್ಷಣ ಆಶ್ಚರ್ಯವಾಗುತ್ತೆ.. ಯಾಕಂದ್ರೆ ಅನೂಪ್ ಉಡುಗೊರೆಯಾಗಿ ಕೊಟ್ಟಿದ್ದ ವಾಚ್ ಅಷ್ಟೊಂದು ವಿಭಿನ್ನವಾಗಿರುತ್ತೆ..

ದರ್ಶನ್ ವಾಚ್ ನೋಡಿ ಆಶ್ಚರ್ಯ ಪಟ್ಟಿದ್ದಾದ್ರೂ ಏಕೆ?

ಅನೂಪ್ ಗೆ ದರ್ಶನ್ ಅಂದ್ರೆ ಬಹಳ ಇಷ್ಟ.. ಹಾಗಾಗಿ ದರ್ಶನ್ ಅವರಿಗೆ ಏನಾದ್ರು ಉಡುಗೊರೆ ಕೊಡಬೇಕು ಅನ್ನೋದು ಅನೂಫ್ಫ್ ಆಸೆಯಾಗಿತ್ತು.. ಅದಕ್ಕೋಸ್ಕರ ಒಂದು ಘಳಿಗೆಯನ್ನ ಕಾಯ್ತಿದ್ರು.. ಆ ಘಳಿಗೆ ಬಿಡುಗಡೆ ಸಮಾರಂಭದಲ್ಲಿ ಸಿಕ್ಕಿತ್ತು.. ಹಾಗಾಗಿ ತಾವು ಕೊಡಬೇಕೆಂದುಕೊಂಡಿದ್ದ ಉಡುಗೊರೆಯನ್ನ ದರ್ಶನ್ ಗೆ ಕೊಟ್ಟರು.. ಉಡುಗೊರೆ ಸಾಮಾನ್ಯವಾಗಿ ವಾಚ್ ಆಗಿತ್ತು.. ಆದ್ರೆ ಆ ವಾಚ್ ತೂಕ ಬರೋಬ್ಬರಿ ಒಂದು ಕೇಜಿ ಇತ್ತು.. ದಚ್ಚು ಆ ವಾಚ್ ನೋಡಿದ ಕೂಡಲೇ ಒಂದು ಕ್ಷಣ ದಂಗಾಗಿ ಹೋದರು..

Advertisements

ವಾಚ್ ಬೆಲೆ ಬಹಿರಂಗವಾಗಿಲ್ಲ..

ಅನೂಪ್ ತನ್ನ ಆಸೆಯಂತೆ ದರ್ಶನ್ ಗೆ ವಾಚ್ ನೀಡಿದ್ರು.. ಆದ್ರೆ ಅದನ್ನು ನೋಡಿದವರು ಹಾಗೂ ಮಾದ್ಯಮದವರು ಒಂದೇ ಪ್ರಶ್ನೆ ಕೇಳಿದ್ದು.. ಆ ವಾಚ್ ಬೆಲೆ ಎಷ್ಟು ಎಂದು.. ಆದ್ರೆ ಉಡುಗೊರೆಯನ್ನ ನೀಡಲು ಕಾರಣ ಹೇಳಿದ ಅನೂಪ್ ಬೆಲೆಯನ್ನ ಮಾತ್ರ ಹೇಳಲಿಲ್ಲ.. ನನಗೆ ದರ್ಶನ್ ಅಂದ್ರೆ ತುಂಬಾ ಇಷ್ಟ, ಅವರ ಜೊತೆಗೆ ಆಕ್ಟ್ ಮಾಡಬೇಕು ಅನ್ನೋದು ನನ್ನ ಆಸೆಯಾಗಿತ್ತು.. ಹಾಗಾಗಿ ಅವರ ಜೊತೆ ಯಜಮಾನ ಸಿನಿಮಾದಲ್ಲಿ ಆಕ್ಟ್ ಮಾಡುವಂತಾಯಿತು.. ನಿಜಕ್ಕೂ ಇದು ನನಗೆ ಸಂತೋಷದ ವಿಷಯ.. ದರ್ಶನ್ ಅಂತ ವ್ಯಕ್ತಿ ಕಾಣುವುದು ಬಹಳ ಅಪರೂಪ.. ಅವರಿಗೆ ಏನಾದ್ರು ಉಡುಗೊರೆ ಕೊಡಬೇಕು ಅನ್ನೋದು ನನ್ನ ಆಸೆಯಾಗಿತ್ತು.. ಹಾಗಾಗಿ ಅವರಿಗೆ ಈ ಉಡುಗೊರೆ ನೀಡಿದ್ದೇನೆ.. ಆದ್ರೆ ಬೆಲೆ ಹೇಳುವ ಅವಶ್ಯಕೆತೆ ಇಲ್ಲ ಎಂದು ತಿಳಿಸಿದ್ದಾರೆ..

ಟ್ರೇಲರ್ ಲಾಂಚ್ ಗೆ ಸುದೀಪ್ ಗೈರು

ಸುನಿಲ್ ಕುಮಾರ್ ದೇಸಾಯಿಯವರ ಉದ್ಗರ್ಷ ಟ್ರೇಲರ್ ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಂಚ್ ಮಾಡಿದ್ದಾರೆ.. ಈ ಸಮಾರಂಭಕ್ಕೆ ಕಿಚ್ಚ ಸುದೀಪ್ ಕೂಡ ಬರಬಹುದೆಂಬ ನಿರೀಕ್ಷೆಯಿತ್ತು.. ಆದರೆ ಅವರು ಬಂದಿಲ್ಲ.. ಕಾರ್ಕ್ರಮದಲ್ಲಿ ದಚ್ಚು ಮಾತ್ರ ಕಾಣಿಸಿಕೊಂಡಿದ್ದಾರೆ.. ಸುದೀಪ್ ಗೆ ಬ್ರೇಕ್ ಕೊಟ್ಟ ನಿರ್ದೇಶಕ ಅಂದ್ರೆ ಸುನಿಲ್ ಕುಮಾರ್ ದೇಸಾಯಿ ಅವರು.. ಜೊತೆಗೆ ಈ ಚಿತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ.. ಆದರೂ ಸುದಿಪ್ಫ್ ಕಾರ್ಯಕ್ರಮಕ್ಕೆ ಹಾಜರಾಗದೆ ಇದ್ದಿದ್ದು, ದರ್ಶನ್ ಹಾಗೂ ಸುದೀಪ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದಕ್ಕೆ ಇನ್ನಷ್ಟು ಸಾಕ್ಷಿಯಾಗುತ್ತಿದೆ..

ಸಮಾರಂಭದಲ್ಲಿ ಮಾತನಾಡಿದ ದರ್ಶನ್, ಠಾಕೂರ್ ಅವರನ್ನ ಹಾಡಿ ಹೊಗಳಿದ್ರು..

ಅನೂಪ್ ಅವರು ಒಬ್ಬ ಒಳ್ಳೆ ಕಲಾವಿದ.. ಎಷ್ಟೋ ಜನರು ಹತ್ತಿದ ಏಣಿಯನ್ನ ಮರೆಯುತ್ತಾರೆ.. ಆದರೆ ಅನೂಪ್ ಅಂತ ವ್ಯಕ್ತಿ ಅಲ್ಲ.. ಬಹಳ ನಿಷ್ಕಲ್ಮಶ ಮನಸ್ಸಿನ ಮನುಷ್ಯ.. ಕನ್ನಡ ಸಿನಿಮಾದಲ್ಲಿ ಹಣ ತೆಗೆದುಕೊಂಡು ಹೋಗೋ ನಟರೆ ಹೆಚ್ಚು.. ಆದ್ರೆ ಠಾಕೂರ್ ಅನೂಪ್ ಅವರ ಕೆಲಸ ಹಾಗೂ ಅವರ ಬದ್ಧತೆ ನನಗೆ ಇಷ್ಟವಾಯಿತು.. ಸಿನಿಮಾದಲ್ಲಿ ಅಭಿನಯಿಸಿ, ಡೈಲಾಗ್ ಕಲಿತು ಅವರೇ ಡಬ್ ಮಾಡ್ತಾರೆ.. ಇದು ನಿಜಕ್ಕೂ ಖುಷಿ ಕೊಡುವ ವಿಷಯವಾಗಿದೆ,, ಕೆಲಸದ ವಿಚಾರ ಅಂತ ಬಂದರೆ, ಅನೂಪ್ ನಿಜಕ್ಕೂ ಒಳ್ಳೆಯ ವ್ಯಕ್ತಿ.. ತಾನು ಕಲಿತು, ಇನ್ನೊಬ್ಬರಿಗೂ ಕಲಿಸುತ್ತಾರೆ.. ಈ ಗುಣ ನನಗೆ ಇಷ್ಟವಾಯಿತು.. ಅವರ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.. ಇವರ ಈ ಸಿನಿಮಾ ಹಿಟಿಫ್ ಆಗಲಿ ಎಂದು ಅನೂಪ್ ಗೆ, ದರ್ಶನ್ ವಿಶ್ ಮಾಡಿದ್ರು..

Advertisements

ದರ್ಶನ್ ಬಗ್ಗೆ ಮನಬಿಚ್ಚಿ ಮಾತಾಡಿದ ಅನೂಪ್

ದರ್ಶನ್ ಅವ್ರಿಗೆ ಕೇವಲ ಹೊರಗಿನಲ್ಲಿ ಮಾತ್ರ ಅಭಿಮಾನಿಗಳಿಲ್ಲ.. ನಮ್ಮ ಚಿತ್ರ ತಂಡದಲ್ಲೂ ಅಭಿಮಾನಿಗಳಿದ್ದಾರೆ.. ಯಾಕಂದ್ರೆ ಅವರ ನಟನೆ, ನಡವಳಿಕೆ ಆ ರೀತಿ ಇದೆ.. ದರ್ಶನ್ ಅವರು ಬೇರೆಯವರ ಕಷ್ಟವನ್ನ, ತಮ್ಮ ಕಷ್ಟ ಎಂದು ಭಾವಿಸುತ್ತಾರೆ.. ಜೊತೆಗೆ ಸ್ನೇಹಮಯ ವ್ಯಕ್ತಿ.. ಪ್ರಾಣಿಗಳಲ್ಲೇ ಒಳ್ಳೆತನ ಕಾಣೋ ಇವರು ಮನುಷ್ಯರಲ್ಲಿ ಅದೆಂಥ ಭಾವನೆಯನ್ನ ಇಟ್ಟಿರಬಹುದು.ನಮ್ಮ ಸ್ಯಾಂಡಲ್ ವುಡ್ ಗೆ ಇಂತ ನಟರ ಅವಶ್ಯಕೆತೆ ಇದೆ ಯಾಕಂದ್ರೆ ನಟನೆ ವಿಚಾರದಲ್ಲೂ ಏನಾದ್ರು ಅನುಮಾನವಿದ್ರೆ, ಅವರನ್ನ ಪಕ್ಕಕ್ಕೆ ಕರೆದು ಕುರಿಸಿಕೊಂಡು ಹೇಳುವ ವ್ಯಕ್ತಿ.. ಹಾಗಾಗಿ ಇಂತ ನಟರ ಅವಶ್ಯಕೆತೆ ನಮ್ಮ ಚಂದನವನಕ್ಕೆ ಇದೆ ಎಂದು ಅನೂಪ್, ದರ್ಶನ್ ಬಗ್ಗೆ ತಮ್ಮಲ್ಲಿದ್ದ ವಿಚಾರವನ್ನ ಹಂಚಿಕೊಂಡರು..

ನಿಜಕ್ಕೂ ದರ್ಶನ್ ಅವರು ಒಬ್ಬ ಒಳ್ಳೆ ಕಲಾವಿದ ಅನ್ನೋದು ಎಲ್ಲಿಂದೆಲ್ಲಿಗೋದರು ಸಾಭೀತಾಗ್ತಿದೆ.. ಯಾಕಂದ್ರೆ ಮನುಷ್ಯನಾದವನು ನನ್ನದು ಅನ್ನೋದನ್ನ ಬಿಡಬೇಕು.. ಆಗ ಮಾತ್ರ ಮೇಲೆ ಬರಲು ಸಾಧ್ಯ.. ಈ ಗುಣ ಅಭಿಮಾನಿಗಳಿಗೆ ಅವ್ರಲ್ಲಿ ಎದ್ದು ತೋರುತ್ತೆ.. ಹಾಗಾಗಿ ನಾನು ಡಿ ಬಸ್ ಅಭಿಮಾನಿ ಎಂದು ಸಾರಿ ಸಾರಿ ಹೇಳುತ್ತಾರೆ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Advertisements