ಚಂಬಲ್ ಚಲನಚಿತ್ರದ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದೆ. ಸಾಕಷ್ಟು ಒದ್ದಾಟಗಳ ನಂತರ ಕೊನೆಗೂ ಬಿಡುಗಡೆಯ ಭಾಗ್ಯ ಒದಗಿ ಬಂದಿದೆ. ಪ್ರತಿ ಒಂದು ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ, ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಸತೀಶ್ ನೀನಾಸಮ್ ಅಯೋಗ್ಯ ಸಿನಿಮಾದ ನಂತರ ನಾಯಕ ನಟನಾಗಿ ಚಂಬಲ್ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ,ಇಂತಿ ನಿನ್ನ ಪ್ರೀತಿಯ ಖ್ಯಾತಿಯ ಸೋನು ಗೌಡ ಕೂಡ ಅಭಿನಯಿಸಿದ್ದಾರೆ. ಚಿತ್ರಮಂದಿರಗಳಲ್ಲಿ ನುಗ್ಗಿ ನೈಜ್ಯತೆ ಆಧಾರಿತವಾದ ಚಿತ್ರದ ಕತೆ ಜನರಿಗೆ ಬೆವೆರಿಳಿಸುತ್ತಿದೆ.
ಕಥೆ ಕೇಳಿ ತಮಾಷೆ ಮಾಡ್ತಿದ್ದೀರಾ ಸರ್ ಎಂದ ಸತೀಶ್ ನೀನಾಸಂ
ಚಿತ್ರದ ಕೆಲ ಟ್ರೈಲರ್ ನಾ ದೃಶ್ಯಾವಳಿಯ ನೋಡಿ ಜನರು ಡಿಕೆ ರವಿ ಜೀವನದ ಆಧಾರಿತವಾದ ಚಿತ್ರವೆಂದು ಊಹಿಸಿದ್ದಾರೆ. ಪೃಥ್ವಿ ಸಿನಿಮಾದಿಂದ ಗುರುತಿಸಿಕೊಂಡ ಜ್ಯಾಕಬ್ ವೇರ್ಘೆಸೆ ಇಂತಹ ಒಂದು ಸಾಹಸಕಾರಿಯಾದ, ಕೌತುಕವಾದ, ನೈಜ್ಯ ಘಟನೆಯ ಕತೆಯ ಉಸ್ತುವಾರಿಗೆ ಕೈ ಹಾಕಿದ್ದಾರೆ. ನಿರ್ದೇಶಕರು ಸತೀಶ್ ಅವರ ಮನೆಗೆ ಬಂದು ಕತೆ ಹೇಳಿದಾಗ, ತಮಾಷೆ ಮಾಡುತ್ತಿದ್ದೀರಾ ಸಾರ್ ನಾನು ಈ ಚಿತ್ರದ ನಾಯಕ ನಟನೆ ಎಂದು ಕಿಚಾಯಿಸುತ್ತಾರೆ. ಆನಂತರ ಈ ಚಿತ್ರಕ್ಕೆ ನಿನ್ನ ಹೆಸರು ಬಿಟ್ಟರೆ ಬೇರೆ ಯಾರ ನಟನ ಹೆಸರು ನನಗೆ ಹೊಳೆಯಲಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ಕೊನೆಗೂ ಸತೀಶ ನಿರ್ದೇಶಕರಿಗೆ ಹಸಿರು ಚಿಹ್ನೆ ನೀಡುತ್ತಾರೆ.
ಸತೀಶ್ ಅವರು ತಮ್ಮ ಅಭಿನಯದ ಛಾಪನ್ನು ಈ ಚಿತ್ರದ ಮೂಲಕ ತೋರಿಸಿದ್ದಾರೆ, ತನ್ನಲ್ಲು ಸಾಮ್ಯರ್ಥತೆ ಅಡಗಿದೆ ಎಂದು ನಿರೂಪಿಸಿದ್ದಾರೆ. ನೀನಾಸಮ್ ಎಂಬ ನಾಟಕ ಸಂಸ್ಥೆ ಇಂದ ನಟನೆಯಲ್ಲಿ ಕರಗತ ಪಡೆದುಕೊಂಡ ನಟ. ಒಂದು ಸಂದರ್ಶನ ಮಾಡುವ ವೇಳೆಯಲ್ಲಿ, ಈ ಪೊಲೀಸ್ ಅಧಿಕಾರಿಯ ಪಾತ್ರದ ತಯಾರಿ ಹೇಗೆ ನಡೆಸಿದ್ದೀರಿ ಎಂದು ಕೇಳಿದಾಗ? ಅವರು ಕೊಟ್ಟ ಉತ್ತರ ನಾನು ಅನೇಕ ಯೋಧರ, ಪೊಲೀಸ್ ಅಧಿಕಾರಿಗಳ ಕುರಿತು ಪುಸ್ತಕವನ್ನು ಓದಿದ ನಂತರ ಪಾತ್ರದ ಬಗ್ಗೆ ಇರುವ ಗೌರವ ಇನ್ನಷ್ಟು ಹೆಚ್ಚುತ್ತಾ ಹೋಯಿತು. ನನ್ನ ಸಿನಿ ಜೀವನದ ಸಿನಿಮಾದ ಸಾಲಿನಲ್ಲಿ ಮಹತ್ವ ಹೊಂದಿರುವ ಚಿತ್ರವಿದು ಅಂತಾ ತಮ್ಮ ಮನದಾಳದ ಅನುಭವದ ಮಾತುಗಳನ್ನು ಹಂಚಿಕೊಂದಿದ್ದಾರೆ.
ಅನೇಕ ಅಧಿಕಾರಿಗಳ ನೋವಿನ ಕತೆ
ಡಿಕೆ ರವಿ ಜೀವನದ ಆಧಾರಿತವಾದ ಚಿತ್ರವಾ ಎಂದು ಕೇಳಿದಾಗ? ಅನೇಕ ಅಧಿಕಾರಿಗಳ ನೋವಿನ ಕತೆ ಈ ಚಿತ್ರದಲ್ಲಿ ಅಡಗಿದೆ.ನಾನು ಅವರದೆ ಹೆಸರು ಅಂತಾ ಹೇಳಲಿಕ್ಕೆ ಆಗುವುದಿಲ್ಲ, ಅದೇನೇನ್ನುವುದು ನೀವು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ನಿಮ್ಮಗೆ ಗೊತ್ತಾಗುತ್ತದೆ ಅಂತಾ ಹೇಳುತ್ತಾರೆ. ಕೇವಲ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸತೀಶ ಈಗ ಮೊಟ್ಟ ಮೊದಲನೇ ಬಾರಿಗೆ ಗಾಂಭೀರ್ಯವಾದ ಪಾತ್ರವನ್ನು ನಿಭಾಯಿಸಿದ್ದಾರೆ.
ನೋವು ವ್ಯಕ್ತ ಪಡಿಸಿದ ನಾಯಕ ನಟ
ಸತೀಶ್ ನೀನಾಸಮ್ ಪ್ರೇಕ್ಷಕರೊಂದಿಗೆ ಚಿತ್ರ ವೀಕ್ಷಿಸಿದರು. ನೋಡುವ ಸಮಯದಲ್ಲಿ ತುಂಬಾ ಭಾವುಕರಾಗಿ, ಕಣ್ಣೀರಿಡುತ್ತಾರೆ. ನಮ್ಮ ಕಡೆ ಇಂದ ಎಲ್ಲಾ ಪರಿಶ್ರಮವನ್ನು ನಾವು ಹಾಕಿದ್ದೇವೆ, ಇನ್ನೇನಿದ್ದರೂ ಚಲನಚಿತ್ರ ಮಾತಾಡಬೇಕಿದೆ ಎಂದು ಹೇಳಿದ್ದಾರೆ. ಕೊನೆ ೧೫ ನಿಮಿಷಗಳಲ್ಲಿ ಚಿತ್ರವನ್ನು ನೋಡಿದಾಗ ತುಂಬಾ ಮೌನಿ ಆಗಿಬಿಡುತ್ತೇನೆ ನಾನು ಎಂದು ಸಿನಿಮಾ ನೋಡಿದ ನಂತರ ಬಹಳ ಸಂಕಟದಿಂದ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಯೋಧರು ಹಾಗೂ ಅಧಿಕಾರಿಗಳನ್ನು ನೆನೆಯುತ್ತಾ ಬಹಳ ದುಖಿತರಾಗುತ್ತಾರೆ. ನಾನು ಹೆಮ್ಮೆಯ ಕೆಲಸವನ್ನು ಮಾಡಿದ್ದೇನೆ, ಇನ್ನೇನು ಬೇಡ ನನಗೆ ನಾನು ಸಂತೃಪ್ತನಾಗಿದ್ದೇನೆ ಅಂತಾ ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಅದೇನೇ ಬರಲಿ ಎಲ್ಲಾ ತೊಂದರೆಗಳನ್ನು ನಾನು ಅನುಭವಿಸುತ್ತೇನೆ. ನಾಲಕ್ಕು ದಿನ ಬದುಕಿದರು ಹುಲಿಯ ಹಾಗೆ ಬದುಕ ಬೇಕು, ನನ್ನ ಸಿನಿರಂಗದ ವೃತ್ತಿ ಬದುಕಿನಲ್ಲಿ ಮರೆಯಲಾರದಂತಹ ಚಿತ್ರವಿದು. ಯಾವುದೇ ರಾಜಕಾರಣದ ಅಥವಾ ಓರ್ವ ವ್ಯಕ್ತಿಯ ಬಿಂಬದ ದೃಷ್ಟಿಯನ್ನು ಇಟ್ಟುಕೊಂಡು ಚಿತ್ರ ನೋಡಬೇಡಿ ಅಂತಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಹಾಗು ಬೆಂಗಳೂರಿನ ಸುದ್ದಿಗಾಗಿ ನಮ್ಮ ಫೇಸ್ಬುಕ್ ಪೇಜ್ MetroSaga – Kannada ವನ್ನು ಲೈಕ್ ಮಾಡಿ.