ಕೆ.ಜಿ.ಎಫ್ ನಂತರ ಭಾರಿ ಬಜೆಟ್ ನಲ್ಲಿ ತಯಾರಾಗುತ್ತಿದೆ ಕಿಚ್ಚನ ಮುಂದಿನ ಚಿತ್ರ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪೈಲ್ವಾನ್ ಚಿತ್ರದ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಕನ್ನಡ ಇಂಡಸ್ಟ್ರಿ ಅಲ್ಲಿ ಸುದೀಪ್ ಅವರು ಚಿತ್ರೀಕರಣದಲ್ಲಿ ಸದಾ ಕಾಲ ತೊಡಗಿಸಿಸಿಕೊಂಡಿರುತ್ತಾರೆ, ಇವರ ಕಾಲ್ ಶೀಟ್ ಸಿಗುವುದು ಬಹಳ ಕಷ್ಟ. ಪೈಲ್ವಾನ್ ಶೂಟಿಂಗ್ ಮುಗಿದಿದ್ದು ,ಈಗ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿ ತೆಲುಗು ಚಿತ್ರದ ಭಾಷೆಯಲ್ಲಿ ಕೂಡ ಇವರ ಅಬ್ಬರ ಜೋರಾಗಿ ಇದೆ. ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್ 3 ಸಿನಿಮಾದಲ್ಲಿ ಕೂಡ ಕಿಚ್ಚ ನಟಿಸಲಿದ್ದಾರೆ, ಯಾವ ಪಾತ್ರ ಮಾಡುತ್ತಾರೆ ಎನ್ನುವುದೇ ಕುತೂಹಲಕಾರಿ ಆಗಿ ಉಳಿದಿದೆ.

ಕೆ‌ಜಿ‌ಎಫ್ ನಂತರ ಮತ್ತೊಂದು ಹೈ ಬಡ್ಜೆಟ್ ಸಿನೆಮಾ ಕಿಚ್ಚನ ಪಾಲಾಗಿದೆ

ಒಂದಾದ ನಂತರ ಸುದೀಪ್ ಅವರ ಸಿನೆಮಾಗಳು ರೆಡೀ ಆಗುತ್ತಲೇ ಇದ್ದಾವೆ ಆದರೆ ಇನ್ನು ಬಿಡುಗಡೆಯ ಭಾಗ್ಯ ಯಾವ ಸಿನೆಮಾಕ್ಕು ಒದಗಿ ಬಂದಿಲ್ಲ – ಒಂದೇ ಸಾರಿ ಸಾಲು ಸಾಲಾಗಿ ಕಿಚ್ಚನ ಚಲನಚಿತ್ರಗಳು ತೆರೆ ಕಾಣಲಿವೆ. ಇನ್ನೂ ಬಿಲ್ಲಾ ರಂಗ ಬಾಷ ಚಿತ್ರದ ಬಡ್ಜೆಟ್ ಕೇಳಿದರೆ ನಿಮ್ಮಗೆ ತಲೆ ತಿರುಗುತ್ತದೆ, ಬರೋಬ್ಬರಿ 75 ಕೋಟಿ ಮೊತ್ತದ ಬಂಡವಾಳಕ್ಕೆ ಸಿನೆಮಾ ಸೆಟ್ ಏರಲಿದೆ. ಮಾಣಿಕ್ಯ ನಟಿಸಿದ ಎಲ್ಲಾ ಚಿತ್ರಗಳಲ್ಲಿ ಇದೇ ಹೈ ಬಡ್ಜೆಟ್ ಮೂವಿ. ಅನೂಪ್ ಭಂಡಾರಿ ಈಗ ಸಿನೆಮಾದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಕೆ‌ಜಿ‌ಎಫ್ ನಂತರ ಬಹುಷ ಬಿಲ್ಲಾ, ರಂಗ, ಭಾಷಾ ಹೈ ಬಡ್ಜೆಟ್ ಸಿನೆಮಾ ಎಂದು ಪರಿಗಣಿಸಬಹುದು. ಕನ್ನಡ ಇಂಡಸ್ಟ್ರಿಯ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯುತ್ತಿದೆ.

Advertisements

ಬಿಲ್ಲಾ, ರಂಗ, ಭಾಷಾ ಕಿಚ್ಚನ ನೆಕ್ಸ್ಟ್ ಪ್ರಾಜೆಕ್ಟ್ ಗೆ ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನಕ್ಕೆ ಕೈ ಹಾಕಿದ್ದಾರೆ

ಬಿಲ್ಲಾ ರಂಗ ಭಾಷಾ ಕಿಚ್ಚನ ನವಿರಾದ ಪ್ರಾಜೆಕ್ಟ್, ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಧ್ಯಕ್ಕೆ ಚಿತ್ರದ ಶೀರ್ಷಿಕೆ ಹೊರ ಬಿದ್ದಿದ್ದು ಪ್ರಾಚೀನ ಕಾಲದ ಕತೆಯೆಂದು ಜನರು ಭಾವಿಸಿದ್ದಾರೆ. ಸುದೀಪ್ ಅವರು ಮೂರು ಷೇಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಅನೂಪ್ ಅವರು ಹೇಳಿದ್ದಾರೆ. ಬಿಲ್ಲಾ, ರಂಗ, ಭಾಷಾ ಮೂರು ಪಾತ್ರವನ್ನು ಕಿಚ್ಚ ನಿಭಾಯಿಸಲಿದ್ದಾರ? ಚಿತ್ರದ ಕಥೆಯ ಬಗ್ಗೆ ಅನೂಪ್ ಅವರು ಏನು ಹೇಳಲಿಲ್ಲ. ಸುದೀಪ್ ಅವರ ಹೋಮ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಸುದೀಪ್ ಅವರು ಫ್ರೀ ಆದ ನಂತರ ಚಿತ್ರ ತಯಾರಾಗಲಿದೆ ಎಂದು ಭಂಡಾರಿ ತಿಳಿಸಿದ್ದಾರೆ.

ಪೈಲ್ವಾನ್ ಚಿತ್ರದ ಫೋಟೋ ಜಾಲ ತಾಣಗಳಲ್ಲಿ ಹೊಸ ಸಂಚಲನ ಶ್ರುಷ್ಟಿಸಿದೆ

ಪೈಲ್ವಾನ್ ಚಿತ್ರದ ಒಂದು ಫೋಟೋ ಚಿತ್ರ ತಂಡದವರು ಬಿಡುಗಡೆ ಮಾಡಿದ್ದಾರೆ, ಪೋಸ್ಟರ್ ಬಹಳ ಜನಪ್ರಿಯ ವಾಗಿದೆ, ಜಾಲ ತಾಣಗಳಲ್ಲಿ ಅಭಿಮಾನಿಗಳು ಪೈಲ್ವಾನ್ ಚಿತ್ರದ ಪೋಸ್ಟರ್ ಕುರಿತೇ ಮಾತನಾಡುತ್ತಿದ್ದಾರೆ. ಇನ್ನೂ ಸುದೀಪ್ ಅವರ ಬಿಡುಗಡೆ ಆಗುವ ಚಿತ್ರಗಳ ಸಾಲಿನಲ್ಲಿ ತೆಲುಗು ಚಿತ್ರ ಸ್ಯೆ ರಾ ನರಸಿಂಹ ರೆಡ್ಡಿ, ಕನ್ ವರ್ ಲಾಲ್ ನಿಂತಿವೆ. ತೆಲುಗು ಚಿತ್ರ ರಂಗದಲ್ಲಿಯೂ ಕಿಚ್ಚನಿಗೆ ಬಹಳ ಬೇಡಿಕೆ ಇದೆ. ಈ ಹಿಂದೆ ನಟಿಸಿದ್ದ ಈಗ ಎನ್ನೋ ಚಿತ್ರದಿಂದಲೇ ಸುದೀಪ್ ಅವರಿಗೆ ತೆಲುಗು ಭಾಷೆಯ ಸಿನಿ ಅಭಿಮಾನಿಗಳು ಹುಟ್ಟಿ ಕೊಂಡಿದ್ದರು.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Advertisements