ಮೂರು ಪಾತ್ರಗಳ ಶೇಡ್ ನಲ್ಲಿ ಬರ್ತಾ ಇದಾರೆ ಕಿಚ್ಚ ಸುದೀಪ್ , ಬಿಲ್ಲ ರಂಗ ಮತ್ತು ಬಾಷಾ ಆಗಿ

0
4753

ಸುದೀಪ್ ಅವರ ಪೈಲ್ವಾನ್ ಚಿತ್ರದ ಟ್ರೇಲರ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಪೈಲ್ವಾನ್ ಹಾಗೆ ಸಿದ್ದರಾಗಿದ್ದಾರೆ. ಇವರ ದೇಹಸಿರಿಯನ್ನು ನೋಡಿದ ಅಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ವಿಬಿನ್ನವಾದ ಗೇಟ್ ಅಪ್ ನಲ್ಲಿ ಸುದೀಪ್ ಅವರು ಕಾಣಿಸಿಕೊಂಡಿದ್ದಾರೆ, ಚಿತ್ರಕ್ಕಾಗಿ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಪೈಲ್ವಾನ್ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಸಧ್ಯಕ್ಕೆ ಕೋಟಿಗೊಬ್ಬ ಭಾಗ ೨ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ಕಿಚ್ಚನ ನೆಕ್ಸ್ಟ್ ಪ್ರಾಜೆಕ್ಟ್ ಬಿಲ್ಲಾ ರಂಗಾ ಬಾಷ.

billa ranga baasha

ರಂಗಿತರಂಗದ ಖ್ಯಾತಿಯ ಅನೂಪ್ ಭಂಡಾರಿಯ ಹೊಸ ಪ್ರಯೋಗ

ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರು ಇಡೀ ಜಗತ್ತೇ ಕನ್ನಡ ಚಲನಚಿತ್ರದ ಕಡೆ ವಾಲುವಂತೆ ಮಾಡಿದ್ದರು. ವಿಭಿನ್ನವಾದ ಚಿತ್ರದ ಕಥೆಗೆ ಪ್ರೇಕ್ಷಕರು ಮಾರು ಹೋಗಿದ್ದರು. ಸಾಕಷ್ಟು ಪ್ರಶಸ್ತಿಗಳು ಬಾಚಿಕೊಂಡಿತ್ತು ರಂಗಿತರಂಗ. ಕನ್ನಡ ಚಿತ್ರವನ್ನು ಹೊಸ ಆಯಮದತ್ತ ತೆಗೆದುಕೊಂಡು ಹೋದ ಕ್ರೆಡಿಟ್ ಅನೂಪ್ ಭಂಡಾರಿಗೆ ಅಂಡ್ ಟೀಮ್ ಗೆ ಕೊಡಬೇಕಾಗುತ್ತದೆ. ರಂಗಿತರಂಗ ನಂತರ ಹಾಸ್ಯಮಯವಾದ ಚಿತ್ರಕ್ಕೆ ಕೈ ಹಾಕುತ್ತಾರೆ, ಅದುವೇ ರಾಜರಥ ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ. ಈಗ ಬಿಲ್ಲ ರಂಗ ಬಾಷ ಅನ್ನೋ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಯಾರು ನಾಯಕ ನಟ ಎಂದು ಯೋಚಿಸುತ್ತಿದ್ದೀರಾ? ಬೇರೆ ಯಾರು ಅಲ್ಲ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ನಾಯಕ ಕಿಚ್ಚ ಸುದೀಪ್.

billa ranga baasha

ಚಿತ್ರದ ಟ್ಯಾಗ್ ಲೈನ್ ಒನ್ಸ್ ಅಪಾನ್ ಅ ಟೈಮ್ ಇನ್ 2209 ಏಡಿ

ಹೌದೂ ಅನೂಪ್ ಭಂಡಾರಿ ಈಗ ಸುದೀಪ್ ಅವರ ಜೊತೆ ಕೆಲಸ ಮಾಡಲಿದ್ದಾರೆ. ಇದು ಒಂದು ಯಾಕ್ಸನ್ ಹಾಗೂ ವಿಚಿತ್ರವಾದ ಸ್ಕ್ರಿಪ್ಟ್ ಹೊಂದಿರುವಂತಹ ಚಿತ್ರ, ಸುದೀಪ್ ಅವರ ಪಾತ್ರವೆ ಈ ಚಿತ್ರಕ್ಕೆ ಜೀವಾಳ ಎಂದು ಚಿತ್ರದ ನಿರ್ದೇಶಕ ಭಂಡಾರಿ ತಿಳಿಸಿದ್ದಾರೆ. ಬಿಲ್ಲಾ, ರಂಗಾ, ಬಾಷಾ, ಮೂರು ಪಾತ್ರಗಳ ಹೆಸರು, ಚಿತ್ರದ ಕಥೆ ಈ ಮೂರು ಪಾತ್ರಗಳ ಸುತ್ತ ಸುತ್ತುತ್ತದೆ ಅಂತಾ ಸಧ್ಯಕ್ಕೆ ಅನೂಪ್ ಚಿತ್ರದ ಬಗ್ಗೆ ಹೇಳಿದ್ದಾರೆ. ಸಿನೆಮಾ ಪ್ರೊಡಕ್ಷನ್ ಮೇಲೆ ಗಮನ ಹರಿಸಿದ್ದೇವೆ, ಆನಂತರ ಚಿತ್ರದ ಕತೆ ವಿಸ್ತಾರಗೊಳಿಸಳಿದ್ದೇವೆ, ಒಂದು ಹೊಸ ಕಚೇರಿ ನಿರ್ಮಿಸಿ ಅಲ್ಲೇ ನಮ್ಮ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಳಿದ್ದೇವೆ ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಾರೆ. ಒನ್ಸ್ ಅಪಾನ್ ಏ ಟೈಮ್ ಇನ್ 2209 ಏಡಿ ಎಂಬುವ ಟ್ಯಾಗ್ ಲೈನ್ ಕುತೂಹಲಕಾರಿವಾಗಿ ಕಾಣಿಸುತ್ತದೆ. ಪ್ರಾಚೀನವಾದ ಕತೆಯೆಂದು ಬಾಸವಾಗುತ್ತದೆ.

billa ranga baasha

ಭಂಡಾರಿಗೆ ಬ್ರೇಕ್ ನೀಡಲಿದೆಯಾ ಬಿಲ್ಲಾ ರಂಗ ಭಾಷ?

ಬಿಲ್ಲಾ ರಂಗಾ ಹೆಸರು ಕೇಳಿದ ತಕ್ಷಣವೇ ನಮ್ಮಗೆ ನೆನಪಿಗೆ ಬರೋದು ಸೂಪರ್ ಸ್ಟಾರ್ ರಜನಿಕಾಂತ್. ಈ ಹಿಂದೆ ರಜನಿಕಾಂತ್ ಬಿಲ್ಲಾ ರಂಗಾ ಅನ್ನೋ ಶೀರ್ಷಿಕೆಯ ಸಿನೆಮಾವೊಂದರಲ್ಲಿ ನಟಿಸಿದ್ದರು, ಡಾನ್ ಫಿಲ್ಮ್ ನ ರೀಮೇಕ್ ಆಗಿದ್ದರೂ ಬಹಳ ದಿನಗಳ ಕಾಲ ಚಿತ್ರ ಓಡಿತು. ಓರ್ವ ತೆಲುಗು ಸಿನಿರಂಗದ ನಿರ್ದೇಶಕ ಸೇಮ್ ಟೈಟಿಲ್ಇ ಟ್ಟುಕೊಂಡು ಸಿನೆಮಾ ಮಾಡುತ್ತಾರೆ, ಚಿತ್ರಕ್ಕೆ ಚಿರಂಜೀವಿ ನಾಯಕ ನಟ. ಈ ಚಿತ್ರವೂ ಭರ್ಜರಿಯಾಗಿ ಸದ್ದು ಮಾಡುತ್ತದೆ. ಬಾಷಾ ಫಿಲ್ಮ್ ಯಾರು ತಾನೇ ಮರೆಯೊದಕ್ಕೆ ಸಾಧ್ಯ? ಸೂಪರ್ ಸ್ಟಾರ್ ರಜನಿಕಾಂತ್ ನಟನೆಗೆ, ಅಭಿಮಾನಿಗಳು ಫಿದಾ ಆಗಿದ್ದರು ಅಷ್ಟರ ಮಟ್ಟಿಗೆ ಬಾಷಾ ಚಲನಚಿತ್ರವು ಪ್ರಭಾವ ಬೀರಿತ್ತು.

ಬಿಲ್ಲಾ ಚಿತ್ರದಲ್ಲಿ ಪ್ರಭಾಸ್ ನಟನೆ ಮಾಡಿ ಮಿಂಚಿದ್ದರು. ಬಿಲ್ಲಾ, ರಂಗಾ, ಭಾಷಾ ಮೂರು ಹೆಸರುಗಳನ್ನು ಮಿಶ್ರಣ ಮಾಡಿ ಭಂಡಾರಿ ತಮ್ಮ ಚಿತ್ರಕ್ಕೆ ನಾಮಕರಣ ಮಾಡಿದ್ದಾರೆ.ಬೇರೆ ಬೇರೆ ಭಾಷೆಯಲ್ಲಿ ಹಿಟ್ ಆದಂತೆಯೇ ಕನ್ನಡದಲ್ಲೂ ಹಿಟ್ ಆಗಲಿದೆಯಾ? ಉತ್ತರಕ್ಕಾಗಿ ಕಾದು ಫಿಲ್ಮ್ ನೋಡಲೇಬೇಕು. ಅನೂಪ್ ಭಂಡಾರಿ ಮತ್ತೊಮ್ಮೆ ಮೋಡಿ ಮಾಡಲು ತಯಾರಾಗಿದ್ದಾರೆ. ರಂಗಾ ಬಿಲ್ಲಾ ಬಾಷಾ ಚಲನಚಿತ್ರ ಅನೂಪ್ ಭಂಡಾರಿಗೆ ಮತ್ತೊಮ್ಮೆ ಬ್ರೇಕ್ ನೀಡಲಿದೆಯಾ? ಅತಿ ಶೇಘ್ರದಲ್ಲೇ ನಿಮ್ಮಗೆ ಗೊತ್ತಾಗಲಿದೆ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Comments

comments

LEAVE A REPLY

Please enter your comment!
Please enter your name here