ಕೆ.ಜಿ.ಎಫ್ ಟ್ರೈಲರ್ ದಾಖಲೆಗೆ ಈ ಸಿನೆಮಾ ಹತ್ತಿರವಾಗಿ ಬರಬಹುದೆಂದು ಯಾರೂ ಊಹಿಸಿರಲಿಲ್ಲ

kgf release

ಯಾವುದೇ ಫೀಲ್ಡ್ ಆದರೂ ದಾಖಲೆಯ ವಿಷಯಕ್ಕೆ ಬಂದರೆ, ಯಾರೋ ಒಬ್ಬ ಮಾಡಿದ ದಾಖಲೆಯನ್ನು ಮುರಿಯಲು ಇನ್ನೊಬ್ಬ ಹುಟ್ಟಿಕೊಂಡಿರುತ್ತಾನೆ ಹೀಗೆ ಇದರ ಆಯಾಮ ಸಾಗುತ್ತಲೇ ಇರುತ್ತದೆ. ದಾಖಲೆಗಳು ಶಾಶ್ವತವಾಗಿ ಇರುವುದಿಲ್ಲ ಒಂದಲ್ಲ ಒಂದು ದಿನ ಅದೂ ಅಳಿಸಿ ಹೋಗಲೇಬೇಕು. ಹೌದೂ ಇತ್ತೀಚಿಗೆ ಬಿಡುಗಡೆ ಆದ ಡಿ ಬಾಸ್ ಅಭಿನಯದ ಯಜಮಾನ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಡಿ ಬಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ದಾಖಲೆಗೂ, ಸಿನಿಮಾಕ್ಕು ಏನು ಸಂಬಂಧ ಅಂತಾ ಆಲೋಚಿಸುತ್ತಿದ್ದೀರಾ? ಹೌದೂ ಈಗ ಯಜಮಾನ ಚಿತ್ರ ಕೂಡ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಓದಿ: ಸ್ವಂತ ಬ್ರಾಂಡ್ ಕಥೆ ಹೇಳೋ ಯಜಮಾನ ಸೂಪರ್. ಇನ್ನೂ ಸಿನಿಮಾ ನೋಡಿಲ್ಲ ಅಂದ್ರೆ ಈ ವಿಮರ್ಶೆ ಓದಿ

Advertisements

ಕೆ‌ಜಿ‌ಎಫ್ ಗೆ ಪೈಪೋಟಿ ನೀಡಿದ ಯಜಮಾನ

ಈ ಹಿಂದೆ ತೆರೆಕಂಡ ಯಶ್ ಅಭಿನಯಿಸಿದ್ದ ಕೆ‌ಜಿ‌ಎಫ್ ಚಲನಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿ ಘರ್ಜಿಸಿತ್ತು. ಕೆ‌ಜಿ‌ಎಫ್ ಟ್ರೇಲರ್ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಸಾಕ್ಷಿಯಾಗಿತ್ತು. ಸಧ್ಯಕ್ಕೆ ಕೆ‌ಜಿ‌ಎಫ್ ಸಿನಿಮಾ 75 ದಿನ ಪೂರೈಸಿ ಮುನ್ನುಗ್ಗುತ್ತಿದೆ,ಕನ್ನಡ ಸಿನಿರಂಗದಲ್ಲಿ ಬಹಳ ವರ್ಷಗಳ ನಂತರ ಮೊದಲನೇ ದಿನದ ಗಳಿಕೆಯಲ್ಲಿ ಕೆ‌ಜಿ‌ಎಫ್ ಅಗ್ರ ಸ್ಥಾನ ಪಡೆದುಕೊಂಡಿದೆ. ಇಂತಹ ಒಂದು ರೆಕಾರ್ಡ್ ಮುರಿಯಲು ಇನ್ನೊಂದು ಚಿತ್ರದಿಂದ ಸಾಧ್ಯವೇ ಇಲ್ಲ ಅಂತಾ ಜನರು ಊಹಿಸಿದ್ದರು, ಜನರ ನಂಬಿಕೆಗೆ ಯಜಮಾನ ಚಿತ್ರ ಹೊಸ ತಿರುವು ಕೊಟ್ಟಿದೆ. ಡಿ ಬಾಸ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ನಿರೂಪಿಸಿದ್ದಾರೆ.

ಯಜಮಾನ ಚಿತ್ರದ ಕ್ರೇಜ್ ಹೊಸ ದಾಖಲೆ ಅಳಿಸಿಹಾಕುವವರೆಗೂ ಮುನ್ನುಗ್ಗಿದೆ

ಯಜಮಾನ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದೆ ತಡ, ಅಭಿಮಾನಿಗಳು ಹೆಚ್ಚಿನ ಸಂಖೆಯಲ್ಲಿ ಟ್ರೇಲರ್ ವೀಕ್ಷಿಸಿದ್ದಾರೆ. ಚಿತ್ರದ ಸಂಭಾಷಣೆಗಳು, ನೋಡುಗರರನ್ನು ಚಿತ್ರಮಂದಿರದತ್ತ ಸೆಳೆಯಿತು. ಅಷ್ಟೊಂದು ಹೆಚ್ಚಿನ ಬಡ್ಜೆಟ್ ಅಲ್ಲಿ ಚಿತ್ರ ನಿರ್ಮಾಣವಾಗಲಿಲ್ಲ, ಆದರೂ ಸಾಕಷ್ಟು ಸದ್ದು ಮಾಡಿತ್ತು ಚಿತ್ರದ ಸಣ್ಣ ತುಣುಕು. ಚಿತ್ರದ ಕತೆಯ ಜೊತೆಗೆ ದರ್ಶನ್ ಅವರ ಅಭಿನಯ ಜನರಿಗೆ ಇಷ್ಟವಾಯಿತು ಆದ್ದರಿಂದ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಹಾಡುಗಳಿಂದ ಹಿಡಿದು ಟ್ರೇಲರ್ ವರೆಗೂ ಯಜಮಾನ ಚಿತ್ರ ಭಾರಿ ಮನೆ ಮಾತಾಗಿತ್ತು, ಸಿನೆಮಾದ ಕ್ರೇಜ್ ಹಾಗೆ ಬಿಡುಗಡೆ ವರೆಗೂ ಉಳಿಸಿಕೊಂಡು ಬಂದಿತ್ತು.

yajamana

ಟ್ರೇಲರ್ ವೀಕ್ಷಣೆಯಲ್ಲಿ ಯಜಮಾನನ ಬಿಸಿ ಕೆ‌ಜಿ‌ಎಫ್ ಗೆ ತಟ್ಟಿದೆ

ಯಜಮಾನ ಚಿತ್ರ ಕೆ‌ಜಿ‌ಎಫ್ ರೆಕಾರ್ಡ್ ಅನ್ನು ದ್ವಂಸ ಗೊಳಿಸಲು ಸಮೀಪಿಸುತ್ತಿದೆ, ಕೆ‌ಜಿ‌ಎಫ್ ಸಿನೆಮಾದ ಟ್ರೇಲರ್ ನೊವೆಂಬರ್ 8 ರಿಂದ ಇಲ್ಲಿಯವರೆಗೂ 1.8 (1,86,22,618) ಕೋಟಿ ಅಷ್ಟು ವೀಕ್ಷಣೆ ಕಂಡಿದೆ. ಅನೇಕ ಕನ್ನಡ ಚಿತ್ರಗಳ ಟ್ರೇಲರ್ ಬಿಡುಗಡೆ ಆಗಿತ್ತು, ಇಷ್ಟರ ಪ್ರಮಾಣದಲ್ಲಿ ಯಾವ ಸಿನೆಮಾದ ಟ್ರೇಲರ್ ಕೂಡ ಬಿಡುಗಡೆ ಆಗುವ ಮುಂಚೆಯೇ ಯಶಸ್ಸು ಕಂಡಿರಲಿಲ್ಲ. ಯಜಮಾನ ಕೇವಲ ಒಂದು ಭಾಷೆಯಲ್ಲಿ ಬಿಡುಗಡೆ ಆಗಿ ಕೆ‌ಜಿ‌ಎಫ್ ಗೆ ಪೈಪೋಟಿ ನೀಡಲು ಮುಂದಾಗಿದೆ. ಫೆಬ್ರುವರಿ 9 ರಂದು ರಿಲೀಸ್ ಆದ ಯಜಮಾನ ಟ್ರೇಲರ್ ಇವತ್ತಿನ ದಿನದ ವರೆಗೂ 1.8(1,84,49,166) ಕೋಟಿ ಅಷ್ಟು ಜನ ನೋಡಿದ್ದಾರೆ. ಎರಡು ಚಿತ್ರಗಳ ಟ್ರೇಲರ್ ಹೋಲಿಸಿದರೆ ಯಜಮಾನ ಕೊಂಚ ಹಿಂದಿದೆ, ಮುಂಬರುವ ದಿನಗಳಲ್ಲಿ ರೆಕಾರ್ಡ್ ಬ್ರೇಕ್ ಮಾಡಿದರು ಮಾಡಬಹುದು ಅಚ್ಚರಿ ಪಡೋ ಸಂಗತಿವೇನಲ್ಲ.

Advertisements

yajamana

ಒಂದಾದ ನಂತರ ಇನ್ನೊಂದು ಚಿತ್ರ ಕೊಂಪಿಟ್ ಮಾಡುತ್ತಲೇ ಇರುತ್ತವೆ

ಹೀಗೆ ಒಂದಾದ ಮೇಲೆ ಒಂದು ಚಿತ್ರ ಕೊಂಪಿಟ್ ಮಾಡುತ್ತಲೇ ಇರುತ್ತವೆ, ಫಿಲ್ಮ್ ಇಂಡಸ್ಟ್ರಿ ಅಲ್ಲಿ ಹೊಸ ಪ್ರತಿಭೆಯರ ಶ್ರಮ ಕಮ್ಮಿ ಆಗಿಲ್ಲ ಅವರು ಒಂದಲ್ಲ ಒಂದು ದಿನ ಇಂತಹದೇ ಒಂದು ದಾಖಲೆ ಬರೆಯಬಹುದು. ಇದೂ ಹೀಗೆ ಸಾಗುತ್ತಲೇ ಇರುತ್ತದೆ, ನಾವು ನೋಡಿ ಸಂತಸ ಪಡಬೇಕು, ಕನ್ನಡ ಇಂಡಸ್ಟ್ರಿ ಹೀಗೆ ಬೆಳೆಯುತ್ತಾ ಇರಬೇಕು ಎನ್ನುವುದೇ ನಮ್ಮ ಆಶಯ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook