ಸ್ವಂತ ಬ್ರಾಂಡ್ ಕಥೆ ಹೇಳೋ ಯಜಮಾನ ಸೂಪರ್. ಇನ್ನೂ ಸಿನಿಮಾ ನೋಡಿಲ್ಲ ಅಂದ್ರೆ ಈ ವಿಮರ್ಶೆ ಓದಿ

0
4193

ಡಿ ಬಾಸ್ ಅಭಿನಯದ ಯಜಮಾನ ಚಿತ್ರ ಅಂತೂ ಇಂತೂ ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರ ಕಥೆಯ ಬಗ್ಗೆ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡುತಿದ್ದಾರೆ. ಯಜಮಾನನಿಗೆ ಯಜಮಾನನೇ ಸರಿಸಾಟಿ ಎಂದು ತಮ್ಮ ಅಭಿನಯದ ಮೂಲಕ ಮತ್ತೊಮ್ಮೆ ದರ್ಶನ್ ನಿರೂಪಿಸಿದ್ದಾರೆ. ಅನೇಕ ಪಾತ್ರಗಳು ಸಿನೆಮಾದಲ್ಲಿ ಬಂದು ಹೋಗುತ್ತದೆ, ಪಾತ್ರದಾರಿಗಳು ನೈಜ್ಯ ರೂಪದ ಅಭಿನಯ ಮಾಡಿದ್ದಾರೆ. ದೇವರಾಜ್ ಅವರು ನಾಯಕಿಯ ತಂದೆಯ ಪಾತ್ರವನ್ನು ನಿಭಾಯಿಸಿದ್ದಾರೆ. ರಶ್ಮಿಕ ಮಂದಣ್ಣ ಅವರು ಕಾವೇರಿಯಾಗಿ, ನಟನ ಬಾಲ್ಯ ವಯಸ್ಸಿನ ಪ್ರೇಯಸಿ ಆಗಿ ಮಿಂಚಿದ್ದಾರೆ. ತಾಣ್ಯ ಹೋಪ್ ಹೀರೋ ಗೆ ಸಹಾಯ ಮಾಡುವ ಗಂಗ ಅನ್ನೋ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ, ಬಸಣ್ಣಿ ಆಗಿ ಕೂಡ ಒಂದು ಗೀತೆಯಲ್ಲಿ ಗೆಜ್ಜೆ ಕಟ್ಟಿ ಕುಣಿದಿದ್ದಾರೆ.

ದರ್ಶನ್ ಅವರ ನಟನೆ ಬಗ್ಗೆ ದೂಸ್ರ ಮಾತೇ ಇಲ್ಲ, ಡಾಲಿ ಈಗ ಮಿಠಾಯಿ ಸೂರಿ

ಡಾಲಿ ಧನಂಜಯ್ ಅವರ ಮಿಠಾಯಿ ಸೂರಿ ಅನ್ನೋ ಪಾತ್ರವು ಕೇವಲ ಎರಡು ಮೂರೋ ದೃಶ್ಯಾವಳಿಗಳಲ್ಲಿ ಬಂದು ಹೋಗುತ್ತದೆ, ಆದರೂ ಚಿತ್ರಮಂದಿರಗಳಲ್ಲಿ ಇವರ ಎಂಟ್ರಿಗೆ ಜನರು ಸೀಟಿ ಹೊಡೆದಿದ್ದೆ ಹೊಡೆದಿದ್ದು. ಸಾಧುಕೋಕಿಲ, ಶಿವರಾಜ್ ಕೆ‌ಆರ್ ಪೇಟೆ ಕೊಂಚ ಕಾಲದವರೆಗೂ ಹಾಸ್ಯ ಮನೋರಂಜನೆ ನೀಡಿ ಜನರನ್ನು ಎಲ್ಲಿಯೂ ಅಲ್ಲಾಡದಂತೆ ಕಟ್ಟಿಹಾಕುತ್ತಾರೆ. ಚಿತ್ರದಲ್ಲಿ ದರ್ಶನ್ ಅವರ ನಟನೆ ಬಗ್ಗೆ ದೂಸ್ರ ಮಾತೇ ಇಲ್ಲ. 21 ವರ್ಷದ ಮುಗ್ದ ಹುಡುಗಿಯ ನಟನೆಗೆ ರಶ್ಮಿಕ ಮಂದಣ್ಣ ಅವರಿಗೆ ಫುಲ್ ಮಾರ್ಕ್ಸ್ ಕೊಡಲೇಬೇಕು. ರವಿಶಂಕರ್  ರೌಡಿಗೆ ಸಹಕಾರ ನೀಡುವ ಪಾತ್ರದಲ್ಲಿ ಕಾಣಿಸಿಕೊಂಡರೆ. ಖಳ ನಾಯಕನಾಗಿ ಠಾಕೂರ್ ಅನೂಪ್ ಸಿಂಗ್ ದೇವಿ ಶೆಟ್ಟಿಯ ಪಾತ್ರವನ್ನು ಮಾಡಿದ್ದಾರೆ ಮತ್ತು ನಾಯಕ ನಟನ ಸರಿ ಸಮಾನವಾಗಿ ನಿಂತು ತಮ್ಮ ಕಲೆಯನ್ನು ಪರದೆಯಲ್ಲಿ ಪ್ರದರ್ಶನ ಮಾಡಿದ್ದಾರೆ.

darshan

ಚಿತ್ರದ ಕಥೆಯ ಮೂಲಕ ಹರಿಕೃಷ್ಣ ಜನರಿಗೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ

ಇನ್ನೂ ಚಿತ್ರದ ಕಥೆಯ ವಿಷಯಕ್ಕೆ ಬಂದರೆ ಒಂದು ಒಳ್ಳೆಯ ಸಂದೇಶವನ್ನು ಹರಿ ಕೃಷ್ಣ ನೀಡಿದ್ದಾರೆ. ಹಳ್ಳಿಯ ಜನತೆಗೆ ಹಾಗೂ ಕಷ್ಟ ಪಟ್ಟು ದುಡಿಯೋ ಪ್ರತಿ ಒಬ್ಬ ಕಾರ್ಮಿಕರಿಗೆ ಸಂದೇಶ ಕೊಡುವುದರಲ್ಲಿ ನಿರ್ದೇಶಕ ಗೆದ್ದಿದ್ದಾರೆ. ಹಳ್ಳಿಯ ಜನರು ಬಹಳ ಸುಲಭವಾಗಿ ಮೋಸ ಹೋಗಿ, ಯಾವ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ ಎಂದು ಈ ಚಿತ್ರ ಕಥೆ ಸಾರುತ್ತದೆ. ಮೊದಲಿನಿಂದಲೂ ಒಬ್ಬ ವ್ಯಕ್ತಿ ಕಠಿಣ ಪರಿಶ್ರಮ ಹಾಕಿ ಬೆಳೆಸಿದ ಬ್ರಾಂಡ್ ನಂಬಿಕೊಂಡು, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಒಳ್ಳೆಯ ಸಂಪಾದನೆ ಮಾಡುತ್ತಿರುವ ಸಂದರ್ಭದಲ್ಲಿ ಹೇಗೆ ಬೇರೆಯವರ ಕಂಪನಿಯೊಂದರ ಮೇಲೆ ವಿಶ್ವಾಸ ಇತ್ತು ಮೋಸ ಹೋಗುತ್ತಾನೆ ಅನ್ನುವುದು ನೀವು ಚಿತ್ರದಲ್ಲಿ ಕಾಣಬಹುದು.

ದುಡ್ಡಿನ ದುರಾಸೆಯಿಂದ ಊರಿನ ಜನರು ಉನ್ನತವಾದ ಕಂಪನಿಗೆ ತನ್ನ ಬ್ರಾಂಡ್ ಅನ್ನು ಮಾರಿಕೊಂಡು ಕೊನೆಗೆ ಪುಡಿಗಾಸು ಇಲ್ಲದಂತೆ ಪರದಾಡುವ ವೇಳೆಯಲ್ಲಿ, ನಾಯಕ ನಟ ತನ್ನ ಸ್ವಂತ ಬ್ರಾಂಡ್ ಅನ್ನು ಯಾವ ಕಂಪನಿಗೂ ಮಾರಿಕೊಳ್ಳದೆ ಹೇಗೆ ಊರಿನ ಜನರನ್ನು ಉಳಿಸಿ, ತನ್ನ ಸ್ವಂತ ಬ್ರಾಂಡ್ ಅನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಸಸ್ಪೆಂಸ್. ಯಜಮಾನ ಯಾವತ್ತಿಗೂ ಯಜಮಾನ ಆಗೇ ಇರಬೇಕು, ಜವಾನನಾಗಿ ಬದುಕಬಾರದು ಅನ್ನೋ ಸಂಭಾಷಣೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

harikrishna

ಚಿತ್ರದ ಸಂಭಾಷಣೆ ವೀಕ್ಷಕರನ್ನು ಸೆಳೆಯುತ್ತದೆ

ಕರ್ನಾಟಕದ ಬಗ್ಗೆ, ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳ ಬಗ್ಗೆ, ದರ್ಶನ್ ಅಭಿಮಾನಿಗಳೆಂದೇ ಬರೆದಿರುವ ಸಂಭಾಷಣೆಗಳು ಬಹಳ ಸೊಗಸಾಗಿದೆ. ಚಿತ್ರದಲ್ಲಿ ಪ್ರೇಮ ಕಥೆ ಕೂಡ ಇದೆ, ಶತ್ರುಗಳನ್ನು ಬಗ್ಗು ಬಡೆಯುವ ದೃಶ್ಯದ ಸನ್ನಿವೇಶಗಳ ಟೈಮಿಂಗ್ ಹಾಗೂ ಪ್ಲೇಸ್ಮೆಂಟ್ ಸೂಪರ್ ಅಂತಾನೆ ಹೇಳಬಹುದು. ಒಟ್ಟಾರೆ ಕುಟುಂಬದ ಸಮೇತ ಯಜಮಾನ ಚಿತ್ರವನ್ನು ವೀಕ್ಷಿಸಬಹುದು. ಬಾಕ್ಸ್ ಆಫೀಸ್ ಸುಲ್ತಾನ್ ಈಸ್ ಬ್ಯಾಕ್. ಇನ್ನೇಕೆ ತಡ ಕೂಡಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಜಮಾನನ ದರ್ಶನವನ್ನು ಪಡೆಯಿರಿ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Comments

comments

LEAVE A REPLY

Please enter your comment!
Please enter your name here