ಮತ್ತೆ Excuse-Me ಚಿತ್ರ ಮಾಡ್ತಾರಂತೆ ನಮ್ಮ ಪ್ರೇಮ್ ಅವರು. ಎಷ್ಟು ಜನ ಹೀರೋಗಳು?

0
12586

ಕನ್ನಡ ಚಲನಚಿತ್ರರಂಗದ ಅತ್ಯುತ್ತಮ ನಿರ್ದೇಶಕ ಅಂತಾ ಪ್ರೇಮ್ ಅವರು ಗುರುತಿಸಿಕೊಂಡಿದ್ದಾರೆ. ಹಾಗೂ ತಮ್ಮ ಸಿನಿಮಾದ ಪ್ರಮೋಷನ್ಸ್ ಇಂದಾನೇ ಹೆಚ್ಚು ಫೇಮಸ್. ರೌಡಿಸ್ಮ್ , ಸೆಂಟಿಮೆಂಟ್ ಹಾಗೂ ಪ್ರೀತಿ-ಪ್ರೇಮಗಳ ಮಿಶ್ರಣದ ಕತೆ ಇಟ್ಟುಕೊಂಡು ಸ್ಕ್ರಿಪ್ಟ್ ಬರೆಯುತ್ತಾರೆ ಪ್ರೇಮ್.

ಶಿವಣ್ಣ ಅಭಿನಯಿಸಿದ್ದ, ಪ್ರೇಮ್ ನಿರ್ದೇಶಿಸಿದ್ದ ಜೋಗಿ ಚಿತ್ರಕ್ಕೆ ಸಿನಿ ಪ್ರೇಕ್ಷಕರು ಕರಗಿ ನೀರಾಗಿದ್ದರು. ಇವರು ಜೋಗಿ ಚಲನಚಿತ್ರದಿಂದ ಸ್ಟಾರ್ ನಿರ್ದೇಶಕರ ಪಟ್ಟಿಯಲ್ಲಿ ನಿಂತರು. ಜೋಗಿ ಬರುವ ಮುನ್ನ ಕೂಡ ಕರಿಯ ಹಾಗೂ ಎಕ್ಸ್ಕ್ಯೂಸ್ ಮಿ ಚಲನಚಿತ್ರಗಳನ್ನು ನಿರ್ದೇಶಿಸಿ, ಉತ್ತಮ ನಿರ್ದೇಶಕ ಅಂತಾ ನಿರೂಪಿಸಿದ್ದರು. ಸಾಲು ಸಾಲಾಗಿ ಮೂರು ಚಿತ್ರಗಳು ಹಿಟ್ ಆದ ಕಾರಣದಿಂದಾಗಿ, ಹ್ಯಾಟ್ರಿಕ್ ಡೈರೆಕ್ಟರ್ ಅಂತಾ ಜನ ಕರೆಯಲು ಪ್ರಾರಂಭಿಸಿದರು.

ಕರ್ನಾಟಕದ ಜನತೆ ಜೋಗಿ ಪ್ರೇಮ್ ಎಂದೇ ನಾಮಕರಣ ಮಾಡಿದ್ದಾರೆ

ಜೋಗಿ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಧಿಕವಾದ ಹಣವನ್ನು ಬಾಚಿಕೊಳ್ಳುತ್ತದೆ. ಕರ್ನಾಟಕದ ಜನತೆ ಪ್ರೇಮ್ ಅವರನ್ನು ಜೋಗಿ ಪ್ರೇಮ್ ಎಂದು ಹೊಸ ನಾಮಕರಣ ಮಾಡುತ್ತಾರೆ. ಜೋಗಿಯ ನಂತರ ಪ್ರೀತಿ ಏಕೆ ಭೂಮಿ ಮೇಲ್ ಇದೆ ಅನ್ನೋ ಶೀರ್ಷಿಕೆ ಇಟ್ಟುಕೊಂಡು ಮೊದಲನೆಬಾರಿಗೆ ಸ್ವತಃ ತಾವೇ ನಾಯಕ ನಟನಾಗಿ ಅಭಿನಯುಸುತ್ತಾರೆ, ಪ್ರೇಕ್ಷಕರ ನಿರೀಕ್ಷೆಯನ್ನು ಈ ಚಿತ್ರ ಹುಸಿ ಮಾಡುತ್ತದೆ. ಆನಂತರ ಸ್ಟಾರ್ ನಟ ಪುನೀತ್ ರಾಜಕುಮಾರ್ ಅವರ ಜೊತೆ ರಾಜ್ ದಿ ಶೋ ಮ್ಯಾನ್ ಅನ್ನೋ ಸಿನೆಮಾ ಮಾಡುತ್ತಾರೆ, ಸಿನೆಮಾದ ಹಾಡುಗಳು ಜನಪ್ರಿಯವಾಗಿ ಇದ್ದರೂ, ಸಿನಿವೀಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ವಿಫಲವಾಯಿತು.

prem

ಪ್ರೇಮ್ ಚಿತ್ರಗಳಲ್ಲಿ ತಾಯಿಯ ಪ್ರೀತಿ, ಮಮತೆ, ವಾತ್ಸಲ್ಯ ಹೆಚ್ಚು ಕಂಡುಬರುತ್ತದೆ

2011 ರಲ್ಲಿ ಜೋಗಯ್ಯ ಚಿತ್ರವನ್ನು ಮಾಡುತ್ತಾರೆ, ಚಿತ್ರ ಆವೆರೇಜ್ ಹಿಟ್ ಆಗುತ್ತದೆ, ಸ್ವಲ್ಪ ಪ್ರೇಮ್ ಅವರು ನಿಟ್ಟುಸಿರು ಬಿಡುತ್ತಾರೆ. ಕೇವಲ ನಿರ್ದೇಶನವಲ್ಲದೆ ಚಿತ್ರಕ್ಕೆ ಸಾಹಿತ್ಯ ಗೀಚುವುದರಲ್ಲಿಯೂ ಪ್ರೇಮ್ ನಿಸ್ಸೀಮ, ಉದಾಹರಣೆಗೆ ‘ಬೇಡುವನು ವರವನು ಕೊಡೆ ತಾಯಿ ಜನ್ಮವನು ಕಡೆ ತನಕ ಮರೆಯೊಲ್ಲ ಜೋಗಿ ‘ ಗೀತೆಯೆ ಶಾಕ್ಷಿ.

ನೆಕ್ಸ್ಟ್ ಪ್ರೇಮ್ ಅಡ್ಡ ಚಿತ್ರದಲ್ಲಿ ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ, ಚಿತ್ರ ಹಿಟ್ ಆಗುತ್ತದೆ ತಾನು ಒಳ್ಳೆಯ ನಟ ಎಂದು ಪ್ರೂವ್ ಮಾಡುತ್ತಾರೆ. ಡಿ‌ಕೆ ಅನ್ನೋ ಹಾಸ್ಯಮಯವಾದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಸ್ಟಾರ್ ನಟರಾದ  ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯಿಸಿದ್ದ, ವಿಲನ್ ಫಿಲ್ಮ್ ಸಾಕಷ್ಟು ಸದ್ದು ಮಾಡಿತ್ತು ಇದರ ಕ್ರೆಡಿಟ್ ಮತ್ತೊಮ್ಮೆ ನಾವು ಪ್ರೇಮ್ ಅವರಿಗೆ ಕೊಡಬೇಕು.

Excuse me

ಹೊಸ ಎಕ್ಸ್ಕ್ಯೂಸ್ ಮಿ ಚಿತ್ರ ನಿರ್ದೇಶನ ಮಾಡಲು ಪ್ರೇಮ್ ಮುಂದಾಗಿದ್ದಾರೆ

2003 ರಲ್ಲಿ ಬಿಡುಗಡೆ ಆದ ಚಿತ್ರ ಎಕ್ಸ್ಕ್ಯೂಸ್ ಮಿ, ಪ್ರೇಮ್ ಅವರು ವಿಭಿನ್ನವಾದ ರೀತಿಯಲ್ಲಿ ಸಿನಿರಸಿಕರಿಗೆ ಪ್ರೇಮ ಕತೆ ಹೇಳುವುದರಲ್ಲಿ ಯಶಸ್ವಿ ಆಗಿದ್ದರು. ಈ ಚಿತ್ರದ ಕತೆ ಕೊನೆ ಹಂತದ ವರೆಗು ಕೌತುಕವಾಗಿ ಸಾಗುತ್ತದೆ. ಹದಿನಾರು ವರ್ಷಗಳ ನಂತರ ಈಗ ಅದೇ ಟೈಟಿಲ್ ಇಟ್ಟುಕೊಂಡು ಸಿನೆಮಾ ಮಾಡುತ್ತೇನೆ ಅಂತಾ ಹೇಳಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಅಜಯ್ ರಾವ್, ಸುನಿಲ್, ರಮ್ಯಾ ಮುಖ್ಯ ಭೂಮಿಕೆಯಲ್ಲಿ ಈ ಹಿಂದೆ ತೆರೆಕಂಡ Excuse-Me ಚಿತ್ರದಲ್ಲಿ ಅಭಿನಯಿಸಿದ್ದರು. ಪ್ರೇಮ್ ಅವರ ಭಾವಮೈದನಾದ ಅಭಿಶೇಖ್ ರಾವ್ ಅವರನ್ನು ಹೊಸ Excuse-Me ಸಿನೆಮಾದ ಮೂಲಕ ಸಿನಿರಂಗಕ್ಕೆ ಪರಿಚಯಿಸಲಿದ್ದಾರೆ. ಸಿನೆಮಾದ ಫೋಟೋಶೂಟ್ ಮುಗಿದಿದ್ದು ಮುಹೂರ್ತದ ದಿನದಂದೇ ಚಿತ್ರದ ಟೀಸರ್ ರಿಲೀಸ್ ಆಗುವುದು ಎಂದು ಪ್ರೇಮ್ ಹೇಳಿ ಕೊಂಡಿದ್ದಾರೆ.

ರಕ್ಷಿತಾ ಅವರು ಡಿ‌ಕೆ ಸಿನೆಮಾದ ನಂತರ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಆಫ್ಟರ್ 16 ಇಯರ್ಸ್ ಎಕ್ಸ್ಕ್ಯೂಸ್ ಮಿ ಮತ್ತೆ ಮೋಡಿ ಮಾಡಲಿದೆಯಾ? ಪ್ರೇಮ್ ಅವರಿಗೆ ಬ್ರೇಕ್ ನೀಡಲಿದೆಯಾ? ಸಿನೆಮಾ ಬಿಡುಗಡೆ ಆಗೋವರಿಗೂ ನಾವು ಕಾಯಲೇಬೇಕು.

Comments

comments

[jetpack_subscription_form]
SHARE
Previous article10 Things To Know About Jamsetji Tata, The Legendary Industrialist Of India
Next articleMeet Sudhir Shivaram, World’s Most Influential Wildlife Photographer From Karnataka

LEAVE A REPLY

Please enter your comment!
Please enter your name here