ರಾಕಿಂಗ್ ಸ್ಟಾರ್ ಯಶ್ ಕೊಲೆಯನ್ನು ರೂಪಿಸಿದ್ದ ರೌಡಿ ಭರತ್. ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ

ಇತ್ತೀಚಿಗೆ ನಮ್ಮ ಚಂದನವನದಲ್ಲಿ ಏನೇನೋ ತಲೆ ಬಿಸಿಯಾಗುವಂತ ಘಟನೆಗಳು ನಡೆಯುತ್ತಿವೆ. ನಮ್ಮ ನೆಚ್ಚಿನ ನಾಯಕರ ಮೇಲೆ ಕೆಟ್ಟ ದೃಷ್ಟಿಗಳು ಹೆಚ್ಚಾಗಿ ಬೀಳುತ್ತಿವೆ. ಕೆಲವು ದಿನಗಳಿಂದ ನಮ್ಮ ಸ್ಯಾಂಡಲ್ ವುಡ್ ನಾಯಕರ ಟೈಮ್ ಸರಿ ಇಲ್ಲ ಅನ್ಸುತ್ತೆ. ಅದಕ್ಕೆ ಒಂದಲ್ಲ ಒಂದು ತಾಪತ್ರಯಕ್ಕೆ ಒಳಗಾಗ್ತಿದ್ದಾರೆ. ಆದ್ರೆ ಈಗ ಆ ಕೆಟ್ಟ ಕಣ್ಣು ಬಿದ್ದಿರೋದು ನಮ್ಮ ನಚ್ಚಿನ ನಟ ರಾಕಿಂಗ್ ಸ್ಟಾರ್ ಯಶ್ ಮೇಲೆ. ಹೌದು. ಬೆಳಿಗ್ಗೆಯೇ ಯಶ್ ಅವರಿಗೆ ಒಂದು ಶಾಕಿಂಗ್ ವಿಷಯ ಕೇಳಿ ಬರುತ್ತೆ. ಅದು ಅವರನ್ನ ಕೊಲೆ ಮಾಡೋದಕ್ಕೆ ಸುಫಾರಿ ಕೊಟ್ಟಿರೋ ವಿಷಯ. ಈ ವಿಷಯದ ಬಗ್ಗೆ ಅವರಿಗೆ ಮೊದಲೇ ಸ್ವಲ್ಪ ಅನುಮಾನವಿರುತ್ತೆ. ಆದ್ರೆ ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಂಡಿರಲ್ಲ. ಆದ್ರೆ ಈಗ ಅವರು ಪೂರ್ತಿ ಶಾಕ್ ಆಗಿದ್ದಾರೆ.

ಹೌದು. ನಮ್ಮ ನಟ ಯಶ್ ಅವರನ್ನ ಕೊಲೆ ಮಾಡಬೇಕೆಂದು ಖತರ್ನಾಕ್ ಗ್ಯಾಂಗ್ ಒಂದು ಸ್ಕೆಚ್ ಹಾಕಿತ್ತು. ಆದ್ರೆ ಆ ವಿಷಯ ಇಲ್ಲಿಯವರೆಗೂ ಹೊರ ಬಿದ್ದಿರಲಿಲ್ಲ. ಆದ್ರೆ ಇವತ್ತು ಈ ವಿಷಯ ಎಲ್ಲರಿಗೂ ಗೊತ್ತಾಗಿದೆ. ಈ ವಿಷಯ ಕೇಳಿದ ಪೊಲೀಸರಿಗೂ ಹಾಗೂ ಯಶ್ ಗೆ ಒಂದು ಕ್ಷಣ ಶಾಕ್ ಆಗಿದೆ. ಯಾಕಂದ್ರೆ ಇತ್ತೀಚಿಗೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇದ್ದವು. ಹಾಗಾಗಿ ಇದರ ಸ್ವಲ್ಪ ತುಣುಕು ಪೊಲೀಸರಿಗೆ ಗೊತ್ತಿತ್ತು. ಆದ್ರೆ ಇವತ್ತು ಈ ವಿಷಯ ಕೇಳಿ ಎಲ್ಲರಿಗೂ ಆಶ್ಚರ್ಯವಾಗಿದೆ.

Advertisements

ಕೊಲೆಗೆ ಸಂಚು ರೂಪಿಸಿದವರಾದ್ರೂ ಯಾರು?

ಯಶ್ ಕೊಲೆಗೆ ಸಂಚು ರೂಪಿಸಿದ್ದವರು ಬೇರೆ ಯಾರು ಅಲ್ಲ. ನಗರದ ಕುಖ್ಯಾತ ರೌಡಿ ಭರತ ಅಲಿಯಾಸ್ ಸ್ಲಮ್ ಭರತ. ಹೌದು. ಈ ಭರತ ನಗರದ ಒಬ್ಬ ಕುಖ್ಯಾತ ರೌಡಿ. ಕೊಲೆ, ಸುಲಿಗೆ ಮಾಡಿಕೊಂಡು ಜೀವನ ನಡೆಸ್ತಿದ್ದ. ನಗರದ ಹಲವು ಪೊಲೀಸ್ ಸ್ಟೇಷನ್ ಗಳಲ್ಲಿ ಇವನ ವಿರುದ್ಧ ಕೇಸ್ ದಾಖಲಾಗಿವೆ. ಆದರೆ ಪೊಲೀಸರ ಕೈಗೆ ಮಾತ್ರ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಇವನನ್ನ ಹಿಡಿಬೇಕು ಅಂತ ಪೊಲೀಸ್ರು ಬಹಳಷ್ಟು ಪ್ರಯತ್ನ ಪಟ್ಟಿದ್ರು, ಆದ್ರೆ ಅವ್ನು ಎಲ್ಲಿರ್ತಾನೆ ಅನ್ನೋದೇ ಅವರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಆದರೂ ಒಬ್ಬ ರೌಡಿ ಎಷ್ಟು ಅಂತ ಮೆರೆಯೋಕಾಗುತ್ತೆ ಹೇಳಿ, ಒಂದಲ್ಲಾ ಒಂದು ದಿನ ತಗಲಾಕೊಳ್ಳೇ ಬೇಕಾಗುತ್ತೆ ಅಲ್ವಾ. ಇಲ್ಲಿ ಆಗಿದ್ದು ಸಹ ಅದೆ.

ಯಶ್ ಕೊಲೆಗೆ ತನ್ನ ಟೀಮ್ ನೊಂದಿಗೆ ರೆಡಿಯಾಗಿದ್ದ ಭರತ

ಹೌದು. ಯಶ್ ನ ಕೊಲೆ ಮಾಡಬೇಕು ಅಂತ ಈ ಭರತನಿಗೆ ಯಾರು ಸುಫಾರಿ ಕೊಟ್ಟಿರ್ತಾರೆ ಅಂತ ಗೊತ್ತಿಲ್ಲ. ಆದ್ರೆ ದೂರದಲ್ಲಿದ್ದುಕೊಂಡೇ ಯಶ್ ಕೊಲೆಗೆ ಸ್ಕೆಚ್ ಹಾಕಿರ್ತಾನೆ. ಆದ್ರೆ ನಿನ್ನೆ ಮೊನ್ನೆ ವರೆಗೂ ಈ ವಿಷಯ ಯಾರೊಬ್ಬರಿಗೂ ಗೊತ್ತಿರಲ್ಲ. ಯಾಕಂದ್ರೆ ಇವ್ನು ಅಷ್ಟು ಬಹಿರಂಗವಾಗಿ ಪ್ಲಾನ್ ಮಾಡಿರ್ತಾನೆ. ಯಶ್ ಕೊಲೆಗಾಗಿ ತನ್ನ ಜೊತೆ ತನ್ನ 4 ಜನ ಸ್ನೇಹಿತರನ್ನ ರೆಡಿ ಮಾಡ್ಕೊಂಡಿರುತ್ತಾನೆ. ಆದ್ರೆ ಅಷ್ಟು ಜನರು ಸಹ ಎಲ್ಲಿಯೂ ವಿಷಯವನ್ನ ಬಹಿರಂಗ ಮಾಡಿರಲ್ಲ. ಆದ್ರೆ ಅವತ್ತು ಭರತನ ಟೈಮ್ ಇರಲ್ಲ ಅನ್ಸುತ್ತೆ, ಅದಿಕ್ಕೆ ಪೋಲೀಸರ ಬಲೆಗೆ ಬೀಳ್ತಾನೆ.

ಸಿಸಿಬಿ ಬಲೆಗೆ ಬಿದ್ದಿದ್ದಾದ್ರೂ ಹೇಗೆ?

ನಗರದ ಹಲವು ಕಡೆ ಭರತನ ಹಾವಳಿ ಜಾಸ್ತಿಯಾಗ್ತಿರುತ್ತೆ. ಆದ್ರೆ ಅವ್ನು ಮಾತ್ರ ಯಾರ ಕೈಗೂ ಸಿಕ್ತಿರ್ಲಿಲ್ಲ. ಪೊಲೀಸ್ರು ರಾತ್ರಿ ಇಡೀ ಹುಡುಕಿದರೂ ಅವನನ್ನ ಪತ್ತೆ ಮಾಡೋಕಾಗಿರಲಿಲ್ಲ. ಇಂತ ಸಮಯದಲ್ಲಿ ನಗರಕ್ಕೆ ಅಲೋಕ್ ಕುಮಾರ್ ಅವರು ಸಿಸಿಬಿ ಆಯುಕ್ತರಾಗಿ ಬರುತ್ತಾರೆ. ಅವರು ಬಂದಮೇಲೆ ಎಲ್ಲ ಸಿಸಿಬಿ ಅಧಿಕಾರಿಗಳಿಗೂ ಮೆಸೇಜ್ ಹೋಗುತ್ತೆ. ಅದೇನಪ್ಪ ಅಂದ್ರೆ ನಾನು ಲಿಸ್ಟ್ ಮಾಡಿಕೊಟ್ಟಿರೋ ಕೆಲವು ರೌಡಿಗಳನ್ನ ಆದಷ್ಟು ಬೇಗ ಅರೆಸ್ಟ್ ಮಾಡಬೇಕು ಅಂತ. ಆಗ ನಗರದ ಸಿಸಿಬಿ ಅಧಿಕಾರಿಗಳೆಲ್ಲಾ ಅಲರ್ಟ್ ಆಗ್ತಾರೆ. ಆಗ, ಭರತ ಅಷ್ಟೊಂದು ಆಟ ಆಡ್ಸಿದ್ರಿಂದ ಅವನನ್ನ ಹಿಡಿಲೇ ಬೇಕು ಅನ್ನೋದು ಪೋಲೀಸರ ಉದ್ದೇಶ ಆಗಿರುತ್ತೆ. ಹೀಗಿರುವಾಗ ಫೆಬ್ರವರಿ 5ನೆ ತಾರೀಖು ಭರತ ಕೆಂಗಿರಿಯಲ್ಲಿದ್ದಾನೆ ಅನ್ನೋ ವಿಷಯ ಸಿಸಿಬಿ ಪೊಲೀಸರಿಗೆ ಗೊತ್ತಾಗುತ್ತೆ, ತಮ್ಮ ಟೀಮ್ ನೊಂದಿಗೆ ಹೋದ ಸಿಸಿಬಿಯವರಿಂದ ತಪ್ಪಿಸಿಕೊಳ್ಳೋಕೆ ಮುಂದಾಗ್ತಾನೆ. ಆಗ ಮೇಲಿನ ಅಧಿಕಾರಿಗಳ ಆದೇಶದಂತೆ ಅವನ ಮೇಲೆ ಗುಂಡಿನ ದಾಳಿ ನಡೆಸಿ, ನಂತರ ಅವನನ್ನ ಬಂಧಿಸುತ್ತಾರೆ.

Advertisements

ವಿಚಾರಣೆಯಲ್ಲಿ ಬಯಲಾಯ್ತು ಯಶ್ ಕೊಲೆ ಸ್ಕೆಚ್

ಸ್ಲಮ್ ಭರತ ನನ್ನ ಅರೆಸ್ಟ್ ಮಾಡಿದ ಮೇಲೆ, ಸಿಸಿಬಿ ಅಧಿಕಾರಿಗಳು ಅವನನ್ನ ಕಸ್ಟಡಿಗೆ ತೆಗೆದುಕೊಳ್ತಾರೆ. ನಂತರ ಅವನನ್ನ ವಿಚಾರಣೆಗೆ ಒಳಪಡಿಸ್ತಾರೆ. ಆದ್ರೆ ಆಗ ಅವ್ನು ಯಶ್ ಕೊಲೆ ಬಗ್ಗೆ ಏನು ಬಾಯಿ ಬಿಡೋಲ್ಲ. ಬರಿ ತಾನು ಮಾಡಿದ್ದ ಹಳೆ ಕೇಸ್ ಗಳ ಬಗ್ಗೆ ಹೇಳ್ತಾನೆ. ಅದರಂತೆ ಸಿಸಿಬಿ ಪೊಲೀಸರು ಅವನ ಮಾತು ನಂಬಿ ಸ್ವಲ್ಪ ಮಟ್ಟಿಗೆ ಅವನಿಗೆ ವಿಶ್ರಾಂತಿ ಕೊಡ್ತಾರೆ. ಆದ್ರೆ ಮೊನ್ನೆ ಸಿಸಿಬಿ ಅಧಿಕಾರಿಕಳಿಗೆ ಉನ್ನತ ಮೂಲಗಳಿಂದ ಒಂದು ವಿಷಯ ಕೇಳಿ ಬರುತ್ತೆ. ಅದೆ ಯಶ್ ಕೊಲೆಗೆ ಸಂಚು ರೂಪಿಸಿರೋದು. ಆಗ ಮತ್ತೊಮ್ಮೆ ಭರತನನ್ನ ವಿಚಾರಣೆ ನಡೆಸಿದಾಗ, ನಿಜಾಂಶ ಬಾಯಿ ಬಿಡುತ್ತಾನೆ.

ಭರತನ ಜೊತೆ, ಅವನ  ಸಹಚರರ ಬಂಧನ

ಭರತ ಕೊಲೆಗೆ ಸುಫಾರಿ ಒಪ್ಪಿಕೊಂಡಿದ್ದ. ಆದ್ರೆ ಅಷ್ಟರಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದ. ಆದ್ರೆ ಒಪ್ಪಿಕೊಂಡ ಕೆಲಸ ಆಗಬೇಕಿತ್ತಲ್ಲ. ಅದಕ್ಕೋಸ್ಕರ ಇದರ ಬಗ್ಗೆ ತನ್ನ ಸಹಚರರ ಬಳಿ ಮಾತಾಡಿದ್ದ. ಅದರಂತೆ ಅವರು ಭರತನ ಮಾತು ಕೇಳಿ, ಹೊರಗಡೆ ಯಶ್ ಕೊಲೆಗೆ ಟೈಮ್ ನೋಡ್ತಿದ್ರು. ಆದರೆ ಇವತ್ತು, ಅವ್ರು ಸ್ಕೆಚ್ ಹಾಕಿದ್ರು ಅಂತ ಕಾಣುತ್ತೆ. ಅಷ್ಟರಲ್ಲಿ ಸಿಸಿಬಿ ಅಧಿಕಾರಿಗಳ ತಮ್ಮ ಸಮಯ ಪ್ರಜ್ಞೆಯಿಂದ ಅವರನ್ನ ಬಂಧಿಸಿದ್ದಾರೆ. ಇವತ್ತು ಭರತನ ಸಹಚರರೆಲ್ಲಾ, ಶೇಷಾದ್ರಿಪುರಂ ವ್ಯಾಪ್ತಿಯ ಆರ್.ಪಿ ರಸ್ತೆಯ ಬಿಡಿಎ ಕಚೇರಿ ಬಳಿ ಮಾರಾಕಾಸ್ತ್ರಗಳನ್ನ ಹಿಡಿದು ನಿಂತಿದ್ದಾರೆ ಅನ್ನೋ ವಿಷಯ ತಿಳಿಯುತ್ತೆ. ತಕ್ಷಣವೇ ಅಲ್ಲಿಗೆ ಹೋದ ಪೊಲೀಸರು ಅವರನ್ನ ಬಂಧಿಸಿದ್ದಾರೆ.

ಸಹಚರರನ್ನ ವಿಚಾರಣೆ ಮಾಡಿದ ಸಿಸಿಬಿ

ಪೊಲೀಸ್ರು ಅವರನ್ನ ಬಂದಿಸೋಕೆ ಮುಂದಾದಾಗ ಅವರಲ್ಲಿ ಒಬ್ಬ ತಪ್ಪಿಸಿಕೊಂಡು, ಪರಾರಿಯಾಗಿದ್ದಾನೆ. ಇನ್ನುಳಿದ ನಾಲ್ಕು ಜನರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಕೊಲೆಯ ಸ್ಕೆಚ್ ಬಗ್ಗೆ ಬಾಯಿ ಬಿಡ್ತಾರೆ. ಭರತ, ಯಶ್ ಕೊಲೆಗಾಗಿ ಸುಫಾರಿ ತೆಗೆದುಕೊಂಡಿದ್ದ. ಆದ್ರೆ ಅವನನ್ನ ಅರೆಸ್ಟ್ ಮಾಡಿದ ಮೇಲೆ, ಈ ಕೆಲಸ ನಾವೇ ಮಾಡಬೇಕಾಗಿತ್ತು.. ಅದರಂತೆ ಇವತ್ತು ಏನಾದ್ರು ಟೈಮ್ ಕೂಡಿಬಂದ್ರೆ, ಸ್ಕೆಚ್ ಹಾಕೋಣ ಅನ್ಕೊಂಡಿದ್ವಿ ಅಂತ ಹೇಳ್ತಾರೆ. ಸಿಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ, ಸುಫಾರಿ ಕೊಟ್ಟಿದ್ದು, ಯಾರು ಅನ್ನೋ ವಿಷಯ ಮಾತ್ರ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ.

Advertisements

ಕೊಲೆ ವಿಷಯ ತಿಳಿದು, ಯಶ್ ಹೇಳಿದ್ದಾದ್ರೂ ಏನು?

ಕೊಲೆ ಸುಫಾರಿ ಬಗ್ಗೆ ಕೂಡಲೇ ಯಶ್ ಶಾಕ್ ಆಗ್ತಾರೆ. ಯಾಕಂದ್ರೆ ನನ್ನನ್ನ ಕೊಲೆ ಮಾಡೋಕೆ ಸ್ಕೆಚ್ ಹಾಕಿದ್ದಾರಾ ಅಂತ. ಆದ್ರೆ ಯಶ್ ಗೆ ಇದ್ಯಾವುದರ ಬಗ್ಗೆಯೂ ಗೊತ್ತಿರಲ್ಲ. ಪೊಲೀಸರಿಂದ ವಿಷಯ ತಿಳಿದಾಗ, ಒಂದು ಕ್ಷಣ ದಂಗಾಗಿ ನಿಲ್ಲುತ್ತಾರೆ. ಸಿಸಿಬಿ ಅವರು ಕೇಳಿದ ಪ್ರಶ್ನೆಗೆ ಯಶ್ ಕಡೆಯಿಂದ ಒಂದೇ ಉತ್ತರ ಇತ್ತು. ನನಗೆ ಗೊತ್ತಿಲ್ಲ ಅಂತ. ಹೌದು ಯಶ್ ಗೆ ಭರತ ನ ಬಗ್ಗೆ ಏನೂ ಗೊತ್ತಿಲ್ಲ. ಅವನೊಬ್ಬ ರೌಡಿ ಅಂತ ಗೊತ್ತು, ಆದ್ರೆ ನನ್ನ ಕೊಲೆ ಮಾಡಬೇಕು ಅಂತ ಯಾಕೆ ಅನ್ಕೊಂಡ. ನನ್ನ ಕೊಲೆ ಮಾಡೋದ್ರಿಂದ ಅವನಿಗೆ ಸಿಗೋದಾದ್ರೂ ಏನೂ? ನನಿಗೂ, ಅವನಿಗೂ ಯಾವುದೇ ರೀತಿ ದ್ವೇಷ ಇಲ್ಲ. ಇವರ ಹಿಂದೆ ಯಾರೋ ಬೇರೆಯವರು ಇರಬೇಕು ಎಂದು ಯಶ್ ತಿಳಿಸುತ್ತಾರೆ.

ಸದ್ಯಕ್ಕೆ ಯಶ್ ಮಾತುಗಳನ್ನ ಕೇಳಿಸಿಕೊಂಡ ಪೊಲೀಸರು ಆರೋಪಿಗಳನ್ನ ಇನ್ನಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ. ಸುಫಾರಿ ಕೊಟ್ಟಿದ್ದು, ಯಾರು ಅಂತ ತಿಳಿಯೋವರೆಗೂ ಇವರನ್ನ ಬಿಡಲ್ಲ ಅಂತ ಸಿಸಿಬಿ ಅವರು ಪಣ ತೊಟ್ಟಿದ್ದಾರೆ. ಏನೇ ಆಗ್ಲಿ, ದ್ವೇಷ ಎಷ್ಟೇ ಇದ್ದರೂ ಅದನ್ನ ಮಾತಲ್ಲಿ ಬಗೆ ಹರಿಸಿಕೊಳ್ಳೋಕೆ ನೋಡ್ಬೇಕು. ಅದನ್ನ ಬಿಟ್ಟು ಯಾರೋ ಹೇಳಿದ್ರು ಅಂತ ಕೊಲೆ ಮಾಡೋಕೆ ಮುಂದಾಗಬಾರದು.. ಆದ್ರೆ ಈ ರೀತಿ ಜೈಲಲ್ಲಿ ಮುದ್ದೆ ಮುರೀಬೇಕಾಗುತ್ತೆ.

ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook 

Advertisements