ಉಪೇಂದ್ರ ಅವರ ಅಭಿಮಾನಿಯೊಬ್ಬ ಪ್ರಜಾಕೀಯ ಪಕ್ಷದ ಬಗ್ಗೆ ಹೀಗೆ ಬರೆಯುತ್ತಾರೆ.
ಕತ್ತಲೆ ಕೋಣೆಯಲ್ಲಿ ಇಟ್ಟ ವ್ಯಕ್ತಿಯನ್ನು ಬಹಳ ವರ್ಷಗಳ ನಂತರ ಬೆಳಕಿಗೆ ಬಿಟ್ಟರೆ ಆತನ ವರ್ತನೆ ಹೇಗಿರಬಹುದು? ಸೂರ್ಯನ ಬೆಳಕು ನೋಡಿ ಹೆದರುತ್ತಾನೆ ಅಲ್ವ? ಹಾಗೆ ಆಗಿದೆ ಸದ್ಯಕ್ಕೆ ನಮ್ಮ ರಾಜ್ಯದ ಪ್ರಜೆಗಳ ಅವಸ್ಥೆ. ಇಷ್ಟು ವರ್ಷಗಳ ವರೆಗೆ ತಾವು ಕೇವಲ ಪ್ರಜೆಗಳು . ತಾವು ಆರಿಸಿ ಕಳುಹಿಸಿದ ನಾಯಕರುಗಳೇ ತಮ್ಮನ್ನು ಆಳುವ ರಾಜರು ಎಂದುಕೊಂಡವರಿಗೆ ಉಪೇಂದ್ರನ ಮಾತುಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ . ಹೌದು ಸ್ವಾತಂತ್ರ್ಯ ನಂತರ ಆಯ್ದುಕೊಂಡಿದ್ದು ಪ್ರಜಾಪ್ರಭುತ್ವ ವನ್ನು . ಆದರೆ ಈ ಪ್ರಜಾಪ್ರಭುತ್ವ ಜಾರಿಗೆ ಬಂದಿದ್ದು ಮಾತ್ರ ಅದರ ತಾತ್ಪರ್ಯಕ್ಕೆ ವಿರುದ್ಧವಾಗಿ . ಎಲ್ಲಿ ಪ್ರಜೆಗಳು ಪ್ರಭುಗಳಾಗಿರಬೇಕಿತ್ತೋ ಅಲ್ಲಿ ಪ್ರಜೆ ಆಳಾಗಿ ತಾನು ಆರಿಸಿ ಕಳುಹಿಸಿದ ತನ್ನ ಪ್ರತಿನಿಧಿಯನ್ನೇ ರಾಜಾನಾಗಿ ತಿಳಿದು ಸುಮಾರು ಎಪ್ಪತ್ತು ವರುಷ ಕಳೆದಿದ್ದಾನೆ. ಈಗ ಇದ್ದಕಿದ್ದಂತೆ ಇಲ್ಲ ಕಣಪ್ಪ ನೀನೆ ರಾಜ ಎಂದರೆ ಸಲೀಸಾಗಂತು ಒಪ್ಪುವ ಪರಿಸ್ಥಿತಿಯಲ್ಲಿ ಅವನಿಲ್ಲ.
ಕುರಿ ಹಿಂಡಿನಲ್ಲಿ ಬೆಳೆದ ಕುರಿ
ಕುರಿ ಹಿಂಡಿನಲ್ಲಿ ಬೆಳೆದ ಹುಲಿಗೆ ತಾನು ಕುರಿ ಎನ್ನೋ ಭಾವನೆ ಬಂದಂತೆ! ಆದರೆ ಇಂದಲ್ಲ ನಾಳೆ ಆ ಹುಲಿಗೆ ತಾನು ಹುಲಿ, ಕುರಿಯಲ್ಲ ಅನ್ನೋ ಅನುಭವ ಆಗಲೇ ಬೇಕು. ಅಷ್ಟಕ್ಕೂ ಈ ರಾಜನ ಸ್ಥಾನಮಾನ ಕೊಟ್ಟಿದ್ದು ಯಾರೆಂದು ತಿಳಿದಿದ್ದೀರಾ. ಅದೇ ನಮ್ಮ ಸೌಂವಿಧಾನ! ಹೌದು ಪ್ರತಿಯೊಬ್ಬ ಪ್ರಜೆಗೂ ನಮ್ಮ ಸೌಂವಿಧಾನ ಕೊಟ್ಟಿದ್ದು ರಾಜನ ಸ್ಥಾನ ಮಾನವನ್ನು. ಈ ರಾಜನ ಅನುಕೂಲತೆಗಾಗಿಯೇ ರಚನೆಯಾಗಿದ್ದು ಶಾಶಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗ. ಹಾಗಾಗೇ ಪ್ರಜಾಪ್ರಭುತ್ವದಲ್ಲಿ ಪ್ರಜೆನೆ ಮುಖ್ಯ. ಉಳಿದೆಲ್ಲವೂ ಆತ ನೆಮ್ಮದಿಯಿಂದ ಜೀವನ ನಡೆಸಲು ರಚನೆಯಾದ ಸೌಕರ್ಯಗಳಷ್ಟೇ . ಆದರೆ ಯಾಕೆ ಸೌಂವಿಧಾನ ಕೊಟ್ಟ ಈ ಗೌರವ ನಮ್ಮ ಪ್ರಜೆಗೆ ಅರ್ಥ ಆಗಿಲ್ಲ ?
ಅದಕ್ಕೆ ಕಾರಣ ಆತನೇ ಆರಿಸಿ ಕಳುಹಿಸಿದ ಪ್ರತಿನಿಧಿ . ಕಾಲ ಕಾಲಕ್ಕೂ ನಾನೆ ರಾಜ , ನೀನೇನಿದ್ದರೂ ಆಳು ಎನ್ನುವ ಭ್ರಮೆ ಹುಟ್ಟಿಸುತ್ತ ಸಾಗಿದ ಜನ ಪ್ರತಿನಿಧಿ . ಜನ ಕಟ್ಟಿದ ತೆರಿಗೆಯಿಂದ ಐಷಾರಾಮಿ ಮನೆ , ಕಾರು , ಹಣ ಗಳಿಸಿ ಕಿರೀಟವಿಲ್ಲದ ರಾಜನಂತೆ ಮೆರೆದ. ಯಾವಾಗ ತನ್ನ ಪ್ರತಿನಿಧಿಯ ಐಶ್ವರ್ಯ ಕಂಡನೋ ಆವಾಗಲೇ ಪ್ರಜೆ ತನ್ನ ಪ್ರತಿನಿಧಿಯೇ ರಾಜ ಇರಬೇಕು ಅನ್ನೋ ತೀರ್ಮಾನಕ್ಕೆ ಬಂದು ಬಿಟ್ಟ . ಅವರು ಕಟ್ಟಿದ ತೆರಿಗೆ ಹಣದ ಸ್ವಲ್ಪ ಭಾಗ ಅವರಿಗೆ ನೀಡಿ , ಇದು ನಾನು ನಿಮಗೆ ಕೊಡುತ್ತಿರುವ ಭಿಕ್ಷೆ ಎನ್ನುವಂತೆ ಬಿಂಬಿಸಿದ .
ದೇಶದ ಬಗ್ಗೆ , ಅವರಿಗೆ ಸೌಂವಿಧಾನ ಕೊಟ್ಟ ಸವಲತ್ತುಗಳ ಬಗ್ಗೆ ಅರಿವು ಆಗಭಾರದು ಎಂದು ಅವರನ್ನು ಸದಾ ಜಾತಿಯ ಬಗ್ಗೆ , ಧರ್ಮದ ಬಗ್ಗೆ , ಭಾಷೆಯ ಬಗ್ಗೆ ಕಚ್ಚಾಡುವಂತೆ ಮಾಡಿದ ಜನಪ್ರತಿನಿಧಿ, ಬೇರೆ ಚಿಂತನೆಗಳು ಜನರ ತಲೆಯಲ್ಲಿ ಬಾರದಂತೆ ಮಾಡಿದ . ಕಾಲ ಕಾಲಕ್ಕೂ ಬೇರೆ ಬೇರೆ ರಾಜರಿಂದ , ಬ್ರಿಟಿಷರಿಂದ ಆಳಲ್ಪಟ್ಟ ಜನ ನಾವು . ಹಾಗಾಗಿ ಸ್ವಾತಂತ್ರ್ಯ ಬಂದಾಗ ಇದ್ದಕಿದ್ದಂತೆ ನಾವೇ ರಾಜರು ಎಂದಾಗ ಒಪ್ಪುವ ಪರಿಸ್ಥಿತಿಯಲ್ಲಂತೂ ಇದ್ದಿರಲಿಲ್ಲ . ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪ್ರಜಾಪ್ರಭುತ್ವ ಅರ್ಥ ಮಾಡಿಕೊಳ್ಳುವ ಮನಸ್ಥಿತಿಯಲ್ಲಂತೂ ನಾವು ಇದ್ದಿರಲಿಲ್ಲ . ದೇಶದ ಬಗ್ಗೆ , ಜನರ ಬಗ್ಗೆ ಪ್ರೀತಿಯಿದ್ದ ಯೋಗ್ಯ ವ್ಯಕ್ತಿಗಳು ತಯಾರಿಸಿದ ಸೌಂವಿಧಾನ ಜನರಿಗೆ ರಾಜನ ಸ್ಥಾನಮಾನ ಕೊಟ್ಟಿದ್ದರ ಅರಿವು ಆಗಲೇ ಇಲ್ಲ . ಈ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡ ಜನ ಪ್ರತಿನಿಧಿ ನಾನಪ್ಪ ರಾಜ , ನೀನಲ್ಲ ಎಂದು ನಂಬಿಸುತ್ತ ಬಂದ. ಯಾವ ಅಜ್ಞಾನಕ್ಕೂ ಒಂದು ಕೊನೆ ಇರಬೇಕಲ್ವಾ . ಸತ್ಯ ಎಂದಾದರೂ ಗೆಲ್ಲ ಬೇಕು ಅಲ್ವ .
ಸಂವಿಧಾನವೇ ರಾಜಗುರು
ಅದಕ್ಕೆ ಉಪೇಂದ್ರ ಈಗ ಮುನ್ನುಡಿ ಬರೆದಿದ್ದಾರೆ . ನಿಮಗೆಲ್ಲ ಅನಿಸುತ್ತಿರಬೇಕು ನಾವೇ ರಾಜರಾದರೆ ರಾಜಗುರು ಯಾರೆಂದು ? ಆ ರಾಜಗುರುವೆ ನಮ್ಮ ಸೌಂವಿಧಾನ ! ಯಾವ ಸೌಂವಿಧಾನ ನಮ್ಮ ರಾಜಗುರು ಆಗಬೇಕಿತ್ತೋ ಅದನ್ನೇ ಬೆದರಿಕೆಯ ಅಸ್ತ್ರವಾಗಿ ಬೇಕೆಂದಾಗ ಬಳಸಿದರು . ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಮಾಧ್ಯಮದಲ್ಲಿ ಬಹಳಷ್ಟು ಚರ್ಚೆಗಳನ್ನು ಕೇಳಿದ್ದೇನೆ . ಕೆಲವರು ಸಿನೆಮಾಗಳಿಗೆ ಈ ತರದ ವಿಚಾರಗಳು ಪರವಾಗಿಲ್ಲ . ನಿಜ ಜೀವನದಲ್ಲಿ ಇದೆಲ್ಲ ಆಗುತ್ತಾ . ಉಪೇಂದ್ರ ಸುಮ್ನೆ ಏನೇನೋ ಹರುಟುತ್ತ ಇದ್ದಾನೆ ಎನ್ನುವಂತೆ ಹೇಳುತ್ತಿದ್ದಾರೆ . ಅವರೆಲ್ಲ ಒಂದು ವಿಷಯ ತಿಳಿದುಕೊಳ್ಳಬೇಕು , ಸ್ವಾತಂತ್ರ್ಯ ನಂತರ ನಿರ್ಮಾಣವಾದ ನಮ್ಮ ಸೌಂವಿಧಾನ ನಮಗೆ ಕೊಟ್ಟ ಹಕ್ಕಿನ ಬಗ್ಗೆ ಉಪೇಂದ್ರ ಮಾತನಾಡುತ್ತಿದ್ದಾರೆ .
ನಾವು ಹಾಗೆ ಬದುಕುತ್ತಿಲ್ಲ ಎಂದ ಮಾತ್ರಕ್ಕೆ ನಿಜವನ್ನೇ ಸುಳ್ಳೆನ್ನುವುದು ಎಷ್ಟರ ಮಟ್ಟಿಗೆ ಸರಿ ? ಒಹೋ ನಾವೇ ರಾಜರು ಎಂದ ಮೇಲೆ ಏನು ಬೇಕಾದ್ರೂ ಮಾಡಬಹುದಾ ? ಇಲ್ಲ , ಈ ರಾಜನಿಗೂ ಮೇಲೆ ರಾಜಗುರು ಅಂದರೆ ನಮ್ಮ ಸೌಂವಿಧಾನ ಇದೆ . ಅದು ಪ್ರತಿಯೊಬ್ಬರ ಹಕ್ಕು , ಕರ್ತವ್ಯ ಗಳನ್ನೂ ತಿಳಿಸುತ್ತದೆ . ಈ ಸೌಂವಿಧಾನದ ಚೌಕಟ್ಟಿನಲ್ಲಿ ಜೀವನ ನಡೆಸಬೇಕು . ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ( ಅಸಾಮಾನ್ಯ ) ನಾಗರೀಕರೊರೆಗೂ ಒಂದೇ ನಿಯಮ . ಹಾಗೆ ನೋಡಲಿಕ್ಕೆ ಹೋದರೆ ಈ ಪ್ರಜಾಪ್ರಭುತ್ವವನ್ನು ಸರಿಯಾಗಿ ಜಾರಿಗೆ ತಂದು ಯಶಸ್ಸು ಗಳಿಸಿದ ಕೀರ್ತಿ ವಿಶ್ವದ ದೊಡ್ಡಣ್ಣನಿಗೆ ಸಲ್ಲಬೇಕು . ನಮ್ಮ ಕಣ್ಣ ಮುಂದೆಯೇ ಜೀವಂತ ಉದಾಹರಣೆ ಇರಬೇಕಾದರೆ ಇದ್ಯಾವುದೋ ಅಸಾಧ್ಯವಾದ ವಿಚಾರ ಎಂದುಕೊಳ್ಳುವುದು ಸೂಕ್ತ ಅಲ್ಲ .
ಕಿರೀಟ ಉಳಿಸಿಕೊಳ್ಳುವ ಪ್ರಯತ್ನ
ಇನ್ನು ಎದುರಾಗಬಹುದಾದ ಮತ್ತೊಂದು ಸಮಸ್ಯೆ ಎಂದರೆ ಇದುವರೆಗೂ ರಾಜರಾಗಿ ಮೆರೆದವರು ಸುಮ್ಮನಂತೂ ಕೂರೊಲ್ಲ. ತಮ್ಮ ಕಿರೀಟ ಉಳಿಸಿಕೊಳ್ಳಲು ಪ್ರಯತ್ನವಂತೂ ಮಾಡಿಯೇ ಮಾಡುತ್ತಾರೆ. ಆ ಎಲ್ಲ ಹಂತಗಳನ್ನು ನಾವು ದಾಟಿ ಬರಬೇಕಿದೆ. ಮೊದಲ ಹೆಜ್ಜೆಯನ್ನಷ್ಟೇ ಇಟ್ಟಿದ್ದೇವೆ. ಉಪೇಂದ್ರ ಏನೋ ನಾವೇ ರಾಜರು ಎಂದರು. ಆದರೆ ಜನ ಒಪ್ಪಿಕೊಳ್ತಾರಾ ? ಜನರಿಗೆ ಈ ನಿಟ್ಟಿನಲ್ಲಿ ತಿಳುವಳಿಕೆ ನೀಡುವ ಕೆಲಸ ಸುರುವಾಗಬೇಕು . ಬ್ರಿಟಿಷ್ ಅಧಿಕಾರಿ ಮೆಕಾಲೆ ಅಂತವರೇ ಸೈದ್ಧಾಂತಿಕವಾಗಿ , ಆದರ್ಶಪ್ರಾಯವಾಗಿ ಗಟ್ಟಿಯಾಗಿದ್ದ ನಾಡನ್ನೇ ಚಾಣಾಕ್ಷ ತನದ ಯೋಜನೆಗಳಿಂದ ಬೆನ್ನೆಲುಬು ಮುರಿದು ಬ್ರಿಟಿಷರ ಗುಲಾಮರಾಗುವಂತೆ ಮಾಡಿದ್ದಾನೆ ಎಂದ ಮೇಲೆ ಅದನ್ನು ಪುನ ಸ್ಥಾಪಿಸಿ ಪ್ರಜಾಕಿಯ ತರುವುದು ಅಸಾಧ್ಯವೇನಲ್ಲ . ಆದರೆ ಅದು ಇಂದು ನಾಳೆ ಆಗುವ ಕೆಲಸ ಅಲ್ಲ . ಯಾಕೆಂದರೆ ಅದು ತಲೆ ಮಾರನ್ನೇ ತಿದ್ದುವ ಕೆಲಸ . ಅದಕ್ಕೆ ಉಪ್ಪಿ ಶಂಕು ಸ್ಥಾಪನೆ ಮಾಡಿ ಆಗಿದೆ . ಇನ್ನೇನಿದ್ದರೂ ನಾವು ನೀವು ಫೌಂಡೇಶನ್ ಹಾಕಿ ಕಟ್ಟಡ ನಿರ್ಮಿಸುವುದು . ನಾನಂತೂ ರೆಡಿ ಇದ್ದೇನೆ , ನೀವು ಬರ್ತೀರಿ ಅಲ್ವ .
ಇಂತಿ ನಿಮ್ಮವ ಚಂದ್ರ ಮರವಂತೆ. ಬನ್ನಿ ಪ್ರಜಾಕಿಯ-ಕೆಪಿಜೆಪಿ ಪಕ್ಷಕ್ಕೆ ಬೆಂಬಲಿಸೋಣ. ಒಂದು ಚಾನ್ಸ್ ಕೊಟ್ಟು ನೋಡೋಣ. ಏನಂತೀರಾ?
Powered by All India Super Star Upendra Fans Club