ಕನ್ನಡ ಸಿನಿಮಾ ಹಾಗೂ ರಂಗ ಭೂಮಿ ಕಂಡ ಈ ನಟಿಯರಿಗೆ ಸಪರೇಟ್ ಫ್ಯಾನ್ ಬೇಸ್ ಇದೆ

ಹೆಣ್ಣು ಸಂಸಾರದ ಕಣ್ಣು ಅಂತಾರೆ.. ಆಕೆ ಒಲಿದರೆ ನಾರಿ, ಮುನಿದರೆ ಮಾರಿ ಅನ್ನೋದು ಎಲ್ರಿಗೂ ಗೊತ್ತಿರುವ ವಿಷಯ. ಹೌದು, ಹೆಣ್ಣಿಂದ ಆಗದಿರುವ ಕೆಲಸವಿಲ್ಲ. ಆಕೆಯಲ್ಲಿ ಪುರುಷನನ್ನೂ ಮೀರಿಸುವ ಶಕ್ತಿಯಿದೆ.. ಆದ್ರೆ ಕೆಲವೊಂದು ತುಡಿತಗಳಿಗೆ ಒಳಗಾಗಿ ತನ್ನನ್ನು ತಾನೇ ನಿಸ್ಸಹಾಯಕಳಾಗುವಂತೆ ಮಾಡಿಕೊಳ್ಳುತ್ತಿದ್ದಾಳೆ. ನಮ್ಮಲ್ಲಿ ಪುರುಷನನ್ನ ಹಿಂದಿಕ್ಕಿ ಸಾಧನೆ ಮಾಡಿರುವ ಮಹಿಳೆಯರಿದ್ದಾರೆ.. ತಮ್ಮ ಪ್ರಾಣವನ್ನ ಮುಡಿಪಾಗಿಟ್ಟು, ಬೇರೆಯವರನ್ನ ಕಾಪಾಡಿದ ಸ್ತ್ರೀ ಶಕ್ತಿಗಳಿದ್ದಾರೆ. ಅವ್ರಿಗೆ ನಮ್ಮದೊಂದು ಸಲಾಂ..

ಇವತ್ತು ನಾವು ಮಹಿಳೆಯರ ಬಗ್ಗೆ ಯಾಕೆ ಹೇಳ್ತಿದ್ದಿವಿ ಅಂತ ನಿಮ್ಮೆಲ್ಲರಿಗೂ ಸಹ ಗೊತ್ತು.. ಯಾಕಂದ್ರೆ ಇವತ್ತು ಮಾರ್ಚ್ 8ನೇ ತಾರೀಖು.. ಅಂದ್ರೆ ಇವತ್ತು ಮಹಿಳೆಯರ ದಿನಾಚರಣೆ.. ನಮ್ಮ ಹಲವು ವಿಭಾಗಗಳಲ್ಲಿ ಸಾಧನೆ ಮಾಡಿರುವ ಹೆಂಗಳೆಯರಿದ್ದಾರೆ.. ಆದ್ರೆ ನಾವು ನಿಮಗೆ ಇವತ್ತು, ಸಿನಿಮಾ ರಂಗದಲ್ಲಿ ನಟಿಸಿ, ಮರೆಯಲಾಗದ ಕೆಲವು ನಟಿಯರಿದ್ದಾರೆ.. ಅಂಥವರ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ..

Advertisements

ಜಯಶ್ರೀ

ಜಯಶ್ರೀ ಕನ್ನಡದ ಪೋಷಕ ನಟಿಯಲ್ಲೊಬ್ಬರು.. ನಾಯಕಿಯಾಗಿ ಚಿತ್ರರಂಗವನ್ನ ಪ್ರವೇಶಿಸಿ ನಂತರ ತಾಯಿಯ ಪಾತ್ರದಲ್ಲಿ ಹೆಚ್ಚು ಹೆಸರು ಮಾಡಿದ್ದರು.. ಹೊನ್ನಪ್ಪ ಭಾಗವತರ್ ನಿರ್ದೇಶನದ ಭಕ್ತ ಕುಂಬಾರ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಇವರು ಕನ್ನಡ, ತಮಿಳು ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.. ಇವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ಎಂದರೆ ನಾಗಕನ್ನಿಕಾ‘… ಈ ಚಿತ್ರದಲ್ಲಿ ಜಯಶ್ರೀ ರವರು ಹೇರಳ ಮೈಮಾಟ ಪ್ರದರ್ಶಿಸಿದ್ದು, ಅಂದಿನ ದಿನಗಲ್ಲಿ ಮನೆ ಮಾತಾಗಿತ್ತು.. ಇದರಿಂದ ಚಿತ್ರಕ್ಕೆ ಹೊಸ ಆಯಾಮವೇ ಸೃಷ್ಟಿಯಾಗಿತ್ತು..

ಅರುಂಧತಿ ನಾಗ್

ಅರುಂಧತಿ ನಾಗ್ ಅಂದ್ರೆ ಎಲ್ಲರಿಗೂ ಗೊತ್ತು.. ಯಾಕಂದ್ರೆ ಇವ್ರು ನೆಚ್ಚಿನ ನಟ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಪತ್ನಿ.. ಇವರು ಭಾರತೀಯ ಚಿತ್ರರಂಗದ ಬಹುಭಾಷಾ ನಟಿ ಹಾಗೂ ರಂಗಭೂಮಿ ಕಲಾವಿದೆ.. ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ, ಮತ್ತು ಇಂಗ್ಲಿಷ್ ಸೇರಿದಂತೆ 7 ಭಾಷೆಗಳಲ್ಲಿ ನಟಿಸಿದ್ದಾರೆ.. ಸುಮಾರು 1970ರ ಸಮಯದಲ್ಲಿ ತಿಂಗಳಿಗೆ 40 ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.. ತನ್ನ 17ನೇ ವಯಸ್ಸಿಗೆ ವಿವಾಹವಾದ ಇವರು, ಮೊದಲಿಗೆ 1979ರಲ್ಲಿ ಮರಾಠಿ ಚಿತ್ರದಲ್ಲಿ ನಟಿಸುತ್ತಾರೆ.. ಇಲ್ಲಿಂದ ಅವರ ಸಿನಿ ಪಯಣ ಶುರುವಾಗುತ್ತೆ.. ನಂತರ ನೋಡಿ ಸ್ವಾಮಿ ನಾವಿರೋದೇ ಹೀಗೆ, ಪರಮೇಶಿ ಪ್ರೇಮ ಪ್ರಸಂಗ, ಆಕ್ಸಿಡೆಂಟ್ ಚಿತ್ರಗಳಲ್ಲಿ ನಟಿಸಿದ ಇವರು, ತಮ್ಮ ಪತಿಯ ಸಾವಿನಿಂದಾಗಿ ಸ್ವಲ್ಪ ವಿರಾಮ ತೆಗೆದುಕೊಳ್ತಾರೆ.. ನಟಿಯಾಗಿ ನಟಿಸುತ್ತಿದ್ದ ಇವರು, ನಂತರ ತಾಯಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ.. ಅವರು ಅಭಿನಯಿಸಿದ ಜೋಗಿ ಚಿತ್ರ ಈಗಲೂ ಮನ ಮಿಡಿಯುತ್ತದೆ.. ಇವರು ನಟಿಸಿದ ಹಿಂದಿಯ ಪಾಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.. ಈ ರೀತಿ ಅತೀ ಕಡಿಮೆ ಸಮಯ ಚಿತ್ರರಂಗದಲ್ಲಿ ಇದ್ದರೂ ಮರೆಯಲಾಗದ ನೆನಪು ಇವರದ್ದಾಗಿದೆ..

ಪಂಡರೀಬಾಯಿ

ಹೆಸರಾಂತ ನಟಿಯಾಗಿದ್ದ ಇವರು ಸುಮಾರು 60 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆಸಲ್ಲಿಸಿದ್ದರು.. ಇವರು ದಕ್ಷಿಣ ಭಾರತದ ನಟರೊಂದಿಗೆ ನಾಯಕಿಯಾಗಿ, ತಾಯಿಯಾಗಿ ನಟಿಸಿದ್ದಾರೆ.. ಇವರನ್ನ ಚಿತ್ರರಂಗದವರು ಹೆಚ್ಚಾಗಿ ಅಮ್ಮಎಂದೇ ಗುರುತಿಸುತ್ತಾರೆ.. ಇವರು ಕನ್ನಡದಲ್ಲಿ ಸುಮಾರು 70 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.. ಇವರಿಗೆ ಕೆಲವು ಪ್ರಶಸ್ತಿಗಳು ಸಹ ಲಭಿಸಿವೆ.. ‘ನಮ್ಮ ಮಕ್ಕಳು ಹಾಗೂ ಬೆಳ್ಳಿ ಮೋಡಚಿತ್ರಗಳ ಅಭಿನಯಕ್ಕೆ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಸಿಕ್ಕರೆ, ಸಿನಿಮಾ ರಂಗದ ಶ್ರೇಷ್ಠ ಸಾಧನೆಗಾಗಿ ಪ್ರತಿಷ್ಠಿತ ಡಾ. ರಾಜ್ ಕುಮಾರ್ಪ್ರಶಸ್ತಿ ದೊರಕಿದೆ..

Advertisements

ಲೀಲಾವತಿ

ಡಾ.ರಾಜ್ ಕುಮಾರ್ ಕಾಲದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದ ಹೆಸರು ಅಂದ್ರೆ ಲೀಲಾವತಿಯವರದ್ದು.. ಹೌದು.. ನಟಿಯಾಗಿ, ನಿರ್ಮಾಪಕಿಯಾಗಿ, ಲಿಖಕಿಯಾಗಿ, ಹಾಗೂ ಸಮಾಜಸೇವಕಿಯಾಗಿ ಇವರ ಅನುಭವ ಅಪಾರ.. ಸುಮಾರು ೧೯೪೯ರಲ್ಲಿ ನಾಗಕನ್ನಿಕಾ ಚಿತ್ರದಲ್ಲಿ ಸಖಿಯ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.. ಇವರು ನಾಯಕಿಯಾಕಿ ನಟಿಸಿದ ಮೊದಲ ಚಿತ್ರ ಎಂದರೆ ಮಾಂಗಲ್ಯ ಯೋಗ‘.. ನಾಯಕಿಯಾಗಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪೋಷಕ ನಟಿಯಾಗಿ ಇವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.. ಇವರಿಗೆ ಮಾಡುವೆ ಮಾಡಿ ನೋಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕರೆ, ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಹಾಗೂ ಡಾಕ್ಟರ್ ಕೃಷ್ಣ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರಕಿದೆ.. ಇನ್ನೂ ಕನ್ನಡದ ಕಂದ ಚಿತ್ರಕ್ಕೆ ಫಿಲಂ ಫೇರ್ ದೊರೆತಿದೆ..

ಬಿ.ಸರೋಜಾದೇವಿ

ಬಹುಭಾಷಾ ತಾರೇ, ಅಭಿನಯ ಸರಸ್ವತಿ ಎಂದೇ ಕರೆಸಿಕೊಳ್ಳುವ ಬಿ. ಸರೋಜಾದೇವಿ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ.. ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ.. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭೃವಾಹನ ಚಿತ್ರದಲ್ಲಿ ಮಾರು ಹೋಗುವಂತೆ ನಟಿಸಿದ್ದರು.. ಇವರು 1992ಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದರೆ, 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.. ಜೊತೆಗೆ ಜೀವಿತಾವಧಿ ಸಾಧನೆ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ..

ಕಲ್ಪನಾ

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿದವರು ನಮ್ಮ ನೆಚ್ಚಿನ ನಟಿ ಮಿನುಗುತಾರೆ ಕಲ್ಪನಾ.. ಇವರ ನಟನೆಗೆ, ಉಡುಗೆ ತೊಡುಗೆಗೆ ಮಾರು ಹೋದವರೇ ಇಲ್ಲ.. ಯಾಕಂದ್ರೆ ಜನರನ್ನ ಸೆಳೆಯೋಕೆ ಯಾವ ರೀತಿ ನಟನೆ ಮಾಡಬೇಕು ಅಂತ ತಿಳಿದಿದ್ದ ಇವರು, ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಈ ರೀತಿ ಇದ್ದರೆ ಮಾತ್ರ ಜನರ ಗಮನ ಸೆಳೆಯೋಕೆ ಸಾಧ್ಯ ಅಂತ ಇವರು ತಿಳಿದಿದ್ದರು..ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರು.. ಇವರ ಸಿನಿ ಪಯಣ ಸುಮಾರು 1963ರಲ್ಲಿ ಶುರುವಾಯಿತು.. ಅಲ್ಲಿಂದ ಸುಮಾರು ೭೮ ಸಿನಿಮಾಗಳಲ್ಲಿ ನಟಿಸಿದರು.. ಇವರ ನಟನೆಗೆ ಮಾರುಹೋದ ಮೈಸೂರಿನ ಯುವ ಸಾಹಿತಿ ಇವರ ಹೆಸರಿನಲ್ಲಿ ಮಿನುಗುತಾರೆ ಸಂಸ್ಮರಣಾ ಅನ್ನೋ ಗ್ರಂಥವನ್ನ ತಂದಿದ್ದಾರೆ.. ಇವರ ಶರಪಂಜರ ಸಿನಿಮಾ ಮಾತ್ರ ಎಂದಿಗೂ ಮೆರೆಯಲಾಗದಂಥ ಸಿನಿಮಾ.. ತಮ್ಮ ನಟನೆಯಿಂದಲೇ ಜನರ ಮನಸ್ಸನ್ನ ಗೆದ್ದಿದ್ದ ಇವರು, ತನಗಾದ ಕೆಲವು ಅವಮಾನ ಘಟನೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.. ನಿಜಕ್ಕೂ ಇವರ ಸಾವು ಆಗಿನ ಕಾಲದಲ್ಲಿ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗುತ್ತೆ..

Advertisements

ಉಮಾಶ್ರೀ

ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ.. ಇವರ ನಟನೆಯಲ್ಲಿರುವ ಹವಾ, ಭಾವ, ಬೇರೆ ಕಲಾವಿದರಲ್ಲಿ ಬಹಳ ಅಪರೂಪ ಎನ್ನುವುದು ಸಿನಿಮಾ ರಂಗದಲ್ಲೇ ಹೇಳುತ್ತಾರೆ.. ಆಕೆ ತನ್ನ ಕಣ್ಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು.. ಇವರ ಅನುಭವ ಚಿತ್ರದಲ್ಲಿನ ನಟನೆ ಎಂದಿಗೂ, ಯಾರಿಂದಲೂ ಮರೆಯಲು ಆಗುವುದಿಲ್ಲ.. ಇವರು ಹಾಸ್ಯಾಸ್ಪದ ನಟನೆಗೆ ಹೇಳಿ ಮಾಡಿಸಿದಂತಿದ್ದರು.. ಇವರಿಗೆ ರಾಜ್ಯ ಪ್ರಶಸ್ತಿ, ರಾಷ್ಟೀಯ ಪ್ರಶಸ್ತಿ, ಹಾಗೂ ಓಶಿಯಾನ್ಸ್ ಅಂತರರಾಷ್ಟ್ರೀಯ ಕಲಾಭಿಮಾನಿಗಳ ಪ್ರಶಸ್ತಿ ದೊರಕಿದೆ.. ಸದ್ಯಕ್ಕೆ ರಾಜಕೀಯದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.. ರಾಜಕೀಯದಲ್ಲಿ ಏನಾದರು ಸಾಧನೆ ಮಾಡಬೇಕೆಬುದು ಇವರ ಕನಸಾಗಿದೆ..

ಮಂಜುಳ

ನಟಿ ಮಂಜುಳಾ ಕನ್ನಡ ಚಿತ್ರರಂಗದಲ್ಲಿ ಬಜಾರಿ ನಟಿಯೆಂದೇ ಪ್ರಸಿದ್ದರಾಗಿದ್ದರು.. ಮನೆ ಕಟ್ಟಿ ನೋಡು ಎಂಬ ಚಿತ್ರದಿಂದ ಬಾಲನಟಿಯಾಗಿ ಬೆಳ್ಳಿತೆರೆಗೆ ಬಂದ ಇವರು, ಯಾರ ಸಾಕ್ಷಿ ಎನ್ನುವ ಚಿತ್ರದಲ್ಲಿ ನಾಯಕಿಯಾದರು.. ಕನ್ನಡಲ್ಲಿ ಇವರ ಹಾಗೂ ಶ್ರೀನಾಥ್ ಜೋಡಿ ತುಂಬಾ ಅದ್ಭುತವಾಗಿತ್ತು.. ಈ ಜೋಡಿ ಪ್ರಣಯ ಜೋಡಿ ಎಂದೇ ಹೆಸರುವಾಸಿಯಾಗಿತ್ತು.. ಇವರ ಸಂಪಾತಿಗೆ ಸ್ವಲ್ ಚಿತ್ರ ಎಂದೆದಿಗೂ ಮರೆಯಲಾಗದಂತದ್ದು.. ಆ ಚಿತ್ರದಲ್ಲಿ ದುರ್ಗಿ ಎಂಬ ಹೆಸರಿನಲ್ಲಿ ನಟಿಸಿದ ಅವರ, ಪಾತ್ರಕ್ಕೆ ಬಹಳ ಜೀವ ತುಂಬಿದ್ದರು.. ಕನ್ನಡ ಚಿತ್ರರಂಗದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಆದರೆ ಅವರಿಗೊದಗಿದ ಸಾವು, ನಿಜಕ್ಕೂ ಕರುಣೆಯೇ ಇಲ್ಲದಂಥದ್ದು.. ಸಿನಿಮಾ ರಂಗದಿಂದ ಬೇಗ ಮರೆಯಾದ್ರು ಅವರ ನಟನೆ ಅದ್ಬುತ.. ಯಾರಿಗೂ ಮರೆಲಾಗದಂತ ನಟನೆ ಮಂಜುಳಾ ಅವರದ್ದು..

ಲಕ್ಷ್ಮಿ

ಪಂಚಭಾಷಾ ತಾರೆ ಎಂದು ಕರೆಸಿಕೊಳ್ಳುವ ಮತ್ತೊಬ್ಬ ನಟಿ ಅಂದ್ರೆ ನಮ್ಮ ಚಂದನದ ಗೊಂಬೆ ಲಕ್ಷ್ಮಿ.. ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ.. ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಾಗೂ ಹಿಂದಿ ಭಾಷೆಗಲ್ಲಿ ಇವರು ನಟಿಸಿದ್ದಾರೆ.. ಸುಮಾರು ಇವರು ೫೫ಕ್ಕೂ ಹೆಚ್ಚು ಚಿತ್ರಗಲ್ಲಿ ನಟಿಸಿದ್ದಾರೆ.. ಇವರ ನ ನಿನ್ನ ಮರೆಯಲಾರೆ, ಚಂದನದ ಗೊಂಬೆ, ನ ನಿನ್ನ ಬಿಡಲಾರೆ, ಗಾಳಿಮಾತು ಇಂತಹ ಚಿತ್ರಗಲ್ಲಿ ಅಭಿನಯಿಸಿದ ಇವರು, ಚಿತ್ರರಂಗದಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ.. ಸದ್ಯಕ್ಕೆ ಕೆಲವೊಂದು ಸ್ತ್ರೀಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದಾರೆ..

Advertisements

ಜಯಂತಿ

ಜಯಂತಿ ಎಂದ್ರೆ ಎಲ್ಲರಿಗೂ ನೆನಪಾಗೋದು ಎಡಕಲ್ಲು ಗುಡ್ಡದ ಮೇಲೆ ಸಿನಿಮಾ.. ಹೌದು ಈ ಸಿನಿಮಾದಿಂದ ಜಯಂತಿ ಅವರಿಗೆ ಸಿಕ್ಕ ಹೆಸರು ಅಪಾರ.. ಜಯಂತಿ ಅಂತ ಹೆಸರು ಗುರುತಿಸೋಕೆ ಸಾಧ್ಯ ಎಂದರೆ ಅದು ಈ ಸಿನಿಮಾದ ಮೂಲಕ.. ಇನ್ನೂ ಅಣ್ಣಾವ್ರ ಜೊತೆ ಅಭಿನಯಿಸಿದ ಬಹದ್ದೂರ್ ಗಂಡು ಸಿನಿಮಾ ಅತ್ಯದ್ಭುತ.. ಇವರು ನಾಗರಹಾವು ಸಿನಿಮಾದಲ್ಲಿ ಕಚ್ಚೆ ಕಟ್ಟಿ ವೈರಿಗಳನ್ನ ಸೆಣೆಸಾಡೋ ದೃಶ್ಯ ಈಗಲೂ ಕಣ್ಮುಂದೆ ಬರುತ್ತೆ.. ಸುಮಾರು ಚಿತ್ರಗಳಲ್ಲಿ ಅಭಿನಯಿಸಿದ ಇವರು ನಂತರ ಪೋಷಕ ನಟನೆಯಲ್ಲಿ ಪಾಲ್ಗೊಂಡರು.. ಆದರೆ ಈಗ ಕೆಲವೊಂದು ಕಾರಣಗಳಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ..

ಈ ರೀತಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಇವರ ಕೊಡುಗೆ ಅಪಾರ.. ನಮ್ಮಲ್ಲಿ ಇನ್ನೂ ಮರೆಯಲಾಗದ ಮುತ್ತು, ರತ್ನಗಳಿವೆ.. ಅಭಿನಯ ಅಂದ್ರೆ ಅಷ್ಟು ಸುಲಭ ಅಲ್ಲ.. ಅದಕ್ಕೆ ಅದರದೇ ಆದ ತಾಕತ್ ಇದೆ.. ಎಲ್ಲರಿಂದಲೂ ಅಭಿನಯಿಸೋಕೆ ಆಗಲ್ಲ.. ಬಹಳಷ್ಟು ಶ್ರದ್ದೆ, ಭಕ್ತಿಯಿರಬೇಕು.. ತಮ್ಮ ಮನಸ್ಸಿನೊಳಗಿರುವ ನೋವನ್ನೆಲ್ಲ ಮರೆತು, ತೆರೆಯ ಮೇಲೆ ಬಣ್ಣ ಹಚ್ಚಿ ನಟಿಸೋ ಇವರಿಗೆ ನಮ್ಮ ಕಡಿಯಿಂದ ಒಂದು ಸಲಾಂ..

ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು!