ಸಾಧನೆಯ ಮೆಟ್ಟಿಲುಗಳನ್ನ ಒಂದೊದಾಗಿ ಏರಿ, ಈಗ ಶಿಖರವನ್ನೇ ತಲುಪಿರುವ ವಿಜಯ ಸಂಕೇಶ್ವರ್ ನಡೆದು ಬಂದ ಹಾದಿ

vijaya sankeshwara

ಪರಿಶ್ರಮ ಅನ್ನೋದು ಮೆಟ್ಟಿಲಿನಂತೆ, ಅದೃಷ್ಟ ಅನ್ನೋದು ಲಿಫ್ಟ್ ಇದ್ದಂತೆ. ಲಿಫ್ಟ್ ಕೈ ಕೊಡಬಹುದು, ಆದರೆ ಮೆಟ್ಟಿಲು ಎಂದಿಗೂ ಕೈ ಕೊಡುವುದಿಲ್ಲ. ಸಾಧಕರಿಗೆ ಯಾವುದು ಅಸಾಧ್ಯವಲ್ಲ. ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಸಾಕು ಅಸಾಧ್ಯವಾದದ್ದನ್ನ ಸಾಧಿಸಿ ತೋರಿಸಬಹುದು. ನನಗೆ ಸಾಧ್ಯವಿಲ್ಲ, ನನ್ನಿಂದ ಏನು ಮಾಡಲು ಆಗುವುದಿಲ್ಲ ಅಂತ ಸುಮ್ಮನೆ ಕುಳಿತರೆ, ಯಾವತ್ತೂ ನಮ್ಮಿಂದ ಏನು ಆಗುವುದಿಲ್ಲ. ನಿಂತಲ್ಲೇ ನಿಂತು, ಕೂತಲ್ಲೇ ಕೂರುತ್ತೀವಿ.

ಆದ್ರೆ ನಾನು ಏನಾದ್ರು ಸಾಧನೆ ಮಾಡೇ ಮಾಡ್ತೀನಿ ಅಂತ ನಿಂತವರು ತುಂಬಾ ಜನ ಉನ್ನತ ಮಟ್ಟದಲ್ಲಿದ್ದರೆ. ಅದೇ ರೀತಿ ನಮ್ಮ ವಿಜಯ ಸಂಕೇಶ್ವರ ಅವರು ಕೂಡ ಒಬ್ಬರು. ಎಷ್ಟೇ ಕಷ್ಟಗಳು ಬಂದರೂ, ಕುಗ್ಗದೆ ಶ್ರಮಕ್ಕೆ ತಕ್ಕ ಬೆಲೆ ಇದೆ ಎಂಬುದನ್ನ ತೋರಿಸಿಕೊಟ್ಟವರು ನಮ್ಮ ಶ್ರೀ ವಿಜಯ ಸಂಕೇಶ್ವರ ಅವರು.

Advertisements

ಜೀವನ

ವಿಜಯ ಸಂಕೇಶ್ವರ ಅವರದ್ದು ಒಂದು ಕಾಲದಲ್ಲಿ ಸಾಮಾನ್ಯ ಕುಟುಂಬ. ಈ ಕಡೆ ಹಣವಂತರು ಅಲ್ಲ, ಶ್ರೀಮಂತರು ಅಲ್ಲ. ಆ ರೀತಿ ಒಂದು ಸಾಮಾನ್ಯ ಕುಟುಂಬ. ಇವರ ತಂದೆ ಬಸವಣ್ಣೆಪ್ಪ ಹಾಗು ತಾಯಿ ಚಂದ್ರಮ್ಮ. ಈ ದಂಪತಿಗೆ 5 ಜನ ಮಕ್ಕಳಿದ್ದರು. ಇವರ ತಂದೆ ಗದಗದಲ್ಲಿ ಬಿ.ಜಿ ಸಂಕೇಶ್ವರ ಪ್ರಿಂಟರ್ಸ್ ಎಂಬ ಮುದ್ರಣಾಲಯದ ಮಾಲೀಕರಾಗಿದ್ದರು. ವಿಜಯ ಸಂಕೇಶ್ವರ ಅವರು ಬಿ.ಕಾಂ.ಪದವೀಧರರಾಗಿದ್ದರು. ಇವರು ಓದಿದ್ದರಿಂದ ಮೊದಲು ತಮ್ಮ ತಂದೆ ಜೊತೆ ಮುದ್ರಣಾಲಯದಲ್ಲಿ ಪ್ರೊಫ್ ರೀಡಿಂಗ್ ಹಾಗು ಮಾರುಕಟ್ಟೆ ಕೆಲಸವನ್ನ ಸ್ವಲ್ಪ ದಿನ ನೋಡಿಕೊಂಡರು. ಇವರೊಂದಿಗೆ, ಇವರ ಹಿರಿಯ ಸಹೋದರ ಕೂಡ ತಂದೆಯೊಂದಿಗೆ ಮುದ್ರಣಾಲಯದ ನಿರ್ವಹಣೆ ಹೊತ್ತುಕೊಂಡಿದ್ದರು. ನಂತರ ಸಂಕೇಶ್ವರ ಅವರು ನಾನೆ ಏನಾದ್ರು ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿದ್ರು. ಯಾವ ಕೆಲಸ ಮಾಡಬೇಕು ಅನ್ನೋದು ಮೊದಲಿಗೆ ತಿಳಿದಿರಲಿಲ್ಲ. ನಂತರ ನಾನು ಒಂದು ಲಾರಿ ಕೊಂಡುಕೊಂಡರೆ ಹೇಗಿರುತ್ತೆ ಅನ್ನೋದು ಅವರ ತಲೆಗೆ ಬಂತು. ಅದರಂತೆ ಒಂದು ಲಾರಿ ಕೊಂಡರು. ನಂತರ ಅವರು ತಮ್ಮ ಜೀವನವನ್ನ ಮುಂದೆ ರೂಪಿಸಿಕೊಂಡರು.

ಚಾಲಕರಾಗಿದ್ದವರು ನಂತರ ಮಾಲೀಕರಾದರು

ಬಿ.ಕಾಂ ಓದಿದ್ದರು ಇವರಿಗೆ ಯಾವುದೇ ಕೆಲಸ ಸಿಗಲಿಲ್ಲ. ಇವರು ನಾನು ಬೇರೆ ರೀತಿ ಏನಾದ್ರು ಕೆಲಸ ಮಾಡಬೇಕು ಅನ್ನೋದು ಇವರ ತಲೆಗೆ ಬಂದಿದ್ದಿದ್ದರಿಂದ, ಇವರು ನಾನು ಒಂದು ಲಾರಿ ತಗೊಂಡು ಅದರಲ್ಲಿ ಸರಕು, ಸಾಗಾಣಿಕೆ ಕೆಲಸ ಮಾಡಿದ್ರೆ ಹೇಗಿರುತ್ತೆ ಅಂತ ಎನಿಸಿತು. ಅದಕ್ಕೋಸ್ಕರ ತಮ್ಮ 26ನೆ ವಯಸ್ಸಿನಲ್ಲಿ ಕೆಲವು ಹಣಕಾಸು ಸಂಸ್ಥೆಗಳಿಂದ ಹಣ ಸಾಲ ಪಡೆದು, ಒಂದು ಲಾರಿ ಕೊಂಡುಕೊಂಡರು. ಅಂದಿನಿಂದ ಇವರ ಪರಿಶ್ರಮ ಇವರನ್ನ ಕಾಪಾಡಿ, ಅದೃಷ್ಟ ಒಲಿಯುವಂತೆ ಮಾಡಿತು. ಲಾರಿ ಚಾಲಕರಾಗಿದ್ದವರು ಈಗ ಲಾರಿ ಮಾಲೀಕರಾಗಿ ಮುಂದೆ ಬಂದು, ಇಂದು ದೇಶಾದ್ಯಂತ ಸುಮಾರು 3500ಕ್ಕೂ ಹೆಚ್ಚು ಲಾರಿಗಳ ಒಡೆಯ ಹಾಗೂ ಸುಮಾರು 400ಕ್ಕೂ ಹೆಚ್ಚು ಬಸ್ಸುಗಳ ಮಾಲೀಕರಾಗಿದ್ದಾರೆ.

ಲಾರಿ ಚಾಲಕರಾಗಿ ಕೆಲಸ ಮಾಡಿದ ವಿಜಯ್ ಸಂಕೇಶ್ವರ್ ಅವರು

ಆರಂಭದಲ್ಲಿ ಗದಗದಿಂದ ಹುಬ್ಭಳ್ಳಿ , ಹುಬ್ಬಳ್ಳಿಯಿಂದ ಗದಗಿಗೆ ಕಿರಾಣಿ ಸಾಮಗ್ರಿ, ಇನ್ನಿತರ ಸಾಮಗ್ರಿಗಳನ್ನ ಸಾಗಿಸುತ್ತಿದ್ದರು. ಮೊದಲಿಗೆ ಅವರ ಈ ಕೆಲಸಕ್ಕೆ ಮನೆಯವರಿಂದಾಗಲಿ ಅಥವಾ ಸ್ನೇಹಿತರಿಂದಾಗಲಿ ಯಾವುದೇ ಪ್ರೋತ್ಸಾಹ ದೊರೆಯಲಿಲ್ಲ. ಅಲ್ಲದೆ ಆಗಿನ ಕಾಲದಲ್ಲಿ ಪ್ರತಿಷ್ಠಿತ ಸರಕು ಸಾಗಾಣಿಕಾ ಸಂಸ್ಥೆಗಳಿಂದ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಆದರೂ ಎದೆಗುಂದದೇ ಅದೇ ಕೆಲಸದಲ್ಲಿ ಮುಂದುವರೆದರು. ನಂತರ ಅವರಿಗೆ ಒಂದೇ ಲಾರಿಯಿಂದ ಜಾಸ್ತಿ ಲಾಭ ಇಲ್ಲ ಅಂತ ಅವರಿಗೆ ಗೊತ್ತಾಗುತ್ತೆ. ಆಗ 1979ರಲ್ಲಿ ತಮ್ಮ ಪತ್ನಿ ಲಲಿತ ಅವರ ಹೆಸರಿನಲ್ಲಿ ಮತ್ತೊಂದು ಲಾರಿ ಖರೀದಿ ಮಾಡ್ತಾರೆ.

Advertisements

ಅವರು ಆಯ್ಕೆ ಮಾಡಿಕೊಂಡಿದ್ದ ಕೆಲಸ ಅವ್ರಿಗೆ ಸರಿ ಎನಿಸಿತ್ತು. ಹಂತ ಹಂತವಾಗಿ ಈ ಉದ್ಯಮದಲ್ಲಿ ಬೆಳವಣಿಗೆ ಆಗಬಹುದು ಎಂಬ ಆಶಾಕಿರಣ ಅವರಲ್ಲಿ ಮೂಡಿತ್ತು. ಆಗ ತಮ್ಮದೇ ಒಂದು ಕಂಪನಿ ಮಾಡೋದ್ರಿಂದ ಇನ್ನು ಒಳ್ಳೆಯದು ಅನ್ನೋದು ಅವ್ರಿಗೆ ಗೊತ್ತಾಗುತ್ತೆ. ಹಾಗಾಗಿ ದಿನಾಂಕ 31-3-1983ರಂದು ವಿ ಆರ್ ಎಲ್, ಪಿವಿಟಿ ಎಲ್ಟಿಡಿ ಎಂಬ ಸರಕು ಸಾಗಾಣಿಕಾ ಸಂಸ್ಥೆಯನ್ನ ಅಸ್ತಿತ್ವಕ್ಕೆ ತಂದರು. ಅದೇ ಕಂಪನಿ 1-7-1994ರಂದು Deemend Public Ltd Co ಎಂದು ಪರಿವರ್ತನೆ ಆಯಿತು. ನಂತರ ಅಲ್ಲಿಂದ ಇನ್ನು ಯೋಚಿಸಿದ ಸಂಕೇಶ್ವರ ಅವರು, ಸರಕು ಸಾಗಾಣಿಕೆ ಮಾತ್ರವೇಕೆ ಪ್ರಯಾಣಿಕರಿಗೆ ಅನುಕೂಲವಾಗುವ ಕೆಲಸವನ್ನು ಸಹ ಮಾಡಬಹುದಲ್ಲಾ ಎಂದು ಯೋಚಿಸಿ ನಾಲ್ಕು ಬಸ್ ಗಳ ಮೂಲಕ ತಮ್ಮ ಕಾರ್ಯವನ್ನ ಆರಂಭಿಸಿದರು. ಆರಂಭದಲ್ಲಿ ಹುಬಳ್ಳಿಯಿಂದ ಬೆಂಗಳೂರಿಗೆ, ಬೆಂಗಳೂರಿಂದ ಹುಬ್ಬಳ್ಳಿಗೆ ಪ್ರಯಾಣಿಕರ ಬಸ್ ಸೇವೆ ಆರಂಭಿಸಿದರು. ಅಲ್ಲಿಂದ ಹಂತ ಹಂತವಾಗಿ ಬೆಳೆದು ಈಗ ನೂರಾರು ಬಸ್ ಗಳ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ.

ಸಮಯಕ್ಕೆ ಹೆಚ್ಚಾಗಿ ಬೆಲೆ ಕೊಡುತ್ತಿದ್ದರು.

ಕೆಲವರು, ಕೆಲವೊಂದು ವಿಷಯಗಳಿಗೆ ತುಂಬ ಬೆಲೆ ಕೊಡ್ತಾರೆ. ಇವರು ಸಮಯಕ್ಕೆ ಹೆಚ್ಚಿನ ಬೆಲೆ ಕೊಡ್ತಾರೆ. ತಮ್ಮ ಸಮಯವನ್ನ ಮೀರಿ ಆಗುವ ಕೆಲಸವನ್ನ ಇವರು ಒಪ್ಪುತ್ತಿರಲಿಲ್ಲ. ಉದಾಹರಣೆಗೆ. ಅವರು ಒಂದು ಹೊಸ ಪಕ್ಷದ ಸಭೆಗೆ ಹೋಗಬೇಕಿತ್ತು. ಬೆಳಿಗ್ಗೆ 9 ಗಂಟೆಗೆ ಸಭೆ ಆರಂಭವಾಗಬೇಕಿತ್ತು. ಹಾಗಾಗಿ ಇವರು ಸರಿಯಾದ ಸಮಯಕ್ಕೆ ಅಲ್ಲಿಗೆ ಹೋಗಿದ್ದರು. ಆದ್ರೆ ಆ ಸಮಯಕ್ಕೆ ಅಲ್ಲಿ ಯಾರು ಇರುವುದಿಲ್ಲ. ಆಗ ಅಲ್ಲ್ಲಿದ್ದವರನ್ನ ಕೇಳುತ್ತಾರೆ, ಆಗ ಅವ್ರು ಇಲ್ಲ ಸರ್ ಎಲ್ಲರು ಲೇಟಾಗೆ ಬರೋದು ಎಂದು ಹೇಳುತ್ತಾರೆ. ತಕ್ಷಣವೇ ಅಲ್ಲಿಂದ ಕಚೇರಿಗೆ ಬಂದು ತಮ್ಮ ಹೊಸ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ. ಈ ರೀತಿ ಅವರು ಸಮಯ ಪ್ರಜ್ಞೆಯನ್ನ ಬಹಳಷ್ಟು ಪ್ರೀತಿಸುತ್ತಾರೆ. ಯಾರಾದರೂ ಸಮಯ ಪರಿಪಾಲನೆ ಮಾಡದೇ ಇದ್ದರೆ, ಅವರನ್ನ ತಮ್ಮ ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಇದು ಇವರು ಸಮಯಕ್ಕೆ ಕೊಡೊ ಬೆಲೆಯಾಗಿದೆ.

ದಿನಪತ್ರಿಕೆ ಮಾಡಬೇಕೆಂದು ನಿರ್ಧರಿಸಿದ ಸಂಕೇಶ್ವರ ಅವರು

ಸಂಕೇಶ್ವರ ಅವ್ರು ಒಬ್ಬ ಉತ್ತಮ ವಿದ್ಯಾರ್ಥಿಯಾಗಿದ್ದರು. ಆದ್ರೆ ಅವರು ತಮಗಿದ್ದ ವಯ್ಯಕ್ತಿಕ ತೊಂದರೆಗಳಿಂದ ತಮ್ಮ ವಿದ್ಯಾಭ್ಯಾಸವನ್ನ ನಿಲ್ಲಿಸಿ ಕೆಲಸ ಪ್ರಾರಂಭಿಸಿದರು. ಅವರಿಗೆ ಏನಾದ್ರು ಸಾಧನೆ ಮಾಡಬೇಕು ಅನ್ನೋ ಛಲ ಇತ್ತು. ಆಗ ಅವರಿಗೆ ದಿನಪತ್ರಿಕೆ ಆರಂಭ ಮಾಡಬೇಕು ಅನ್ನೋದು ಒಳ್ಳೇದು ಎನಿಸಿತು. ಅವರಿಗೇನು ದಿನಪತ್ರಿಕೆ ಬಗ್ಗೆ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಯಾಕಂದ್ರೆ ಅವರ ತಂದೆಯವರದ್ದೇ, ಮುದ್ರಣಾಲಯ ಇದ್ದಿದ್ದರಿಂದ ಅವರಿಗೆ ಅದು ಸುಲಭವಾಯಿತು. ಅದರಂತೆ ಅವರು ದಿನಪತ್ರಿಕೆ ಹೊರ ತರಲು ತಯಾರಿ ನಡೆಸಿದರು. ತಮ್ಮ ಆಸೆಯಂತೆ ವಿಜಯ ಕರ್ನಾಟಕ ಎಂಬ ದಿನಪ್ರತಿಯನ್ನ ಪ್ರಕಟಿಸಿದರು. ಈಗ ಈ ಪತ್ರಿಕೆ ರಾಜ್ಯದ ನಂ 1 ಪತ್ರಿಕೆಯಾಗಿ ಬೆಳೆಸಿದ್ದಾರೆ.

Advertisements

ಪತ್ರಿಕೆಯಿಂದ ದೃಶ್ಯ ಮಾಧ್ಯಮಕ್ಕೆ ಲಗ್ಗೆ ಇಟ್ಟು, ಈಗ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ

ವಿಜಯ ಕರ್ನಾಟಕ ಎನ್ನುವ ದೊಡ್ಡ ಪತ್ರಿಕೆಯನ್ನ ತಂದ ಇವರು, ನಂತರ ದೃಶ್ಯ ಮಾಧ್ಯಮಕ್ಕೂ ಕಾಲಿಟ್ಟರೆ ಜನರಿಗೆ ಇನ್ನು ಹತ್ತಿರವಾಗಬಹುದು ಅನ್ನೋದು ಇವರ ಅನಿಸಿಕೆಯಾಗಿತ್ತು. ಹಾಗಾಗಿ ಇವರು ತಮ್ಮದೇ ಹೆಸರಿಗೆ ಅನ್ವಯವಾಗುವಂತೆ, ದಿಗ್ವಿಜಯ ಎನ್ನುವ ನ್ಯೂಸ್ ಪ್ರಾರಂಭಿಸಿದರು. ತಮ್ಮ ಪತ್ರಿಕೆಯಂತೆ, ಚಾನಲ್ ಕೂಡ, ಕನ್ನಡದ ಹೆಸರಾಂತ ಚಾನಲ್ ಗಳಲ್ಲಿ ಒಂದಾಗಿದೆ. ನಂತರ ಇವರಿಗೆ ಯಾಕೋ ರಾಜಕೀಯದ ಕಡೆ ಒಲವು ಮೂಡುತ್ತೆ. ಹಾಗಾಗಿ ಇವರಿಗೆ ನೆಚ್ಚಿನ ಪಕ್ಷ ಅಂದ್ರೆ ಬಿಜೆಪಿ. ಹಾಗಾಗಿ ಈಗ ಸದ್ಯಕ್ಕೆ ಬಿಜೆಪಿ ಪಕ್ಷದಲ್ಲಿ ದುಡಿಯುತ್ತಾ, ತಮ್ಮ ಏಳಿಗೆ ಕಾಣುತ್ತಿದ್ದಾರೆ.

ಇವರು ಏನೇ ಮಾಡಬೇಕು ಅಂದುಕೊಂಡರು ಅದು ಅವ್ರಿಗೆ ಒಂಥರಾ ವಿಜಯದ ಸಂಕೇತ. ಹಾಗಾಗಿ ತಮ್ಮೆಲ್ಲ ಕಾರ್ಯ, ಕಲಾಪಗಳಿಗೂ ವಿಜಯ ಅನ್ನೋ ಹೆಸರಿಂದಲೇ ಶುರು ಮಾಡಿದ್ದಾರೆ. ಒಂದೆರಡು ಬಸ್, ಒಂದೆರಡು ಲಾರಿ ಮಾಲೀಕ, ಈಗ ಸಾವಿರಾರು ಕೋಟಿ ಒಡೆಯ. ತಮ್ಮ ಸಾರಿಗೆ ಸಂಸ್ಥೆಗೆ ವಿ ಆರ್ ಎಲ್ ಎಂಬ ಹೆಸರನ್ನ ಇಟ್ಟಿದ್ದಾರೆ. ನಿಮ್ಮ ಬೆಳವಣಿಣಿಗೆಗೆ ಕಾರಣ ಏನು ಎಂದು ಯಾರಾದ್ರೂ ಕೇಳಿದರೆ, ಇದಕ್ಕೆ ನನ್ನ ಪರಿಶ್ರಮವೇ ಕಾರಣ. ಯಾಕಂದ್ರೆ ನಾನು ಯಾವತ್ತೂ ಇದೆ ರೀತಿ ಬದುಕಬೇಕು ಅಂತ ಅಂದುಕೊಂಡಿರಲಿಲ್ಲ. ನನ್ನ ತಂದೆ, ತಾಯಿಗೆ ಮೂರೊತ್ತು ಊಟ ಹಾಕಿ, ಅವರನ್ನ ಚೆನ್ನಾಗಿ ನೋಡಿಕೊಂಡರೆ ಸಾಕು ಅಂತ ಅಂದುಕೊಂಡಿದ್ದೆ. ಆದರೆ ನಾನು ಇಂತ ಮಟ್ಟದಲ್ಲಿ ಈಗ ಇದೀನಿ ಅಂದ್ರೆ ಅದು ನನ್ನ ಪರಿಶ್ರಮ ಮಾತ್ರ ಎಂದು ಹೆಮ್ಮೆಯಿಂದ ಹೇಳುತ್ತಾರೆ.