ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮತ್ತೆ ತೆರೆಯ ಮೇಲೆ ಅದೂ ಕನ್ನಡದಲ್ಲಿ

0
3346

ವಿಜಯ್ ದೇವರ್ಕೊಂಡ ಇತ್ತೀಚಿಗಷ್ಟೇ ಸಿನಿರಂಗಕ್ಕೆ ಪ್ರವೇಶಿಸಿ ಕಡಿಮೆ ವೇಳೆಯಲ್ಲಿ ಫೇಮಸ್ ಆದ ನಟ, ಸೌತ್ ಸಿನಿರಂಗದ ಮೋಸ್ಟ್ ಹ್ಯಾಂಡ್ ಸಂ ಹಾಗೂ ಉತ್ತಮ ಅಭಿನಯ ಮಾಡುವ ಕಲೆ ಹೊಂದಿರುವ ಹುಡುಗ. ತೆಲುಗು ಇಂಡಸ್ಟ್ರಿಯಲ್ಲಿ ಇವರ ನಟನೆಗೆ ಪ್ರೇಕ್ಷಕರು ಸೋತು ಸಲಾಂ ಹೊಡೆದಿದ್ದರು, ಅಷ್ಟರ ಪ್ರಮಾಣದಲ್ಲಿ ಇದೆ ಇವರ ಹವಾ. ನಿರ್ದೇಶಕರು ವಿಜಯ್ ಅವರ ಕಾಲ್ ಶೀಟ್ ಗೋಸ್ಕರ ಕಾಯುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹುಡುಗರಿಗಿಂತ ಹುಡುಗಿಯರ ಅಭಿಮಾನದ ಬಳಗವೇ ಇವರಿಗೆ ಜೋರಾಗಿದೆ. ಪೆಲ್ಲಿ ಚೂಪುಳು ಸಿನೆಮಾದ ಮೂಲಕ ಸಿನಿರಂಗಕ್ಕೆ ಪ್ರವೇಶಿಸುತ್ತಾರೆ, ಈ ಚಲನಚಿತ್ರ ಇವರಿಗೆ ಹೆಸರು ಮತ್ತು ಯಶಸ್ಸು ತಂದು ಕೊಟ್ಟ ಚಿತ್ರ. ಅರ್ಜುನ್ ರೆಡ್ಡಿ ಅಂದ ತಕ್ಷಣವೇ ನಮ್ಗೆ ನೆನಪಿಗೆ ಬರೋದು ವಿಜಯ್ ದೇವರ್ ಕೊಂಡ ಅನ್ನೋ ಹೆಸರು.

ವಿಜಯ್ ದೇವರ್ ಕೊಂಡ ಹಾಗೂ ರಶ್ಮಿಕ ಮಂದಣ್ಣ ಇವರಿಬ್ಬರ ಜೋಡಿ ತೆರೆಮೇಲೆ ನೋಡುವುದೇ ಒಂದು ಖುಷಿ

ಆನಂತರ ಸಾಲು ಸಾಲಾಗಿ ಸಿನೆಮಾ ಪ್ರಾಜೆಕ್ಟ್ ಗಳು ಇವರನ್ನು ಹುಡುಕುತ್ತಾ ಬಂದವು, ಎಲ್ಲಾ ಚಿತ್ರಗಳಿಗೂ ಬಣ್ಣ ಹಚ್ಚುತ್ತಾ ಬಂದರು. ಆಕ್ಟ್ ಮಾಡಿದ ಎಲ್ಲಾ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣ ಬಾಚಿಕೊಂಡಿತ್ತು. ನಿರ್ದೇಶಕರ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಜಯ್ ಯಶಸ್ವಿ ಆದರು. ರಶ್ಮಿಕ ಮಂದಣ್ಣ ಜೊತೆ ನಟಿಸಿರುವ ಗೀತಾ ಗೋವಿಂದಮ್ ಚಿತ್ರವೂ ಎಲ್ಲಡೆ ಬಾರಿ ಪ್ರದರ್ಶನ ಕಾಣುತ್ತದೆ, ಸಿನೆಮಾದಲ್ಲಿ ರಶ್ಮಿಕ, ವಿಜಯ್ ಅವರ ಕೆಮಿಸ್ಟ್ರಿ ತುಂಬಾ ಸೊಗಸಾಗಿ ಮೂಡಿ ಬಂದಿದೆ. ರಶ್ಮಿಕ ಈ ಸಿನೆಮಾದಿಂದಾನೆ ಸಾಕಷ್ಟು ಗೇಲಿಗೆ ಕಾರಣವಾಗುತ್ತಾರೆ. ಚಿತ್ರ ಹಿಟ್ ಆಗುತ್ತದೆ, ವಿಜಯ್ ಅವರ ಕೀರ್ತಿ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ. ಸ್ಟಾರ್ ನಟರ ಸಾಲಿನಲ್ಲಿ ಇವರ ಹೆಸರು ಕೂಡ ಸೇರ್ಪಡೆ ಆಗುತ್ತದೆ.

vijaydevarkonda rashmika

ಕನ್ನಡಕ್ಕೆ ಲಗ್ಗೆ ಇಟ್ಟ ಅರ್ಜುನ್ ರೆಡ್ಡಿ, ರಶ್ಮಿಕ ಇಂದ ಅದ್ದೂರಿ ಸ್ವಾಗತ

ಇವರು ನಟಿಸಿದ ಎಲ್ಲಾ ಚಿತ್ರಗಳು ಕಮರ್ಷಿಯಲ್ ಹಿಟ್ ಆಗುತ್ತದೆ, ಇವರು ಅಭಿನಯಿಸಿದ, ಪ್ರೇಕ್ಷಕರ ಮನ ಗೆದ್ದ ಚಿತ್ರದ ಹೆಸರುಗಳು ಹೀಗಿವೆ ಅರ್ಜುನ್ ರೆಡ್ಡಿ, ಮಹಾನಟಿ, ಗೀತಾ ಗೋವಿಂದಮ್, ಟ್ಯಾಕ್ಸಿ ವಾಲಾ etc. ರಶ್ಮಿಕಾ ಮಂದಣ್ಣ, ವಿಜಯ್ ಅವರ ಜೋಡಿ ಮುದ್ದು ಜೋಡಿ ಎಂದೇ ಸಿನಿರಂಗದಲ್ಲಿ ಪ್ರಸಿದ್ಧಿಯಾಗಿದೆ. ಮತ್ತೊಮ್ಮೆ ಈ ನವ ಜೋಡಿ ಬಣ್ಣ ಹಚ್ಚುವದರಾ ಮೂಲಕ ಸಿನಿರಸಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೌದೂ ಗೀತಾ ಗೋವಿಂದಮ್ ನಂತರ ಜಾದೂ ಮಾಡಲು ಸಿದ್ದರಾಗಿದ್ದಾರೆ ಹಾಗಾದರೆ ಯಾವ ಆ ಸಿನೆಮಾ ಎಂದು ಯೋಚಿಸುತ್ತಿದ್ದೀರಾ? ಯೆಸ್ ಡಿಯರ್ ಕಾಮ್ರೆಡ್ ಚಿತ್ರದ ಹೆಸರು. ಇನ್ನೂ ಅಚ್ಚರಿಯವಾದ ಸಂಗತಿವೆನೆಂದರೆ? ಈ ಸಿನೆಮಾ ನಾಲಕ್ಕು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

vijay devrakonda

ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ವಿಜಯ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ

ತೆಲುಗು, ತಮಿಲ್, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ ಅಂತಾ ವಿಜಯ್ ಅವರು ವರದಿ ನೀಡಿದ್ದಾರೆ. ವಿಜಯ್ ಫಸ್ಟ್ ಟೈಮ್ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು, ಇದಕ್ಕೆ ಬೆಂಬಲ ನೀಡಿದ್ದು ಚಂದನದ ಬೊಂಬೆ ಕನ್ನಡತಿ ರಶ್ಮಿಕ ಮಂದಣ್ಣ.

ಹೌದೂ ವಿಜಯ್ ದೇವರ್ ಕೊಂಡ ಅವರನ್ನು ಕನ್ನಡ ಇಂಡಸ್ಟ್ರಿಗೆ ಸ್ವಾಗತ ಕೋರುತ್ತಿರುವುದು ರಶ್ಮಿಕ. ಈ ಹಿಂದೆ ಇಬ್ಬರು ಬೋಲ್ಡ್ ಆಗಿ ಗೀತಾ ಗೋವಿಂದಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಅದೇ ರೀತಿಯ ಶೈಲಿನಲ್ಲಿ ಬೇರೆ ಕತೆಯೊಂದನ್ನು ಇಟ್ಟುಕೊಂಡು ಇಬ್ಬರು ಕಾಮ್ ಬ್ಯಾಕ್ ಮಾಡಿದ್ದಾರೆ.

ಸಧ್ಯಕ್ಕೆ ಡಿಯರ್ ಕಾಮ್ರೇಡ್ ಚಿತ್ರದ ಫಸ್ಟ್ ಪೋಸ್ಟ್ ಲುಕ್ ಹೊರ ಬಿದ್ದಿದೆ, ರಶ್ಮಿಕ ಮಂದಣ್ಣ ವಿಜಯ್ ದೇವರಕೊಂಡ ಅವರನ್ನು ಗಟ್ಟಿಯಾಗಿ ತಪ್ಪಿಕೊಂಡಿದ್ದ ಚಿತ್ರ ವೈರಲ್ ಆಗಿದೆ. ಫಸ್ಟ್ ಲುಕ್ಕೆ ಹೇಗಿರಬೇಕಾದರೆ ಇನ್ನೂ ಸಿನೆಮಾ ಹೇಗಿರಬಹುದು ಅಂತಾ ಅಭಿಮಾನಿಗಳು ತಲೆಯಲ್ಲಿ ಹುಳಬಿಟ್ಟುಕೊಂಡಿದ್ದಾರೆ. ವಿಜಯ್ ಅವರು ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತೆಲುಗು, ತಮಿಲ್, ಮಲಯಾಳಂ, ಕನ್ನಡ ಕಾಂರೆಡ್ಸ್ ಅಂತಾ ಬರೆದುಕೊಂಡು ಪ್ರೇಕ್ಷಕರಿಗೆ ಷಾಕ್ ನೀಡಿದ್ದಾರೆ. ಚಿತ್ರದ ಟೀಸರ್ ಮಾರ್ಚ್ 17 ಕ್ಕೆ ಬಿಡುಗಡೆ ಆಗಲಿದೆ ಎಂದು ವಿಜಯ್ ಹೇಳಿಕೊಂಡಿದ್ದಾರೆ.

Watch this Video: 

Comments

comments

LEAVE A REPLY

Please enter your comment!
Please enter your name here